• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಮದುವೆ ಮಾಡಿಸಿದ ಜ್ಯೋತಿಷಿಗೆ ಸಾ*ವಿನ ಮೂಹರ್ತವನ್ನೇ ಫಿಕ್ಸ್‌ ಮಾಡಿ ಪಾಪಿ

ಮದುವೆ ಮಾಡಿಸಿದ ಜ್ಯೋತಿಷಿಗೆ ಸಾ*ವಿನ ಮೂಹರ್ತವನ್ನೇ ಫಿಕ್ಸ್‌ ಮಾಡಿ ಪಾಪಿ

astrologer murder in maharashtra: ಮದುವೆ ಮಾಡಿಸಿ ಜಾತಕ ಬದಲಿಸುತ್ತಿದ್ದ ಜ್ಯೋತಿಷಿಯೋರ್ವನ ಜಾತಕವನ್ನೇ ಪಾಪಿಯೊಬ್ಬ ಸಾವಿನ ಪಾಲಾಗಿಸಿದ್ದಾನೆ. ಬೇರೆಯವರ ಮದುವೆಗೆ ಮುಹೂರ್ತ ಇಡುತ್ತಿದ್ದ ಆ ಜ್ಯೋತಿಷಿಗೆ, ಸ್ವತಃ ಸಾವಿನ ಮುಹೂರ್ತವನ್ನೇ ಫಿಕ್ಸ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ರೋಚಕ ಹಾಗೂ ಬೆಚ್ಚಿಬೀಳಿಸುವ ಸ್ಟೋರಿ ಇಲ್ಲಿದೆ ನೋಡಿ..!

Written ByRamya. R. Gowda
Published: Nov 09, 2026, 14:45 IST|Updated: Nov 09, 2026, 14:52 IST
joinshare
ಮದುವೆ ಮಾಡಿಸಿದ ಜ್ಯೋತಿಷಿಗೆ ಸಾ*ವಿನ ಮೂಹರ್ತವನ್ನೇ ಫಿಕ್ಸ್‌ ಮಾಡಿ ಪಾಪಿ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

astrologer murder in maharashtra: ಮದುವೆ ಮಾಡಿಸಿ ಜಾತಕ ಬದಲಿಸುತ್ತಿದ್ದ ಜ್ಯೋತಿಷಿಯೋರ್ವನ ಜಾತಕವನ್ನೇ ಪಾಪಿಯೊಬ್ಬ ಸಾವಿನ ಪಾಲಾಗಿಸಿದ್ದಾನೆ. ಬೇರೆಯವರ ಮದುವೆಗೆ ಮುಹೂರ್ತ ಇಡುತ್ತಿದ್ದ ಆ ಜ್ಯೋತಿಷಿಗೆ, ಸ್ವತಃ ಸಾವಿನ ಮುಹೂರ್ತವನ್ನೇ ಫಿಕ್ಸ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ರೋಚಕ ಹಾಗೂ ಬೆಚ್ಚಿಬೀಳಿಸುವ ಸ್ಟೋರಿ ಇಲ್ಲಿದೆ ನೋಡಿ..!

ಆತ ​ಮಹಾರಾಷ್ಟ್ರದ ಇಚಲಕರಂಜಿ ಮೂಲದ ಜ್ಯೋತಿಷಿ ಮಂದಾರ ಅಜಿತ ರಾಂಡೆ (35),  ಕೊಲೆಯಾದ ದುರ್ದೈವಿ. ಜ್ಯೋತಿಷಿಯನ್ನು ಪಕ್ಕಾ ಸ್ಕೆಚ್ ಹಾಕಿ, ಮುಗಿಸಿರುವ ಆರೋಪಿಯನ್ನು ಬಾಬಾಸೋ ದೀಪಕ್ ಮಗದುಮ ಎಂದು ಗುರುತಿಸಲಾಗಿದೆ. ಜನವರಿ 13 ರಂದು ಆರೋಪಿ ಬಾಬಾಸೋ ದೀಪಕ್ ಮಗದುಮ‌ನ ಮಗಳು ಮನೆಯಿಂದ ಓಡಿಹೋಗಿ ಅನ್ಯ ಜಾತಿಯ ಯುವಕನೊಬ್ಬನನ್ನು ವಿವಾಹವಾಗಿದ್ದಳು. ಈ ಮದುವೆ ಕೇವಲ ಕಾಕತಾಳೀಯವಲ್ಲ, ಇದರ ಹಿಂದೆ ಜ್ಯೋತಿಷಿ ಮಂದಾರ್ ರಾಂಡೆ ಕೈವಾಡವಿದೆ ಎಂಬುದು ತಂದೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು. ನನ್ನ ಮಗಳ ಬದುಕು ಹಾಳು ಮಾಡಿದ, ಅನ್ಯ ಜಾತಿಯವನೊಂದಿಗೆ ಮದುವೆ ಮಾಡಿಸಿದ್ದು ಇದೇ ಜ್ಯೋತಿಷಿಎಂಬ ತೀವ್ರ ದ್ವೇಷ ಹಾಗೂ ಹಗೆಯನ್ನು ಆರೋಪಿ ತನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿಸಿಕೊಂಡಿದ್ದ. ಜ್ಯೋತಿಷಿಯ ಮೇಲೆ ಹಗೆ ತೀರಿಸಿಕೊಳ್ಳಲು ಒಳಗೊಳಗೇ ಪಕ್ಕಾ ಪ್ಲಾನ್ ಹೆಣೆದಿದ್ದ. ​ಹಗೆಯ ಬೆಂಕಿಯಲ್ಲಿ ಕುದಿಯುತ್ತಿದ್ದ ಆರೋಪಿ ಬಾಬಾಸೋ ದೀಪಕ್ ಮಗದುಮ, ಜ್ಯೋತಿಷಿಯನ್ನು ಕತ್ತು ಹಿಸುಕಿ ಅಥವಾ ನೇರವಾಗಿ ಮುಗಿಸಲು ಮಾಸ್ಟರ್ ಪ್ಲಾನ್ ಮಾಡಿದ್ದ.

