• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಒಮ್ಮೆ ‘ಕೋಟಿ ಕೊಟ್ಟರೂ ಹೋಗಲ್ಲ’ ಎಂದಿದ್ದ ಖ್ಯಾತ ನಟಿ ಕನ್ನಡ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ!

ಒಮ್ಮೆ ‘ಕೋಟಿ ಕೊಟ್ಟರೂ ಹೋಗಲ್ಲ’ ಎಂದಿದ್ದ ಖ್ಯಾತ ನಟಿ ಕನ್ನಡ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ!

Written ByChetana Devarmani
Published: Sep 25, 2026, 05:57 PM IST|Updated: Sep 25, 2026, 06:00 PM IST
joinshare

ಈ ಖ್ಯಾತ ನಟಿ ಒಮ್ಮೆ ‘ಕೋಟಿ ಕೊಟ್ಟರೂ ಬಿಗ್‌ ಬಾಸ್‌ ಮನೆಗೆ ಹೋಗಲ್ಲ’ ಎಂದಿದ್ದರು. ಇದೀಗ ಇದೇ ನಟಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 13ಕ್ಕೆ ವೈಲ್ಡ್‌ ಕಾರ್ಡ್‌ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. 

Bigg Boss Kannada 13 wild card contestant1/7

ನಟಿ ವಿಜಯಲಕ್ಷ್ಮಿ

ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ವೈಲ್ಡ್ ‌ಕಾರ್ಡ್ ಎಂಟ್ರಿ ವಿಚಾರ ಇದೀಗ ಭಾರಿ ಕುತೂಹಲ ಮೂಡಿಸಿದೆ. ಇದರ ನಡುವೆ ಇಬ್ಬರು ಪ್ರಮುಖ ಸೆಲಿಬ್ರಿಟಿಗಳ ಹೆಸರುಗಳು ಜೋರಾಗಿ ಕೇಳಿಬರುತ್ತಿವೆ. ಒಂದು ಕಡೆ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಬಿಗ್‌ ಬಾಸ್‌ ಮನೆಗೆ ಹೋಗಲಿದ್ದಾರೆ.
Bigg Boss Kannada 13 wild card contestant2/7

ನಟಿ ವಿಜಯಲಕ್ಷ್ಮಿ

ಮತ್ತೊಂದೆಡೆ ಕನ್ನಡದ ಖ್ಯಾತ ನಟಿಯೊಬ್ಬರು ಬಿಗ್‌ ಬಾಸ್‌ ಮನೆಗೆ ಬರಬಹುದು ಎಂದು ಹೇಳಲಾಗುತ್ತಿದೆ. 2026 ರ ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಈ ನಟಿ ಮನೆಗೆ ಬರಬಹುದು ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ.
Bigg Boss Kannada 13 wild card contestant3/7

ನಟಿ ವಿಜಯಲಕ್ಷ್ಮಿ

ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಕನ್ನಡದ ಹಿರಿಯ ನಟಿಯೊಬ್ಬರು ಬರಲಿದ್ದಾರೆ ಎನ್ನಲಾಗಿದೆ. ‘ಕೋಟಿ ರೂಪಾಯಿ ಕೊಟ್ಟರೂ ಬಿಗ್ ಬಾಸ್‌ಗೆ ಹೋಗುವುದಿಲ್ಲ’ ಎಂದು ಕೆಲವು ವರ್ಷಗಳ ಹಿಂದೆ ಹೇಳಿದ್ದ ಈ ನಟಿ ಈಗ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
Bigg Boss Kannada 13 wild card contestant4/7

ನಟಿ ವಿಜಯಲಕ್ಷ್ಮಿ

ಆದರೆ ಈಗ ಕಾಲ ಬದಲಾಗಿದೆ. ಇದೇ ಫೇಮಸ್‌ ನಟಿ ವೈಲ್ಡ್‌ಕಾರ್ಡ್ ಎಂಟ್ರಿಯಾಗಿ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ನಾಗಮಂಡಲ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ಖ್ಯಾತ ನಟಿ ಈಗ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
Bigg Boss Kannada 13 wild card contestant5/7

ನಟಿ ವಿಜಯಲಕ್ಷ್ಮಿ

ಆ ನಟಿಯೇ ವಿಜಯಲಕ್ಷ್ಮಿ. ಹೌದು, ನಾಗಮಂಡಲ ಸಿನಿಮಾದಲ್ಲಿ ನಟಿಸಿ ಖ್ಯಾತರಾದ ನಟಿ ವಿಜಯಲಕ್ಷ್ಮೀ ಈ ಬಾರಿ ಹೆಸರು ಕೇಳಿಬರುತ್ತಿರುವುದು ಮತ್ತಷ್ಟು ವಿಶೇಷ. ವಿಜಯಲಕ್ಷ್ಮಿ ವೈಲ್ಡ್‌ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ.
Bigg Boss Kannada 13 wild card contestant6/7

ನಟಿ ವಿಜಯಲಕ್ಷ್ಮಿ

2018 ರಲ್ಲೇ ಬಿಗ್ ಬಾಸ್‌ಗೆ ಹೋಗಲ್ಲ ಎಂದಿದ್ದ ವಿಜಯಲಕ್ಷ್ಮಿ ಈಗ ಬರೋದು ನಿಜವೇ ಎಂಬ ಪ್ರಶ್ನೆ ಕಾಡುತ್ತಿದೆ. ವಿಶೇಷವೆಂದರೆ, ವಿಜಯಲಕ್ಷ್ಮಿ ಅವರು ‘ನಾಗಮಂಡಲ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದವರು. ಈ ಸಿನಿಮಾದ ಅಭಿನಯಕ್ಕಾಗಿ ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯೂ ಲಭಿಸಿತ್ತು.
Bigg Boss Kannada 13 wild card contestant7/7

ನಟಿ ವಿಜಯಲಕ್ಷ್ಮಿ

ಇನ್ನು ಪ್ರಶಾಂತ್ ಗೌಡ ಅವರ ಹೆಸರೂ ಬಿಗ್ ಬಾಸ್ ವೈಲ್ಡ್‌ಕಾರ್ಡ್ ಎಂಟ್ರಿ ಪಟ್ಟಿಯಲ್ಲಿ ಜೋರಾಗಿ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಐದು ಚಿನ್ನದ ಪ್ರತಿಮೆಗಳ ಟೀಸರ್ ಕೂಡ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಈ ಐವರಲ್ಲಿ ಪ್ರಶಾಂತ್ ಗೌಡ ಮತ್ತು ‘ನಾಗಮಂಡಲ’ ವಿಜಯಲಕ್ಷ್ಮಿ ಇದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
TAGS:
Bigg Boss Kannada Season 13

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.