BBK 13 vaishnavi koundinya salary remuneration: ಮಿಥುನರಾಶಿ ಹಾಗೂ ಪ್ರೇಮಕಾವ್ಯ ಧಾರಾವಾಹಿಗಳ ಮೂಲಕ ಕನ್ನಡಿಗರ ಮನಗೆದ್ದಿ ವೈಷ್ಣವಿ ಕೌಂಡಿನ್ಯ ಇದೀಗ ʻಬಿಗ್ ಬಾಸ್ ಕನ್ನಡ ಸೀಸನ್ 13ನಿಂದ ಹೊರಬಂದಿದ್ದಾರೆ.
BBK 13 : ಬಿಗ್‌ಬಾಸ್ ಮನೆಯಿಂದ ಹೊರಬಂದ ವೈಷ್ಣವಿ ಕೌಂಡಿನ್ಯ ಸಂಭಾವನೆ ಎಷ್ಟು ಗೊತ್ತಾ?
1/5
ವೈಷ್ಣವಿ ಕೌಂಡಿನ್ಯ ಅವರ Bigg boss ಜರ್ನಿ
ವೈಷ್ಣವಿ ಕೌಂಡಿನ್ಯ ಅವರು ಬಣ್ಣದ ಲೋಕದಲ್ಲಿ ಸದಾ ನಗುತ್ತಾ ಪ್ರೇಕ್ಷಕರನ್ನ ಮನರಂಜಿಸುತ್ತ ಬಂದಿದ್ದಾರೆ. ಇದೇ ರೀತಿ ʻಬಿಗ್ ಬಾಸ್ ಕನ್ನಡ ಸೀಸನ್ 13ಗೆ ಎಂಟ್ರಿ ನೀಡಿದರು. ಈ ನಟಿಯ ಜೀವನದ ಹಿನ್ನೆಲೆ ಹಾಗೂ ಗ್ಲಾಮರ್ ಪ್ರಪಂಚದ ಹಿಂದಿರುವ ಕಹಿ ಸತ್ಯಗಳನ್ನ ʻಬಿಗ್ ಬಾಸ್ʼ ವೇದಿಕೆಯಲ್ಲಿ ಬಿಚ್ಚಿಟ್ಟು ಇದೀಗ emergency exitನಿಂದ ಹೊರಬಂದಿದ್ದಾರೆ.
2/5
ಅಧಿಕೃತ ಸಂಭಾವನೆ
ಬಿಗ್‌ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ವೈಷ್ಣವಿ ಕೌಂಡಿನ್ಯ ಅವರ ನಿಖರವಾದ ಅಧಿಕೃತ ಸಂಭಾವನೆ ಇಷ್ಟೇ ಎಂದು ವಾಹಿನಿ (ಕಲರ್ಸ್ ಕನ್ನಡ) ಎಲ್ಲೂ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ.
3/5
ಅಂದಾಜು ಸಂಭಾವನೆ
ಸಾಮಾನ್ಯವಾಗಿ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಕಿರುತೆರೆಯ ಜನಪ್ರಿಯ ನಟ-ನಟಿಯರಿಗೆ ಅವರ ಜನಪ್ರಿಯತೆಯ ಆಧಾರದ ಮೇಲೆ ವಾರಕ್ಕೆ ಅಂದಾಜು ₹75,000 ದಿಂದ ₹1.5 ಲಕ್ಷದವರೆಗೆ ಸಂಭಾವನೆ ನೀಡಲಾಗುತ್ತದೆ ಎಂದು ಮಾಧ್ಯಮದ ವರದಿಗಳು ಮತ್ತು ಮೂಲಗಳು ಅಂದಾಜಿಸುತ್ತವೆ.
4/5
ವೈಷ್ಣವಿ ಕೌಂಡಿನ್ಯ ಸಂಭಾವನೆ
ಮಿಥುನ ರಾಶಿ' ಹಾಗೂ 'ಪ್ರೇಮಕಾವ್ಯ' ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ವೈಷ್ಣವಿ ಕೌಂಡಿನ್ಯ ಅವರಿಗೂ ಇದೇ ಶ್ರೇಣಿಯಲ್ಲಿ ವಾರಾವಾರು ಸಂಭಾವನೆ ನಿಗದಿಯಾಗಿರಬಹುದು ಎಂದು ಊಹಿಸಲಾಗಿದೆ.
5/5
ಬಿಗ್‌ಬಾಸ್
ಬಿಗ್‌ಬಾಸ್ ನಿಯಮಾವಳಿಗಳ ಪ್ರಕಾರ ಸ್ಪರ್ಧಿಗಳ ಸಂಭಾವನೆಯ ಒಪ್ಪಂದಗಳು ತೀರಾ ಗೌಪ್ಯವಾಗಿರುವುದರಿಂದ, ನಿಖರವಾದ ಮೊತ್ತದ ವಿವರಗಳು ಲಭ್ಯವಿರುವುದಿಲ್ಲ.