• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /ತಂದೆಗೆ ಲಕ್ಷ ಲಕ್ಷ ಸಂಬಳ ಕೊಡುವ AI ಬಾಲಕ.. ಕಂಪನಿ ಸ್ಥಾಪನೆ, ಈ ಎಐ ಕಿಡ್‌ನ ಟ್ಯಾಲೆಂಟ್‌ ಏನು?

ತಂದೆಗೆ ಲಕ್ಷ ಲಕ್ಷ ಸಂಬಳ ಕೊಡುವ AI ಬಾಲಕ.. ಕಂಪನಿ ಸ್ಥಾಪನೆ, ಈ ಎಐ ಕಿಡ್‌ನ ಟ್ಯಾಲೆಂಟ್‌ ಏನು?

ಬಾಲಕನ ಇನ್ನೊಂದು ವಿಶೇಷ ಎಂದರೆ ತನ್ನ ಕಂಪನಿಯಲ್ಲಿಯೇ ತನ್ನ ತಂದೆಗೆ ಕೆಲಸ ಕೊಟ್ಟು ತಿಂಗಳು..ತಿಂಗಳು ಸ್ಯಾಲರಿ ಕೂಡ ಪೇ ಮಾಡುತ್ತಿದ್ದಾನೆ. ಇಷ್ಟಕ್ಕೂ ಆ ಬಾಲಕ ಯಾರು, ತಂದೆಗೆ ತನ್ನ ಕಂಪನಿಯಲ್ಲಿಯೇ ಕೆಲಸ ಕೊಟ್ಟು ಸ್ಯಾಲರಿ ಕೊಡುವ ಮಗ ಯಾರು?,

Reported ByBhimappaEdited ByBhimappa
Published: Sep 17, 2026, 07:15 AM IST|Updated: Sep 17, 2026, 10:34 AM IST
joinshare
ತಂದೆಗೆ ಲಕ್ಷ ಲಕ್ಷ ಸಂಬಳ ಕೊಡುವ AI ಬಾಲಕ.. ಕಂಪನಿ ಸ್ಥಾಪನೆ, ಈ ಎಐ ಕಿಡ್‌ನ ಟ್ಯಾಲೆಂಟ್‌ ಏನು?
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಉದ್ಯೋಗ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಅದರಲ್ಲಿ ಇಂದಿನ ದಿನಮಾನಗಳಲ್ಲಿ ಹುದ್ದೆಗಳು ಸಿಗದೇ ಎಷ್ಟೋ ಯುವಕರು ನಿರುದ್ಯೋಗಿಗಳು ಆಗುತ್ತಿದ್ದಾರೆ. ಪಿಯುಸಿಯಿಂದ ಪಿಹೆಚ್‌ಡಿವರೆಗೆ ಕೋರ್ಸ್‌ಗಳನ್ನು ಪೂರ್ಣಗೊಳಿಸಿದರು ಯಾವುದೇ ಕೆಲಸ ಮಾತ್ರ ಸಿಗುತ್ತಿಲ್ಲ. ಅಂದರೆ ಓದಿಗೆ ತಕ್ಕಂತೆ ಕೆಲಸಗಳು ಇಲ್ಲದೇ, ಕೆಲಸನೇ ಸಿಗದೇ ಎಷ್ಟೋ ಪದವಿ, ಪಿಹೆಚ್‌ಡಿ ಅಭ್ಯರ್ಥಿಗಳು ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನು ಕೆಲವರು ಉದ್ಯೋಗಗಳನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸರಿಯಾದ ಸಮಯಕ್ಕೆ ಉದ್ಯೋಗ ಸೃಷ್ಟಿಯಾಗದೇ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದರೂ ಸರ್ಕಾರದಿಂದ ಯಾವುದೇ ಕ್ರಮಗಳು ಆಗದೇ ವರ್ಷದಿಂದ ವರ್ಷಕ್ಕೆ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಅಧಿಕವಾಗುತ್ತಿದೆ.

