• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ತಾಯಿಯ ಅಂತಿಮ ಯಾತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಯೋಗಿ ಆದಿತ್ಯನಾಥ್; ಹರಿದ್ವಾರದಲ್ಲಿ ಅಂತ್ಯಸಂಸ್ಕಾರ

ತಾಯಿಯ ಅಂತಿಮ ಯಾತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಯೋಗಿ ಆದಿತ್ಯನಾಥ್; ಹರಿದ್ವಾರದಲ್ಲಿ ಅಂತ್ಯಸಂಸ್ಕಾರ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ಅವರ ಅಂತ್ಯಸಂಸ್ಕಾರ ಹರಿದ್ವಾರದ ಚಂಡಿ ಘಾಟ್‌ನಲ್ಲಿ ನೆರವೇರಿತು. ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಯೋಗಿ, ಅಂತಿಮ ಯಾತ್ರೆಯ ವೇಳೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಅವರ ಕಿರಿಯ ಸಹೋದರ ಶೈಲೇಂದ್ರ ಬಿಷ್ಟ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಗಣ್ಯರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Written ByPuttaraj K Alur
Published: Nov 21, 2026, 17:03 IST|Updated: Nov 21, 2026, 17:19 IST
joinshare
ತಾಯಿಯ ಅಂತಿಮ ಯಾತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಯೋಗಿ ಆದಿತ್ಯನಾಥ್; ಹರಿದ್ವಾರದಲ್ಲಿ ಅಂತ್ಯಸಂಸ್ಕಾರ
Image Credit: Yogi Adityanath

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Yogi Adityanath Mother Savitri Devi Funeral: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ಅವರ ಅಂತ್ಯಸಂಸ್ಕಾರ ಹರಿದ್ವಾರದ ಚಂಡಿ ಘಾಟ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ತಾಯಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ್, ಪಾರ್ಥಿವ ಶರೀರಕ್ಕೆ ಹೆಗಲು ನೀಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟರು. ಸದಾ ಗಂಭೀರವಾಗಿ ಕಾಣಿಸಿಕೊಳ್ಳುವ ಯೋಗಿ ಅವರು ತಾಯಿಯ ಅಗಲಿಕೆಯ ನೋವಿನಿಂದ ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಅಲ್ಲಿ ನೆರೆದಿದ್ದವರ ಮನಕಲಕಿದವು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಿ ದೇವಿ ಅವರು ಶುಕ್ರವಾರ ಬೆಳಗ್ಗೆ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ತಮ್ಮ ಹುಟ್ಟೂರು ಪಂಚೂರ್ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. 91 ವರ್ಷ ವಯಸ್ಸಿನ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಯೋಗಿ ಆದಿತ್ಯನಾಥ್ ಅವರು ತಮ್ಮ ಹುಟ್ಟೂರಿಗೆ ತೆರಳಿದ್ದರು.

ತಾಯಿಯ ಪಾರ್ಥಿವ ಶರೀರದ ಮುಂದೆ ಭಾವುಕರಾದ ಯೋಗಿ

ಶುಕ್ರವಾರ ಸಂಜೆ ಪಂಚೂರ್ ಗ್ರಾಮಕ್ಕೆ ಆಗಮಿಸಿದ್ದ ಯೋಗಿ ಆದಿತ್ಯನಾಥ್, ತಾಯಿಯ ಅಂತಿಮ ದರ್ಶನ ಪಡೆದು ಅವರ ಪಾರ್ಥಿವ ಶರೀರದ ಬಳಿಯೇ ರಾತ್ರಿ ಕಳೆದಿದ್ದರು. ತಾಯಿಯ ಅಗಲಿಕೆಯ ದುಃಖದಲ್ಲಿದ್ದ ಅವರು, ಕುಟುಂಬದವರೊಂದಿಗೆ ಕೆಲಕಾಲ ಕಳೆದ ಬಳಿಕ ಅಂತಿಮ ಯಾತ್ರೆಯ ಸಿದ್ಧತೆಗಳಲ್ಲಿ ಪಾಲ್ಗೊಂಡರು. ಶನಿವಾರ ಬೆಳಗ್ಗೆ ಪಂಚೂರ್‌ನಿಂದ ಹರಿದ್ವಾರದ ಚಂಡಿ ಘಾಟ್‌ವರೆಗೆ ನಡೆದ ಅಂತಿಮ ಯಾತ್ರೆಯಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಅವರು, ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟರು. ಸನ್ಯಾಸ ದೀಕ್ಷೆ ಪಡೆದು ಸಾರ್ವಜನಿಕ ಜೀವನದಲ್ಲಿ ನಿರತರಾಗಿದ್ದರೂ, ತಾಯಿಯ ಮೇಲಿನ ಪ್ರೀತಿ ಮತ್ತು ಗೌರವವನ್ನ ಅಂತಿಮ ಯಾತ್ರೆಯುದ್ದಕ್ಕೂ ವ್ಯಕ್ತಪಡಿಸಿದರು.

