SOCIAL MEDIA

Newsletter

PARTNER SITES
Select Language Select State

PM Modi Birthday; ಭಾರತದ ಶರವೇಗದ ಡಿಜಿಟಲ್‌ ಪ್ರಯಾಣ.. ಪ್ರಧಾನಿ ಮೋದಿಯ ಕ್ರಾಂತಿಕಾರಿ ಬದಲಾವಣೆಗಳು

ಭಾರತ ಸರ್ಕಾರದ ರಾಷ್ಟ್ರೀಯ ಹಣಕಾಸು ಸೇರ್ಪಡೆ ಕಾರ್ಯಕ್ರಮವಾಗಿದೆ. ಯಾವುದೇ ಕನಿಷ್ಠ ಮೊತ್ತದ ಶುಲ್ಕ ಇಲ್ಲದೇ ಉಳಿತಾಯ ಖಾತೆಯನ್ನು ಓಪನ್‌ ಮಾಡಬಹುದು. ರುಪೇ ಡೆಬಿಟ್‌ ಕಾರ್ಡ್‌ ಉಚಿತವಾಗಿ ನೀಡಲಾಗುತ್ತದೆ.

Reported By Bhimappa Written By Bhimappa
Published: Sep 16, 2026, 06:16 PM IST | Updated: Sep 16, 2026, 06:30 PM IST
Image Credit: File Photo
Join

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ 76ನೇ ವರ್ಷಕ್ಕೆ ಕಾಲಿಡುತ್ತಿದ್ದು ಭಾರತೀಯ ಜನಾತ ಪಾರ್ಟಿ ಅಂದರೆ ಬಿಜೆಪಿಯು ದೇಶದೆಲ್ಲೆಡೆ ಅವರ ಬರ್ತ್‌ಡೇಯನ್ನು ಆಚರಣೆ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ವಿಶ್ವದಲ್ಲಿ ಭಾರತವೂ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ದೇಶದ ಆರ್ಥಿಕತೆಯೂ ಸುಧಾರಣೆಯಲ್ಲಿದ್ದು ಮೊದಲಿನಿಂದಲೂ ಸ್ವದೇಶಿ ಹೂಡಿಕೆಗಳಿಗೆ ಹೊತ್ತು ನೀಡಲಾಗುತ್ತಿದೆ. ಇದು ಅಲ್ಲದೇ ಡಿಜಿಟಲ್‌ನಲ್ಲೂ ಸಾಕಷ್ಟು ಅಭಿವೃದ್ಧಿ ಸಾಧಿಸಿರುವುದು ನರೇಂದ್ರ ಮೋದಿ ಅವರ ಕೊಡುಗೆ ಅನ್ನಬಹುದು. 

ಜನರು ಎಲ್ಲ ಕೆಲ ವರ್ಷಗಳ ಹಿಂದೆ ಬ್ಯಾಂಕ್ ಮತ್ತು ಸರ್ಕಾರಿ ಕೆಲಸಗಳಿಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವುದು ಸಾಮಾನ್ಯವಾಗಿತ್ತು. ಇಂದು, ಆ ಕೆಲಸ ಮೊಬೈಲ್‌ನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಮಾಡಿ ಮುಗಿಸಬಹುದು. QR ಕೋಡ್‌ಗಳೊಂದಿಗೆ ಪಾವತಿಗಳು, ಫೋನ್‌ನಲ್ಲಿ ದಾಖಲೆಗಳು ಅಥವಾ ಮನೆಯಲ್ಲಿ ಕುಳಿತು ಸರ್ಕಾರಿ ಸೇವೆಗಳನ್ನು ಮಾಡಬಹುದು. ಈ ಬದಲಾವಣೆಗಳಲ್ಲಿ ಪ್ರಧಾನಿ ಮೋದಿ ಅವರ ಕಾರ್ಯ ಬಹುಮುಖ್ಯವಾಗಿ ಕಾಣುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಡಿಜಿಟಲ್ ಇಂಡಿಯಾದ ವಿಸ್ತರಣೆಯು ಅದರ ಒಂದು ಭಾಗವಾಗಿದೆ. ಈ ಉಪಕ್ರಮದ ಹಿಂದೆ ಸರ್ಕಾರ, ವ್ಯವಸ್ಥೆ, ಬ್ಯಾಂಕುಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ಪಾತ್ರವಿದೆ. ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದ್ದು ಅವರ ಜಾರಿಗೆ ತಂದ ಡಿಜಿಟಲ್ ಪ್ರಯಾಣ ಭಾರತದಲ್ಲಿ ಹೇಗಿದೆ?.

ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ ಅಥವಾ UPI; ಭಾರತದಲ್ಲಿ ಹಣ ರವಾನೆ ಮಾಡುವಲ್ಲಿ ಮಹತ್ತರ ಬದಲಾವಣೆ ತಂದಿರುವುದು ಈ ಯುಪಿಐ. ಕೆಲವೇ ಸೆಕೆಂಡ್‌ಗಳಲ್ಲಿ ದೇಶದ ಯಾವ ಮೂಲೆಗಾದರೂ ಹಣವನ್ನು ಕಳುಹಿಸುವಂತಹ ಡಿಜಿಟಲ್‌ ಸೇವೆ. UPIನ ಪೈಲಟ್ ಉಡಾವಣೆಯನ್ನು 2016ರ ಏಪ್ರಿಲ್ 11 ರಂದು ಮಾಡಲಾಯಿತು. NPCI ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು ಬ್ಯಾಂಕ್ ಖಾತೆಗಳ ನಡುವೆ ತ್ವರಿತ ಪಾವತಿಗಳನ್ನು ಸುಲಭ ಮತ್ತು ವೇಗ ಗಳಿಸಿತು. ಇವತ್ತಿನ ದಿನಗಳಲ್ಲಿ ಮೊಬೈಲ್ ಸಂಖ್ಯೆ ಅಥವಾ QR ಕೋಡ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಯಾರಿಗಾದರೂ ನೀವು ಪಾವತಿ ಮಾಡಬಹುದು.

ಡಿಜಿಟಲ್ ಪಾವತಿಗಳು; UPI, BHIM, RuPay ಮತ್ತು ಇತರ ಡಿಜಿಟಲ್ ಪಾವತಿ ವ್ಯವಸ್ಥೆಗಳು ನಗದು ರಹಿತ ವಹಿವಾಟುಗಳನ್ನು ಪ್ರೋತ್ಸಾಹಿಸಿವೆ. ಇವುಗಳಿಂದಲೇ ಇಂದು ದೊಡ್ಡ ವ್ಯವಹಾರಗಳಿಂದ ಹಿಡಿದು ಸಣ್ಣ ಅಂಗಡಿಯವರವರೆಗೆ ಈವುಗಳ ಪ್ರಭಾವ ಹೆಚ್ಚು ಹೆಚ್ಚು ಕಂಡುಬರುತ್ತಿದೆ. ಅದು ಚಹಾ ಅಂಗಡಿಯಾಗಿರಲಿ ಅಥವಾ ಆನ್‌ಲೈನ್ ಶಾಪಿಂಗ್ ಆಗಿರಲಿ, ಡಿಜಿಟಲ್ ಪಾವತಿಗಳು ದೈನಂದಿನ ಜೀವನದ ಭಾಗವಾಗಿವೆ. ಕ್ಯಾಶ್‌ ಕೊಡುವುದಕ್ಕಿಂತ ವೇಗವಾಗಿ ಆನ್‌ಲೈನ್‌ನಲ್ಲಿ ಪೇ ಮಾಡುವುದು ಇಂದಿನ ಯುವಕರಿಗೆ ತುಂಬಾ ಸುಲಭವಾಗಿದೆ.

ಡಿಜಿಲಾಕರ್- ಕಾಗದದಿಂದ ಪರದೆಯವರೆಗೆ; ಡಿಜಿಲಾಕರ್ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ತಂದಿದೆ. ಕಾಗದದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದು ಹೆಚ್ಚು ಸಹಾಯ ಮಾಡಿದೆ. ನೀವು ಚಾಲನಾ ಪರವಾನಗಿ, ಶೈಕ್ಷಣಿಕ ಪ್ರಮಾಣಪತ್ರ ಮತ್ತು ವಾಹನ ಸಂಬಂಧಿತ ದಾಖಲೆಗಳು, ಆಧಾರ ಕಾರ್ಡ್‌, ಮಕ್ಕಳ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರಗಳು, ಆಸ್ತಿಯ ಪತ್ರಗಳು, 10, ಪಿಯಿಸಿ ಸೇರಿದಂತೆ ಎಲ್ಲ ಶಿಕ್ಷಣದ ಅಂಕ ಪಟ್ಟಿಗಳನ್ನು ಡಿಜಿಲಾಕರ್‌ನಲ್ಲಿ ಡಿಜಿಟಲ್ ರೂಪದಲ್ಲಿ ಪಡೆಯಬಹುದು ಮತ್ತು ಪರಿಶೀಲಿಸಬಹುದು.

