SOCIAL MEDIA

Newsletter

PARTNER SITES
Select Language Select State

ಐಷಾರಾಮಿ ಜೀವನದ ವಿಡಿಯೋ ಹಾಕಿದ್ದ ಖ್ಯಾತ ಯೂಟ್ಯೂಬರ್ ಮನೆಗೇ ಕನ್ನ! ಹಿಂಬಾಗಿಲು ಒಡೆದು 1 ಕೋಟಿ ರೂ. ಚಿನ್ನಾಭರಣ ದೋಚಿದ ಕಳ್ಳರು!

youtubers house theft: ಹಣ.. ಬಂಗಾರ.. ಐಷಾರಾಮಿ ಜೀವನ..ಇದೆಲ್ಲವನ್ನೂ ತೋರಿಸಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಯೂಟ್ಯೂಬರ್ ಮನೆಗೇ ಇದೀಗ ಕಳ್ಳರು ಕನ್ನ ಹಾಕಿದ್ದಾರೆ.ಹಿಂಬಾಗಿಲಿನ ಬೀಗ ಒಡೆದು ಒಳನುಗ್ಗಿದ ಖದೀಮರು ಬರೋಬ್ಬರಿ 944 ಗ್ರಾಂ ಚಿನ್ನ, ವಜ್ರದ ಆಭರಣ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

Written By Ramya. R. Gowda
Published: Sep 26, 2026, 01:26 PM IST | Updated: Sep 26, 2026, 01:37 PM IST
Join

youtubers house  theft : ಹಣ.. ಬಂಗಾರ.. ಐಷಾರಾಮಿ ಜೀವನ..ಇದೆಲ್ಲವನ್ನೂ ತೋರಿಸಿ ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಯೂಟ್ಯೂಬರ್ ಮನೆಗೇ ಇದೀಗ ಕಳ್ಳರು ಕನ್ನ ಹಾಕಿದ್ದಾರೆ.ಹಿಂಬಾಗಿಲಿನ ಬೀಗ ಒಡೆದು ಒಳನುಗ್ಗಿದ ಖದೀಮರು ಬರೋಬ್ಬರಿ 944 ಗ್ರಾಂ ಚಿನ್ನ, ವಜ್ರದ ಆಭರಣ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಂಕೆ ಇದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ಸಮೀಪದ ಧಮ್ಮತ್ತುಕೋಣಂನ ವಿಐಪಿ ಗಾರ್ಡನ್ ನಿವಾಸ. ಇಲ್ಲೇ ಕುಟುಂಬದ ಜೊತೆ ಯೂಟ್ಯೂಬರ್ ಮಧುಮಿತಾ ವಾಸವಾಗಿದ್ದರು.
ಹಣ, ಬಂಗಾರ ಸೇರಿದಂತೆ ತಮ್ಮ ಐಷಾರಾಮಿ ಜೀವನದ ಬಗ್ಗೆ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದರು.ಆದ್ರೆ, ಇದೇ ವಿಡಿಯೋಗಳು ಇದೀಗ ಕಳ್ಳರ ಕಣ್ಣು ಬೀಳಲು ಕಾರಣವಾಗಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.


ದಂಪತಿ ತಮ್ಮ ಮಗುವಿಗೆ ಬಟ್ಟೆ ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದರು.ಇದೇ ಸಮಯವನ್ನೇ ಕಾದಿದ್ದ ಖದೀಮರು ಮನೆಯ ಹಿಂಬಾಗಿಲಿನ ಬೀಗವನ್ನು ಕಟಿಂಗ್ ಮಷಿನ್ ಬಳಸಿ ಒಡೆದು ಒಳನುಗ್ಗಿದ್ದಾರೆ.ನಂತರ ನೇರವಾಗಿ ಬೆಡ್‌ ರೂಮ್‌ಗೆ ತೆರಳಿ, ಅಲ್ಲಿದ್ದ ಕಪಾಟನ್ನು ಒಡೆದಿದ್ದಾರೆ.


