• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /EPFO Pension: ಖಾಸಗಿ ನೌಕರರಿಗೆ ಇಪಿಎಸ್‌ ಕನಿಷ್ಠ ಪಿಂಚಣಿ ಮೂರು ಪಟ್ಟು ಹೆಚ್ಚಳ!

EPFO Pension: ಖಾಸಗಿ ನೌಕರರಿಗೆ ಇಪಿಎಸ್‌ ಕನಿಷ್ಠ ಪಿಂಚಣಿ ಮೂರು ಪಟ್ಟು ಹೆಚ್ಚಳ!

Written ByYashaswini V
Published: Nov 12, 2026, 10:43 IST|Updated: Nov 12, 2026, 10:45 IST
joinshare

ದೀಪಾವಳಿ ಬೆನ್ನಲ್ಲೇ ಖಾಸಗಿ ಉದ್ಯೋಗಿಗಳಿಗೆ ಇಪಿಎಸ್‌ ಕನಿಷ್ಠ ಪಿಂಚಣಿ ಸಂಬಂಧಿಸಿದಂತೆ ಸಿಹಿ ಸುದ್ದಿಯನ್ನು ನಿರೀಕ್ಷಿಸಲಾಗಿದೆ. 

EPS Minimum Pension Hike1/6

ಇಪಿಎಸ್‌ ಕನಿಷ್ಠ ಪಿಂಚಣಿ ಹೆಚ್ಚಳ

ಇದೇ ನವೆಂಬರ್‌ 19, 2026ರಂದು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೇಂದ್ರ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಖಾಸಗಿ ಉದ್ಯೋಗಿಗಳ ಇಪಿಎಸ್‌ ಕನಿಷ್ಠ ಪಿಂಚಣಿ ಏರಿಕೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದ್ದು, ಇಪಿಎಸ್‌ ಕನಿಷ್ಠ ಪಿಂಚಣಿ ಮೂರು ಪಟ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ.
EPS Minimum Pension Hike2/6

ಇಪಿಎಸ್‌ ಕನಿಷ್ಠ ಪಿಂಚಣಿ

ಖಾಸಗಿ ಸಂಸ್ಥೆಗಳಲ್ಲಿ ಜೀವನವಿಡೀ ದುಡಿದು ನಿವೃತ್ತರಾಗಿರುವ ಪಿಂಚಣಿದಾರರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ಇಪಿಎಫ್‌ಒದ ಇಪಿಎಸ್‌ ಯೋಜನೆ ಅಡಿಯಲ್ಲಿ ನೀಡಲಾಗುವ ಮಾಸಿಕ ಪಿಂಚಣಿಯನ್ನು ಪರಿಷ್ಕರಿಸುವ ಬಗ್ಗೆ ದೀರ್ಘಾವಧಿಯಿಂದ ಪಿಂಚಣಿದಾರರ ಸಂಘಗಳು ಬೇಡಿಕೆ ಇಟ್ಟಿವೆ.
EPS Minimum Pension Hike3/6

ಕನಿಷ್ಠ ಪಿಂಚಣಿ ₹3,000ಕ್ಕೆ ಏರಿಕೆ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನವೆಂಬರ್ 19 ರಂದು ನಡೆಯಲಿರುವ ಸಿಬಿಟಿ ಸಭೆಯಲ್ಲಿ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಸರ್ಕಾರವು ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000 ರಿಂದ ₹3,000 ಕ್ಕೆ ಹೆಚ್ಚಿಸುವ ಬಗ್ಗೆ ಬಹು ದೊಡ್ಡ ನಿರೀಕ್ಷೆ ಇದೆ.
EPS Minimum Pension Hike4/6

