Blood Sugar Control Tips: ಸಕ್ಕರೆ ಕಾಯಿಲೆ ನಿಯಂತ್ರಣಲ್ಲಿಡಲು ಕೆಲವು ಮನೆಮದ್ದುಗಳನ್ನು ಬಳಸಬಹುದಾಗಿದೆ. ತುಪ್ಪದ ಜೊತೆ ಈ ಪುಡಿ ಬೆರೆಸಿ ತಿಂದರೆ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಮಧುಮೇಹಿಗಳಿಗೆ ಉಪಯುಕ್ತ ಮಾಹಿತಿ ಇದಾಗಿದೆ...
1/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
Black Pepper Powder Benefits: ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ದೀರ್ಘಕಾಲ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದರೆ ಹೃದಯ, ಮೂತ್ರಪಿಂಡ, ಕಣ್ಣು ಮತ್ತು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಬಹುದು.
2/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
ಹೀಗಾಗಿ ವೈದ್ಯರು ಸೂಚಿಸಿದ ಔಷಧಿಗಳ ಜೊತೆಗೆ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮಕ್ಕೂ ಆದ್ಯತೆ ನೀಡಬೇಕು. ನಿಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದಾಗಿದೆ.
3/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
ಕಾಳುಮೆಣಸು ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಕಾಳು ಮೆಣಸಿನಲ್ಲಿ ಪೈಪರಿನ್ ಎಂಬ ಸಕ್ರಿಯ ಸಂಯುಕ್ತವಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ.
4/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
ಕಾಳುಮೆಣಸು ದೇಹದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡುವಲ್ಲಿಯೂ ಕಾಳು ಮೆಣಸು ಪ್ರಮುಖ ಪಾತ್ರವಹಿಸುತ್ತದೆ.
5/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
ಕಾಳುಮೆಣಸನ್ನು ದೈನಂದಿನ ಆಹಾರದಲ್ಲಿ ಸೇವಿಸುವುದರಿಂದ ಹಠಾತ್ ಬ್ಲಡ್ ಶುಗರ್ ಏರಿಕೆ ಆಗುವುದನ್ನು ತಡೆಯಬಹುದಾಗಿದೆ. ಕಾಳುಮೆಣಸನ್ನು ಸಾರು, ಬೇಳೆ, ತರಕಾರಿ ಮತ್ತು ಸೂಪ್‌ಗಳಲ್ಲಿ ರುಚಿಗಾಗಿ ಬಳಸಬಹುದು.
6/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
ಮಧುಮೇಹಿಗಳು ವಾರಕ್ಕೆ ಒಂದು ಬಾರಿಯಾದರೂ ತುಪ್ಪದಲ್ಲಿ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿದರೆ ಬ್ಲಡ್ ಶುಗರ್ ಕಂಟ್ರೋಲ್‌ನಲ್ಲಿರುತ್ತದೆ. ಆದರೆ ಈ ಮನೆಮದ್ದನ್ನು ಟ್ರೈ ಮಾಡುವ ಮುನ್ನ ಒಮ್ಮೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
7/7
ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು
ಗಮನಿಸಿ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಇದು ಕೇವಲ ಮನೆಮದ್ದು ಆಧಾರಿತವಾಗಿದೆ. ದೈನಂದಿನ ಜೀವನದಲ್ಲಿ ಅಳವಡಿಸುವ ಮುನ್ನ ತಜ್ಞ ವೈದ್ಯರನ್ನು ಸಂಪರ್ಕಿಸಿ.