ಕಪಾಟಿನಲ್ಲಿದ್ದ ಬರೋಬ್ಬರಿ 118 ಸವರನ್ ಅಂದರೆ 944 ಗ್ರಾಂ ಚಿನ್ನ,ವಜ್ರದ ಆಭರಣಗಳು ಹಾಗೂ 50 ಸಾವಿರ ರೂಪಾಯಿ ನಗದು ಕಳ್ಳರ ಪಾಲಾಗಿದೆ.ಕಳವಾಗಿರುವ ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.ಮನೆಯವರು ವಾಪಸ್ ಬಂದಾಗ ಹಿಂಬಾಗಿಲಿನ ಬೀಗ ಒಡೆದಿರುವುದು ಕಂಡುಬಂದಿದೆ. ಮನೆಯೊಳಗೆ ಪರಿಶೀಲಿಸಿದಾಗ ಕಪಾಟು ಕೂಡ ಧ್ವಂಸವಾಗಿರುವುದು ಗೊತ್ತಾಗಿದೆ.ಕೂಡಲೇ ರಾಜಕ್ಕಮಂಗಲಂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದೀಗ ಪೊಲೀಸರ ತನಿಖೆಯ ಕೇಂದ್ರಬಿಂದು ಸಿಸಿಟಿವಿ ದೃಶ್ಯಾವಳಿಗಳು.ವಿಐಪಿ ಗಾರ್ಡನ್ ಸುತ್ತಮುತ್ತ ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳಿದ್ದು, ಕಳ್ಳರು ಯಾವ ಮಾರ್ಗವಾಗಿ ಬಂದು, ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಅನ್ನೋದನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಚಲನವಲನ ಪತ್ತೆಹಚ್ಚಲು ವಿಶೇಷ ತಂಡಗಳನ್ನೂ ರಚಿಸಲಾಗಿದೆ.

ವಸತಿ ಪ್ರದೇಶದಲ್ಲೇ ಇಷ್ಟು ದೊಡ್ಡ ಪ್ರಮಾಣದ ಚಿನ್ನಾಭರಣ ಕಳವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದ ಐಷಾರಾಮಿ ಜೀವನದ ವಿಡಿಯೋಗಳಿಗೂ ಈ ಕಳ್ಳತನಕ್ಕೂ ಏನಾದರೂ ಸಂಬಂಧವಿದೆಯಾ?
ಅಥವಾ ಮೊದಲೇ ಮಾಹಿತಿ ಕಲೆಹಾಕಿಕೊಂಡು ಕಳ್ಳರು ಮನೆಗೆ ಕನ್ನ ಹಾಕಿದ್ದಾರಾ?ಈ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಯೂಟ್ಯೂಬ್‌ ವಿಡಿಯೋ ತಂದ ಕುತ್ತು
944 ಗ್ರಾಂ ಚಿನ್ನ ಕಳವು
118 ಸವರನ್ ಆಭರಣ
ವಜ್ರದ ಆಭರಣಗಳೂ ಕಳ್ಳರ ಪಾಲು
₹50 ಸಾವಿರ ನಗದು ಕಳವು
ಒಟ್ಟು ಮೌಲ್ಯ ₹1 ಕೋಟಿ
ಸಿಸಿಟಿವಿ ದೃಶ್ಯ ಪರಿಶೀಲನೆ
ವಿಶೇಷ ತಂಡಗಳಿಂದ ತನಿಖೆ

ಯೂಟ್ಯೂಬರ್‌ ಮಧುಮಿತಾ  ಹಂಚಿಕೊಂಡಿದ್ದ ಹಣ, ಬಂಗಾರದ ಸಮೇತ ತನ್ನ ಐಷಾರಾಮಿ ಜೀವನದ ಬಗ್ಗೆ ವಿಡಿಯೋ ಆಕೆ ಕಂಟಕವಾಗಿದೆ. ದಂಪತಿ ಶಾಂಪಿಂಗ್‌ ಎಂದು ಹೊರಗೆ ತೆರಳಿದ ವೇಳೆ ಖದೀಮರಿ ಧಾವಿಸಿ ಬೆಡ್‌ ರೂಮ್‌  ಕಪಾಟನ್ನು ಒಡೆದಿರುವುದು ಪತ್ತೆಯಾಗಿದೆ. ಸರಿ ಸುಮಾರು 118 ಸವರನ್‌ ಚಿನ್ನ ಹಾಗೂ ವಜ್ರದ ಆಭರಣಗಳು ಜೊತೆಗೆ 50 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ ಎಂದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಈ ಘಟನೆ ಕುರಿತು ಮಾಹಿತಿ ದೊರೆತ ಕೂಡಲೇ ರಾಜಕ್ಕಮಂಗಲಂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ನಡೆದ ವಿಐಪಿ ಗಾರ್ಡನ್ ನಿವಾಸದ ಸುತ್ತಮುತ್ತ ಹಲವು ಕಡೆ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ
ಹೀಗಾಗಿ ಈ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಈ ಕಳ್ಳತನದ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.  

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES