• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಗುರು ಸಂಚಾರ: ಮುಂದಿನ 79 ದಿನ 5 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

ಗುರು ಸಂಚಾರ: ಮುಂದಿನ 79 ದಿನ 5 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

Written ByYashaswini V
Published: Nov 11, 2026, 08:46 IST|Updated: Nov 11, 2026, 08:48 IST
joinshare

ಜ್ಯೋತಿಷ್ಯದಲ್ಲಿ ಜ್ಞಾನ, ಸಂಪತ್ತು, ಅದೃಷ್ಟದ ಅಂಶ ಎನ್ನಲಾಗುವ ಗುರು ಪ್ರಭಾವದಿಂದ ಕೆಲವರ ಬದುಕೇ ಬದಲಾಗಲಿದೆ ಎನ್ನಲಾಗುತ್ತಿದೆ. 

Guru in Leo Effect1/6

ಗುರು ಸಂಚಾರ ಫಲ

ವೈದಿಕ ಜ್ಯೋತಿಷ್ಯದ ಪ್ರಕಾರ, ಶುಭ ಗ್ರಹ ಗುರು ಪ್ರಸ್ತುತ ಸೂರ್ಯನ ಅಧಿಪತ್ಯದ ಸಿಂಹ ರಾಶಿಯಲ್ಲಿ ಸಂಚರಿಸುತ್ತಿದ್ದು ಮುಂದಿನ 79 ದಿನಗಳವರೆಗೆ ಐದು ರಾಶಿಯ ಜನರಿಗೆ ಬಂಗಾರದ ಸಮಯ ಎಂದು ಸಾಬೀತುಪಡಿಸಲಿದೆ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಹೆಜ್ಜೆ ಹೆಜ್ಜೆಗೂ ಯಶಸ್ಸು ಕೈ ಹಿಡಿಯಲಿದ್ದು ಹಣಕಾಸಿನ ಮುಗ್ಗಟ್ಟಿನಿಂದಲೂ ಪರಿಹಾರ ಸಿಗಲಿದೆ. ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
Guru in Leo Effect2/6

ಮೇಷ ರಾಶಿ

ಗುರು ಸಂಚಾರವು ಮೇಷ ರಾಶಿಯ ಜನರಿಗೆ ಎಲ್ಲಾ ಆಯಾಮಗಳಲ್ಲೂ ಅನುಕೂಲಕರವಾಗಿದ್ದು ದೀರ್ಘಾವಧಿಯಿಂದ ಕೆಲಸಗಳಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಮದುವೆ ಸಂಬಂಧಿತ ಮಾತುಕತೆಗಳಲ್ಲಿ ಧನಾತ್ಮಕತೆಯನ್ನು ಅನುಭವಿಸುವಿರಿ. ನಿರುದ್ಯೋಗಿಗಳಿಗೆ ನೀವು ಕಾಯುತ್ತಿದ್ದ ಉದ್ಯೋಗವೇ ಸಿಗಲಿದೆ. ದಾಂಪತ್ಯದಲ್ಲಿ ಮನಸ್ಥಾಪಗಳು ಬಗೆಹರಿಯಲಿದ್ದು ಪರಸ್ಪರರ ನಡುವೆ ಬಾಂಧವ್ಯ ಬಲಗೊಳ್ಳಲಿದೆ. ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳಿವೆ.
Guru in Leo Effect3/6

