• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕಾರ್ತಿಕ ಮಾಸದಲ್ಲಿ ವಿಶೇಷ ಲಕ್ಷ್ಮೀ ನಾರಾಯಣ ರಾಜಯೋಗ: 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಜಾಕ್‌ಪಾಟ್‌

ಕಾರ್ತಿಕ ಮಾಸದಲ್ಲಿ ವಿಶೇಷ ಲಕ್ಷ್ಮೀ ನಾರಾಯಣ ರಾಜಯೋಗ: 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಜಾಕ್‌ಪಾಟ್‌

Written ByYashaswini V
Published: Nov 12, 2026, 09:08 IST|Updated: Nov 12, 2026, 09:10 IST
joinshare

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಯಲ್ಲಿ ಬುಧ ಮತ್ತು ಶುಕ್ರ ಒಟ್ಟಿಗೆ ಕೂಡಿದಾಗ ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗುತ್ತದೆ. 

Lakshmi Narayana Rajayoga Impact1/6

ಕಾರ್ತಿಕ ಮಾಸದಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗ

ವೈದಿಕ ಜ್ಯೋತಿಷ್ಯದ ಪ್ರಕಾರ, ಕಾರ್ತಿಕ ಮಾಸದಲ್ಲಿ ನವೆಂಬರ್‌ 22, 2026ರಂದು ಬುದ್ದಿಕಾರಕ ಬುಧ, ಐಷಾರಾಮಿಕಾರಕ ಶುಕ್ರ ಒಂದೇ ರಾಶಿಯಲ್ಲಿ ಸಂಯೋಗ ಹೊಂದಲಿದ್ದು ಅತ್ಯಂತ ವಿಶೇಷವಾದ ಲಕ್ಷ್ಮೀ ನಾರಾಯಣ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದ ಐದು ರಾಶಿಯವರಿಗೆ ಬಂಪರ್‌ ಜಾಕ್‌ಪಾಟ್‌ ಎಂದು ಹೇಳಲಾಗುತ್ತಿದೆ.
Lakshmi Narayana Rajayoga Impact2/6

ಮೇಷ ರಾಶಿ

ಲಕ್ಷ್ಮೀ ನಾರಾಯಣ ರಾಜಯೋಗ ಪ್ರಭಾವದಿಂದ ಮೇಷ ರಾಶಿಯ ಜನರಿಗೆ ಆರ್ಥಿಕವಾಗಿ ಅನುಕೂಲಕರ ಫಲಿತಾಂಶ ಸಿಗಲಿದೆ. ಇದರಿಂದಾಗಿ ದೀರ್ಘ ಸಮಯದಿಂದ ಇದ್ದ ಹಣಕಾಸಿನ ಮುಗ್ಗಟ್ಟು ನಿವಾರಣೆ ಆಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ. ಉದ್ಯಮಿಗಳು ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸೂಚನೆಗಳಿವೆ.
Lakshmi Narayana Rajayoga Impact3/6

ವೃಷಭ ರಾಶಿ

ಲಕ್ಷ್ಮೀ ನಾರಾಯಣ ರಾಜಯೋಗದಿಂದಾಗಿ ವೃಷಭ ರಾಶಿಯ ಜನರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲಿದ್ದೀರಿ. ಉದ್ಯಮಿಗಳಿಗೆ ಹೊಸ ಹೊಸ ಅವಕಾಶಗಳು ಸಿಗುವ ಸೂಚನೆಗಳಿದ್ದು ಭರ್ಜರಿ ಜಾಕ್‌ಪಾಟ್‌ ಎನ್ನಲಾಗುತ್ತದೆ. ಆದಾಯದ ಹರಿವು ಉತ್ತಮವಾಗಿರಲಿದೆ.
Lakshmi Narayana Rajayoga Impact4/6

ಮಿಥುನ ರಾಶಿ

ಲಕ್ಷ್ಮೀ ನಾರಾಯಣ ರಾಜಯೋಗದಿಂದಾಗಿ ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿಯ ಸೂಚನೆಗಳಿವೆ. ಸ್ವಂತ ವ್ಯವಹಾರ ಮಾಡುವವರಿಗೆ ಪ್ರಗತಿಯ ಅವಕಾಶಗಳಿವೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟದಿಂದ ಹೊರಬರುವಲ್ಲಿ ಯಶಸ್ವಿ ಆಗುವಿರಿ. ಈ ಹಿಂದೆ ಮಾಡಿರುವ ಹೂಡಿಕೆಗಳು ಉತ್ತಮ ಲಾಭವನ್ನು ತರಲಿದೆ. ಕುಟುಂಬದಲ್ಲಿ ಮಕ್ಕಳಿಂದ ಸಂತೋಷ ಮನೆಮಾಡಲಿದೆ.
Lakshmi Narayana Rajayoga Impact5/6

ಕನ್ಯಾ ರಾಶಿ

ಲಕ್ಷ್ಮೀ ನಾರಾಯಣ ರಾಜಯೋಗ ಪ್ರಭಾವದಿಂದ ಕನ್ಯಾ ರಾಶಿಯ ಜನರಿಗೆ ಉದ್ಯೋಗ, ವ್ಯವಹಾರದಲ್ಲಿ ಉತ್ತಮ ಅವಕಾಶಗಳನ್ನು ತರಲಿದೆ. ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವ ನಿರುದ್ಯೋಗಿಗಳಿಗೆ ಇದು ಅನುಕೂಲಕರ ಸಮಯ. ವ್ಯವಹಾರ ವಿಸ್ತರಣೆಗೆ ಇದು ತುಂಬಾ ಪ್ರಾಶಸ್ತ್ಯವಾದ ಸಮಯ ಇದಾಗಿರಲಿದೆ. ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವ ದಂಪತಿಗಳಿಗೆ ಈ ಸಮಯ ಅತ್ಯುತ್ತಮವಾಗಿದೆ.
Lakshmi Narayana Rajayoga Impact6/6

ತುಲಾ ರಾಶಿ

ಲಕ್ಷ್ಮೀ ನಾರಾಯಣ ರಾಜಯೋಗವು ತುಲಾ ರಾಶಿಯ ಜನರಿಗೆ ತುಂಬಾ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ಉದ್ಯಮಿಗಳಿಗೆ ಭರ್ಜರಿ ಆದಾಯ ಹರಿದು ಬರಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು, ಸಾಲಬಾಧೆಯಿಂದ ಪರಿಹಾರ ಪಡೆಯುವ ಸೂಚನೆಗಳಿವೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar
Rajayoga

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.