ಚಂಡಿ ಘಾಟ್‌ನಲ್ಲಿ ಅಂತಿಮ ವಿಧಿವಿಧಾನ

ಹರಿದ್ವಾರದ ಪವಿತ್ರ ಗಂಗಾ ನದಿಯ ತೀರದಲ್ಲಿರುವ ಚಂಡಿ ಘಾಟ್‌ನಲ್ಲಿ ಸಾವಿತ್ರಿ ದೇವಿ ಅವರ ಅಂತ್ಯಸಂಸ್ಕಾರ ನೆರವೇರಿತು. ವೇದ ಮಂತ್ರಗಳ ಪಠಣದ ನಡುವೆ ಕುಟುಂಬದವರು ಹಾಗೂ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನ ನಡೆಸಲಾಯಿತು. ಯೋಗಿ ಆದಿತ್ಯನಾಥ್ ಅವರು ಚಿತೆಗೆ ಪ್ರದಕ್ಷಿಣೆ ಹಾಕಿ ತಾಯಿಗೆ ಅಂತಿಮ ಗೌರವ ಸಲ್ಲಿಸಿದರು. ಬಳಿಕ ಅವರ ಕಿರಿಯ ಸಹೋದರ ಶೈಲೇಂದ್ರ ಬಿಷ್ಟ್ ಅವರು ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಗ್ರಾಮಸ್ಥರು, ಸಾಧು-ಸಂತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾವಿತ್ರಿ ದೇವಿ ಅವರ ನಿಧನಕ್ಕೆ ಕುಟುಂಬದವರು ದುಃಖ ವ್ಯಕ್ತಪಡಿಸಿದರು.

ಹಲವು ಗಣ್ಯರಿಂದ ಅಂತಿಮ ನಮನ

ಸಾವಿತ್ರಿ ದೇವಿ ಅವರ ಅಂತ್ಯಸಂಸ್ಕಾರದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಸಚಿವ ಸಂಜಯ್ ನಿಶಾದ್, ಯೋಗ ಗುರು ಬಾಬಾ ರಾಮದೇವ್ ಸೇರಿದಂತೆ 50ಕ್ಕೂ ಹೆಚ್ಚು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ವಿವಿಧ ಮಠಗಳ ಸ್ವಾಮೀಜಿಗಳು, ಸಾಧು-ಸಂತರು ಹಾಗೂ ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಸಾವಿತ್ರಿ ದೇವಿ ಅವರ ನಿಧನದ ಸುದ್ದಿ ತಿಳಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಂತಾಪ ಸೂಚಿಸಿದ್ದರು.

 

An emotional farewell in Panchur, Uttarakhand. UP CM Yogi Adityanath, tears in his eyes, paid his last respects to mother Savitri Devi and lent a shoulder to her bier as her mortal remains were taken to Haridwar's Chandi Ghat for last rites. https://t.co/4gbhr6il6J

— TOI Lucknow (@TOILucknow) November 21, 2026

ಸಂಸ್ಕೃತ ಶ್ಲೋಕದ ಮೂಲಕ ತಾಯಿಯ ನೆನಪು ಹಂಚಿಕೊಂಡ ಯೋಗಿ

 

ತಾಯಿಯ ನಿಧನದ ಬಳಿಕ ಯೋಗಿ ಆದಿತ್ಯನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತ ಶ್ಲೋಕದ ಮೂಲಕ ತಮ್ಮ ಮಾತೃವಿಯೋಗದ ನೋವನ್ನ ವ್ಯಕ್ತಪಡಿಸಿದ್ದರು. ತಾಯಿಗಿಂತ ಮಿಗಿಲಾದ ನೆರಳಿಲ್ಲ, ತಾಯಿಗಿಂತ ಮಿಗಿಲಾದ ಆಶ್ರಯವಿಲ್ಲ ಎಂಬ ಭಾವನೆಯನ್ನ ಹಂಚಿಕೊಂಡಿದ್ದರು. ಈ ಮೂಲಕ ತಾಯಿಯ ಮೇಲಿನ ತಮ್ಮ ಪ್ರೀತಿ ಮತ್ತು ಗೌರವವನ್ನ ವ್ಯಕ್ತಪಡಿಸಿದ್ದರು.

ಸರಳ ಬದುಕು ನಡೆಸಿದ್ದ ಸಾವಿತ್ರಿ ದೇವಿ

ಉತ್ತರ ಪ್ರದೇಶದ ಮುಖ್ಯಮಂತ್ರಿಯ ತಾಯಿಯಾಗಿದ್ದರೂ ಸಾವಿತ್ರಿ ದೇವಿ ಅವರು ತಮ್ಮ ಜೀವನವನ್ನ ಸರಳವಾಗಿ ಕಳೆದಿದ್ದರು. ಪಂಚೂರ್ ಗ್ರಾಮದ ನಿವಾಸದಲ್ಲಿಯೇ ವಾಸವಾಗಿದ್ದ ಅವರು, ಕೊನೆಯವರೆಗೂ ಹುಟ್ಟೂರಿನೊಂದಿಗೆ ನಂಟು ಉಳಿಸಿಕೊಂಡಿದ್ದರು. ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ್ ಸಿಂಗ್ ಬಿಷ್ಟ್ ಅವರು 2020ರಲ್ಲಿ ನಿಧನರಾಗಿದ್ದರು. ಆ ಸಂದರ್ಭದಲ್ಲಿ ಕೋವಿಡ್ ಲಾಕ್‌ಡೌನ್ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳ ಕಾರಣದಿಂದ ಯೋಗಿ ಅವರಿಗೆ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ತಾಯಿಯ ಅಂತಿಮ ಯಾತ್ರೆಯಲ್ಲಿ ಸ್ವತಃ ಪಾಲ್ಗೊಂಡು ಅಂತಿಮ ಗೌರವ ಸಲ್ಲಿಸಿದ್ದಾರೆ. ತಾಯಿಯ ಅಗಲಿಕೆಯಿಂದ ದುಃಖಿತರಾದ ಯೋಗಿ ಆದಿತ್ಯನಾಥ್ ಅವರ ಭಾವುಕ ಕ್ಷಣಗಳು ಅಂತ್ಯಸಂಸ್ಕಾರದಲ್ಲಿ ನೆರೆದಿದ್ದವರ ಗಮನ ಸೆಳೆದವು.

Add Zee News as a Preferred Source
TAGS:
Kannada News