ಕರ್ಕಾಟಕ ರಾಶಿ

ಗುರು ಗೋಚಾರ ಫಲದಿಂದ ಕರ್ಕಾಟಕ ರಾಶಿಯ ಜನರಿಗೆ ವೈಯಕ್ತಿಕ ಜೀವನದ ಜೊತೆಗೆ ವೃತ್ತಿಪರ ಜೀವನದಲ್ಲೂ ಪ್ರಯೋಜನವಾಗಲಿದೆ. ಈ ಅವಧಿಯಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿನ ಸಂಕಷ್ಟಗಳಿಂದ ಪರಿಹಾರ ಪಡೆಯುವಿರಿ. ಉದ್ಯೋಗಿಗಳಿಗೂ ಅನುಕೂಲಕರ ಅವಧಿ ಇದಾಗಿರಲಿದ್ದು ನಿಮ್ಮ ಕೆಲಸಕ್ಕೆ ಮನ್ನಣೆಯನ್ನು ಪಡೆಯುವಿರಿ. ಕೆಲಸದ ಒತ್ತಡದಿಂದ ಮುಕ್ತಿ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಹಿರಿಯರ ಸಹಕಾರ ಸಿಗಲಿದೆ. ವ್ಯವಹಾರಸ್ಥರು ಭವಿಷ್ಯದ ದೃಷ್ಟಿಯಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಸೂಚನೆಗಳಿವೆ.
Guru in Leo Effect4/6

ಸಿಂಹ ರಾಶಿ

ಸ್ವ ರಾಶಿಯಲ್ಲೇ ಗುರು ಸಂಚಾರವು ಸಿಂಹ ರಾಶಿಯರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಹೊಸ ಕೆಲಸಗಳನ್ನು ಆರಂಭಿಸಲು ಸೂಕ್ತವಾದ ಸಮಯ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳಿದ್ದು, ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಸ್ಥಗಿತಗೊಂಡಿದ್ದ ಮದುವೆ ಮಾತುಕತೆಗಳಲ್ಲಿ ಪ್ರಗತಿಯನ್ನು ಕಾಣುವಿರಿ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸೂಚನೆಗಳಿವೆ. ನಿಮ್ಮ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ.
Guru in Leo Effect5/6

ಧನು ರಾಶಿ

ಗುರು ಗೋಚಾರ ಫಲವಾಗಿ ಧನು ರಾಶಿಯವರಿಗೆ ಮುಂದಿನ 79 ದಿನಗಳು ಬಂಪರ್‌ ಅವಕಾಶಗಳು ಸಿಗಬಹುದು. ಹೊಸ ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಉತ್ತಮ ಕೆಲಸದ ಆಫರ್‌ ಬರಬಹುದು. ವ್ಯಾಪಾರಸ್ಥರು ಹೊಸ ಒಪ್ಪಂದಗಳಿಗೆ ಸಹಿ ಹಾಕಬಹುದು. ಹೂಡಿಕೆಯಿಂದ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಹಣಕಾಸಿನ ಸುರಿಮಳೆಯೇ ಸುರಿಯಲಿದ್ದು ಆರ್ಥಿಕ ಸಂಕಷ್ಟದಿಂದ ಪರಿಹಾರ ಪಡೆಯುವಿರಿ. ಸ್ವಂತ ವ್ಯವಹಾರ ಮಾಡುವವರಿಗೆ ಅನುಕೂಲಕರವಾದ ಸಮಯ ಇದಾಗಿರಲಿದೆ.
Guru in Leo Effect6/6

ಕುಂಭ ರಾಶಿ

ಗುರು ಸಂಚಾರವು ಕುಂಭ ರಾಶೀಯವರಿಗೆ ಹಲವು ವಿಧದಲ್ಲಿ ಪ್ರಯೋಜನಕಾರಿ ಆಗಿದೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ನಿಮ್ಮ ಹಣ ಹಿಂದಿರುಗುವ ಸೂಚನೆಗಳಿವೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ತುಂಬಾ ಪ್ರಾಶಸ್ತ್ಯವಾದ ಸಮಯ ಇದಾಗಿರಲಿದೆ. ವ್ಯವಹಾರಸ್ಥರಿಗೆ ಅನುಕೂಲಕರ ಪರಿಸ್ಥಿತಿ ಇರಲಿದೆ. ಕುಟುಂಬದಲ್ಲಿ ಮದುವೆ ಮಾತುಕತೆಗಳು ಸಕಾರಾತ್ಮಕ ದಿಕ್ಕಿನತ್ತ ಸಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಣಕಾಸಿನ ವಿಚಾರದಲ್ಲೂ ಈ ಸಮಯ ಅತ್ಯುತ್ತಮವಾಗಿರಲಿದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.