• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /BRICS ಶೃಂಗಸಭೆ; ಗೆಲುವು ಗೆಲುವಿನ ಸಹಯೋಗ.. ವಿಶ್ವಕ್ಕೆ ಪ್ರಧಾನಿ ಮೋದಿ ಮಹತ್ತರ ಸಂದೇಶ, ಹೇಳಿದ್ದೇನು?

BRICS ಶೃಂಗಸಭೆ; ಗೆಲುವು ಗೆಲುವಿನ ಸಹಯೋಗ.. ವಿಶ್ವಕ್ಕೆ ಪ್ರಧಾನಿ ಮೋದಿ ಮಹತ್ತರ ಸಂದೇಶ, ಹೇಳಿದ್ದೇನು?

ತಂತ್ರಜ್ಞಾನದ ಅಳವಡಿಕೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಒಳಗೊಳ್ಳುವಿಕೆಗೆ ಆದ್ಯತೆ ನೀಡಬೇಕು. ಹಂಚಿಕೆಯ ಪ್ರಗತಿ ಸಾಧ್ಯವಾಗಬೇಕಾದರೆ ಪ್ರತಿಯೊಂದು ದೇಶವೂ ತಂತ್ರಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮಾನವಾಗಿ ಪಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂಬುದು ಭಾರತದ ಸ್ಪಷ್ಟ ನಿಲುವು

Reported ByBhimappaEdited ByBhimappa
Published: Sep 13, 2026, 01:29 PM IST|Updated: Sep 17, 2026, 03:55 PM IST
joinshare
BRICS ಶೃಂಗಸಭೆ; ಗೆಲುವು ಗೆಲುವಿನ ಸಹಯೋಗ.. ವಿಶ್ವಕ್ಕೆ ಪ್ರಧಾನಿ ಮೋದಿ ಮಹತ್ತರ ಸಂದೇಶ, ಹೇಳಿದ್ದೇನು?
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಭಾರತದ ಅಧ್ಯಕ್ಷತೆಯಲ್ಲಿ ನಡೆದ 2026 ರ 18ನೇ ಬ್ರಿಕ್ಸ್ ಶೃಂಗಸಭೆಯೂ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಿ ಮೂಡಿಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಆಯೋಜನೆಗೊಂಡಿದ್ದ ಈ ಶೃಂಗಸಭೆಯ 2ನೇ ದಿನದ ಪ್ರಮುಖ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ, ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ಕೇವಲ ಸರ್ಕಾರದ ಮಟ್ಟಕ್ಕೆ ಸೀಮಿತವಾಗದೆ, ಸಾರ್ವಜನಿಕರನ್ನು ಒಳಗೊಂಡ 'ಗೆಲುವು-ಗೆಲುವಿನ ಸಹಯೋಗ' (Win-Win Collaboration) ಆಗಿದೆ ಎಂದು ಹೇಳಿದರು. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ಎಂಬ 4 ಮೂಲಭೂತ ಸ್ತಂಭಗಳ ಆಧಾರದ ಮೇಲೆ ಭಾರತವು ಈ ಬಾರಿಯ ಶೃಂಗಸಭೆಯನ್ನು ಯಶಸ್ವಿಯಾಗಿ ಮುನ್ನಡೆಸಿದೆ.

