ಸಿಂಹವನ್ನೇ ಬೈಕ್‌ನಲ್ಲಿ ಅಟ್ಟಾಡಿಸಿದ ಸಿಬ್ಬಂದಿ! ವೈರಲ್ ವಿಡಿಯೋದಿಂದ ಮೂವರ ಕೆಲಸಕ್ಕೆ ಕುತ್ತು!
ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ಸಿಂಹವೊಂದು ದಾರಿ ತಪ್ಪಿತ್ತು. ಅದನ್ನ ಮತ್ತೆ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಕರೆದೊಯ್ಯುವ ಉದ್ದೇಶದಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ಅನುಸರಿಸಿದ ವಿಧಾನವೇ ವಿವಾದಕ್ಕೆ ಕಾರಣವಾಗಿದೆ.
Viral Video: ಬೈಕ್‌ನಲ್ಲಿ ಸಿಂಹವನ್ನೇ ಬೆನ್ನಟ್ಟಿದ ಘಟನೆಗೆ ಸಂಬಂಧಿಸಿದಂತೆ ಮೂವರು ಹೊರಗುತ್ತಿಗೆ ಅರಣ್ಯ ಸಿಬ್ಬಂದಿಯನ್ನ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅರಣ್ಯ ಇಲಾಖೆಯ ಗಮನ ಸೆಳೆದಿದೆ. ಘಟನೆಯ ಕುರಿತು ತನಿಖೆ ನಡೆಸಿದ ಬಳಿಕ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ಸಿಂಹವೊಂದು ದಾರಿ ತಪ್ಪಿತ್ತು. ಅದನ್ನ ಮತ್ತೆ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಕರೆದೊಯ್ಯುವ ಉದ್ದೇಶದಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ಅನುಸರಿಸಿದ ವಿಧಾನವೇ ವಿವಾದಕ್ಕೆ ಕಾರಣವಾಗಿದೆ. ಸಿಂಹವನ್ನ ಮರಳಿ ಕಾಡಿನತ್ತ ಕರೆದೊಯ್ಯಲು ನಿಯಮಾನುಸಾರ ಬಳಸಬೇಕಿದ್ದ ವಾಹನದ ಬದಲಿಗೆ ಬೈಕ್ ಬಳಸಿರುವುದು ಗಂಭೀರ ಲೋಪವೆಂದು ಪರಿಗಣಿಸಲಾಗಿದೆ.
ಸಿಂಹವನ್ನ ಬೈಕ್‌ನಲ್ಲಿ ಬೆನ್ನಟ್ಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಘಟನೆ ಸಾರ್ವಜನಿಕರ ಗಮನ ಸೆಳೆದಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅರಣ್ಯ ಇಲಾಖೆಯು ಪ್ರಕರಣದ ಕುರಿತು ತನಿಖೆ ಕೈಗೊಂಡಿದೆ. ತನಿಖೆಯ ವೇಳೆ ಸಿಬ್ಬಂದಿ ಸಿಂಹವನ್ನ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಮರಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದರು ಎಂಬುದು ತಿಳಿದುಬಂದಿದೆ.
ಆದರೆ ಉದ್ದೇಶ ಏನೇ ಇದ್ದರೂ ಕಾರ್ಯಾಚರಣೆಯಲ್ಲಿ ನಿಯಮಗಳನ್ನ ಪಾಲಿಸುವುದು ಕಡ್ಡಾಯವಾಗಿದೆ. ಸಿಂಹವನ್ನ ಸುರಕ್ಷಿತವಾಗಿ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಕರೆದೊಯ್ಯಲು ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ ಜೀಪ್ ಬಳಸಬೇಕಿತ್ತು. ಈ ನಿಯಮವನ್ನ ಬದಿಗಿಟ್ಟು ಸಿಬ್ಬಂದಿ ಬೈಕ್ ಬಳಸಿರುವುದು ಇಲಾಖೆಯ ದೃಷ್ಟಿಯಲ್ಲಿ ಗಂಭೀರ ಉಲ್ಲಂಘನೆಯಾಗಿದೆ.
ತನಿಖೆಯ ಬಳಿಕ ಮೂವರು ಹೊರಗುತ್ತಿಗೆ ಅರಣ್ಯ ಸಿಬ್ಬಂದಿಯನ್ನ ಸೇವೆಯಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಸಿಂಹವನ್ನ ಸ್ಥಳಾಂತರಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನ ಉಲ್ಲಂಘಿಸಿರುವುದೇ ಈ ಕ್ರಮಕ್ಕೆ ಕಾರಣವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಮೂವರು ಸಿಬ್ಬಂದಿಯ ಕೆಲಸ ಕಳೆದುಕೊಳ್ಳಲು ಕಾರಣವಾಗಿದೆ.
ಅಮ್ರೇಲಿ ಜಿಲ್ಲೆಯ ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ನಡೆದ ಈ ಘಟನೆ ಅರಣ್ಯ ಇಲಾಖೆಯ ಕಾರ್ಯಾಚರಣೆಗಳಲ್ಲಿ ನಿಯಮ ಪಾಲನೆಯ ಮಹತ್ವವನ್ನ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ದಾರಿ ತಪ್ಪಿದ್ದ ಸಿಂಹವನ್ನ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಮರಳಿಸುವ ಉದ್ದೇಶದಿಂದ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರೂ, ಅದಕ್ಕಾಗಿ ಬಳಸಿದ ವಾಹನ ನಿಯಮಬಾಹಿರವಾಗಿತ್ತು. ಜೀಪ್ ಬದಲಿಗೆ ಬೈಕ್ ಬಳಸಿದ ಕ್ರಮವನ್ನ ಗಂಭೀರ ಲೋಪವೆಂದು ಪರಿಗಣಿಸಿದ ಇಲಾಖೆ, ಸಂಬಂಧಪಟ್ಟ ಮೂವರ ವಿರುದ್ಧ ವಜಾ ಕ್ರಮ ಕೈಗೊಂಡಿದೆ.
ಒಟ್ನಲ್ಲಿ ಸಿಂಹವನ್ನ ಬೈಕ್‌ನಲ್ಲಿ ಬೆನ್ನಟ್ಟಿದ ವಿಡಿಯೋ ವೈರಲ್ ಆದ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡಿದ್ದು, ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮೂವರು ಹೊರಗುತ್ತಿಗೆ ಅರಣ್ಯ ಸಿಬ್ಬಂದಿ ಕರ್ತವ್ಯದಿಂದ ವಜಾಗೊಂಡಿದ್ದಾರೆ.