SOCIAL MEDIA

Newsletter

PARTNER SITES
Select Language Select State

Viral News: ಐಫೋನ್‌ ಮೇಲಿನ ವ್ಯಾಮೋಹಕ್ಕೆ ಅತ್ತೆಯ 53 ಗ್ರಾಂ ಚಿನ್ನ ಕದ್ದು ಮಾರಿದ ಸೊಸೆ!

ಮಹಾರಾಷ್ಟ್ರದ ನಾಗ್ಪುರದಲ್ಲಿ ದುಬಾರಿ ಆ್ಯಪಲ್ ಐಫೋನ್ ಖರೀದಿಸುವ ಆಸೆಯಿಂದ ಸೊಸೆಯೊಬ್ಬಳು ತನ್ನ ಅತ್ತೆಯ 53 ಗ್ರಾಂ ಚಿನ್ನಾಭರಣಗಳನ್ನ ಕದ್ದು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಸುಮಾರು ₹2.5 ಲಕ್ಷ ಮೌಲ್ಯದ ಚಿನ್ನ ಮಾರಾಟ ಮಾಡಿ ಬಂದ ಹಣದಲ್ಲಿ ಐಫೋನ್ ಖರೀದಿಸಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಆಭರಣಗಳನ್ನ ಮರಳಿಸುವ ಭರವಸೆ ಈಡೇರದ ಹಿನ್ನೆಲೆಯಲ್ಲಿ ಅತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಶಾಂತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Written By Puttaraj K Alur
Published: Nov 16, 2026, 22:04 IST | Updated: Nov 16, 2026, 22:30 IST
Image Credit: Nagpur Viral News
Join

Nagpur Viral News: ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸಬೇಕೆಂಬ ಆಸೆ ವ್ಯಕ್ತಿಯೊಬ್ಬರನ್ನ ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹೊಸ ಐಫೋನ್ ಖರೀದಿಸುವ ಆಸೆಯಿಂದ ಸೊಸೆಯೊಬ್ಬಳು ತನ್ನ ಅತ್ತೆಯ ಚಿನ್ನಾಭರಣಗಳನ್ನೇ ಕದ್ದು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಸುಮಾರು ₹2.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಮಾರಾಟ ಮಾಡಿ ಬಂದ ಹಣದಿಂದ ಹೊಸ ಆ್ಯಪಲ್ ಐಫೋನ್ ಖರೀದಿಸಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಈ ಘಟನೆ ಕುಟುಂಬದೊಳಗಿನ ನಂಬಿಕೆ ಮತ್ತು ಸಂಬಂಧಗಳ ನಡುವೆ ಚರ್ಚೆಗೆ ಕಾರಣವಾಗಿದೆ.

ನಾಗ್ಪುರದ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರಾಧಾ ವರ್ಮಾ ಅವರು ಶಿರಡಿ ಯಾತ್ರೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ಬೀರುವಿನ ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನ ಪರಿಶೀಲಿಸಿದಾಗ ಅವು ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ಲಾಕರ್‌ನಲ್ಲಿ ಸುರಕ್ಷಿತವಾಗಿ ಇಟ್ಟಿದ್ದ ಆಭರಣಗಳು ನಾಪತ್ತೆಯಾಗಿರುವುದರಿಂದ ಅವರು ಆತಂಕಗೊಂಡಿದ್ದಾರೆ. ಕಾಣೆಯಾದ ಆಭರಣಗಳ ಮೌಲ್ಯ ಸುಮಾರು ₹2.5 ಲಕ್ಷ ಎಂದು ತಿಳಿದುಬಂದಿದೆ. ಒಟ್ಟು 53 ಗ್ರಾಂ ತೂಕದ ಚಿನ್ನಾಭರಣಗಳು ಲಾಕರ್‌ನಿಂದ ನಾಪತ್ತೆಯಾಗಿದ್ದವು. ಯಾತ್ರೆಗೆ ತೆರಳುವ ಸಿದ್ಧತೆಯಲ್ಲಿದ್ದ ರಾಧಾ ವರ್ಮಾ ಅವರಿಗೆ ಆಭರಣಗಳು ಕಾಣೆಯಾಗಿರುವುದು ದೊಡ್ಡ ಆಘಾತ ಉಂಟುಮಾಡಿದೆ.

ವಿಚಾರಣೆ ವೇಳೆ ಸೊಸೆಯ ಹೆಸರು ಬಹಿರಂಗ

ಆಭರಣಗಳು ಕಾಣೆಯಾಗಿರುವ ಬಗ್ಗೆ ಮನೆಯವರನ್ನ ವಿಚಾರಿಸಿದ ರಾಧಾ ವರ್ಮಾ ಅವರು, ತಮ್ಮ ಸೊಸೆ ಗ್ರಂಥಾಲಿ ಆಕಾಶ್ ವರ್ಮಾ ಅವರನ್ನೂ ಪ್ರಶ್ನಿಸಿದ್ದಾರೆ. ಈ ವೇಳೆ ಸೊಸೆಯೇ ಆಭರಣಗಳನ್ನ ಕದ್ದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸಬೇಕೆಂಬ ಆಸೆಯಿಂದ ಚಿನ್ನಾಭರಣಗಳನ್ನ ಕದ್ದಿದ್ದಾಗಿ ಗ್ರಂಥಾಲಿ ಒಪ್ಪಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅತ್ತೆಯ ಬೀರುವಿನ ಲಾಕರ್‌ನಲ್ಲಿದ್ದ ಚಿನ್ನವನ್ನ ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದಾಳೆ ಎನ್ನಲಾಗಿದೆ. 

