How To Flush Out Uric Acid : ಜೀರಿಗೆ ನೀರನ್ನು ಪ್ರತಿನಿತ್ಯ ಕುಡಿದರೆ ಯೂರಿಕ್ ಆಸಿಡ್ ಹರಳುಗಳು ನಿರ್ವಿಷಗೊಂಡು ದೇಹದಿಂದ ಹೊರಬರಲು ಪ್ರಾರಂಭಿಸುತ್ತವೆ.
1/5
ಕಿಡ್ನಿ ಸ್ಟೋನ್
ಪ್ಯೂರಿನ್‌ಗಳ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ. ಹೀಗೆ ದೇಹದಲ್ಲಿ ಸಂಗ್ರಹವಾದ ಯೂರಿಕ್ ಆಸಿಡ್ ಮೂತ್ರಪಿಂಡಗಳಿಂದ ಫಿಲ್ಟರ್ ಆಗಿ ದೇಹದಿಂದ ಹೊರ ಹೋಗುತ್ತದೆ. ಆದರೆ ಮೂತ್ರಪಿಂಡಗಳು ಅಗತ್ಯಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಯೂರಿಕ್ ಆಸಿಡ್ ದೇಹದಲ್ಲಿ ಸಂಗ್ರಹವಾಗುತ್ತದೆ. ಇದು ಹರಳುಗಳ ರೂಪದಲ್ಲಿ ಮೊಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತವೆ.
2/5
ಕಿಡ್ನಿ ಸ್ಟೋನ್
ಮೂತ್ರಪಿಂಡಗಳು ಅಗತ್ಯಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಅನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಅದು ಹರಳುಗಳ ರೂಪದಲ್ಲಿ ಮೊಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಶೇಖರಗೊಳ್ಳಲು ಪ್ರಾರಂಭಿಸುತ್ತವೆ.ಆಗ ವಿಪರೀತ ನೋವು ಕೂಡಾ ಕಾಣಿಸಿಕೊಳ್ಳುತ್ತವೆ. ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಜೀರಿಗೆ ಹೆಚ್ಚಿನ ಯೂರಿಕ್ ಆಸಿಡ್ ಹರಳುಗಳನ್ನು ಕರಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಜೀರಿಗೆ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುವ ಮಸಾಲೆಯಾಗಿದೆ.
3/5
ಕಿಡ್ನಿ ಸ್ಟೋನ್
ಜೀರಿಗೆ ನೀರನ್ನು ಪ್ರತಿನಿತ್ಯ ಕುಡಿದರೆ ಯೂರಿಕ್ ಆಸಿಡ್ ಹರಳುಗಳು ನಿರ್ವಿಷಗೊಂಡು ದೇಹದಿಂದ ಹೊರಬರಲು ಪ್ರಾರಂಭಿಸುತ್ತವೆ. ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಜೀರಿಗೆ ಸೇರಿಸಿ ಮತ್ತು ರಾತ್ರಿಯಿಡೀ ನೆನೆಸಿಡಿ.ಮರುದಿನ ಬೆಳಿಗ್ಗೆ ಆ ನೀರನ್ನು ಬಿಸಿ ಮಾಡಿದ ನಂತರ ಅದಕ್ಕೆ ಒಂದೆರಡು ಚಿಟಕಿ ಅರಶಿನ ಸೇರಿಸಿ ಕುಡಿಯಬೇಕು.
4/5
ಕಿಡ್ನಿ ಸ್ಟೋನ್
ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಯೂರಿಕ್ ಆಸಿಡ್ ಹರಳುಗಳನ್ನು ಪುಡಿ ಮಾಡುತ್ತದೆ.ಯೂರಿಕ್ ಆಸಿಡ್ ಹರಳುಗಳು ಕೀಲುಗಳು ಮತ್ತು ಬೆರಳುಗಳಲ್ಲಿ ಸಂಗ್ರಹವಾದಾಗ,ಊತ ಸಂಭವಿಸುತ್ತದೆ.ಅರಿಶಿನದ ಗುಣಲಕ್ಷಣಗಳು ಈ ಊತವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ.
5/5
ಕಿಡ್ನಿ ಸ್ಟೋನ್
ಅಲ್ಲದೆ, ಜೀರಿಗೆ ಮೂತ್ರ ವರ್ಧಕವಾಗಿದ್ದು, ಈ ನೀರನ್ನು ಕುಡಿಯುವುದರಿಂದ ಮೂತ್ರದ ಹರಿವು ಹೆಚ್ಚಾಗುವುದರಿಂದ ಮೂತ್ರ ಪಿಂಡದಿಂದ ಕಿಡ್ನಿ ಸ್ಟೋನ್ ಜಾರಿ ಬರುತ್ತದೆ. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.)