ಜೀವನದ ಆರ್ಥಿಕಕತೆಯನ್ನು ಸಮತೋಲನಗೊಳಿಸಬೇಕು ಎಂದರೆ ಉದ್ಯೋಗವು ಪ್ರಮುಖವಾಗಿರುತ್ತದೆ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸೃಷ್ಟಿಯಾದರೂ ಅದು ಯಾವಾಗ ಇಲ್ಲದಂತೆ ಆಗುತ್ತದೆ ಎನ್ನುವುದು ಓದಿದವರ ಚಿಂತೆ ಆಗಿರುತ್ತದೆ. ದೊಡ್ಡ ಮಟ್ಟದ ಸ್ಯಾಲರಿ ಕೊಟ್ಟರೂ ಕಂಪನಿ ಆರ್ಥಿಕತೆ ಕುಸಿದು ಹೋದರೆ ಅಲ್ಲಿ ಕೆಲಸ ಮಾಡುವ ಎಲ್ಲರೂ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಷ್ಟೆಲ್ಲ ಇದ್ದರೂ ಇಂದಿನ ಯುವ ಸಮುದಾಯಕ್ಕೆ ಸೆಡ್ಡು ಹೊಡೆದ ಬಾಲಕನೊಬ್ಬ ತಂದೆಗೆ ಲಕ್ಷ ಲಕ್ಷ ರೂಪಾಯಿಗಳು ಸಂಬಳ ನೀಡುತ್ತಿದ್ದಾರೆ. ಇದು ಏನೋ ಬೇರೆ ದೇಶದಲ್ಲಿ ಏನು, ನಮ್ಮ ಭಾರತದಲ್ಲಿ ಎಐ ಕಿಡ್‌ ಎಲ್ಲರ ಗಮನ ಸೆಳೆಯುತ್ತಿದ್ದಾರೆ.    

16 ವರ್ಷದ ಬಾಲಕನೊಬ್ಬ ತನ್ನ ಸ್ವಂತ ದುಡಿಮೆಯಿಂದ ಕಂಪನಿಯನ್ನೇ ಸ್ಥಾಪನೆ ಮಾಡಿದ್ದಾನೆ ಎಂದರೆ ನೀವು ನಂಬುತೀರಾ?. ಇಲ್ಲಿ ನೀವು ನಂಬಲೇಬೇಕು. ಈ ಬಾಲಕನ ಇನ್ನೊಂದು ವಿಶೇಷ ಎಂದರೆ ತನ್ನ ಕಂಪನಿಯಲ್ಲಿಯೇ ತನ್ನ ತಂದೆಗೆ ಕೆಲಸ ಕೊಟ್ಟು ತಿಂಗಳು..ತಿಂಗಳು ಸ್ಯಾಲರಿ ಕೂಡ ಪೇ ಮಾಡುತ್ತಿದ್ದಾನೆ. ಇಷ್ಟಕ್ಕೂ ಆ ಬಾಲಕ ಯಾರು, ತಂದೆಗೆ ತನ್ನ ಕಂಪನಿಯಲ್ಲಿಯೇ ಕೆಲಸ ಕೊಟ್ಟು ಸ್ಯಾಲರಿ ಕೊಡುವ ಮಗ ಯಾರು?, ಕಂಪನಿ ಹೇಗೆ ನಿರ್ಮಿಸಿದ ಎನ್ನುವ ಮಾಹಿತಿ ಇಲ್ಲಿದೆ.

ಕೇರಳದ‌ ಕೊಚ್ಚಿ ನಗರದ AI ಕಿಡ್ ರೌಲ್‌ ಜಾನ್‌ ಅಜು ಈ ಬಾಲಕನಿಗೆ ಇನ್ನೂ ಕೇವಲ 16 ವರ್ಷ ಮಾತ್ರ. ಈ ಬಾಲಕನು ಇದೀಗ 12 ನೇ ತರಗತಿಯಲ್ಲಿಯಲ್ಲಿ ವಾಣಿಕ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಾಲೇಜು ವಿದ್ಯಾರ್ಥಿಯಾಗಿರುವ ಈ ಬಾಲಕ ಈಗಾಗಲೇ ಉದ್ಯಮಿಯಾಗಿದ್ದಾನೆ. ವ್ಯಾಸಂಗ ಮಾಡುತ್ತಲೇ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ. ಕಾಲೇಜಿನಲ್ಲಿ ಕಾಮರ್ಸ್‌ ವಿದ್ಯಾರ್ಥಿಯಾಗಿರುವ ಈ ಬಾಲಕನ ಗಮನ ಎಐ ಕಡೆಗೆ ಸೆಳೆಯಿತು. ಓದುತ್ತಲೇ ಎಐ ತಂತ್ರಜ್ಞಾನದ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿ ಅದನ್ನು ಕರಗತ ಮಾಡಿಕೊಳ್ಳುತ್ತ ಸಾಗಿದರು. ಇದೇ ಪ್ರಯತ್ನ ಅವರಿಗೆ ಇಂದು ಉದ್ಯೋಗ ಸೃಷ್ಟಿಸಲು ಮತ್ತು ತಾನೊಬ್ಬ ಉದ್ಯಮಿಯಾಗಲು ನೆರವಾಗಿದೆ.    

