300 ಸಿನಿಮಾ, 70 ಧಾರಾವಾಹಿಗಳಲ್ಲಿ ನಟಿಸಿದರೂ ಊಟಕ್ಕೂ ಗತಿಯಿಲ್ಲ ಎಂದು ನಟಿ ಪಂಕಜಾ ಕಣ್ಣೀರಿಟ್ಟಿದ್ದಾರೆ.
ಹಿರಿಯ ನಟಿ ಪಂಕಜಾ ಅವರ ಕಣ್ಣೀರಿನ ಹಿಂದಿನ ಕಥೆಯೇನು? ನೋಡೋಣ ಈ ಸ್ಟೋರಿ.
1/6
ಇಂದು ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ
ಸಿನಿಮಾ ರಂಗದಲ್ಲಿ ನೂರಾರು ಪಾತ್ರಗಳಿಗೆ ಜೀವ ತುಂಬಿದ ಹಿರಿಯ ನಟಿ ಪಂಕಜಾ ಅವರ ಬದುಕಿನಲ್ಲೇ ವಿಧಿ ಕ್ರೂರ ಆಟವಾಡಿದೆ. ಒಂದು ಕಾಲದಲ್ಲಿ ನಾಲ್ಕು ಕೆಜಿ ಚಿನ್ನ, ಐಷಾರಾಮಿ ಕಾರುಗಳು, ಆಸ್ತಿ-ಪಾಸ್ತಿ ಅಂತ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ನಡೆಸಿದ್ದ ನಟಿ, ಇಂದು ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
2/6
ಕೊರೊನಾ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡೆ
ಕೊರೊನಾ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡು,ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.ಅಷ್ಟೇ ಅಲ್ಲ, ಕಷ್ಟ ಬಂದಾಗ ಬಂಧು-ಬಳಗದವರೂ ಕೈಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
3/6
ಬದುಕಿನಲ್ಲಿ ನಡೆದಿದ್ದೇನು?
ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ಸಚಿವ ಸಂತೋಷ್ ಲಾಡ್ ಮಾತ್ರ ಆಸರೆಯಾಗಿ ನಿಂತಿದ್ದಾರಂತೆ. ಹಾಗಾದ್ರೆ ಹಿರಿಯ ನಟಿ ಪಂಕಜಾ ಅವರ ಬದುಕಿನಲ್ಲಿ ನಡೆದಿದ್ದೇನು?
4/6
ಬಂಧುಗಳ ನಿರ್ಲಕ್ಷ್ಯ
ಕಷ್ಟದ ಸಮಯದಲ್ಲಿ ಅಕ್ಕ ತಂಗಿ ಸೇರಿದಂತೆ ಬಂಧು ಬಳಗದವರೂ ಯೋಗಕ್ಷೇಮ ವಿಚಾರಿಸಲಿಲ್ಲ. ನಗುವಾಗ ಎಲ್ಲರೂ ಇರುತ್ತಾರೆಅಳುವಾಗ ಯಾರೂ ಇರುವುದಿಲ್ಲ ಎನ್ನುವಂತಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.ಆರ್ಥಿಕ ಸಂಕಷ್ಟ ಎದುರಾದಾಗ ಬಂಧು-ಬಳಗದವರ ವರ್ತನೆ ಬದಲಾಗಿತ್ತು.ಅಕ್ಕ-ತಂಗಿ ಸೇರಿದಂತೆ ಸಂಬಂಧಿಕರು ಕೂಡ ಯೋಗಕ್ಷೇಮ ವಿಚಾರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ನಗುವಾಗ ಸುತ್ತಲೂ ಜನ ಇರುತ್ತಾರೆ, ಅಳುವಾಗ ಮಾತ್ರ ಯಾರೂ ಇರುವುದಿಲ್ಲ.ಕಷ್ಟದ ದಿನಗಳಲ್ಲಿ ತಮ್ಮ ನೋವನ್ನು ಕೇಳುವವರೂ ಇರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.ಬದುಕಿನಲ್ಲಿ ಹಣ, ಆಸ್ತಿ ಇದ್ದಾಗ ಇರುವ ಸಂಬಂಧಗಳು, ಕಷ್ಟ ಬಂದಾಗ ದೂರವಾಗುತ್ತವೆ ಎಂಬ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
5/6
ಕಷ್ಟದಲ್ಲಿ ಕೈಹಿಡಿದ ಸಂತೋಷ್ ಲಾಡ್!
ಎಲ್ಲರೂ ದೂರವಾದ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್ ನೆರವಿಗೆ ಬಂದಿದ್ದಾರೆ. ಕಷ್ಟದ ಸಮಯದಲ್ಲಿ ತಮಗೆ ಆಸರೆಯಾಗಿ ನಿಂತ ಸಂತೋಷ್ ಲಾಡ್ ಅವರಿಗೆ ಪಂಕಜಾ ಕೃತಜ್ಞತೆ ಸಲ್ಲಿಸಿದ್ದಾರೆ.ಈ ಕುರಿತ ವಿಡಿಯೋವನ್ನು ಸಂತೋಷ್ ಲಾಡ್ ಟೀಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.ಪಂಕಜಾ ಅವರ ನೋವಿನ ಕಥೆ ಕೇಳಿ ನೆಟ್ಟಿಗರು ಮರುಗಿದ್ದಾರೆ.ಕಷ್ಟದ ಸಮಯದಲ್ಲಿ ನೆರವಾಗುವವರೇ ನಿಜವಾದ ಸಂಬಂಧಿಕರು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಹಿರಿಯ ಕಲಾವಿದೆಗೆ ಧೈರ್ಯ ತುಂಬಿ, ಮುಂದಿನ ಬದುಕು ಸುಗಮವಾಗಲಿ ಎಂದು ಹಾರೈಸಿದ್ದಾರೆ.
6/6