ಶೃಂಗಸಭೆಯ 2ನೇ ದಿನದಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ಪ್ರಮುಖ ವಿಶ್ವ ನಾಯಕರ ಉಪಸ್ಥಿತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ದುರ್ಬಳಕೆಯ ವಿರುದ್ಧ ಕಿಡಿ ಕಾರಿದರು. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ನಿರ್ಣಾಯಕ ಖನಿಜಗಳು (Critical Minerals) ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ರಾಜಕೀಯ ಲಾಭಕ್ಕಾಗಿ ಅಥವಾ ಆಯುಧವನ್ನಾಗಿ ಬಳಸಿಕೊಳ್ಳಬಾರದು ಎಂದು ಪ್ರಧಾನಿ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅಂತಹ ಸ್ವಾರ್ಥಿ ಕ್ರಮಗಳು ವಿಶ್ವದ ಸಾಮಾನ್ಯ ಮತ್ತು ಸಮಗ್ರ ಅಭಿವೃದ್ಧಿಗೆ ದೊಡ್ಡ ಅಡಚಣೆಗಳನ್ನು ಸೃಷ್ಟಿಸುತ್ತವೆ ಎಂದು ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ ಅವರು, ತಂತ್ರಜ್ಞಾನದ ಅಳವಡಿಕೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಒಳಗೊಳ್ಳುವಿಕೆಗೆ ಆದ್ಯತೆ ನೀಡಬೇಕು. ಹಂಚಿಕೆಯ ಪ್ರಗತಿ ಸಾಧ್ಯವಾಗಬೇಕಾದರೆ ಪ್ರತಿಯೊಂದು ದೇಶವೂ ತಂತ್ರಜ್ಞಾನ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಮಾನವಾಗಿ ಪಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಒಕ್ಕೂಟವು 4 ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಹಂಚಿಕೆಯ ದೃಷ್ಟಿಕೋನವನ್ನು ಪ್ರತಿಯೊಂದು ರಾಷ್ಟ್ರಕ್ಕೂ ಪರಸ್ಪರ ಪ್ರಯೋಜನ ತರುವ ಸಹಯೋಗವಾಗಿ ಪರಿವರ್ತಿಸಲು ಭಾರತ ನಿರಂತರ ಶ್ರಮಿಸಿದೆ. ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ವಿಪತ್ತುಗಳ ವಿರುದ್ಧ ಜಾಗತಿಕ ಸನ್ನದ್ಧತೆಯನ್ನು ಬಲಪಡಿಸುವುದು, ಪೂರೈಕೆ ಸರಪಳಿಗಳನ್ನು ಹೆಚ್ಚು ಸುಸ್ಥಿರ ಹಾಗೂ ಸ್ಥಿತಿಸ್ಥಾಪಕತ್ವದಿಂದ ಕೂಡುವಂತೆ ಮಾಡುವುದು ಮತ್ತು ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಕೃಷಿ ಹಾಗೂ ತಂತ್ರಜ್ಞಾನದ ಮೂಲಕ ನಾವೀನ್ಯತೆಯನ್ನು ಉತ್ತೇಜಿಸಬೇಕು ಎಂದಿದ್ದಾರೆ.

ಬ್ರಿಕ್ಸ್ ಸಹಕಾರವು ಕೇವಲ ರಾಜತಾಂತ್ರಿಕ ಕೊಠಡಿಗಳಿಗೆ ಅಥವಾ ಸರ್ಕಾರಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂಬುದು ಭಾರತದ ಆಶಯವಾಗಿದೆ. ಈ ಉದ್ದೇಶದಿಂದ ಉದ್ಯಮಿಗಳು, ರೈತರು, ಸಂಶೋಧಕರು, ಮಹಿಳೆಯರು, ಯುವಕರು ಮತ್ತು ಸಾಮಾನ್ಯ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಪ್ರಮುಖ ವಲಯಗಳಿಗೆ ಹೊಸ ಉಪಕ್ರಮಗಳು ಮತ್ತು ತಾಂತ್ರಿಕ ಬೆಂಬಲ

ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಆರೋಗ್ಯ, ಕೃಷಿ, ನವೋದ್ಯಮ ಮತ್ತು MSME ವಲಯಗಳನ್ನು ಬಲಪಡಿಸಲು ಯೋಜನೆಗಳ ಬಗ್ಗೆ ವಿವರಿಸಿದರು.

ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಚೌಕಟ್ಟು: ಜಾಗತಿಕ ಮಟ್ಟದಲ್ಲಿ ಉಂಟಾಗುವ ಆರ್ಥಿಕ ಅಡೆತಡೆಗಳನ್ನು ತಡೆಯಲು ಬ್ರಿಕ್ಸ್ ಲಾಜಿಸ್ಟಿಕ್ಸ್ ಸರಬರಾಜು ಸರಪಳಿ ಸಹಕಾರ ಚೌಕಟ್ಟು ರೂಪಿಸಲಾಗಿದೆ. ಇದು ಪೂರೈಕೆ ಜಾಲವನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಬಲಶಾಲಿಯನ್ನಾಗಿ ಮಾಡುತ್ತದೆ.

