ಆಹಾರದ ರುಚಿಯನ್ನು ಹೆಚ್ಚಿಸುವ ಕರಿಬೇವಿನ ಸೊಪ್ಪು ಆರೋಗ್ಯವನ್ನೂ ವೃದ್ದಿಸುತ್ತದೆ.
ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ಕರಿಬೇವಿನ ಎಲೆಗಳು ತೂಕ ಇಳಿಕೆಗೂ ವರದಾನ ಎಂದು ನಿಮಗೆ ತಿಳಿದಿದೆಯೇ?
1/6
ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳು ಎಲ್ಲಾ ಋತುವಿನಲ್ಲೂ ಬಹಳ ಸುಲಭವಾಗಿ ಸಿಗುವ ಮನೆಯ ಹೂ ಕುಂಡದಲ್ಲೂ ಬೆಳೆಯಬಹುದಾದ ಸಸ್ಯ. ಹಾಗಾಗಿಯೇ ಪ್ರತಿ ಮನೆಯಲ್ಲೂ ಇದು ಬಹಳ ಸುಲಭವಾಗಿ ಲಭ್ಯವಿರುತ್ತದೆ. ಕರಿಬೇವಿನ ಎಲೆಗಳು ಆರೋಗ್ಯದ ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ. ಆರೋಗ್ಯವನ್ನು ಸಹ ವೃದ್ಧಿಸುತ್ತದೆ.
2/6
ಆರೋಗ್ಯಕ್ಕೆ ಕರಿಬೇವಿನ ಎಲೆಗಳು
ಉತ್ಕರ್ಷಣ ನಿರೋಧಕಗಳು ಹಾಗೂ ಹಲವು ಬಗೆಯ ಪೋಷಕಾಂಶಗಳಿಂದ ತುಂಬಿರುವ ಕರಿಬೇವಿನ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಆಹಾರದಲ್ಲಿ ಕರಿಬೇವಿನ ಎಲೆಗಳ ಬಳಕೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಂದಲೂ ದೇಹವನ್ನು ರಕ್ಷಿಸಬಹುದಾಗಿದೆ.
3/6
ಕರಿಬೇವಿನ ಎಲೆಗಳ ಪ್ರಯೋಜನ
ದೈನಂದಿನ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಇದು ರಕ್ತಹೀನತೆಯಂತಹ ಸಮಸ್ಯೆಗಳಿಂದ ದೂರ ಉಳಿಯಲು ಸಹಾಯಕವಾಗಿದ್ದು, ದೃಷ್ಟಿ ದೋಷವನ್ನು ನಿವಾರಿಸುತ್ತದೆ.
4/6
ತೂಕ ಇಳಿಕೆಗೆ ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಇದು ತೂಕ ಇಳಿಕೆಯಲ್ಲೂ ಪರಿಣಾಮಕಾರಿ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಕರಿಬೇವಿನ ಎಲೆಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಇದು ಡೊಳ್ಳು ಹೊಟ್ಟೆಯನ್ನು ಬೆಣ್ಣೆಯಂತೆ ಕರಗಿಸುವಲ್ಲಿ ಪರಿಣಾಮಕಾರಿ ಆಗಿದೆ.
5/6
ತೂಕ ಇಳಿಸಲು ಕರಿಬೇವು
ಕರಿಬೇವಿನ ಎಲೆಗಳಲ್ಲಿ ಆಲ್ಕಲಾಯ್ಡ್ ಅಡಕವಾಗಿದ್ದು, ಇದು ಬೊಜ್ಜು ವಿರೋಧಿಗಳನ್ನು ಹೊಂದಿದೆ. ಕರಿಬೇವಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ದೇಹದಲ್ಲಿ ಸಂಗ್ರಹವಾದ ಕೊಬ್ಬು ಮೇಣದಂತೆ ಕರಗಲು ಸಹಾಯಕವಾಗುತ್ತದೆ.
6/6
ತೂಕ ಇಳಿಕೆಗೆ ಕರಿಬೇವಿನ ಎಲೆ ತಿನ್ನಲು ಸರಿಯಾದ ಸಮಯ
ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕೇ ನಾಲ್ಕು ಕರಿಬೇವಿನ ಎಲೆಗಳನ್ನು ತೊಳೆದು ಅದನ್ನು ಜಗಿದು ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಇದು ಸಹಾಯಕವಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.