ಕೊಚ್ಚಿ AI ಕಿಡ್ ರೌಲ್‌ ಜಾನ್‌ ಅಜು ಅವರ ತಂದೆ ಅಜು ಜೋಸೆಫ್ ಒಬ್ಬರು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ತಂದೆ ಅಜು ಜೋಸೆಫ್ ಅವರು ಅಡೊಬ್‌, ಅಮೆಜಾನ್‌, ವಿಪ್ರೋದಂತಹ ಬೃಹತ್‌ ಕಂಪನಿಗಳಲ್ಲಿ ಉನ್ನತ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಇಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದರೂ ಕೊನೆಗೆ ಮಗನ ಕಂಪನಿಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದರು. ಅದರಂತೆ ಮಗ, ತಂದೆ ಮನವಿಗೆ ಉದ್ಯೋಗವನ್ನು ಕೊಟ್ಟಿದ್ದಾನೆ. ಅಷ್ಟೇ ಅಲ್ಲ ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ಸಂಬಳ ಕೂಡ ಕೊಡುತ್ತಿದ್ದಾರೆ. ಮಗ ಉದ್ಯಮಿಯಾದರೆ, ತಂದೆ ಈಗಲೂ ಕಾರ್ಮಿಕ ಎನ್ನಬಹುದು.

ಚಿಕ್ಕ ವಯಸ್ಸಿನಲ್ಲಿಯೇ ರೌಲ್‌ ಜಾನ್‌ ಅಜು ಅವರು ಎಐ ತಂತ್ರಜ್ಞಾನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದನು. ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಯಾಓಗಿಕವಾಗಿ ಎಲ್ಲವನ್ನು ಕಲಿತನು. ಓದುವುದಕ್ಕಿಂತ ಮಾಡಿ ನೋಡುವುದು ಎಲ್ಲರಿಗೆ ಹೆಚ್ಚಿನದ್ದನ್ನ ಕಲಿಸುತ್ತದೆ ಎನ್ನಬಹುದು. ತನ್ನ 9 ವಯಸ್ಸಿನಿಂದಲೇ ವಿಡಿಯೋ ಎಡಿಟ್‌ ಮಾಡುವುದು ಕಲಿತುಕೊಂಡಿದ್ದನು. ಮನೆಯಲ್ಲಿ, ಕಂಪನಿಯಲ್ಲಿ ಅಪ್ಪ ಅಡೋಬ್‌ ಕೆಲಸ ಮಾಡುತ್ತಿದ್ದರಿಂದ ಮಗನಿಗೆ ಇದನ್ನು ಕಲಿಯಲು ಅಷ್ಟು ಸಮಸ್ಯೆ ಏನು ಅನಿಸಲಿಲ್ಲ. ರೌಲ್‌ ಜಾನ್‌ ಅಜುಗೆ ಪ್ರೀಮಿಯಂ ಟೂಲ್‌ಗಳ ಕುರಿತು ಸುಲಭವಾಗಿ ಮಾಹಿತಿ ಸಿಕ್ಕಿತು. ಇದರಿಂದ AI ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ರೌಲ್‌ ಜಾನ್‌ ಅಜು ಸಾಕಷ್ಟು ತಿಳಿದುಕೊಂಡನು.

ಶಾಲೆಯಲ್ಲಿ ಓದುವಾಗಲೇ ರೌಲ್‌ ಜಾನ್‌ ಅಜು ಅಸೆಮೆಂಟ್‌ನಲ್ಲಿ ತನ್ನದೇ ಶೈಲಿಯಲ್ಲಿ ಮಾಡಿದ್ದರು. ಅಂದರೆ MeBot ಎನ್ನುವ ರೋಬೋಟ್‌ ತಯಾರು ಮಾಡಿದ್ದರು. ಇದಕ್ಕೆ ಶಾಲೆಯಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಎಲ್ಲ ಕಲಿತಿರುವ ರೌಲ್‌ ಜಾನ್‌ ಅಜು ಅವರು, ಈಗ AI ರಿಯಲ್ಮ್‌ ಟೆಕ್ನಾಲಜೀಸ್‌ ಸ್ಟಾರ್ಟಾಪ್‌ ಕಂಪನಿಯನ್ನು ಓಪನ್‌ ಮಾಡಿದ್ದಾರೆ. ಈ ಕಂಪನಿಯಲ್ಲಿ 15ಕ್ಕೂ ಹೆಚ್ಚು ಟೂಲ್‌ಗಳನ್ನು ಅಭಿವೃದ್ಧಿ ಪಡಿಸಿ ಕೆಲಸ ಕೊಟ್ಟಿದ್ದಾರೆ. ಬಿಸಿನೆಸ್‌ ಕನ್ಸಲ್ಟಿಂಗ್‌, AI ಸಲ್ಯೂಷನ್‌ ಡೆವಲಪ್‌ಮೆಂಟ್‌ ಮತ್ತು ಥಿಂಕ್‌ಕ್ರಾಫ್ಟ್‌ ಅಕಾಡೆಮಿ ಕಂಪನಿಯ ಪ್ರಮುಖ ಕಾರ್ಯಕ್ಷೇತ್ರಗಳು. ಥಿಂಕ್‌ಕ್ರಾಫ್ಟ್‌ ಅಕಾಡೆಮಿ ವಿದ್ಯಾರ್ಥಿ ಮತ್ತು ವೃತ್ತಿಪರರಿಗೆ ಕೃತಕ ಬುದ್ಧಿಮತ್ತೆಯ ತರಬೇತಿಯನ್ನ ನೀಡುತ್ತದೆ. ಇದರಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ತರಬೇತಿಯನ್ನ ಪಡೆದಿದ್ದಾರಂತೆ.  

