ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಅದ್ದೂರಿಯಾಗಿ 25ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.. ಅಂದಹಾಗೆ.. ಕಿಚ್ಚನ ಆನಿವರ್ಸರಿ ಯಾರು ಯಾರು ಬಂದಿದ್ರು.. ಮದುವೆ ಆಗಿದ್ದು ಯಾವಾಗ.. ಲವ್ ಅಥವಾ ಅರೇಂಜ್ಡ್ ಮ್ಯಾರೇಜ್.. ಎಲ್ಲಾ ವಿವರಗಳು ಇಲ್ಲಿವೆ..
1/5
Kiccha Sudeep Priya
ಕಿಚ್ಚ ಸುದೀಪ್ - ಪ್ರಿಯಾ ಪ್ರೇಮ ಕಥೆ
ಕಿಚ್ಚ ಸುದೀಪ್ ಹಾಗೂ ಪ್ರಿಯಾ ಅವರ ಲವ್ ಸ್ಟೋರಿ ತುಂಬಾ ಕ್ಯೂಟ್ ಆಗಿದೆ. ಸುದೀಪ್ ಸ್ಟಾರ್ ಆಗೋದಕ್ಕೂ ಮುಂಚೆ, ಅಂದ್ರೆ 2000ನೇ ಇಸವಿಯಲ್ಲಿ ಬೆಂಗಳೂರಲ್ಲಿ ಇವರ ಭೇಟಿ ಆಗಿತ್ತು. ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿ, ಆಮೇಲೆ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಸುದೀಪ್ ಧ್ವನಿ ಹಾಗೂ ಗಿಟಾರ್ ನುಡಿಸಿ ಹಾಡೋ ಸ್ಟೈಲ್ ಪ್ರಿಯಾಗೆ ತುಂಬಾ ಇಷ್ಟವಾಗಿತ್ತಂತೆ. ಸ್ನೇಹ ಕ್ರಮೇಣ ಪ್ರೀತಿಯಾಗಿ ಬದಲಾಗಿ, ಕೊನೆಗೆ ಇಬ್ಬರ ಮನೆಯವರ ಒಪ್ಪಿಗೆಯೊಂದಿಗೆ ಅಕ್ಟೋಬರ್ 18, 2001ರಂದು ಮದುವೆಯಾದರು. ಸದ್ಯ ಈ ದಂಪತಿಗೆ ಸಾನ್ವಿ ಎಂಬ ಮುದ್ದಿನ ಮಗಳಿದ್ದಾಳೆ.
2/5
Kiccha Sudeep Priya
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸುದೀಪ್-ಪ್ರಿಯಾ ಜೋಡಿಯ ಸುಂದರ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕೂಡ ಕಾಮೆಂಟ್ಗಳ ಮೂಲಕ ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
3/5
Kiccha Sudeep Priya
ಮಾಜಿ ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಹಲವು ಗಣ್ಯರು ಈ ಸುಂದರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ವೆಂಕಟೇಶ್ ಪ್ರಸಾದ್ ತಮ್ಮ ಆಪ್ತ ಸ್ನೇಹಿತ ಸುದೀಪ್ ಬಗ್ಗೆ ಮಾತನಾಡುತ್ತಾ, "ಸುದೀಪ್ ಅವರ ಈ ಅದ್ಭುತ ಪಯಣ ನೋಡುವುದೇ ಒಂದು ಹೆಮ್ಮೆ. ಒಬ್ಬ ಕಲಾವಿದನಾಗಿ ಮತ್ತು ಆಪ್ತ ಗೆಳೆಯನಾಗಿ ನಮ್ಮ ಬಾಂಧವ್ಯ ದಿನದಿಂದ ದಿನಕ್ಕೆ ಗಟ್ಟಿಯಾಗಿದೆ" ಎಂದು ಶುಭ ಕೋರಿದ್ದಾರೆ.
4/5
kiccha sudeep priya
ಈ ಕಾರ್ಯಕ್ರಮದ ಹೈಲೈಟ್ ಅಂದ್ರೆ, ಕನ್ನಡದ ಮೂರು ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದು. ಸಿನಿಮಾರಂಗದಿಂದ ಸ್ವತಃ ನಟ ಸುದೀಪ್, ಕ್ರಿಕೆಟ್ ಲೋಕದ ದಿಗ್ಗಜ ವೆಂಕಟೇಶ್ ಪ್ರಸಾದ್ ಹಾಗೂ ಸಂಗೀತ ಕ್ಷೇತ್ರದ ಹೆಮ್ಮೆ ವಿಜಯ್ ಪ್ರಕಾಶ್ ಒಂದೇ ಕಡೆ ಸೇರಿ ಸಂಭ್ರಮಿಸಿದ್ದಾರೆ.
5/5
Kichcha Sudeep Priya
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ತಮ್ಮ ಮದುವೆಯ 25ನೇ ವರ್ಷದ ಸಂಭ್ರಮವನ್ನು ಜೆಪಿ ನಗರದ ತಮ್ಮ ನಿವಾಸದಲ್ಲಿ ಬಹಳ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದ್ದಾರೆ.