• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಪೋಷಕರ ರೀಲ್ಸ್ ಹುಚ್ಚು.. ಸಾಗರದ ಅಲೆಗಳಿಗೆ ಕೊಚ್ಚಿ ಹೋದ ಕಂದಮ್ಮ..! ಭಯಾನಕ ವಿಡಿಯೋ ವೈರಲ್‌

ಪೋಷಕರ ರೀಲ್ಸ್ ಹುಚ್ಚು.. ಸಾಗರದ ಅಲೆಗಳಿಗೆ ಕೊಚ್ಚಿ ಹೋದ ಕಂದಮ್ಮ..! ಭಯಾನಕ ವಿಡಿಯೋ ವೈರಲ್‌

ಲೈಕ್ಸ್ ಮತ್ತು ವ್ಯೂಸ್‌ ಹುಚ್ಚು ಜನರ ಪ್ರಾಣವನ್ನೇ ಪಣಕ್ಕಿಡುವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೀಚ್‌ನಲ್ಲಿ ಪೋಷಕರು ರೀಲ್ಸ್ ಮಾಡುವುದರಲ್ಲಿ ಮಗ್ನರಾಗಿದ್ದಾಗ, ದೊಡ್ಡ ಅಲೆಯಲ್ಲಿ ಕಂದಮ್ಮನೊಂದು ಕೊಚ್ಚಿಹೋಗಿರುವ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ..

Written ByKrishna NK
Published: Nov 07, 2026, 17:25 IST|Updated: Nov 07, 2026, 17:28 IST
joinshare
ಪೋಷಕರ ರೀಲ್ಸ್ ಹುಚ್ಚು.. ಸಾಗರದ ಅಲೆಗಳಿಗೆ ಕೊಚ್ಚಿ ಹೋದ ಕಂದಮ್ಮ..! ಭಯಾನಕ ವಿಡಿಯೋ ವೈರಲ್‌
Image Credit: Viral News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Viral News : ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಳಿಸುವ ಹುಚ್ಚು ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ರೀಲ್ಸ್ ಮಾಡುವ ಹುಚ್ಚಿನಲ್ಲಿ ಜನ ತಮ್ಮ ಪ್ರಾಣವನ್ನಷ್ಟೇ ಅಲ್ಲ, ಜಾಗರೂಕರಾಗಿರಬೇಕಾದ ಕಂದಮ್ಮಗಳ ಪ್ರಾಣವನ್ನೂ ಪಣಕ್ಕಿಡುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ನಿದರ್ಶನ ಬೆಳಕಿಗೆ ಬಂದಿದೆ. ಹೌದು, ಬೀಚ್‌ವೊಂದರಲ್ಲಿ ಪೋಷಕರು ರೀಲ್ಸ್ ಮಾಡುವುದರಲ್ಲಿ ಮಗ್ನರಾಗಿದ್ದಾಗ, ದೊಡ್ಡ ಅಲೆಯಲ್ಲಿ ಮಗು ಕೊಚ್ಚಿಹೋಗಿರುವ ಭೀಕರ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಎದೆಯಲ್ಲಿ ನಡುಕು ಹುಟ್ಟಿಸಿದೆ.

ಸದ್ಯ ವೈರಲ್ ಆಗುತ್ತಿರುವ ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿರುವ ದಂಪತಿಗಳು ತಮ್ಮ ಫೋನ್‌ನಲ್ಲಿ ರೀಲ್ಸ್ ವಿಡಿಯೋ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸುತ್ತಮುತ್ತಲಿನ ಸೌಂದರ್ಯವನ್ನು ಸೆರೆಹಿಡಿಯುವ ಭರದಲ್ಲಿ ಅವರು ತಮ್ಮ ಜೊತೆಯಲ್ಲಿದ್ದ ಕಂದಮ್ಮನ ಕಡೆ ಗಮನವನ್ನೇ ಹರಿಸುವುದಿಲ್ಲ. ಮಗು ತೀರದ ಬಳಿ ಆಟವಾಡುತ್ತಾ ಅಥವಾ ಮಲಗಿಕೊಂಡಿರುವ ಸಂದರ್ಭದಲ್ಲಿ, ಸಮುದ್ರದಿಂದ ಅನಿರೀಕ್ಷಿತವಾಗಿ ಬಂದ ಒಂದು ದೊಡ್ಡ ರಭಸದ ಅಲೆ ಮಗುವಿನ ಮೇಲೆರಗುತ್ತದೆ. ನೀರಿನ ಅಲೆಗೆ ಮಗು ಕ್ಷಣಮಾತ್ರದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತದೆ.

