• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಪತ್ನಿಯ ಶೀಲ ಶಂಕಿಸಿ ಕೊ*ಲೆಗೈದ ನಿವೃತ್ತ ರೈಲ್ವೆ ಉದ್ಯೋಗಿ! ಮಕ್ಕಳಿಗೆ ತಂದೆ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ

ಪತ್ನಿಯ ಶೀಲ ಶಂಕಿಸಿ ಕೊ*ಲೆಗೈದ ನಿವೃತ್ತ ರೈಲ್ವೆ ಉದ್ಯೋಗಿ! ಮಕ್ಕಳಿಗೆ ತಂದೆ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ

ತಾಯಿಯನ್ನ ಕಳೆದುಕೊಂಡು ಮುಂದೇನು ಎಂಬುದೇ ತಿಳಿಯದ ವಯಸ್ಸಿನಲ್ಲಿದ್ದ ಮಕ್ಕಳಿಗೆ ದಶರಥ್ ಹೇಳಿದ ಮಾತುಗಳು ಈಗ ಚರ್ಚೆಗೆ ಕಾರಣವಾಗಿವೆ. "ನಿಮ್ಮ ಅಮ್ಮ ಸತ್ತಿದ್ದಾಳೆ, ನಿಮಗೆ ಹೊಸ ಅಮ್ಮನನ್ನ ಕರೆತರುತ್ತೇನೆ" ಎಂದು ಆತ ಮಕ್ಕಳಿಗೆ ಹೇಳಿದ್ದಾನೆ ಎನ್ನಲಾಗಿದೆ.

Written ByPuttaraj K Alur
Published: Nov 15, 2026, 14:02 IST|Updated: Nov 15, 2026, 14:22 IST
joinshare
ಪತ್ನಿಯ ಶೀಲ ಶಂಕಿಸಿ ಕೊ*ಲೆಗೈದ ನಿವೃತ್ತ ರೈಲ್ವೆ ಉದ್ಯೋಗಿ! ಮಕ್ಕಳಿಗೆ ತಂದೆ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದ ಜನ
Image Credit: Bihar Crime

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bihar Crime News: ಪತ್ನಿಯ ನಡತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಪತ್ನಿಯನ್ನೇ ಹ*ತ್ಯೆಗೈದಿರುವ ಆಘಾತಕಾರಿ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನ ಕೊಂ*ದ ಬಳಿಕ ಆರೋಪಿ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಬಳಿ ಹೇಳಿದ ಮಾತುಗಳು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿವೆ. ಕೃತ್ಯ ಎಸಗಿದ ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಆತ, ಪತ್ನಿಯನ್ನ ಹ*ತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.

ಈ ಘಟನೆ ಆದರ್ಶ್ ಜಮಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ದಶರಥ್ ಮಂಡಲ್ (55) ಪತ್ನಿಯನ್ನ ಹ*ತ್ಯೆಗೈದ ಆರೋಪ ಎದುರಿಸುತ್ತಿದ್ದಾನೆ. 2015ರಲ್ಲಿ ದಶರಥ್ ಮತ್ತು ಪೂಜಾ ದೇವಿ (28) ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಖವಾಗಿ ಸಾಗಬೇಕಿದ್ದ ಕುಟುಂಬದಲ್ಲಿ ಪತಿಯ ಅನುಮಾನವೇ ದುರಂತಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪತ್ನಿಯ ಮೇಲೆ ಅನುಮಾನ, ಕೊ*ಲೆಯಲ್ಲಿ ಅಂತ್ಯವಾದ ದಾಂಪತ್ಯ

ದಶರಥ್ ಮಂಡಲ್ ತನ್ನ ಪತ್ನಿ ಪೂಜಾ ದೇವಿ ಬೇರೊಬ್ಬ ವ್ಯಕ್ತಿಯೊಂದಿಗೆ ಅ*ನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಸಮಸ್ಯೆಗಳು ಉಂಟಾಗಿದ್ದವು ಎಂದು ತಿಳಿದುಬಂದಿದೆ. ಪತ್ನಿಯ ನಡತೆಯ ಬಗ್ಗೆ ಅನುಮಾನ ಹೊಂದಿದ್ದ ದಶರಥ್, ಇದೇ ಕಾರಣವನ್ನ ಮುಂದಿಟ್ಟುಕೊಂಡು ನವೆಂಬರ್ 11ರಂದು ಪೂಜಾ ದೇವಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವಿದೆ. ಈ ಹಲ್ಲೆಯ ಪರಿಣಾಮ ಪೂಜಾ ದೇವಿ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನ ಬಳಿಕ ಆರೋಪಿ ದಶರಥ್ ಮಾಡಿರುವ ನಡೆ ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ. ತನ್ನ ಕೃತ್ಯದ ಬಳಿಕ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಬಳಿಗೆ ತೆರಳಿದ ಆತ, ಅವರ ತಾಯಿಯ ಸಾವಿನ ವಿಚಾರವನ್ನ ತಿಳಿಸಿದ್ದಾನೆ.

