ಬಿಗ್‌ಬಾಸ್ ಮನೆಯಲ್ಲಿ ಮತ್ತೊಂದು ಲವ್ ಸ್ಟೋರಿ ಶುರುವಾಗುವ ಲಕ್ಷಣ ಕಾಣ್ತಿದೆ. ನಟ ಯಶಸ್‌ಗೆ ಸಹ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಮೇಲೆ ವಿಶೇಷ ಭಾವನೆ ಮೂಡಿದೆಯಾ? ಕಥೆ, ಕವನದ ಮೂಲಕ ಸೌಂದರ್ಯಾ ಸೌಂದರ್ಯವನ್ನು ಹಾಡಿ ಹೊಗಳಿರುವ ಯಶಸ್, ಕ್ಯಾಮೆರಾ ಮುಂದೆ ಬಂದು ತಮ್ಮ ಮನದ ಮಾತನ್ನೂ ಬಿಚ್ಚಿಟ್ಟಿದ್ದಾರೆ.
ಯಶಸ್ ಮುಂದೆ ಬಂದು ಸೌಂದರ್ಯವನ್ನು ಹಾಡಿ ಹೊಗಳಿ ತಮ್ಮ ಮನದ ಮಾತನ್ನೂ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಯಶಸ್ ಹೇಳಿದ್ದೇನು? ಈ ಸ್ಟೋರಿ ನೋಡಿ.
1/5
ಬಿಗ್‌ಬಾಸ್ ಮನೆ ಲವ್ ಸ್ಟೋರಿ
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಸ್ನೇಹ, ಆತ್ಮೀಯತೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ನಟ ಯಶಸ್ ಹಾಗೂ ಸೌಂದರ್ಯಾ ಶೆಟ್ಟಿ ನಡುವಿನ ಆಪ್ತತೆ ವೀಕ್ಷಕರ ಗಮನ ಸೆಳೆದಿದೆ.
2/5
ಸೌಂದರ್ಯಾ ಯಶಸ್
ಸೌಂದರ್ಯಾ ಜೊತೆ ಮಾತನಾಡಿದ ಯಶಸ್, ಮಂಗಳೂರು ರಾಜ್ಯದ ರಾಜಕುಮಾರಿಯ ಕಥೆ ಹೇಳುವ ಮೂಲಕ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ, ಅಜ್ಜಿ ಹೇಳುತ್ತಿದ್ದ ಕಥೆಗೆ ಉತ್ತರವಾಗಿ ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯಾ ಸಿಕ್ಕಿದ್ದಾರೆ ಎಂದು ಹೇಳಿ ಧನ್ಯವಾದ ತಿಳಿಸಿದ್ದಾರೆ.
3/5
ಸೌಂದರ್ಯಾ ಗಾಗಿ ಕವನ
ಇನ್ನು ಸೌಂದರ್ಯಾ ಅವರಿಗಾಗಿ ವಿಶೇಷ ಕವನವನ್ನೂ ಯಶಸ್ ವಾಚಿಸಿದ್ದಾರೆ. 'ಶೆಟ್ಟಿ ಶೆಟ್ಟಿ, ಬಿಗ್‌ಬಾಸ್ ಮನೆಯಲ್ಲಿ ನಮ್ಮ ನಿಮ್ಮ ಭೇಟಿ, ನಿಮ್ಮ ನಗುವಿಗಿಲ್ಲ ಸರಿಸಾಟಿ. ನಿಮ್ಮನ್ನು ನೋಡಲು ಯುವರಾಜರು ಬರುತ್ತಾರೆ ಸಪ್ತಸಾಗರದಾಟಿ. ಯಾಕೆಂದರೆ ನೀವು ಕ್ಯೂಟಿ, ಮನಸ್ಸು ಬ್ಯೂಟಿ' ಎಂದು ಕವನದ ಮೂಲಕ ಸೌಂದರ್ಯಾ ಮುಖದಲ್ಲಿ ನಗು ಮೂಡಿಸಿದ್ದಾರೆ.
4/5
ಯಶಸ್ ಮನದಾಳದ ಮಾತು
ಇದೆಲ್ಲದರ ಬಳಿಕ ಕ್ಯಾಮೆರಾ ಮುಂದೆ ಬಂದ ಯಶಸ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಬಂದು ಒಳ್ಳೆಯ ಮನಸ್ಸಿರುವ ಗೆಳತಿ ಸಿಕ್ಕಿದ್ದಾರೆ. ಮುಂದೇನಾಗುತ್ತದೆ ನೋಡೋಣ. ನನ್ನ ಮನಸ್ಸಿನಲ್ಲಿ ಅವರು ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಅವರು ನನಗೆ ಸ್ನೇಹಿತೆಗಿಂತಲೂ ಹೆಚ್ಚು ಎಂದು ಹೇಳಿಕೊಂಡಿದ್ದಾರೆ.
5/5
ಪ್ರೇಮಕಥೆಯ ಮುನ್ಸೂಚನೆಯಾ?
ಒಟ್ಟಿನಲ್ಲಿ ಯಶಸ್ ಅವರ ಈ ಮಾತುಗಳು ಬಿಗ್‌ಬಾಸ್ ಮನೆಯಲ್ಲಿ ಹೊಸ ಪ್ರೇಮಕಥೆಯ ಮುನ್ಸೂಚನೆಯಾ? ಅಥವಾ ಇದೊಂದು ಆತ್ಮೀಯ ಸ್ನೇಹದ ಅಭಿವ್ಯಕ್ತಿಯಾ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಯಶಸ್ ಮತ್ತು ಸೌಂದರ್ಯಾ ಬಾಂಧವ್ಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.