ಅದೃಷ್ಟವಶಾತ್, ಅದೇ ಸಮೀಪದಲ್ಲಿದ್ದ ಮತ್ತೊಬ್ಬ ವ್ಯಕ್ತಿ ತಕ್ಷಣವೇ ಎಚ್ಚೆತ್ತುಕೊಂಡು, ಪ್ರಾಣಾಪಾಯದಿಂದ ಮಗುವನ್ನು ರಕ್ಷಿಸಲು ಓಡಿಬಂದು ಕಂದಮ್ಮನನ್ನು ನೀರಿನಿಂದ ಮೇಲೆತ್ತುತ್ತಾನೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಆ ಮಗುವಿನ ಜೀವವೇ ಹೋಗುತ್ತಿತ್ತು. ಆದರೆ, ಆಶ್ಚರ್ಯ ಮತ್ತು ಅಚ್ಚರಿಯ ಸಂಗತಿಯೆಂದರೆ, ಮಗು ಅಲೆಗೆ ಸಿಲುಕಿ ಒದ್ದಾಡುತ್ತಿದ್ದರೂ, ಹಾಗೂ ಇನ್ನೊಬ್ಬರು ಬಂದು ಮಗುವನ್ನು ರಕ್ಷಿಸುತ್ತಿದ್ದರೂ ಈ ಪೋಷಕರಿಗೆ ಮಾತ್ರ ರೀಲ್ಸ್ ಮಾಡುವುದೇ ಮುಖ್ಯವಾಗಿತ್ತು. ತಮ್ಮ ಮಗುವಿಗೆ ಅಪಾಯವಾಗುತ್ತಿದ್ದರೂ, ಅದನ್ನು ನಿರ್ಲಕ್ಷಿಸಿ ವಿಡಿಯೋ ಮಾಡುವುದರಲ್ಲಿಯೇ ಮುಳುಗಿದ್ದ ಇವರ ವರ್ತನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Reels के चक्कर में मां बाप बच्चे को ही भूल गए... भला हो उस आदमी का जिसने समय रहते पकड़ लिया.. https://t.co/0uLjTUF4C6

— Ajay shah (@Er_Ajayshah) October 19, 2026

 ಇಂದಿನ ಯುವಜನತೆ ಮತ್ತು ಪೋಷಕರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ರೀಲ್ಸ್ ಮಾಡಲು ಹೋಗಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ಎಲ್ಲಿಗೆ ಹೋದರೂ ಮೊಬೈಲ್ ಕ್ಯಾಮೆರಾ ಹಿಡಿದು ರೀಲ್ಸ್ ಮಾಡುವುದೇ ಎಲ್ಲದಕ್ಕಿಂತ ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ. ಸಣ್ಣದೊಂದು ನಿರ್ಲಕ್ಷ್ಯ ಅಥವಾ ಕಣ್ಣುತಪ್ಪಿದರೂ ಎಷ್ಟು ದೊಡ್ಡ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಮಕ್ಕಳನ್ನು ಕರೆದುಕೊಂಡು ಬೀಚ್ ಅಥವಾ ಪ್ರವಾಸಿ ತಾಣಗಳಿಗೆ ಹೋದಾಗ ಪೋಷಕರು ತಮ್ಮ ಸಂಪೂರ್ಣ ಗಮನವನ್ನು ಮಕ್ಕಳ ಮೇಲಿಡಬೇಕು ಹೊರತು ಮೊಬೈಲ್ ಸ್ಕ್ರೀನ್ ಮೇಲಲ್ಲ ಎಂದು ಈ ಘಟನೆ ಎಚ್ಚರಿಕೆ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡ ಬಳಿಕ ನೆಟ್ಟಿಗರು ಆ ಪೋಷಕರ ಬೇಜವಾಬ್ದಾರಿತನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. "ಇಂಥವರಿಗೆ ಮಕ್ಕಳನ್ನು ಕಳಕೊಳ್ಳುವ ಯೋಗ್ಯತೆಯೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೀಲ್ಸ್ ಕ್ರೇಜ್ ಜನರ ಕಣ್ಣು ಕುರುಡು ಮಾಡಿದೆ ಎಂಬುದಕ್ಕೆ ಈ ವಿಡಿಯೋ ಒಂದು ಕಣ್ಣಾಡಿಸುವ ಉದಾಹರಣೆಯಾಗಿದೆ. ದಯವಿಟ್ಟು ಪೋಷಕರು ಎಚ್ಚೆತ್ತುಕೊಳ್ಳಿ, ನಿಮ್ಮ ಮೋಜು-ಮಸ್ತಿಗೆ ಮಕ್ಕಳ ಜೀವವನ್ನು ಬಲಿ ಕೊಡಬೇಡಿ.

Add Zee News as a Preferred Source
TAGS:
Viral