• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಆ ಸಿನಿಮಾ ನೋಡಿದ ನಂತರ ನಾನು ಖಿನ್ನತೆಗೆ ಒಳಗಾಗಿದ್ದೆ..! ಶಾಕಿಂಗ್‌ ಹೇಳಿಕೆ ನೀಡಿದ ನಟಿ ಶ್ರೀಲೀಲಾ

ಆ ಸಿನಿಮಾ ನೋಡಿದ ನಂತರ ನಾನು ಖಿನ್ನತೆಗೆ ಒಳಗಾಗಿದ್ದೆ..! ಶಾಕಿಂಗ್‌ ಹೇಳಿಕೆ ನೀಡಿದ ನಟಿ ಶ್ರೀಲೀಲಾ

Written ByKrishna NK
Published: Nov 22, 2026, 19:30 IST|Updated: Nov 22, 2026, 19:40 IST
joinshare

Sreeleela on Amaran : ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶ್ರೀಲೀಲಾ ಅವರ ಇತ್ತೀಚಿನ ಸಂದರ್ಶನದ ತುಣುಕುಗಳು ಭಾರೀ ವೈರಲ್ ಆಗುತ್ತಿವೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ 'ಅಮರನ್' ಚಿತ್ರವನ್ನು ವೀಕ್ಷಿಸಿದ ಬಳಿಕ ತಾವು ತೀವ್ರ ಭಾವುಕರಾಗಿ, ಖಿನ್ನತೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..
 

Actress Sreeleela1/7

'ಓಂ. ಆಪರೇಷನ್ ಮೋಲ್' ಪ್ರಚಾರದಲ್ಲಿ ಬ್ಯುಸಿ

ಕಾಲಿವುಡ್‌ನಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಿರುವ ಶ್ರೀಲೀಲಾ, ಪ್ರಸ್ತುತ ಧನುಷ್ ನಟನೆಯ 'ಓಂ. ಆಪರೇಷನ್ ಮೋಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ನಡುವೆಯೇ 'ಅಮರನ್' ಕುರಿತ ಅವರ ಈ ಹಳೆಯ ಹಾಗೂ ಇತ್ತೀಚೆಗೆ ಟ್ರೆಂಡ್ ಆಗುತ್ತಿರುವ ಮಾತುಗಳು ಗಮನ ಸೆಳೆಯುತ್ತಿವೆ.
Actress Sreeleela2/7

ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗೆ

ಕಿಸ್‌ ಸಿನಿಮಾದ ಮೂಲಕ ಸ್ಯಾಂಡಲ್ವುಡ್‌ನಲ್ಲಿ ನಟನೆ ಪ್ರಾರಂಭಿಸಿದರು. ತೆಲುಗಿನಲ್ಲಿ ರವಿತೇಜ ಮತ್ತು ಮಹೇಶ್ ಬಾಬು ಅವರಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಶ್ರೀಲೀಲಾ, ಈ ವರ್ಷ ತೆರೆಕಂಡ 'ಪರಾಶಕ್ತಿ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲದಿದ್ದರೂ, ಶ್ರೀಲೀಲಾ ಅವರ ಅಭಿನಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಯಿತು.
Actress Sreeleela3/7

ಬಾಲನಟಿಯಿಂದ ದಕ್ಷಿಣದ ಟಾಪ್ ನಾಯಕಿಯವರೆಗೆ

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲೀಲಾ, ಇಂದು ದಕ್ಷಿಣ ಭಾರತದ ಅತ್ಯಂತ ಬ್ಯುಸಿ ಮತ್ತು ಬೇಡಿಕೆಯ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ.
Actress Sreeleela4/7

ಅನಿರೀಕ್ಷಿತ ಅವಕಾಶ

ತಾವು ಭವಿಷ್ಯದಲ್ಲಿ 'ಅಮರನ್' ಚಿತ್ರದ ಅದೇ ತಂಡದೊಂದಿಗೆ ಕೆಲಸ ಮಾಡುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆ ಮತ್ತು ಸಿನಿಮಾದೊಂದಿಗಿನ ಆಪ್ತ ಸಂಬಂಧದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ.
Actress Sreeleela5/7

ದೀರ್ಘಕಾಲ ಮನಸ್ಸಿನಲ್ಲಿ ಉಳಿದ ಕಥೆ

ಸಾಮಾನ್ಯವಾಗಿ ಒಂದು ಸಿನಿಮಾ ನೋಡಿದಾಗ ಉಂಟಾಗುವ ಭಾವನೆಗಳು ಕೆಲವೇ ಸಮಯದಲ್ಲಿ ಮರೆಯಾಗುತ್ತವೆ. ಆದರೆ, 'ಅಮರನ್' ಚಿತ್ರದ ಪ್ರಭಾವ ತಾವು ಕಲ್ಪಿಸಿದ್ದಕ್ಕಿಂತಲೂ ಹೆಚ್ಚಾಗಿ, ಬಹಳ ದಿನಗಳ ಕಾಲ ಮನಸ್ಸಿನಲ್ಲಿ ಹಾಗೆಯೇ ಉಳಿಯಿತು ಎಂದು ಶ್ರೀಲೀಲಾ ವಿವರಿಸಿದ್ದಾರೆ.
Actress Sreeleela6/7

'ಅಮರನ್' ಮೆಚ್ಚಿದ ಶ್ರೀಲೀಲಾ

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ನೀಡಿದ ಅನುಭವ ತುಂಬಾ ಭಾರವಾಗಿತ್ತು ಎಂಬುದು ಶ್ರೀಲೀಲಾ ಅವರ ಮಾತು. ಆ ನೋವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯವಾಗಿದ್ದು, ಸಿನಿಮಾದ ಕಥೆ ಮತ್ತು ನಿರೂಪಣೆ ಅವರನ್ನು ಆಳವಾಗಿ ತಟ್ಟಿದೆ.
Actress Sreeleela7/7

ಶ್ರೀಲೀಲಾ ಭಾವನಾತ್ಮಕ ಹೇಳಿಕೆ

'ಅಮರನ್' ಸಿನಿಮಾ ನೋಡಿದ ನಂತರ ತನಗೆ ಆದ ಅನುಭವವನ್ನು ಶ್ರೀಲೀಲಾ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆ ಚಿತ್ರವನ್ನು ಕಂಡ ಬಳಿಕ ತಾವು ತೀವ್ರ ಖಿನ್ನತೆಗೆ ಒಳಗಾಗಿದ್ದಾಗಿ ಮತ್ತು ಮನಸ್ಸಿಗೆ ಅಪಾರ ನೋವುಂಟಾಯಿತೆಂದು ಹೇಳಿದ್ದಾರೆ. ಏನು ಮಾತನಾಡಬೇಕೆಂಬುದೇ ತೋಚದಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.
TAGS:
Cinema

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
Ind vs Pak: ವೈಭವ್ ಸೂರ್ಯವಂಶಿ ತಲೆಗೆ ಬಡಿದ ವಿಪ್ರಜ್ ನಿಗಮ್ ಕಾಲು! ವಿಡಿಯೋ ನೋಡಿ

Ind vs Pak: ವೈಭವ್ ಸೂರ್ಯವಂಶಿ ತಲೆಗೆ ಬಡಿದ ವಿಪ್ರಜ್ ನಿಗಮ್ ಕಾಲು! ವಿಡಿಯೋ ನೋಡಿ

2

ಭಾರತದ ಆರ್ಥಿಕತೆಗೆ ಟ್ರಂಪ್ ಫಿದಾ! 7% ಜಿಡಿಪಿ ಬೆಳವಣಿಗೆ ಉಲ್ಲೇಖಿಸಿ ಅಮೆರಿಕದ ಫೆಡ್‌ಗೆ ಖಡಕ್ ಸಂದೇಶ

3

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

4

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

5

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.