ಸ್ಟಾರ್ಟ್‌ಅಪ್ ಹಾಗೂ ಇನ್ನೋವೇಶನ್ ಫಂಡ್: ಉದಯೋನ್ಮುಖ ಉದ್ಯಮಿಗಳನ್ನು ಸಂಪರ್ಕಿಸಲು 'ಬ್ರಿಕ್ಸ್ ಇನ್ಕ್ಯುಬೇಟರ್ ನೆಟ್‌ವರ್ಕ್' ಸ್ಥಾಪಿಸಲಾಗಿದೆ. ಇದರೊಂದಿಗೆ ನವೀನ ಮತ್ತು ವಿಸ್ತರಿಸಬಹುದಾದ ತಾಂತ್ರಿಕ ಪರಿಹಾರಗಳಿಗೆ ಬೆಂಬಲ ನೀಡಲು 'ಬ್ರಿಕ್ಸ್ ಸ್ಟಾರ್ಟ್‌ಅಪ್ ಇನ್ನೋವೇಶನ್ ಫಂಡ್' ಪ್ರಸ್ತಾಪಿಸಲಾಗಿದೆ.

ಡಿಜಿಟಲ್ ಕೃಷಿ ನೆಟ್‌ವರ್ಕ್: ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ತರಲು ಕೃತಕ ಬುದ್ಧಿಮತ್ತೆ (AI), ಜಿಯೋಸ್ಪೇಷಿಯಲ್ ತಂತ್ರಜ್ಞಾನ (GT) ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (DPI) ಬಳಸಿಕೊಂಡು ರೈತರ ದೈನಂದಿನ ಅಗತ್ಯಗಳನ್ನು ಪೂರೈಸುವ ಡಿಜಿಟಲ್ ಕೃಷಿ ನೆಟ್‌ವರ್ಕ್ ರಚಿಸಲಾಗಿದೆ.

MSME ಮತ್ತು ಆರೋಗ್ಯ ವಲಯ: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಮತ್ತು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಬ್ರಿಕ್ಸ್ ನಿಕಟವಾಗಿ ಕೆಲಸ ಮಾಡಲಿದೆ.

BRICS ಶೃಂಗಸಭೆಯ ಮೊದಲ ದಿನದಂದು ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಪ್ರಸ್ತುತ ಇರುವ ಅಂತಾರಾಷ್ಟ್ರೀಯ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳಿವೆ. ಜಾಗತಿಕ ಬಿಕ್ಕಟ್ಟುಗಳು ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ ದಕ್ಷಿಣ ದೇಶಗಳು ಮುಂಚೂಣಿಯಲ್ಲಿವೆ. ಆದರೆ, ಜಾಗತಿಕ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಈ ದೇಶಗಳನ್ನು ಹಿಂದಿನ ಸಾಲಿನಲ್ಲಿ ಇರಿಸಲಾಗುತ್ತಿದೆ ಎಂದು PM ಮೋದಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಸವಲತ್ತುಗಳ ಪಿರಮಿಡ್ ನಿವಾರಣೆ: ಪ್ರಸ್ತುತ ಚಾಲ್ತಿಯಲ್ಲಿರುವ ಕೆಲವು ಬಲಶಾಲಿ ರಾಷ್ಟ್ರಗಳ ಸವಲತ್ತುಗಳ ಪಿರಮಿಡ್ ಅನ್ನು ಧ್ವಂಸಗೊಳಿಸಿ, ಅದನ್ನು 'ಪಾಲುದಾರಿಕೆಯ ವೇದಿಕೆ'ಯಾಗಿ ಪರಿವರ್ತಿಸಬೇಕಿದೆ. ಇಲ್ಲಿ ಪ್ರತಿಯೊಂದು ಸಣ್ಣ- ದೊಡ್ಡ ದೇಶಕ್ಕೂ ಧ್ವನಿ ಮತ್ತು ಪಾಲುದಾರಿಕೆ ಇರಬೇಕು. ಪ್ರತಿಯೊಂದು ಜಾಗತಿಕ ಪ್ರಯತ್ನದ ಹೃದಯಭಾಗದಲ್ಲಿ ಮಾನವ ಅಭಿವೃದ್ಧಿ ಅಡಗಿರಬೇಕು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.  

10 ಪ್ರಸ್ತಾಪಗಳ ಸುಧಾರಣಾ ಮಾರ್ಗಸೂಚಿ: ಪ್ರಾತಿನಿಧ್ಯ, ಜವಾಬ್ದಾರಿ ಮತ್ತು ನಿಯಮ ರೂಪಿಸುವಿಕೆ ಎಂಬ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿ ಜಾಗತಿಕ ಆಡಳಿತ ಸುಧಾರಣೆಗಾಗಿ 10 ಪ್ರಮುಖ ಪ್ರಸ್ತಾಪಗಳನ್ನು ಸಿದ್ಧಪಡಿಸಲು ಭಾರತ ಆಹ್ವಾನ ನೀಡಿದೆ. ಮುಂದಿನ ಶೃಂಗಸಭೆಯ ವೇಳೆಗೆ ಇದನ್ನು 'ಬ್ರಿಕ್ಸ್ ಸುಧಾರಣಾ ಮಾರ್ಗಸೂಚಿ'ಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

2026ರ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಅಧ್ಯಕ್ಷತೆಯು ಬಹುಧ್ರುವೀಯ ಪ್ರಪಂಚದಲ್ಲಿ ಬ್ರಿಕ್ಸ್ ಒಕ್ಕೂಟದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಹಕಾರ, ಸಮಾನತೆ ಮತ್ತು ತಂತ್ರಜ್ಞಾನದ ಅಂತರ್ಗತ ಬಳಕೆಯ ಮೂಲಕ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತವು ವಿಶ್ವಕ್ಕೆ ಹೊಸ ದಾರಿ ತೋರಿಸಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ನವದೆಹಲಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯೂ ಭಾರತ ಶ್ರೇಷ್ಠತೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದೆ ಎನ್ನಬಹುದು. 

ಬ್ರಿಕ್ಸ್‌ ಒಕ್ಕೂಟವು ಆರಂಭವಾಗಿ 2026ಕ್ಕೆ ಬರೋಬ್ಬರಿ 20 ವರ್ಷಗಳು ಪೂರ್ಣಗೊಂಡಿವೆ ಎನ್ನುವುದು ವಿಶೇಷ ಎನಿಸಿದೆ. ಅದರಲ್ಲಿ 20ನೇ ವರ್ಷದಲ್ಲಿ ಭಾರತದಲ್ಲಿ ಬ್ರಿಕ್ಸ್‌ ಒಕ್ಕೂಟದ ಶೃಂಗಸಭೆ ನಡೆದಿರುವುದು ಸಂತಸ ತಂದಿದೆ. ಭಾರತವು ಇದುವರೆಗೆ ಒಟ್ಟು ನಾಲ್ಕು ಬಾರಿ ಬ್ರಿಕ್ಸ್‌ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ವಹಿಸಿಕೊಂಡಿದೆ. ವಿಶ್ವದ ಚಾಲೆಂಜ್‌ಗಳು ತಂತ್ರಜ್ಞಾನದ ದುರ್ಬಳಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಈ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು.  

ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ 18ನೇ ಶೃಂಗಸಭೆ ನವದೆಹಲಿಯ ಭಾರತ್‌ ಮಂಟಪದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಜಾಗತಿಕ ಸಮ್ಮೇಳದಲ್ಲಿ ಈ ಸಲ ಒಟ್ಟು 11 ಸದಸ್ಯ ರಾಷ್ಟ್ರಗಳು, ಪಾಲುದಾರ ರಾಷ್ಟ್ರಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಮುಖ ನಾಯಕರು ಭಾಗಿಯಾಗಿದ್ದರು. ಪ್ರಮುಖವಾಗಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ ಪಿಂಗ್‌, ರಷ್ಯಾದ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸಾ‌, ಇರಾನ್ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಸೇರಿದಂತೆ ಇನ್ನು ಕೆಲವು ರಾಷ್ಟ್ರಗಳು ಪಾಲ್ಗೊಂಡಿದ್ದವು. 
 

Add Zee News as a Preferred Source
TAGS:
Narendra Modi