ಮಕ್ಕಳಿಗೆ ತಂದೆ ಹೇಳಿದ ಮಾತು ಏನು?

ತಾಯಿಯನ್ನ ಕಳೆದುಕೊಂಡು ಮುಂದೇನು ಎಂಬುದೇ ತಿಳಿಯದ ವಯಸ್ಸಿನಲ್ಲಿದ್ದ ಮಕ್ಕಳಿಗೆ ದಶರಥ್ ಹೇಳಿದ ಮಾತುಗಳು ಈಗ ಚರ್ಚೆಗೆ ಕಾರಣವಾಗಿವೆ. "ನಿಮ್ಮ ಅಮ್ಮ ಸತ್ತಿದ್ದಾಳೆ, ನಿಮಗೆ ಹೊಸ ಅಮ್ಮನನ್ನ ಕರೆತರುತ್ತೇನೆ" ಎಂದು ಆತ ಮಕ್ಕಳಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಮಾತು ಹೇಳಿದ ಬಳಿಕ ದಶರಥ್ ಅಲ್ಲಿಂದ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪತ್ನಿಯನ್ನ ತಾನೇ ಹ*ತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡು ಶರಣಾಗಿದ್ದಾನೆ. ಪತ್ನಿಯ ಸಾವಿನ ಬಳಿಕ ಮಕ್ಕಳಿಗೆ ಹೊಸ ತಾಯಿಯನ್ನ ಕರೆತರುವುದಾಗಿ ಹೇಳಿರುವ ಆರೋಪಿಯ ನಡೆ ಘಟನೆಯ ಆಘಾತವನ್ನ ಮತ್ತಷ್ಟು ಹೆಚ್ಚಿಸಿದೆ.

ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ ಪೋಷಕರು

ಇನ್ನೊಂದೆಡೆ ಮೃತ ಪೂಜಾ ದೇವಿಯ ಪೋಷಕರು ದಶರಥ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ತಮ್ಮ ಮಗಳಿಗೆ ಯಾರೊಂದಿಗೂ ವಿವಾಹೇತರ ಸಂಬಂಧ ಇರಲಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಪತ್ನಿಯ ಮೇಲೆ ಅ*ನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸುತ್ತಿದ್ದ ಆರೋಪಿಯ ಆರೋಪಗಳನ್ನ ಅವರು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ ದಶರಥ್ ಮೊದಲಿನಿಂದಲೂ ವರದಕ್ಷಿಣೆಗಾಗಿ ತಮ್ಮ ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪೂಜಾ ದೇವಿಯ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪತ್ನಿಯ ಮೇಲಿನ ಅನುಮಾನದ ಜೊತೆಗೆ ವರದಕ್ಷಿಣೆ ಕಿರುಕುಳದ ಆರೋಪವೂ ಮುನ್ನೆಲೆಗೆ ಬಂದಿದೆ.

ತನಿಖೆ ಆರಂಭಿಸಿದ ಪೊಲೀಸರು

ಘಟನೆಗೆ ಸಂಬಂಧಿಸಿದಂತೆ ಆದರ್ಶ್ ಜಮಾಲ್‌ಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ದಶರಥ್ ಮಂಡಲ್ ಪೊಲೀಸರಿಗೆ ಶರಣಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ. ಇತ್ತ ತಾಯಿಯನ್ನ ಕಳೆದುಕೊಂಡಿರುವ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಈಗ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಕುಟುಂಬದಲ್ಲಿ ನಡೆದಿರುವ ಈ ದುರಂತ ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ. ಪತ್ನಿಯ ಹ*ತ್ಯೆ, ಮಕ್ಕಳಿಗೆ ತಂದೆ ಹೇಳಿದ ಮಾತುಗಳು ಹಾಗೂ ಮೃತಳ ಪೋಷಕರು ಮಾಡಿರುವ ವರದಕ್ಷಿಣೆ ಕಿರುಕುಳದ ಆರೋಪಗಳು ಈ ಪ್ರಕರಣದ ಪ್ರಮುಖ ಅಂಶಗಳಾಗಿವೆ.

Add Zee News as a Preferred Source
TAGS:
Crime
Kannada News