ಜನ್-ಧನ್ ಯೋಜನೆ; ಇದು ಭಾರತ ಸರ್ಕಾರದ ರಾಷ್ಟ್ರೀಯ ಹಣಕಾಸು ಸೇರ್ಪಡೆ ಕಾರ್ಯಕ್ರಮವಾಗಿದೆ. ಯಾವುದೇ ಕನಿಷ್ಠ ಮೊತ್ತದ ಶುಲ್ಕ ಇಲ್ಲದೇ ಉಳಿತಾಯ ಖಾತೆಯನ್ನು ಓಪನ್‌ ಮಾಡಬಹುದು. ರುಪೇ ಡೆಬಿಟ್‌ ಕಾರ್ಡ್‌ ಉಚಿತವಾಗಿ ನೀಡಲಾಗುತ್ತದೆ. 2 ಲಕ್ಷ ರೂಪಾಯಿಗಳ ಬರೆಗೆ ಅಪಘಾತದ ವಿಮಾ ಸೌಲಭ್ಯ ಇದೆ. ಇನ್ನು 2014ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯು ಬ್ಯಾಂಕಿಂಗ್‌ನಿಂದ ದೂರದಲ್ಲಿರುವ ಜನರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಗೆ ಸಂಪರ್ಕಿಸುವತ್ತ ಗಮನಹರಿಸಿತು. ಸರ್ಕಾರಿ ಸೌಲಭ್ಯಗಳು ಮತ್ತು ಹಣಕಾಸು ಸೇವೆಗಳನ್ನು ಪಡೆಯಲು ಬ್ಯಾಂಕ್ ಖಾತೆಗಳು ಪ್ರಮುಖ ಕೊಂಡಿಯಾಗಿ ಮಾರ್ಪಟ್ಟವು.

ಉಮಂಗ್ ಆಪ್; ಉಮಂಗ್ ಆಪ್ ಎನ್ನುವುದು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ಇ ಆಡಳಿತ ವಿಭಾಗ ಅಭಿವೃದ್ಧಿ ಪಡಿಸಿದ ಒಂದು ಮೊಬೈಲ್‌ ಅಪ್ಲಿಕೇಶನ್‌ ಆಗಿದೆ. 2017 ರಲ್ಲಿ ಪ್ರಾರಂಭಿಸಲಾಯಿತು, ಅಲ್ಲಿ ಅನೇಕ ಸರ್ಕಾರಿ ಸೇವೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರ ಸಹಾಯದಿಂದ ಮೊಬೈಲ್‌ನಿಂದ ಇಲಾಖಾ ಸೇವೆಗಳನ್ನು ಪ್ರವೇಶಿಸುವ ಮೂಲಕ ಸರ್ಕಾರಿ ಕೆಲಸವನ್ನು ನಾಗರಿಕರಿಗೆ ಹತ್ತಿರ ತರುವಲ್ಲಿ ಇದು ಸಹಾಯ ಮಾಡಿದೆ.

ಡಿಜಿಟಲ್ ಆರೋಗ್ಯ ಸೇವೆಗಳು; ಆರೋಗ್ಯ ರಕ್ಷಣೆ ಒದಗಿಸಲು ಮತ್ತು ನಿರ್ವಹಿಸಲು ಡಿಜಿಟಲ್‌ ತಂತ್ರಜ್ಞಾನಗಳು ಹಾಗೂ ಇಂಟರ್ನೆಟ್‌ ಅನ್ನು ಬಳಸುವುದು. ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಭಾರತ ಸರ್ಕಾರದ ಈ ಯೋಜನೆಯು ಪ್ರತಿಯೊಬ್ಬರಿಗೂ ವಿಶಿಷ್ಟ ಆರೋಗ್ಯ ಐಡಿ ನೀಡುತ್ತದೆ. ಇದರ ಮೂಲಕ ರೋಗಿಗಳು ತಮ್ಮ ವೈದ್ಯಕೀಯ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಇಡಬಹುದು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರೋಗ್ಯ ವಲಯಕ್ಕಾಗಿ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಅಭಾ ಡಿಜಿಟಲ್ ಆರೋಗ್ಯ ಗುರುತನ್ನು ಒದಗಿಸುತ್ತದೆ ಮತ್ತು ಆರೋಗ್ಯ ದಾಖಲೆಗಳನ್ನು ಒಮ್ಮತ ಆಧಾರಿತ ವ್ಯವಸ್ಥೆಯಲ್ಲಿ ಹಂಚಿಕೊಳ್ಳಬಹುದು.