ಜ್ಯೋತಿಷಿಯನ್ನು ಖೆಡ್ಡಾಗೆ ಕೆಡವಲು ಮುಕ್ದುಮ್ ರೆಡಿಯಾಗಿದ್ದ, ಮೊದಲು ಬೇರೆ ನಂಬರ್‌ನಿಂದ ಜ್ಯೋತಿಷಿ ಮಂದಾರ್ ರಾಂಡ್‌ಗೆ ಫೋನ್ ಮಾಡಿದ್ದಾನೆ. ನಮಗೆ ಮದುವೆ ಮಾಡಿಸುವುದಿದೆ, ಒಮ್ಮೆ ಭೇಟಿಯಾಗಿ ಮುಹೂರ್ತ ಫಿಕ್ಸ್ ಮಾಡಬೇಕು ಎಂದು ನಂಬಿಸಿ ಕರೆ ಮಾಡಿದ್ದಾನೆ. ಆರೋಪಿಯ ಮಾತು ನಂಬಿ, ಅಕ್ಟೋಬರ್ 30 ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾನಕಾಪುರ ಗ್ರಾಮಕ್ಕೆ ಜ್ಯೋತಿಷಿ ಮಂದಾರ್ ರಾಂಡೆ ಬಂದಿದ್ದಾರೆ. ​ಯಾವಾಗ ಜ್ಯೋತಿಷಿ ಮಾನಕಾಪುರ ಗ್ರಾಮದ ನಿರ್ಜನ ಪ್ರದೇಶಕ್ಕೆ ಬಂದಿದ್ದಾನೋ, ಅದೇ ಸಮಯಕ್ಕೆ ಸರಿಯಾಗಿ ಹೊಂಚುಹಾಕಿದ್ದ ಹಂತಕ ಬಾಬಾಸೋ ತನ್ನ ವಿಕೃತ ಬುದ್ಧಿಯನ್ನು ಹೊರಹಾಕಿದ್ದಾನೆ. ಸ್ಥಳಕ್ಕೆ ಬರುತ್ತಿದ್ದಂತೆ ಯೋಚಿಸಲು ಬಿಡದೆ ಜ್ಯೋತಿಷಿಯ ಕಣ್ಣಿಗೆ ಕಾರದಪುಡಿ ಎರಚಿ, ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಜ್ಯೋತಿಷಿಯ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣಬಿಟ್ಟಿದ್ದಾರೆ.

ಇನ್ನು ​ಈ ಭೀಕರ ಹತ್ಯೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಸದಲಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದರು. ತಾಂತ್ರಿಕ ಸಾಕ್ಷ್ಯಗಳು ಹಾಗೂ ಹಂತಕನ ಕರಾಳ ಹೆಜ್ಜೆಗುರುತನ್ನು ಬೆನ್ನಟ್ಟಿದ ಸದಲಗಾ ಪೊಲೀಸರು, ಕೇವಲ ಕೆಲವೇ ಗಂಟೆಗಳಲ್ಲಿ ಜಾಲ ಬೀಸಿ ಹಂತಕ ಬಾಬಾಸೋ ದೀಪಕ್ ಮಗದುಮ‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಮದುವೆ ಮಾಡಿಸುತ್ತಿದ್ದ ಜ್ಯೋತಿಷಿಯೊಬ್ಬನ ಈ ಅನಿರೀಕ್ಷಿತ ಹಾಗೂ ರಕ್ತಸಿಕ್ತ ಅಂತ್ಯ ಈಗ ಎರಡು ರಾಜ್ಯದ ಗಡಿಭಾಗದಲ್ಲಿ ಭಾರೀ ಚರ್ಚೆ ನಡೆದಿದೆ.
 

Add Zee News as a Preferred Source
TAGS:
India