• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಅಕ್ಕನ ಅರಿಶಿನ ಶಾಸ್ತ್ರದಲ್ಲಿ ಸಖತ್ತಾಗಿ ಮಿಂಚಿದ ನಟಿ ಭವ್ಯಾ ಗೌಡ : ಫೋಟೋಸ್‌ ಇಲ್ಲಿವೆ

ಅಕ್ಕನ ಅರಿಶಿನ ಶಾಸ್ತ್ರದಲ್ಲಿ ಸಖತ್ತಾಗಿ ಮಿಂಚಿದ ನಟಿ ಭವ್ಯಾ ಗೌಡ : ಫೋಟೋಸ್‌ ಇಲ್ಲಿವೆ

Reported ByKrishna NKEdited ByKrishna NK
Published: Sep 18, 2026, 07:05 PM IST|Updated: Sep 18, 2026, 07:12 PM IST
joinshare

Bhavya Gowda sister Divya Gowda marriage : ಕಿರುತೆರೆಯ ಜನಪ್ರಿಯ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಕಳೆಗಟ್ಟಿದೆ. 'ಗೀತಾ' ಹಾಗೂ 'ಕರ್ಣ' ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಚೆಲುವೆ ಭವ್ಯಾ ಗೌಡ ಅವರ ಹಿರಿಯ ಸಹೋದರಿ ದಿವ್ಯಾ ಗೌಡ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳು ನೆರವೇರುತ್ತಿದ್ದು, ಹಳದಿ (ಅರಿಶಿನ) ಶಾಸ್ತ್ರದ ಅತ್ಯಾಕರ್ಷಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Divya Gowda Marriage1/7

ಶುಭ ಕೋರಿದ ಅಭಿಮಾನಿಗಳು

ನೆಚ್ಚಿನ ನಟಿ ಭವ್ಯಾ ಗೌಡ ಹಂಚಿಕೊಂಡಿರುವ ಈ ಕಲರ್‌ಫುಲ್ ಫೋಟೋ ಆಲ್ಬಂ ಕಂಡ ಅಭಿಮಾನಿಗಳು ಹಾಗೂ ಕಿರುತೆರೆಯ ತಾರೆಯರು ಕಾಮೆಂಟ್ ಸೆಕ್ಷನ್‌ನಲ್ಲಿ ವಧು-ವರರಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ನವಜೋಡಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ..
Divya Gowda Marriage2/7

ಯಾರು ಈ ಹೇಮಂತ್ ಕುಮಾರ್?

ಅಂದಹಾಗೆ, ದಿವ್ಯಾ ಗೌಡ ಅವರ ಕೈಹಿಡಿಯುತ್ತಿರುವ ಹೇಮಂತ್ ಕುಮಾರ್ ಅವರು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಪ್ರಸಿದ್ಧ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಕೆಲವು ಸೀಸನ್‌ಗಳಿಗೆ ಇವರು ಕಾಸ್ಟಿಂಗ್ ಡೈರೆಕ್ಟರ್ ಆಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಕಿರುತೆರೆ ಹಿನ್ನೆಲೆಯವರೇ ಆದ ಕಾರಣ ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಮೂಡಿದೆ.
Divya Gowda Marriage3/7

ಆತ್ಮೀಯರ ಜೊತೆ ಕುಣಿದು ಕುಪ್ಪಳಿಸಿದ ಜೋಡಿ

ದಿವ್ಯಾ ಗೌಡ ಹಾಗೂ ಹೇಮಂತ್ ಕುಮಾರ್ ಅವರ ಹಳದಿ ಶಾಸ್ತ್ರಕ್ಕೆ ಅತ್ಯಂತ ಹತ್ತಿರದ ಬಂಧು-ಮಿತ್ರರು ಮಾತ್ರ ಹಾಜರಿದ್ದರು. ಕಾರ್ಯಕ್ರಮದ ನಂತರ ನೆರೆದಿದ್ದ ಪ್ರತಿಯೊಬ್ಬ ಆಪ್ತರ ಜೊತೆ ವಧು-ವರರು ಹಾಡುಗಳಿಗೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದ್ದಾರೆ. ಇಡೀ ವಾತಾವರಣದಲ್ಲಿ ಹರ್ಷ ಮತ್ತು ಸಡಗರ ತುಂಬಿ ತುಳುಕುತ್ತಿತ್ತು. ಸ್ನೇಹಿತರೊಂದಿಗೆ ಗ್ರೂಪ್ ಫೋಟೋಗೆ ಭರ್ಜರಿಯಾಗಿ ಪೋಸ್‌ ನೀಡುವ ಮೂಲಕ ಈ ನೆನಪನ್ನು ಚಿರಸ್ಥಾಯಿಯಾಗಿಸಿಕೊಂಡಿದ್ದಾರೆ.
Divya Gowda Marriage4/7

ಸ್ನೇಹಿತರು ಮತ್ತು ಫ್ಯಾಮಿಲಿ ಕ್ಷಣಗಳು

ಭವ್ಯಾ ಗೌಡ ಅವರಿಗೆ ಇಬ್ಬರು ಸಹೋದರಿಯರಿದ್ದು, ಇಡೀ ಕುಟುಂಬವೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದೆ. ಅರಿಶಿನ ಶಾಸ್ತ್ರದ ವೇಳೆ ತೆಗೆಸಿದ ಫ್ಯಾಮಿಲಿ ಫೋಟೋ ಅತ್ಯಂತ ವರ್ಣರಂಜಿತವಾಗಿ ಮೂಡಿಬಂದಿದೆ. ಈ ವಿಶೇಷ ಕ್ಷಣದಲ್ಲಿ ಅಕ್ಕ ದಿವ್ಯಾ ಗೌಡ ಅವರು ತಂಗಿ ಭವ್ಯಾ ಗೌಡಗೆ ಪ್ರೀತಿಯಿಂದ ಸಿಹಿ ಮುತ್ತು ನೀಡಿದ್ದು, ಸಹೋದರಿಯರ ನಡುವಿನ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಭವ್ಯಾ ಗೌಡ ಅವರು ವಧು-ವರರಿಗೆ ಕೈಮುಗಿದು ಆಶೀರ್ವಾದ ಮಾಡುವಂತೆ ಪೋಸ್ ನೀಡಿದ್ದಾರೆ.
Divya Gowda Marriage5/7

ಅಕ್ಕ-ಬಾವನಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ ಭವ್ಯಾ

ಇನ್ನೊಂದು ಸುಂದರ ಕ್ಷಣದಲ್ಲಿ, ತಂಗಿ ಭವ್ಯಾ ಗೌಡ ಅವರು ತಮ್ಮ ಪ್ರೀತಿಯ ಅಕ್ಕ ದಿವ್ಯಾ ಗೌಡ ಹಾಗೂ ಭಾವ ಹೇಮಂತ್ ಕುಮಾರ್‌ಗೆ ಪ್ರೀತಿಯಿಂದ ಅರಿಶಿನ ಹಚ್ಚಿ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ, ಮದುಮಗಳು ದಿವ್ಯಾ ಗೌಡ ಕೂಡ ತಂಗಿ ಭವ್ಯಾ ಕೆನ್ನೆಗೆ ಚಂದವಾಗಿ ಹಳದಿ ಹಚ್ಚಿ ಸಂಭ್ರಮಿಸಿದ್ದಾರೆ. ಅಕ್ಕ, ಭಾವನ ಜೊತೆ ಭವ್ಯಾ ಗೌಡ ನೀಡಿದ ಕ್ಯೂಟ್ ಪೋಸ್‌ಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
Divya gowda marriage6/7

ಕೆಂಪು ಹಾಗೂ ಹಳದಿ ಬಣ್ಣಗಳ ಚಿತ್ತಾರ

ಅರಿಶಿನ ಶಾಸ್ತ್ರದ ಮೊದಲ ಫೋಟೋದಲ್ಲಿ ಮದುಮಗಳು ದಿವ್ಯಾ ಗೌಡ ಹಾಗೂ ವರ ಹೇಮಂತ್ ಕುಮಾರ್ ಜೋಡಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದಾರೆ. ಸಾಮಾನ್ಯವಾಗಿ ಹಳದಿ ಶಾಸ್ತ್ರಕ್ಕೆ ಎಲ್ಲರೂ ಹಳದಿ ಉಡುಪನ್ನೇ ಧರಿಸುವುದು ವಾಡಿಕೆ. ಆದರೆ ಇಲ್ಲಿ ಮದುಮಗ ಮತ್ತು ಮದುಮಗಳು ಇಬ್ಬರೂ ವಿಶೇಷವಾಗಿ ತಿಳಿ ಕೆಂಪು (Light Red) ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದರೆ, ಸಮಾರಂಭಕ್ಕೆ ಆಗಮಿಸಿದ್ದ ಉಳಿದ ಕುಟುಂಬಸ್ಥರು ಮತ್ತು ಆಪ್ತರೆಲ್ಲರೂ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ ಮಿಂಚಿದ್ದಾರೆ.
Divya Gowda marriage7/7

ಅಕ್ಕನ ಮದುವೆಯಲ್ಲಿ ಭವ್ಯಾ ಸಂಭ್ರಮ

ಅಕ್ಕನ ಮದುವೆಯ ಪ್ರತಿಯೊಂದು ಕ್ಷಣವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವ ಭವ್ಯಾ ಗೌಡ, ಈ ಸುಂದರ ನೆನಪುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ದಿವ್ಯಾ ಗೌಡ ಅವರ ಅದ್ಧೂರಿ ಅರಿಶಿನ ಶಾಸ್ತ್ರದ ವಿಶೇಷ ಫೋಟೋ ಗ್ಯಾಲರಿ ವರದಿ.
TAGS:
TV

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.