ಡಿಜಿಟಲ್ ಇಂಡಿಯಾ; 2015 ರಲ್ಲಿ ಪ್ರಾರಂಭವಾದ ಡಿಜಿಟಲ್ ಇಂಡಿಯಾ, ಡಿಜಿಟಲ್ ಮೂಲಸೌಕರ್ಯ, ಇ-ಆಡಳಿತ ಮತ್ತು ಆನ್‌ಲೈನ್ ಸೇವೆಗಳನ್ನು ಹೆಚ್ಚಿಸುವ ಸಮಗ್ರ ಕಾರ್ಯಕ್ರಮವಾಗಿದೆ. ನಾಗರಿಕ ಸೇವೆಗಳಿಗೆ ತಂತ್ರಜ್ಞಾನವನ್ನು ತರುವುದು ಮತ್ತು ಸೇವೆಗಳನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವುದು ಇದರ ಗುರಿಯಾಗಿದೆ. DBT ಅನ್ನು 2013 ರಲ್ಲಿ ಪ್ರಾರಂಭಿಸಲಾಯಿತು, ಆದರೆ ನಂತರದ ವರ್ಷಗಳಲ್ಲಿ ವಿಸ್ತರಿಸಿದೆ. ಇದು ಸರ್ಕಾರಿ ಪ್ರಯೋಜನಗಳನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ತಲುಪಿಸುವ ಗುರಿಯನ್ನು ಹೊಂದಿದೆ, ಇದು ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಡಿಜಿಟಲ್ ಇಂಡಿಯಾ ಭಾರತದ ಡಿಜಿಟಲ್ ರೂಪಾಂತರದ ಸತ್ಯ ಕಥೆ; ಒಂದೇ ಯೋಜನೆಯ ಬಗ್ಗೆ ಅಲ್ಲ. ಇದು ನೀತಿಗಳು, ತಂತ್ರಜ್ಞಾನ, ಸಂಸ್ಥೆಗಳು ಮತ್ತು ಕೋಟ್ಯಂತರ ಬಳಕೆದಾರರ ಸಂಯೋಜಿತ ಪ್ರಯತ್ನಗಳ ಫಲಿತಾಂಶವಾಗಿದೆ. ಇಂದು ಡಿಜಿಟಲ್ ಇಂಡಿಯಾದ ಚಿತ್ರಣವು ಯಾವುದೇ ಸರ್ಕಾರಿ ಕಟ್ಟಡಕ್ಕಿಂತ ಹೆಚ್ಚಾಗಿ ಕಂಡುಬರುತ್ತಿದೆ. ಅದು ಅಂಗಡಿಯವರ QR ಕೋಡ್, ವಿದ್ಯಾರ್ಥಿಯ ಡಿಜಿಟಲ್ ಪ್ರಮಾಣಪತ್ರ, ರೈತರ ಬ್ಯಾಂಕ್ ಖಾತೆ ಮತ್ತು ನಾಗರಿಕರ ಮೊಬೈಲ್ ಫೋನ್‌ನಲ್ಲಿದೆ. ಜನರು ಕೂಡ ಡಿಜಿಟಲ್‌ ಆಗಿರುವುದರಿಂದ ಬದುಕನ್ನು ವೇಗಗೊಳಿಸಿದೆ. ಅಂದರೆ ಜೀವನದ ಆರ್ಥಿಕತೆಯನ್ನು ವೇಗಗೊಳಿಸಿದ್ದು ಡಿಜಿಟಲ್‌ನಿಂದ ಆರ್ಥಿಕ ಪಾವತಿ ತೊಂದರೆಗಳು ಕಡಿಮೆ ಇವೆ ಎನ್ನಬಹುದು.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES