ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
1/7
ಪವಿತ್ರಾ ಲೋಕೆಶ್
ನಟಿ ಪವಿತ್ರಾ ಲೋಕೇಶ್ ಒಂದು ಸಮಯದಲ್ಲಿ ಹಾಟ್ ಟಾಪಿಕ್ ಆಗಿದ್ದರು. ನಟ ನರೇಶ್ ಅವರ ಜೊತೆಗಿನ ಸಂಬಂಧದಿಂದ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಪವಿತ್ರಾ ಲೋಕೇಶ್ ಕನ್ನಡದಲ್ಲಿ ಕಿರುತೆರೆ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
2/7
ಪವಿತ್ರಾ ಲೋಕೆಶ್
ಕೆಲವೇ ಕೆಲವು ಚಿತ್ರಗಳಿಗೆ ನಾಯಕಿಯಾಗಿದ್ದು, ಪೋಷಕ ಪಾತ್ರಗಳೊಂದಿಗೆ ಪ್ರಸಿದ್ಧರಾದರು. ಪವಿತ್ರಾ ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ರಂಗಭೂಮಿ ಮತ್ತು ಖ್ಯಾತ ಸಿನಿಮಾ ನಟರಾಗಿದ್ದ ಮೈಸೂರು ಲೋಕೇಶ್ ಅವರ ಮಗಳು ಪವಿತ್ರಾ. 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
3/7
ಪವಿತ್ರಾ ಲೋಕೆಶ್
ಪವಿತ್ರಾ ಲೋಕೇಶ್ ಅವರಿಗೆ ಈಗ 47 ವರ್ಷ ವಯಸ್ಸು. ಕನ್ನಡದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪವಿತ್ರಾ ಲೋಕೇಶ್ ನಟಿಸಿ ಖ್ಯಾತಿ ಪಡೆದಿದ್ದಾರೆ. 2006 ರ 'ನಾಯಿ ನೆರಳು' ಚಿತ್ರದಲ್ಲಿ ಪವಿತ್ರಾ ಲೋಕೇಶ್ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ.
4/7
ಪವಿತ್ರಾ ಲೋಕೆಶ್
ಪವಿತ್ರಾ ಲೋಕೇಶ್ ಮೊದಲ ಪತಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು ಎನ್ನಲಾಗುತ್ತದೆ. ಕುಟುಂಬದಲ್ಲಿನ ಕೆಲವು ಸಮಸ್ಯೆಯಿಂದಾಗಿ ವಿಚ್ಛೇದನ ಪಡೆದರು ಎನ್ನಲಾಗಿದೆ.
5/7
ಪವಿತ್ರಾ ಲೋಕೆಶ್
ಪವಿತ್ರಾ ಲೋಕೇಶ್ ಅವರ ಎರಡನೇ ಪತಿ ಸುಚೀಂದ್ರ ಪ್ರಸಾದ್. ಇವರು ಕೂಡ ಕನ್ನಡ ಪ್ರಖ್ಯಾತ, ಪ್ರತಿಭಾನ್ವಿತ ನಟ. ಸುಚೀಂದ್ರ ಪ್ರಸಾದ್ ಅವರಿಂದ 2018 ರಿಂದ ಪವಿತ್ರಾ ದೂರವಾದರು ಎನ್ನಲಾಗುತ್ತದೆ.
6/7
ಪವಿತ್ರಾ ಲೋಕೆಶ್
ಬಳಿಕ ಪವಿತ್ರಾ ಲೋಕೇಶ್ ಹಿರಿಯ ನಟ ನರೇಶ್‌ಗೆ ಆಪ್ತರಾದರು. ನರೇಶ್ ಟಾಲಿವುಡ್ ಫೇಮಸ್ ನಟ. ನರೇಶ್ ಅವರಿಗೂ ಈಗಾಗಲೇ ಮದುವೆಯಾಗಿದ್ದು ಪವಿತ್ರಾ ಜೊತೆಗಿನ ಸಂಬಂಧದ ವಿಚಾರ ತಿಳಿದಾಗ ಅವರ ಪತ್ನಿ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿದ್ದರು.
7/7
ಪವಿತ್ರಾ ಲೋಕೆಶ್
ಆದರೆ ಪವಿತ್ರಾ ತಮ್ಮ 45ನೇ ವಯಸ್ಸಿನಲ್ಲಿ ನರೇಶ್ ಜೊತೆ ಮೂರನೇ ಮದುವೆಯಾಗಿದ್ದಾರೆ. ಈ ಕುರಿತು ವಿಡಿಯೋ ಕೂಡ ವೈರಲ್ ಆಗಿತ್ತು. ನಟ ನರೇಶ್ 6000 ಕೋಟಿ ಆಸ್ತಿಯ ಒಡೆಯನಾಗಿದ್ದಾರೆ ಎನ್ನಲಾಗುತ್ತದೆ.