ರೌಲ್‌ ಜಾನ್‌ ಅಜು ಬದುಕಿನ ವಿಶೇಷತೆ ಎಂದರೆ ಅಪ್ಪನಿಗೆ ಕಂಪನಿಯಲ್ಲಿ ಕೆಲಸ ಕೊಟ್ಟಿರುವುದು. ಮಗನೇ ತಂದೆಗೆ ಕೆಲಸ ಕೊಟ್ಟು ತಿಂಗಳಿಗೆ ಎರಡು ಲಕ್ಷ ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದ್ದಾರೆ. ತಂದೆಗೆ ಉದ್ಯೋಗ ಕೊಡುವ ಮುಖ್ಯವಾದ ಕಾರಣ ಎಂದರೆ ಅವರಿಗೆ ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಇದೇ ಅನುಭವ ಆಧಾರದ ಮೇಲೆಯೇ ಅವರಿಗೆ ದೊಡ್ಡ ಮೊತ್ತದ ಸ್ಯಾಲರಿಯನ್ನು ನೀಡಲಾಗುತ್ತಿದೆ. ವರ್ಷಕ್ಕೆ 24 ಲಕ್ಷ ರೂಪಾಯಿ ಸಂಬಳವನ್ನು ನೀಡುತ್ತಿದ್ದಾರೆ. ಈ ಬಾಲಕನ ಏಳಿಗೆ ಈಗಿನ ಯುವಕರಿಗೆ ಸಾಕಷ್ಟು ಸ್ಪೂರ್ತಿ ನೀಡುತ್ತಿದೆ ಎನ್ನಬಹುದು.

ರೌಲ್‌ ಜಾನ್‌ ಅಜು ಅವರು ನವೋದ್ಯಮ ಎಐ ಟೆಕ್ನಾಲಜೀಸ್‌, ಥಿಂಕ್‌ಕ್ರಾಫ್ಟ್‌ ಅಕಾಡೆಮಿಯನ್ನು ನಡೆಸುತ್ತಿದೆ. ಅಲ್ಲಿ ಐಐಟಿಗಳು, ಉನ್ನತ ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳ ವಿದ್ಯಾರ್ಥಿಗಳು ತಮ್ಮ ಫೋನ್‌ಗಳಲ್ಲಿ ಆಟವಾಡುವಷ್ಟೇ ಸುಲಭವಾಗಿ ಎಐ ಸ್ಕಿಲ್‌ಗಳನ್ನು ಪಡೆದುಕೊಳ್ಳುತ್ತಾರೆ. ರೌಲ್‌ ಜಾನ್‌ ಅಜು ಅವರು RESQ AI, MeBot, ZapGap, Investo AI ಮತ್ತು FeedFye ಸೇರಿದಂತೆ 15 ಎಐ ಟೂಲ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇವೆಲ್ಲವೂ ಈಗನ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇದೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹುಡುಗನ ಸಾಧನೆ ಆಗಿದೆ. ಶಾಲಾ- ಕಾಲೇಜುಗಳಲ್ಲಿ ಓದು ವಿದ್ಯಾರ್ಥಿಗಳಿಗೆ ರೌಲ್‌ ಜಾನ್‌ ಅಜು ಸ್ಪೂರ್ತಿಯಾಗಿದ್ದಾರೆ.   
 

Add Zee News as a Preferred Source
TAGS:
Digital India