• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಗೌತಮ್‌-ಭೂಮಿಕಾ ಒಲವಿನ ಪಯಣಕ್ಕೆ ಫುಲ್‌ಸ್ಟಾಪ್‌! ಅಂತ್ಯವಾಗ್ತಿದೆ ಕಿರುತೆರೆಯ ಬ್ಲಾಕ್‌ಬಸ್ಟರ್‌ 'ಅಮೃತಧಾರೆ'

ಗೌತಮ್‌-ಭೂಮಿಕಾ ಒಲವಿನ ಪಯಣಕ್ಕೆ ಫುಲ್‌ಸ್ಟಾಪ್‌! ಅಂತ್ಯವಾಗ್ತಿದೆ ಕಿರುತೆರೆಯ ಬ್ಲಾಕ್‌ಬಸ್ಟರ್‌ 'ಅಮೃತಧಾರೆ'

Written ByRamya. R. Gowda
Published: Nov 10, 2026, 12:01 IST|Updated: Nov 10, 2026, 12:23 IST
joinshare
TV Serial Amrutadhare End: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಅಮೃತಧಾರೆ' ಇದೀಗ ಅಂತ್ಯದತ್ತ ಸಾಗುತ್ತಿದೆ. ಹಲವು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದ ಗೌತಮ್ ಮತ್ತು ಭೂಮಿಕಾ ಜೋಡಿಯ ಒಲವಿನ ಪಯಣಕ್ಕೆ ತೆರೆ ಬೀಳುವ ಸಮಯ ಬಂದಿದೆ.

ಕಿರುತೆರೆಯಲ್ಲಿ ಪ್ರೇಕ್ಷಕರ ಗಮನ ಸೆಳೆದಿರುವ ಧಾರಾವಾಹಿಗಳಲ್ಲಿ 'ಅಮೃತಧಾರೆ' ಕೂಡ ಒಂದು. ಪ್ರೀತಿ, ಪ್ರೇಮ, ಕುಟುಂಬದ ಸಂಬಂಧಗಳು, ಭಾವನೆಗಳ ಸುತ್ತ ಸಾಗುವ ಈ ಧಾರಾವಾಹಿ ಹಲವು ಕುತೂಹಲಕಾರಿ ತಿರುವುಗಳ ಮೂಲಕ ವೀಕ್ಷಕರನ್ನು ರಂಜಿಸಿತ ಬಂದಿದೆ. 
 

 

 

ಅಮೃತ ಧಾರೆ ಸೀರಿಯಲ್‌1/6

ಪ್ರೀತಿ ವಯಸ್ಸಿಗೆ ಅಂತಸ್ತಿಗೆ ಸೀಮಿತ ಅಲ್ಲ

ಮದುವೆ ಅನ್ನೋದು ವಯಸ್ಸಿನಲ್ಲಾಗಲಿ, ಅಂತಸ್ತಿನಲ್ಲಾಗಲಿ ನಿರ್ಧಾರವಾಗುವುದಿಲ್ಲ.. ಎರಡು ಮನಸ್ಸುಗಳ ನಡುವಿನ ನಂಬಿಕೆ, ಪ್ರೀತಿ ಮತ್ತು ಹೊಂದಾಣಿಕೆಯಿಂದ ಸುಂದರ ಸಂಬಂಧವೊಂದು ನಿರ್ಮಾಣವಾಗುತ್ತದೆ ಅನ್ನೋದಕ್ಕೆ ಸಾಕ್ಷಿಯೇ ಅಮೃತಧಾರೆ ಧಾರಾವಾಹಿ.
ಅಮೃತ ಧಾರೆ ಸೀರಿಯಲ್‌2/6