ಆಭರಣಗಳನ್ನ ಮಾರಾಟ ಮಾಡಿದ ಬಳಿಕ ಬಂದ ಹಣವನ್ನ ಬಳಸಿ ಹೊಸ ಆ್ಯಪಲ್ ಐಫೋನ್ ಖರೀದಿಸಿರುವುದಾಗಿ ಆಕೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಕುಟುಂಬದ ಸದಸ್ಯರು ತಮ್ಮ ಅಮೂಲ್ಯ ವಸ್ತುಗಳನ್ನ ಮನೆಯಲ್ಲಿಯೇ ಸುರಕ್ಷಿತವಾಗಿ ಇಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಮನೆಯೊಳಗಿನವರ ಮೇಲಿದ್ದ ನಂಬಿಕೆಯೇ ಆಭರಣಗಳ ನಾಪತ್ತೆಗೆ ಕಾರಣವಾಗಿರುವ ಆರೋಪ ಕೇಳಿಬಂದಿದೆ.

ಆಭರಣ ಮರಳಿಸುವ ಭರವಸೆ; ಬಳಿಕ ಪೊಲೀಸರಿಗೆ ದೂರು

ಆಭರಣಗಳನ್ನ ಕದ್ದಿರುವುದಾಗಿ ಒಪ್ಪಿಕೊಂಡ ಬಳಿಕ, ಅವುಗಳನ್ನ ಮರಳಿ ತಂದುಕೊಡುವುದಾಗಿ ಗ್ರಂಥಾಲಿ ಭರವಸೆ ನೀಡಿದ್ದಾಳೆ ಎನ್ನಲಾಗಿದೆ. ಆದರೆ ಭರವಸೆ ನೀಡಿದಂತೆ ಚಿನ್ನಾಭರಣಗಳನ್ನ ವಾಪಸ್ ನೀಡದ ಹಿನ್ನೆಲೆಯಲ್ಲಿ ರಾಧಾ ವರ್ಮಾ ಅವರು ಪೊಲೀಸರ ಮೊರೆ ಹೋಗಿದ್ದಾರೆ. ತಮ್ಮ ಮನೆಯಲ್ಲಿಯೇ ನಡೆದಿರುವ ಈ ಕಳ್ಳತನದ ಬಗ್ಗೆ ಅವರು ಶಾಂತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ತೆಯ ದೂರಿನ ಹಿನ್ನೆಲೆಯಲ್ಲಿ ಸೊಸೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಿಂದೆಯೂ ಕಳ್ಳತನದ ಪ್ರಕರಣ ದಾಖಲಾಗಿತ್ತೇ?

ಈ ಪ್ರಕರಣದ ವಿಚಾರಣೆ ವೇಳೆ ಗ್ರಂಥಾಲಿ ಆಕಾಶ್ ವರ್ಮಾ ವಿರುದ್ಧ ಈ ಹಿಂದೆಯೂ ಕಳ್ಳತನದ ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಸದ್ಯ ಶಾಂತಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 53 ಗ್ರಾಂ ಚಿನ್ನಾಭರಣಗಳನ್ನ ಮಾರಾಟ ಮಾಡಿದ ವಿಚಾರ, ಅವುಗಳಿಂದ ಬಂದ ಹಣವನ್ನ ಐಫೋನ್ ಖರೀದಿಗೆ ಬಳಸಿರುವ ಆರೋಪ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಒಟ್ನಲ್ಲಿ ಹೊಸ ಆ್ಯಪಲ್ ಐಫೋನ್ ಖರೀದಿಸುವ ಆಸೆಗಾಗಿ ಅತ್ತೆಯ ಚಿನ್ನಾಭರಣಗಳನ್ನ ಕದ್ದಿರುವ ಆರೋಪ ನಾಗ್ಪುರದಲ್ಲಿ ಗಮನ ಸೆಳೆದಿದೆ. ಸುಮಾರು ₹2.5 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವ ಪ್ರಕರಣ ಇದೀಗ ಪೊಲೀಸ್ ತನಿಖೆಯ ಹಂತದಲ್ಲಿದೆ. ತನಿಖೆಯ ಬಳಿಕ ಪ್ರಕರಣದ ಸಂಪೂರ್ಣ ವಿವರಗಳು ತಿಳಿದುಬರಬೇಕಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES