ಪತ್ನಿಯ ಶೀಲ ಶಂಕಿಸಿ ಕೊ*ಲೆಗೈದ ನಿವೃತ್ತ ರೈಲ್ವೆ ಉದ್ಯೋಗಿ! ಮಕ್ಕಳಿಗೆ ತಂದೆ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ
ತಾಯಿಯನ್ನ ಕಳೆದುಕೊಂಡು ಮುಂದೇನು ಎಂಬುದೇ ತಿಳಿಯದ ವಯಸ್ಸಿನಲ್ಲಿದ್ದ ಮಕ್ಕಳಿಗೆ ದಶರಥ್ ಹೇಳಿದ ಮಾತುಗಳು ಈಗ ಚರ್ಚೆಗೆ ಕಾರಣವಾಗಿವೆ. "ನಿಮ್ಮ ಅಮ್ಮ ಸತ್ತಿದ್ದಾಳೆ, ನಿಮಗೆ ಹೊಸ ಅಮ್ಮನನ್ನ ಕರೆತರುತ್ತೇನೆ" ಎಂದು ಆತ ಮಕ್ಕಳಿಗೆ ಹೇಳಿದ್ದಾನೆ ಎನ್ನಲಾಗಿದೆ.
Bihar Crime News: ಪತ್ನಿಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಪತ್ನಿಯನ್ನೇ ಹ*ತ್ಯೆಗೈದಿರುವ ಆಘಾತಕಾರಿ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನ ಕೊಂ*ದ ಬಳಿಕ ಆರೋಪಿ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಬಳಿ ಹೇಳಿದ ಮಾತುಗಳು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿವೆ. ಕೃತ್ಯ ಎಸಗಿದ ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಆತ, ಪತ್ನಿಯನ್ನ ಹ*ತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.
ಈ ಘಟನೆ ಆದರ್ಶ್ ಜಮಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ದಶರಥ್ ಮಂಡಲ್ (55) ಪತ್ನಿಯನ್ನ ಹ*ತ್ಯೆಗೈದ ಆರೋಪ ಎದುರಿಸುತ್ತಿದ್ದಾನೆ. 2015ರಲ್ಲಿ ದಶರಥ್ ಮತ್ತು ಪೂಜಾ ದೇವಿ (28) ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಖವಾಗಿ ಸಾಗಬೇಕಿದ್ದ ಕುಟುಂಬದಲ್ಲಿ ಪತಿಯ ಅನುಮಾನವೇ ದುರಂತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪತ್ನಿಯ ಮೇಲೆ ಅನುಮಾನ, ಕೊ*ಲೆಯಲ್ಲಿ ಅಂತ್ಯವಾದ ದಾಂಪತ್ಯ
ದಶರಥ್ ಮಂಡಲ್ ತನ್ನ ಪತ್ನಿ ಪೂಜಾ ದೇವಿ ಬೇರೊಬ್ಬ ವ್ಯಕ್ತಿಯೊಂದಿಗೆ ಅ*ನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಸಮಸ್ಯೆಗಳು ಉಂಟಾಗಿದ್ದವು ಎಂದು ತಿಳಿದುಬಂದಿದೆ. ಪತ್ನಿಯ ನಡತೆಯ ಬಗ್ಗೆ ಅನುಮಾನ ಹೊಂದಿದ್ದ ದಶರಥ್, ಇದೇ ಕಾರಣವನ್ನ ಮುಂದಿಟ್ಟುಕೊಂಡು ನವೆಂಬರ್ 11ರಂದು ಪೂಜಾ ದೇವಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವಿದೆ. ಈ ಹಲ್ಲೆಯ ಪರಿಣಾಮ ಪೂಜಾ ದೇವಿ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನ ಬಳಿಕ ಆರೋಪಿ ದಶರಥ್ ಮಾಡಿರುವ ನಡೆ ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ. ತನ್ನ ಕೃತ್ಯದ ಬಳಿಕ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಬಳಿಗೆ ತೆರಳಿದ ಆತ, ಅವರ ತಾಯಿಯ ಸಾವಿನ ವಿಚಾರವನ್ನ ತಿಳಿಸಿದ್ದಾನೆ.
