• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ECL ಫೈನಾನ್ಸ್‌ಗೆ ಸುಪ್ರೀಂ ಕೋರ್ಟ್ ಶಾಕ್: ಮನೆ ಖರೀದಿದಾರರ ಹೆಸರಲ್ಲಿ ನಡೆದ ದಂಧೆ ಬಯಲಿಗೆ!

ECL ಫೈನಾನ್ಸ್‌ಗೆ ಸುಪ್ರೀಂ ಕೋರ್ಟ್ ಶಾಕ್: ಮನೆ ಖರೀದಿದಾರರ ಹೆಸರಲ್ಲಿ ನಡೆದ ದಂಧೆ ಬಯಲಿಗೆ!

ಸಾಲ ನೀಡುವ ಕಂಪನಿಯು ಸಾಲಗಾರ ಕಂಪನಿಯ ನಿರ್ಧಾರಗಳು ಮತ್ತು ನೀತಿ ನಿರೂಪಣೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಅದನ್ನು ಕೇವಲ ಸಾಲಗಾರ ಎನ್ನಲಾಗುವುದಿಲ್ಲ, ಬದಲಿಗೆ ಅದು ಆ ಕಂಪನಿಯ "ಸಂಬಂಧಿತ ಪಕ್ಷ" (Related Party) ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.

Written ByKrishna NK
Published: Nov 05, 2026, 22:25 IST|Updated: Nov 05, 2026, 22:29 IST
joinshare
ECL ಫೈನಾನ್ಸ್‌ಗೆ ಸುಪ್ರೀಂ ಕೋರ್ಟ್ ಶಾಕ್: ಮನೆ ಖರೀದಿದಾರರ ಹೆಸರಲ್ಲಿ ನಡೆದ ದಂಧೆ ಬಯಲಿಗೆ!
Image Credit: Supreme Court

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನವದೆಹಲಿ : ಸಾಮಾನ್ಯವಾಗಿ ವಸತಿ ಯೋಜನೆಯ ಮುಖ್ಯ ಉದ್ದೇಶವೇನು? ಜನರಿಗೆ ಸ್ವಂತ ಮನೆ ಕಲ್ಪಿಸುವುದು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಲಾಭ ಗಳಿಸುವುದು. ಆದರೆ, ಗ್ರೇಟರ್ ನೋಯ್ಡಾದಲ್ಲಿ ಮನೆ ಖರೀದಿದಾರರಿಗೆ ಮೋಸ ಮಾಡಲು ಹಾಗೂ ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆಯಲು ಮಾತ್ರವೇ ಒಂದು ವಸತಿ ಯೋಜನೆಯನ್ನು ಶುರು ಮಾಡಲಾಗಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.. ಈ ಕುರಿತ ಶಾಕಿಂಗ್‌ ಸುದ್ದಿ ಇಲ್ಲಿದೆ..

ಮೋಸದ ಆಟ ಶುರುವಾಗಿದ್ದು ಹೇಗೆ.. ಎಲ್ಲಿಂದ?
2016ರಲ್ಲಿ 'ಸಹಾ ಇನ್ಫ್ರಾಟೆಕ್' (Saha Infratech) ಎಂಬ ಕಂಪನಿಯು ಗ್ರೇಟರ್ ನೋಯ್ಡಾದಲ್ಲಿ ರಿಯಲ್ ಎಸ್ಟೇಟ್ ಯೋಜನೆಯನ್ನು ಪ್ರಾರಂಭಿಸಿತು. ಮೊದಲು ಇದನ್ನು 'ಪ್ರಾಜೆಕ್ಟ್ ಎನ್ಕೋರ್' ಎಂದು ಕರೆಯಲಾಗುತ್ತಿತ್ತು, ನಂತರ 'ಮೇಘದೂತಮ್ ಎನ್ಕೋರ್' ಎಂದು ಮರುನಾಮಕರಣ ಮಾಡಲಾಯಿತು.

