• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /Ind vs Afg T20; ಅಭಿಷೇಕ್‌ ಶರ್ಮಾ ಓಡಿದ್ದು ಕೇವಲ 4 ರನ್‌.. ಬೌಂಡರಿ, ಸಿಕ್ಸರ್‌ಗಳಲ್ಲೇ ಸೆಂಚುರಿ ಡೀಲ್‌

Ind vs Afg T20; ಅಭಿಷೇಕ್‌ ಶರ್ಮಾ ಓಡಿದ್ದು ಕೇವಲ 4 ರನ್‌.. ಬೌಂಡರಿ, ಸಿಕ್ಸರ್‌ಗಳಲ್ಲೇ ಸೆಂಚುರಿ ಡೀಲ್‌

Reported ByBhimappaEdited ByBhimappa
Published: Sep 18, 2026, 12:36 PM IST|Updated: Sep 18, 2026, 12:43 PM IST
joinshare
ಅಭಿಷೇಕ್ ಶರ್ಮಾ ಒಟ್ಟು 34 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು. ರಶೀದ್‌ ಖಾನ್‌ ಹಾಕಿದ ಬಾಲ್‌ ಅನ್ನು ಬಿಗ್‌ ಶಾಟ್‌ ಮಾಡಿದ ಅಭಿಷೇಕ್‌ ಶರ್ಮಾ ನೇರವಾಗಿ ರಹಮುಲ್ಲಾ ಗುರ್ಬಾಜ್‌ಗೆ ಕ್ಯಾಚ್‌ ಕೊಟ್ಟರು.

Abhishek Sharma 30 Ball Century: ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ T20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಮಾಡಿ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನಲ್ಲಿ ಅಕ್ಷರಶಃ ರೌದ್ರವತಾರ ತಾಳಿದ್ದರು. ವಿಶೇಷ ಎಂದರೆ ಶತಕವನ್ನು ಕೇವಲ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಡೀಲ್‌ ಮಾಡಿದರು. ಟೀಮ್‌ ಇಂಡಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಅಂತಿಮ ಪಂದ್ಯವೂ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿತ್ತು. ಏಕೆಂದರೆ ಅಭಿಶೇಕ್‌ ಶರ್ಮಾ ಕ್ರೀಸ್‌ನಲ್ಲಿ ಇರುವವರೆಗೂ ಬಾಲ್‌ ಆಕಾಶದಲ್ಲೇ ಕಾಣುತ್ತಿತ್ತು ಎನ್ನಬಹುದು.  
 

Abhishek Sharma 30 Ball Century  1/6

30 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಶೇಕ್‌ ಶರ್ಮಾ

T20 ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸದ ಬ್ಯಾಟ್ಸ್‌ಮನ್‌ಗಳ ಪಟ್ಟಿ 27 ಎಸೆತ- ಸಾಹಿಲ್ ಚೌಹಾಣ್ (ಎಸ್ಟೋನಿಯಾ) vs. ಸೈಪ್ರಸ್, ಎಪಿಸ್ಕೋಪಿ, 2024 29 ಎಸೆತ- ಮುಹಮ್ಮದ್ ಫಹಾದ್ (ಟರ್ಕಿ) vs. ಬಲ್ಗೇರಿಯಾ, ಸೋಫಿಯಾ, 2025 30 ಎಸೆತ- ಅಭಿಷೇಕ್ ಶರ್ಮಾ (ಭಾರತ) vs. ಅಫ್ಘಾನಿಸ್ತಾನ, ದೆಹಲಿ, 2026 33 ಎಸೆತ- ಜಾನ್ ನಿಕೋಲ್ ಲಾಫ್ಟಿ-ಈಟನ್ (ನಮೀಬಿಯಾ) vs. ನೇಪಾಳ, ಕೀರ್ತಿಪುರ, 2024
Abhishek Sharma 30 Ball Century  2/6

30 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಶೇಕ್‌ ಶರ್ಮಾ

ಅಭಿಷೇಕ್ ಶರ್ಮಾಗಿಂತ ಮೊದಲು ಅತಿ ವೇಗದ ಶತಕ ಬಾರಿಸಿ ಪಟ್ಟಿಯಲ್ಲಿ ಟಾಪ್‌ ಸ್ಥಾನವನ್ನು ಪಡೆದುಕೊಂಡವರು ಇಬ್ಬರು ಆಟಗಾರರು ಇದ್ದಾರೆ. ಎಸ್ಟೋನಿಯಾ ಕ್ರಿಕೆಟ್‌ ಆಟಗಾರ ಸಾಹಿಲ್ ಚೌಹಾಣ್ ಅವರು ಕೇವಲ 27 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇವರನ್ನು ಬಿಟ್ಟರೇ ಮುಹಮ್ಮದ್ ಫಹಾದ್ ಅವರು 29 ಎಸೆತಗಳು ಅಮೋಘವಾದ ಸೆಂಚುರಿ ಬಾರಿಸಿದ್ದಾರೆ. ಈ ಮೂರನೇ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಇದ್ದು 30 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.
Abhishek Sharma 30 Ball Century 3/6

30 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಶೇಕ್‌ ಶರ್ಮಾ

ಅಭಿಷೇಕ್ ಶರ್ಮಾ ಪುರುಷರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನ ಪವರ್‌ಪ್ಲೇನಲ್ಲಿ ಅಂದರೆ ಮೊದಲ 6 ಓವರ್‌ಗಳಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಪಂದ್ಯದಲ್ಲಿ ಅಭಿಷೇಕ್ ಮೊದಲ ಆರು ಓವರ್‌ಗಳಲ್ಲಿ 22 ಎಸೆತಗಳಲ್ಲಿ 76 ರನ್ ಗಳಿಸಿ ಈ ದಾಖಲೆ ಮಾಡಿದ್ದಾರೆ. ಈ ಸ್ಫೋಟಕ ಬ್ಯಾಟಿಂಗ್ ಜೊತೆಗೆ ಅವರು T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ 6 ಓವರ್‌ಗಳಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
Abhishek Sharma 30 Ball Century  4/6

30 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಶೇಕ್‌ ಶರ್ಮಾ

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್‌ ಇಂಡಿಯಾದ ಓಪನರ್‌ ಅಭಿಷೇಕ್ ಶರ್ಮಾ ಒಟ್ಟು 34 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು. ರಶೀದ್‌ ಖಾನ್‌ ಹಾಕಿದ ಬಾಲ್‌ ಅನ್ನು ಬಿಗ್‌ ಶಾಟ್‌ ಮಾಡಿದ ಅಭಿಷೇಕ್‌ ಶರ್ಮಾ ನೇರವಾಗಿ ರಹಮುಲ್ಲಾ ಗುರ್ಬಾಜ್‌ಗೆ ಕ್ಯಾಚ್‌ ಕೊಟ್ಟರು. ಅಭಿಷೇಕ್‌ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 142 ರನ್‌ಗಳನ್ನು ಪರ್ಟನರ್‌ಶಿಪ್‌ ಕಲೆ ಹಾಕಿದರು.
Abhishek Sharma 30 Ball Century5/6

30 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಶೇಕ್‌ ಶರ್ಮಾ

ಅಭಿಷೇಕ್‌ ಶರ್ಮಾ ಅವರ ಗಳಿಸಿದ ಅವರ ಟಿ20 ವೃತ್ತಿಜೀವನದ ಮೂರನೇ ಟಿ20 ಶತಕವಾಗಿದೆ. ಅದರಲ್ಲಿ ಇದು ಅತ್ಯಂತ ವೇಗದ ಸೆಂಚುರಿಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರೋಹಿತ್ ಶರ್ಮಾ ಅವರು ಈ ಹಿಂದೆ ಟೀಮ್‌ ಇಂಡಿಯಾದ ಪರ ಟಿ20 ಕ್ರಿಕೆಟ್‌ನಲ್ಲಿ 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಆದರೆ ಈಗ ಅಭಿಷೇಕ್‌ ಶರ್ಮಾ ಕೇವಲ 30 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
Abhishek Sharma 30 Ball Century 6/6

30 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಶೇಕ್‌ ಶರ್ಮಾ

ಟೀಮ್‌ ಇಂಡಿಯಾದ ಎಡಗೈ ದಾಂಡಿಗ ಯುವ ಓಪನರ್ ಅಭಿಶೇಕ್‌ ಶರ್ಮಾ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿದರು. ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟೊಂಗ್‌ ಮಾಡುವಾಗ 11 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಒಂದರ ಹಿಂದೆ ಒಂದು ಎನ್ನುವಂತೆ ಬಾರಿಸಿದರು. ಇದರಲ್ಲಿ ಒಂದು ಸಿಕ್ಸರ್‌ ಶತಕದ ನಂತರ ಬಂದಿದೆ. ಆದ್ರೆ ಬೌಂಡರಿ, ಸಿಕ್ಸರ್‌ಗಳಿಂದಲೇ ಅಭಿಷೇಕ್ ಶರ್ಮಾ 96 ರನ್ ಚಚ್ಚಿದರು.
TAGS:
T20

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.