ಮಕ್ಕಳಿಗೆ ತಂದೆ ಹೇಳಿದ ಮಾತು ಏನು?
ತಾಯಿಯನ್ನ ಕಳೆದುಕೊಂಡು ಮುಂದೇನು ಎಂಬುದೇ ತಿಳಿಯದ ವಯಸ್ಸಿನಲ್ಲಿದ್ದ ಮಕ್ಕಳಿಗೆ ದಶರಥ್ ಹೇಳಿದ ಮಾತುಗಳು ಈಗ ಚರ್ಚೆಗೆ ಕಾರಣವಾಗಿವೆ. "ನಿಮ್ಮ ಅಮ್ಮ ಸತ್ತಿದ್ದಾಳೆ, ನಿಮಗೆ ಹೊಸ ಅಮ್ಮನನ್ನ ಕರೆತರುತ್ತೇನೆ" ಎಂದು ಆತ ಮಕ್ಕಳಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಮಾತು ಹೇಳಿದ ಬಳಿಕ ದಶರಥ್ ಅಲ್ಲಿಂದ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪತ್ನಿಯನ್ನ ತಾನೇ ಹ*ತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡು ಶರಣಾಗಿದ್ದಾನೆ. ಪತ್ನಿಯ ಸಾವಿನ ಬಳಿಕ ಮಕ್ಕಳಿಗೆ ಹೊಸ ತಾಯಿಯನ್ನ ಕರೆತರುವುದಾಗಿ ಹೇಳಿರುವ ಆರೋಪಿಯ ನಡೆ ಘಟನೆಯ ಆಘಾತವನ್ನ ಮತ್ತಷ್ಟು ಹೆಚ್ಚಿಸಿದೆ.
ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ ಪೋಷಕರು
ಇನ್ನೊಂದೆಡೆ ಮೃತ ಪೂಜಾ ದೇವಿಯ ಪೋಷಕರು ದಶರಥ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ತಮ್ಮ ಮಗಳಿಗೆ ಯಾರೊಂದಿಗೂ ವಿವಾಹೇತರ ಸಂಬಂಧ ಇರಲಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಪತ್ನಿಯ ಮೇಲೆ ಅ*ನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸುತ್ತಿದ್ದ ಆರೋಪಿಯ ಆರೋಪಗಳನ್ನ ಅವರು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ ದಶರಥ್ ಮೊದಲಿನಿಂದಲೂ ವರದಕ್ಷಿಣೆಗಾಗಿ ತಮ್ಮ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪೂಜಾ ದೇವಿಯ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪತ್ನಿಯ ಮೇಲಿನ ಅನುಮಾನದ ಜೊತೆಗೆ ವರದಕ್ಷಿಣೆ ಕಿರುಕುಳದ ಆರೋಪವೂ ಮುನ್ನೆಲೆಗೆ ಬಂದಿದೆ.
ತನಿಖೆ ಆರಂಭಿಸಿದ ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಆದರ್ಶ್ ಜಮಾಲ್‌ಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ದಶರಥ್ ಮಂಡಲ್ ಪೊಲೀಸರಿಗೆ ಶರಣಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ. ಇತ್ತ ತಾಯಿಯನ್ನ ಕಳೆದುಕೊಂಡಿರುವ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಈಗ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಕುಟುಂಬದಲ್ಲಿ ನಡೆದಿರುವ ಈ ದುರಂತ ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ. ಪತ್ನಿಯ ಹ*ತ್ಯೆ, ಮಕ್ಕಳಿಗೆ ತಂದೆ ಹೇಳಿದ ಮಾತುಗಳು ಹಾಗೂ ಮೃತಳ ಪೋಷಕರು ಮಾಡಿರುವ ವರದಕ್ಷಿಣೆ ಕಿರುಕುಳದ ಆರೋಪಗಳು ಈ ಪ್ರಕರಣದ ಪ್ರಮುಖ ಅಂಶಗಳಾಗಿವೆ.