ಗೌತಮ್ ದಿವಾನ್ ಭೂಮಿಕಾ

ಒಂದೆಡೆ ಮಧ್ಯಮ ವರ್ಗದ ಕುಟುಂಬದ ವಿದ್ಯಾವಂತ ಯುವತಿ ಭೂಮಿಕಾ.. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯ, ಯಶಸ್ವಿ ಉದ್ಯಮಿ ಗೌತಮ್ ದಿವಾನ್. ಇಬ್ಬರಿಗೂ ಮದುವೆ ಬಗ್ಗೆ ಅಷ್ಟೊಂದು ಆಸಕ್ತಿ ಇರೋದಿಲ್ಲ. ಆದ್ರೆ ಕುಟುಂಬದ ಪರಿಸ್ಥಿತಿ ಇವರಿಬ್ಬರನ್ನೂ ಮದುವೆಯ ಬಂಧನಕ್ಕೆ ತಂದು ನಿಲ್ಲಿಸುತ್ತೆ.
ಅಮೃತ ಧಾರೆ ಸೀರಿಯಲ್‌3/6

ಈ ಜೋಡಿಯ ಕೆಮಿಸ್ಟ್ರಿಗೆ ಫಿದಾ

ಗೌತಮ್-ಭೂಮಿಕಾ ನಡುವಿನ ಪ್ರೀತಿ, ಮುನಿಸು, ಜಗಳ, ಭಾವನಾತ್ಮಕ ಸನ್ನಿವೇಶಗಳು ಹಾಗೂ ಕುಟುಂಬದ ಏಳುಬೀಳುಗಳು ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದ್ದವು. ಈ ಜೋಡಿಯ ಕೆಮಿಸ್ಟ್ರಿಗೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದರು.
Amruthadhare4/6

ವಿಲನ್‌ ಪಾತ್ರದಲ್ಲೂ ಕ್ಲಾಸ್‌

ಆರಂಭದಲ್ಲಿ ಸಣ್ಣಪುಟ್ಟ ಜಗಳ, ಮನಸ್ತಾಪ, ಭಿನ್ನಾಭಿಪ್ರಾಯಗಳಿದ್ದರೂ ದಿನಕಳೆದಂತೆ ಇಬ್ಬರ ನಡುವೆ ಸ್ನೇಹ ಬೆಳೆಯುತ್ತೆ. ಸ್ನೇಹ ಪ್ರೀತಿಯಾಗಿ ಬದಲಾಗುತ್ತೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾ ಸುಂದರ ಜೀವನ ಕಟ್ಟಿಕೊಳ್ಳುತ್ತಾರೆ.ಆದರೆ ಇವರ ಸುಖ ಸಂಸಾರಕ್ಕೆ ಕಂಟಕವಾಗೋದು ಮನೆಯವರ ಕುತಂತ್ರ. ಶಕುಂತಲಾ, ಜಯದೇವ್ ಸೇರಿದಂತೆ ಹಲವು ಪಾತ್ರಗಳ ಪಿತೂರಿ ಗೌತಮ್ ಮತ್ತು ಭೂಮಿಕಾ ಜೀವನದಲ್ಲಿ ಬಿರುಗಾಳಿ ಎಬ್ಬಿಸುವ ಮೂಲಕ ಜನರ ಮನಗೆದ್ದಿತ್ತು.
Amruthadhare serial5/6

ಅಮೃತಾಧಾರೆ

ಆರಂಭದಿಂದಲೂ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿದ್ದ 'ಅಮೃತಧಾರೆ', ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿತ್ತು. ಇದೀಗ ಧಾರಾವಾಹಿ ಮುಕ್ತಾಯವಾಗಲಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
Amruthadhare6/6

ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ

ಇನ್ನು ಧಾರಾವಾಹಿಯಲ್ಲಿ ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ ಹಾಗೂ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ಅದ್ಭುತವಾಗಿ ನಟಿಸುತ್ತಿದ್ದಾರೆ. ಇವರ ಜೊತೆಗೆ ವನಿತಾ ವಾಸು, ಚಿತ್ರಾ ಶೆಣೈ, ಸಿಹಿಕಹಿ ಚಂದ್ರು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
TAGS:
TV

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.