• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕಾರ್ತಿಕ ಮಾಸದಲ್ಲಿ ಈ ರಾಶಿಯವರಿಗೆ ಶಿವನ ವಿಶೇಷ ಆಶೀರ್ವಾದ.. ಕೆಲಸದಲ್ಲಿ ಯಶಸ್ಸು, ಕೈ ತುಂಬಾ ಹಣ!

ಕಾರ್ತಿಕ ಮಾಸದಲ್ಲಿ ಈ ರಾಶಿಯವರಿಗೆ ಶಿವನ ವಿಶೇಷ ಆಶೀರ್ವಾದ.. ಕೆಲಸದಲ್ಲಿ ಯಶಸ್ಸು, ಕೈ ತುಂಬಾ ಹಣ!

Written ByYashaswini V
Published: Nov 16, 2026, 06:36 IST|Updated: Nov 16, 2026, 08:20 IST
joinshare

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ತುಂಬಾ ವಿಶೇಷತೆ ಇದೆ. ಈ ವರ್ಷ ಕಾರ್ತಿಕ ಮಾಸದಲ್ಲಿ ಕೆಲವು ರಾಶಿಯವರಿಗೆ ಶಿವನ ಆಶೀರ್ವಾದ ಇರಲಿದೆ ಎನ್ನಲಾಗುತ್ತಿದೆ. 
 

Lord Shiva Fav Zodiacs1/6

ಕಾರ್ತಿಕ ಮಾಸದಲ್ಲಿ ಈ ರಾಶಿಯವರಿಗೆ ಶಿವನ ವಿಶೇಷ ಆಶೀರ್ವಾದ

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕ ಮಾಸವನ್ನು ಪಾವಿತ್ರ್ಯ ಮಾಸಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಕಾರ್ತಿಕ ಮಾಸದಲ್ಲಿ ಕೆಲವು ರಾಶಿಯವರಿಗೆ ಭಗವಾನ್‌ ಶಿವನ ವಿಶೇಷ ಆಶೀರ್ವಾದ ಇರಲಿದೆ ಎನ್ನಲಾಗುತ್ತಿದೆ.
Lord Shiva Fav Zodiacs2/6

ವೃಷಭ ರಾಶಿ

ಕಾರ್ತಿಕ ಮಾಸದಲ್ಲಿ ಶಿವನ ವಿಶೇಷ ಆಶೀರ್ವಾದದಿಂದ ವೃಷಭ ರಾಶಿಯ ಜನರು ಬಾಕಿ ಉಳಿದಿರುವ ಹಣವನ್ನು ಪಡೆಯುವ ನಿರೀಕ್ಷೆ ಇದೆ. ವೃತ್ತಿ ಜೀವನವು ಆಶಾದಾಯಕವಾಗಿ ಮುಂದುವರೆಯಲಿದೆ. ವೈವಾಹಿಕ ಜೀವನದಲ್ಲೂ ಸಂತೋಷದ ವಾತಾವರಣ ಇರಲಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯನ್ನು ಕೇಳುವಿರಿ.
Lord Shiva Fav Zodiacs3/6

ಕರ್ಕಾಟಕ ರಾಶಿ

ಕಾರ್ತಿಕ ಮಾಸದಲ್ಲಿ ಕರ್ಕಾಟಕ ರಾಶಿಯ ಜನರಿಗೂ ಸಹ ಶಿವನ ವಿಶೇಶ ಆಶೀರ್ವಾದ ಸಿಗುವ ಸೂಚನೆಗಳಿದ್ದು, ಮಾನಸಿಕ ಒತ್ತಡಗಳು ಕಡಿಮೆ ಆಗಲಿವೆ. ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ ಮೇಲುಗೈ ಸಾಧಿಸಲಿದೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವ ಲಕ್ಷಣಗಳಿವೆ. ಬೇರೆಡೆ ಸಿಲುಕಿದ್ದ ನಿಮ್ಮ ಹಣ ಕೈ ಸೇರುವ ನಿರೀಕ್ಷೆ ಇದೆ.
Lord Shiva Fav Zodiacs4/6

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೂ ಸಹ ಕಾರ್ತಿಕ ಮಾಸದಲ್ಲಿ ಶಿವನ ವಿಶೇಷ ಆಶೀರ್ವಾದ ಸಿಗಲಿದ್ದು ಬಹಳ ದಿನಗಳಿಂದ ನಿಮ್ಮನ್ನು ಬಾಧಿಸುತ್ತಿದ್ದ ದುಃಖ ಮರೆಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಪ್ರಮೋಷನ್‌ ಸಾಧ್ಯತೆ ಇದೆ. ಉದ್ಯಮಿಗಳಿಗೆ ಹೊಸ ಹೊಸ ಅವಕಾಶಗಳು ಗೋಚರಸಬಹುದು.
Lord Shiva Fav Zodiacs5/6

ವೃಶ್ಚಿಕ ರಾಶಿ

ಕಾರ್ತಿಕ ಮಾಸದಲ್ಲಿ ಭಗವಾನ್‌ ಶಿವ ವೃಶ್ಚಿಕ ರಾಶಿಯ ಜನರಿಗೂ ಕೂಡ ವಿಶೇಷ ಆಶೀರ್ವಾದವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳ ವಿರುದ್ಧ ಪ್ರಾಬಲ್ಯವನ್ನು ಸಾಧಿಸುವಿರಿ. ಮಾನಸಿಕ ಸೌಖ್ಯ ಹೆಚ್ಚಾಗಲಿದೆ. ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದ್ದು, ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ಹೂಡಿಕೆಗಳಿಂದ ಲಾಭವಾಗಲಿದೆ. ಹೊಸ ವಾಹನ ಖರೀದಿಸುವ ಸುಯೋಗವೂ ಇದೆ.
Lord Shiva Fav Zodiacs6/6

ಮೀನ ರಾಶಿ

ಮೀನ ರಾಶಿಯವರಿಗೂ ಸಹ ಕಾರ್ತಿಕ ಮಾಸದಲ್ಲಿ ಶಿವನ ವಿಶೇಷ ಆಶೀರ್ವಾದ ಇರಲಿದೆ. ಈ ಸಮಯದಲ್ಲಿ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ವ್ಯವಹಾರ ವಿಸ್ತರಣೆಗೆ ಇದು ಸುವರ್ಣ ಅವಧಿ. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಂಬಂಧಿತ ಮಾತುಕತೆಗಳಲ್ಲಿ ಧನಾತ್ಮಕತೆಯನ್ನು ಕಾಣುವಿರಿ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Astro Tips

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.