• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ದಿನಕ್ಕೆ ಎಷ್ಟು ಕಪ್‌ ʼಚಹಾʼ ಆರೋಗ್ಯಕ್ಕೆ ಒಳ್ಳೆಯದು? ತಜ್ಞರು ಏನಂತಾರೆ ಗೊತ್ತಾ!

ದಿನಕ್ಕೆ ಎಷ್ಟು ಕಪ್‌ ʼಚಹಾʼ ಆರೋಗ್ಯಕ್ಕೆ ಒಳ್ಳೆಯದು? ತಜ್ಞರು ಏನಂತಾರೆ ಗೊತ್ತಾ!

Written ByYashaswini V
Published: Sep 29, 2026, 12:17 PM IST|Updated: Sep 29, 2026, 12:20 PM IST
joinshare

ಚಹಾ ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ... ಆದರೆ, ದಿನಕ್ಕೆ ಎಷ್ಟು ಕಪ್‌ ಚಹಾ ಕುಡಿದರೆ ಆರೋಗ್ಯಕ್ಕೆ ಲಾಭ ಎಂದು ಎಂದಾದರೂ ಯೋಚಿಸಿದ್ದೀರಾ?

Tea For Health1/6

ಚಹಾ

ಬಹುತೇಕ ಜನರಿಗೆ ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿದಿಲ್ಲ ಎಂದರೆ ದಿನವೇ ಶುರುವಾಗುವುದಿಲ್ಲ. ಅಷ್ಟೇ ಅಲ್ಲ, ಇನ್ನೂ ಕೆಲವರು ಆಗಾಗ್ಗೆ ಚಹಾ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ.
Tea For Health2/6

ಚಹಾದ ಅಭ್ಯಾಸ

ಚಹಾ ಕೆಲವರಿಗೆ ಒತ್ತಡ ಕಡಿಮೆ ಮಾಡುವುದು ಹಾಗೂ ಮೂಡ್‌ ಫ್ರೆಶ್‌ ಮಾಡುವ ಒಂದು ಮಾರ್ಗವಾದರೆ, ಇನ್ನೂ ಕೆಲವರಿಗೆ ಚಹಾ ಇಲ್ಲದೆ ತಲೆಯೇ ಓಡುವುದಿಲ್ಲ. ಆದರೆ, ಅತಿಯಾದ ಟೀ ಸೇವನೆ ಒಳ್ಳೆಯದೇ? ದಿನಕ್ಕೆ ಎಷ್ಟು ಕಪ್‌ ಚಹಾ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರಾ?
Tea For Health3/6

ಚಹಾದ ಪ್ರಯೋಜನ

ಚಹಾದಲ್ಲಿ ಪ್ಲೇವನಾಯ್ಡ್‌ಗಳು ಹೇರಳವಾಗಿದ್ದು, ಇದು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಸೀಮಿತ ಪ್ರಮಾಣದಲ್ಲಿ ಚಹಾ ಸೇವನೆಯು ಕಿಡ್ನಿ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.
Tea For Health4/6

ದಿನಕ್ಕೆ ಎಷ್ಟು ಕಪ್‌ ಚಹಾ ಕುಡಿಯಬಹುದು?

ಚಹಾದಿಂದ ಆರೋಗ್ಯಕ್ಕೆ ಪ್ರಯೋಜನವಿದೆ. ಆದರೂ, ದಿನಕ್ಕೆ ಕೇವಲ ಮೂರು ಕಪ್‌ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಚಹಾ ಸೇವಿಸುವುದು ಮಾತ್ರ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.
Tea For Health5/6

ಚಹಾ ಸೇವನೆ

ಆರೋಗ್ಯ ತಜ್ಞರ ಪ್ರಕಾರ, ಒಂದು ದಿನದಲ್ಲಿ 400 ಮಿಲಿಗ್ರಾಂಗಿಂತ ಅಧಿಕ ಚಹಾ ಸೇವನೆಯು ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುವ ಬದಲಿಗೆ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
Tea For Health6/6

ದಿನಕ್ಕೆ ಎಷ್ಟು ಕಪ್‌ ಚಹಾ ಆರೋಗ್ಯಕ್ಕೆ ಒಳ್ಳೆಯದು?

ಅದಕ್ಕಾಗಿಯೇ ಅತಿಯಾಗಿ ಚಹಾ ಕುಡಿಯುವ ಬದಲು ದಿನಕ್ಕೆ ಎರಡರಿಂದ ಮೂರು ಚಿಕ್ಕ ಕಪ್‌ ಚಹಾ ಸೇವನೆ ಆರೋಗ್ಯಕ್ಕೆ ವರದಾನ ಎನ್ನಲಾಗುತ್ತದೆ. ಅತಿಯಾದ ಚಹಾ ಸೇವನೆಯು ವ್ಯಕ್ತಿಯಲ್ಲಿ ರಕ್ತಹೀನತೆ ಸಮಸ್ಯೆಗೂ ಕಾರಣವಾಗಬಹುದು ಎಂತಲೂ ಹೇಳಲಾಗುತ್ತದೆ. ‌ ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
TAGS:
Health Tips

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.