ಈ ಯೋಜನೆಗಾಗಿ 2016ರಲ್ಲಿ ₹160 ಕೋಟಿ ಮೌಲ್ಯದ ಡಿಬೆಂಚರ್‌ಗಳನ್ನು ವಿತರಿಸಲು ಯೋಜಿಸಲಾಗಿತ್ತು. ಆದರೆ ಕೊನೆಗೆ ₹110 ಕೋಟಿ ಮಾತ್ರ ವಿತರಿಸಲಾಯಿತು. ಇಡೀ ಡಿಬೆಂಚರ್‌ಗಳನ್ನು 'ECL ಫೈನಾನ್ಸ್' ಕಂಪನಿಯೇ ಖರೀದಿಸಿತು. ಅಷ್ಟೇ ಅಲ್ಲದೆ, ಈ ಒಪ್ಪಂದಕ್ಕೆ 'ಪಾಮ್ ಡೆವಲಪರ್ಸ್' (Palm Developers) ಗ್ಯಾರಂಟರ್ ಆಗಿ ನಿಂತಿತು. ಅಂದರೆ, ಸಹಾ ಇನ್ಫ್ರಾಟೆಕ್ ಹಣ ಹಿಂತಿರುಗಿಸದಿದ್ದರೆ ಪಾಮ್ ಡೆವಲಪರ್ಸ್ ಆ ಹಣವನ್ನು ತೀರಿಸಬೇಕಿತ್ತು. 2017ರಲ್ಲಿ ECL ಫೈನಾನ್ಸ್ ಸಂಸ್ಥೆಯು ಪಾಮ್ ಡೆವಲಪರ್‌ಗಳನ್ನು ಗ್ಯಾರಂಟಿಯಾಗಿಟ್ಟುಕೊಂಡು ಸಹಾ ಇನ್ಫ್ರಾಟೆಕ್‌ಗೆ ಮತ್ತೆ ₹90 ಕೋಟಿ ಸಾಲ ನೀಡಿತು. ಇಲ್ಲಿಂದಲೇ ಅಸಲಿ ಹಣಕಾಸು ಅಕ್ರಮಗಳು ಪ್ರಾರಂಭವಾದವು.

ಫೊರೆನ್ಸಿಕ್ ಆಡಿಟಿಂಗ್‌ನಲ್ಲಿ ಬಯಲಾಯ್ತು ಅಸಲಿ ಸತ್ಯ
ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ಫೊರೆನ್ಸಿಕ್ ಆಡಿಟಿಂಗ್ ವರದಿಯಲ್ಲಿ ಆಘಾತಕಾರಿ ಸಂಗತಿಗಳು ಹೊರಬಂದವು. ಸಹಾ ಇನ್ಫ್ರಾಟೆಕ್‌ನ ಗ್ಯಾರಂಟರ್ ಆಗಿದ್ದ 'ಪಾಮ್ ಡೆವಲಪರ್ಸ್' ಕಂಪನಿಯನ್ನು, ಸಹಾ ಇನ್ಫ್ರಾಟೆಕ್‌ನಿಂದ ಬೇರೆ ಎರಡು ಕಂಪನಿಗಳಿಗೆ ಹಣ ವರ್ಗಾಯಿಸಲು (Divert ಮಾಡಲು) ಒಂದು ಮಾರ್ಗವಾಗಿ ಬಳಸಿಕೊಳ್ಳಲಾಗಿತ್ತು. ಆ ಎರಡು ಕಂಪನಿಗಳು ಪಾಮ್ ಡೆವಲಪರ್ಸ್‌ನ ಪ್ರವರ್ತಕರ (Promoters) ಒಡೆತನದಲ್ಲಿದ್ದವು. ವಿಶೇಷವೆಂದರೆ, ECL ಫೈನಾನ್ಸ್ ಸಂಸ್ಥೆಯೇ ಈ ಎರಡೂ ಕಂಪನಿಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿತ್ತು!

CoC ಯಿಂದ ಹೊರಹಾಕಿದ NCLT ಮತ್ತು ಸುಪ್ರೀಂ ಕೋರ್ಟ್
2020ರಲ್ಲಿ ಪಾಮ್ ಡೆವಲಪರ್ಸ್ ಕಂಪನಿಯು ದಿವಾಳಿಯಾಯಿತು (Insolvency). ಆ ಸಮಯದಲ್ಲಿ ECL ಫೈನಾನ್ಸ್ ಮತ್ತು ಅದರ ಡಿಬೆಂಚರ್ ಟ್ರಸ್ಟಿ ಸುಮಾರು ₹270 ಕೋಟಿ ಕ್ಲೇಮ್ ಮಾಡಿ, ಕಂಪನಿಯ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಲಗಾರರ ಸಮಿತಿ (CoC - Committee of Creditors) ಸೇರಿಕೊಂಡರು. ಆದರೆ, ನಿಯಮಗಳ ಪ್ರಕಾರ ಕಂಪನಿಯ 'ಸಂಬಂಧಿತ ಪಕ್ಷಗಳು' (Related Parties) ಅಥವಾ 'ಸ್ವಂತ ಜನರು' CoC ಯಲ್ಲಿ ಇರಲು ಅವಕಾಶವಿಲ್ಲ. ಇನ್ನು ದೂರು ವಿಚಾರಣೆ ನಡೆಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT), ECL ಫೈನಾನ್ಸ್‌ನ ಹಸ್ತಕ್ಷೇಪವನ್ನು ಗಮನಿಸಿ ಆಘಾತಕಾರಿ ವಿಷಯಗಳನ್ನು ಹೊರಗೆಳೆಯಿತು.

ECL ಫೈನಾನ್ಸ್ ಕೇವಲ ಸಾಲ ನೀಡಿದ ಕಂಪನಿಯಾಗಿರಲಿಲ್ಲ. ಅದು ಕಂಪನಿಯ ನಿರ್ದೇಶಕರನ್ನು ನೇಮಿಸುವ, ಮಂಡಳಿಯ ವಿವಾದಗಳನ್ನು ಬಗೆಹರಿಸುವ, ತ್ರೈಮಾಸಿಕ ಬಜೆಟ್ ಅನುಮೋದಿಸುವ ಮತ್ತು ಖಾತೆಗಳನ್ನು ನೇರವಾಗಿ ನಿಯಂತ್ರಿಸುವ ಸಂಪೂರ್ಣ ಅಧಿಕಾರ ಹೊಂದಿತ್ತು. ಕಂಪನಿಯ ಪ್ರತಿಯೊಂದು ಸಣ್ಣ ಹಾಗೂ ದೊಡ್ಡ ನೀತಿ ನಿರ್ಧಾರದಲ್ಲೂ ECL ಹಸ್ತಕ್ಷೇಪ ಮಾಡುತ್ತಿತ್ತು. ಈ ಆಧಾರದ ಮೇಲೆ NCLT, ECL ಫೈನಾನ್ಸ್ ಅನ್ನು ಸಾಲಗಾರರ ಸಮಿತಿಯಿಂದ (CoC) ಹೊರಗಿಟ್ಟು ಆದೇಶಿಸಿತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ NCLT ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಸುಪ್ರೀಂ ಕೋರ್ಟ್ ಖಡಕ್ ಸಂದೇಶ
ಸಾಲಗಾರ ಕಂಪನಿಯ ದೈನಂದಿನ ವ್ಯವಹಾರ ಹಾಗೂ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಫೈನಾನ್ಸ್ ಕಂಪನಿಯನ್ನು ಸಾಮಾನ್ಯ 'ಬಾಹ್ಯ ಸಾಲದಾತ' ಎಂದು ಪರಿಗಣಿಸಲು ಸಾಧ್ಯವಿಲ್ಲ, ಬದಲಿಗೆ ಅದನ್ನು 'ಸಂಬಂಧಿತ ಪಕ್ಷ' (Related Party) ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ, ಕಂಪನಿಯಿಂದ ಹಣ ಬರಬೇಕಿದ್ದರೂ ಸಹ, ಅಂತಹ ಸಂಸ್ಥೆಗೆ CoC ಸಮಿತಿಯಲ್ಲಿ ಕುಳಿತುಕೊಳ್ಳುವ ಅಧಿಕಾರವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಆರ್‌ಬಿಐ (RBI) ನಿಂದಲೂ ನಿರ್ಬಂಧ
ಇದು ECL ಫೈನಾನ್ಸ್‌ಗೆ ತೀವ್ರ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶ ಮಾತ್ರವಲ್ಲದೆ, ಮೇ 2024 ರಲ್ಲಿ ರಿಸರ್ವ್ ಬ್ಯಾಂಕ್ (RBI) ಸಹ ಸಾಲಕ್ಕೆ ಸಂಬಂಧಿಸಿದ ಹಲವು ನಿಯಮ ಉಲ್ಲಂಘನೆ ಮತ್ತು ಅಕ್ರಮಗಳ ಕಾರಣದಿಂದ ECL ಫೈನಾನ್ಸ್ ಹಾಗೂ ಅದರ ಗ್ರೂಪ್ ಕಂಪನಿಯಾದ 'ಎಡೆಲ್‌ವೀಸ್ ARC' (Edelweiss ARC) ಮೇಲೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ.

Add Zee News as a Preferred Source
TAGS:
Banking
News