ಕನಿಷ್ಠ ಪಿಂಚಣಿ ಏರಿಕೆ

ವಾಸ್ತವವಾಗಿ, ಇಪಿಎಸ್ ಅಡಿಯಲ್ಲಿ ಖಾಸಗಿ ನೌಕರರಿಗೆ ನಿವೃತ್ತಿ ಬಳಿಕ ನೀಡಲಾಗುತ್ತಿರುವ ಕನಿಷ್ಠ ತಿಂಗಳ ಪಿಂಚಣಿಯನ್ನು ₹1,000 ದಿಂದ ₹3,000 ಕ್ಕೆ ಹೆಚ್ಚಳ ಮಾಡುವ ಬಗ್ಗೆ ದೀರ್ಘ ಸಮಯದಿಂದ ಚರ್ಚೆಗಳು ನಡೆಯುತ್ತಿದ್ದು ಈ ಬಗ್ಗೆ ಕಾರ್ಮಿಕ ಮತ್ತು ಹಣಕಾಸು ಸಚಿವಾಲಯಗಳು ಒಪ್ಪಂದಕ್ಕೆ ಬಂದಿದ್ದು, ಅಧಿಕೃತ ಮಾಹಿತಿಯಷ್ಟೇ ಬಾಕಿ ಉಳಿದಿದೆ ಎನ್ನಲಾಗುತ್ತಿದೆ.
EPS Minimum Pension Hike5/6

ಹಣಕಾಸು ಸಚಿವಾಲಯದ ಒಪ್ಪಿಗೆ

ಇಪಿಎಸ್‌ ಕನಿಷ್ಠ ಪಿಂಚಣಿ ಪರಿಷ್ಕರಣೆ ಕುರಿತಂತೆ ಕಾರ್ಮಿಕ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ನಡುವೆ ಈಗಾಗಲೇ ಮಹತ್ವದ ಚರ್ಚೆಗಳು ನಡೆದಿದ್ದು, ಹಣಕಾಸು ಸಚಿವಾಲಯವು ಪಿಂಚಣಿದಾರರ ಕನಿಷ್ಠ ಪಿಂಚಣಿಯನ್ನು ₹7,500ರ ಬದಲಿಗೆ ₹3,000 ಏರಿಕೆ ಮಾಡುವ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದೆ ಎಂದು ಮೂಲಗಳೀಗೆ ಮಾಹಿತಿ ಲಭ್ಯವಾಗಿದೆ.
EPS Minimum Pension Hike6/6

12 ವರ್ಷಗಳಿಂದ ಬದಲಾಗದ ಪಿಂಚಣಿ

ವಾಸ್ತವವಾಗಿ, ಪ್ರಸ್ತುತ ಇಪಿಎಸ್ ಅಡಿಯಲ್ಲಿ ನೀಡಲಾಗುತ್ತಿರುವ ಕನಿಷ್ಠ ₹1,000 ಮಾಸಿಕ ಪಿಂಚಣಿ ವ್ಯವಸ್ಥೆಯು 12 ವರ್ಷಗಳ ಹಿಂದೆಯಿಂದಲೂ ಎಂದರೆ ಸೆಪ್ಟೆಂಬರ್ 2014 ರಿಂದಲೂ ಜಾರಿಯಲ್ಲಿದೆ. ಈ 12 ವರ್ಷಗಳಲ್ಲಿ ಹಣದುಬ್ಬರ ಹೆಚ್ಚಾಗಿದ್ದು ₹1,000 ಪಿಂಚಣಿಯು ಪಿಂಚಣಿದಾರರಿಗೆ ಕನಿಷ್ಠ ಅವರ ವೈದ್ಯಕೀಯ ವೆಚ್ಚವನ್ನು ಭರಿಸಲೂ ಸಹ ಸಾಕಾಗುವುದಿಲ್ಲ. ಹಾಗಾಗಿ, ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡಬೇಕೆಂದು ದೀರ್ಘಕಾಲದಿಂದ ಪಿಂಚಣಿದಾರರ ಸಂಘಗಳು ಬೇಡಿಕೆ ಇಟ್ಟಿವೆ.
TAGS:
EPFO
EPFO News

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.