BBK13 Sonika: ಬಿಗ್‌ಬಾಸ್ ಮನೆಯಲ್ಲಿ ಸ್ನೇಹ, ಪ್ರೀತಿ, ಪ್ರೇಮದ ಚರ್ಚೆ ಜೋರಾಗಿದೆ. ಅದರಲ್ಲೂ ಧನುಷ್ ಮತ್ತು ಸೋನಿಕಾ ವಿಚಾರವಾಗಿ ಸಾಕಷ್ಟು ಕುತೂಹಲ ಮೂಡಿದೆ.
ಧನುಷ್ ಮೇಲೆ ಸೋನಿಕಾಗೆ ಪ್ರೀತಿ ಇತ್ತಾ? ಇಬ್ಬರ ನಡುವೆ ನಿಜಕ್ಕೂ ಏನಾದರೂ ಲವ್ ಸ್ಟೋರಿ ಇತ್ತಾ? ಈ ಪ್ರಶ್ನೆಗಳಿಗೆ ಸೋನಿಕಾ ಕೊಟ್ಟ ಉತ್ತರವೇನು? ನೋಡೋಣ ಈ ಸ್ಟೋರಿ.
1/5
ಧನುಷ್ ಮೇಲೆ ಸೋನಿಕಾಗೆ ಲವ್ ಆಗಿತ್ತಾ
ಬಿಗ್‌ಬಾಸ್ ಮನೆಯಲ್ಲಿ ಧನುಷ್ ಮತ್ತು ಸೋನಿಕಾ ಹೆಸರು ಪದೇಪದೇ ಕೇಳಿಬರುತ್ತಿದೆ. ಇವರಿಬ್ಬರ ನಡುವಿನ ಸ್ನೇಹವನ್ನು ಕಂಡು ವೀಕ್ಷಕರಲ್ಲೂ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಧನುಷ್ ಮೇಲೆ ಸೋನಿಕಾಗೆ ಲವ್ ಆಗಿತ್ತಾ ಎಂಬ ಚರ್ಚೆಯೂ ಶುರುವಾಗಿದೆ.
2/5
ಸೋನಿಕಾ ಮನದ ಮಾತು
ಇನ್ನು ಈ ವಿಚಾರವಾಗಿ ಜೀ ಕನ್ನಡ ನ್ಯೂಸ್ ಜೊತೆಗೆ ಸೋನಿಕಾ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಧನುಷ್ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿರುವ ಸೋನಿಕಾ,ತಮ್ಮ ಭಾವನೆಗಳ ಬಗ್ಗೆ ಏನು ಹೇಳಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
3/5
ನಾನು ಧನುಷ್ ನ್ಯಾಚುರಲ್ ಆಗಿ ಇದ್ದೇವು
ಹೌದು ನಾನು ಧನುಷ್ ನ್ಯಾಚುರಲ್ ಆಗಿ ಇದ್ವಿ.. ಧನುಷ್ ತುಂಬಾ ಒಳ್ಳೆಯ ವ್ಯಕ್ತಿ ಹಾಗೂಪ್ಯೂರ್ ಸೋಲ್ ಆಗಿದ್ದ. ಎಷ್ಟೆ ದೊಡ್ಡದಾಗಿ ಜಗಳ ಆಡಿದ್ದರೂ ನಮ್ಮ ಮಧ್ಯೆ ಬೇಗೆ ಸರಿಯಾಗಿ ಇಬ್ಬರು ಮಾತನಾಡಿಕೊಳ್ತಾ ಇದ್ವಿ, ಯಾವುದು ಕೂಡ ಕ್ಯಾರಿ ಮಾಡ್ತ ಇರ್ಲಿಲ್ಲಾ ಹಾಗಾಗಿ ಅವನ ಜೊತೆ ತುಂಬಾ ಕರ್ಫಟೇಬಲ್ ಆಗಿ ಇದ್ದೆವು..
4/5
ಧನುಷ್ ತುಂಬಾ ಒಳ್ಳೆಯ ವ್ಯಕ್ತಿ
ಧನುಷ್ ತುಂಬಾ ಒಳ್ಳೆಯ ವ್ಯಕ್ತಿ ಆಗಿರೋದಕ್ಕೆ ನಾನು ಅವನ ಜೊತೆ ಇದ್ದೆ. "He is real guy pure soul", ಅವನ ಅಕ್ಕ ಪತ್ರದಲ್ಲಿ ಏನು ಬರೆದಿದ್ದರೂ ಹೊರಗಡೆ ಹೇಗೆ ಇದ್ದ ಹಾಗೆ ಬಿಗ್‌ಬಾಸ್ ಮನೆಯಲ್ಲಿ ಇದ್ದ ಎಂದು ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಸೋನಿಕಾ ಗೌಡ ತಮ್ಮ ಹಾಗೂ ಧನುಷ್ ಅವರ ಸ್ನೇಹದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
5/5
ಧನುಷ್ ಮತ್ತು ಸೋನಿಕಾ ಸ್ನೇಹ
ಒಟ್ಟಿನಲ್ಲಿ ಧನುಷ್ ಮತ್ತು ಸೋನಿಕಾ ನಡುವಿನ ಸ್ನೇಹಕ್ಕೆ ಪ್ರೀತಿಯ ಬಣ್ಣ ಇತ್ತಾ? ಅಥವಾ ಇದೆಲ್ಲವೂ ಕೇವಲ ವೀಕ್ಷಕರ ಕಲ್ಪನೆಯಾ? ಸೋನಿಕಾ ಹೇಳಿಕೆಯಿಂದ ಈ ಚರ್ಚೆಗೆ ಹೊಸ ತಿರುವು ಸಿಕ್ಕಿದೆ.