SOCIAL MEDIA

Newsletter

PARTNER SITES
Select Language Select State

ಪಹಲ್ಗಾಮ್‌ ದಾಳಿ ಇನ್ನೂ ಮರೆತಿಲ್ಲ ಭಾರತ.. BRICS ಶೃಂಗಸಭೆಯಲ್ಲಿ ಭಯೋತ್ಪಾದಕರ ವಿರುದ್ಧ ಘರ್ಜಿಸಿದ PM ಮೋದಿ

ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದರು. ಘಟನಾ ಸ್ಥಳವನ್ನು ಸಂಪೂರ್ಣವಾಗಿ ಸೀಲ್‌ ಮಾಡಿ ಭದ್ರತೆ ಒದಗಿಸಿದರು. ಅರಣ್ಯದಲ್ಲಿ ಅಡಗಿ ಕುಳಿತ ಭಯೋತ್ಪಾದಕರಿಗಾಗಿ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಬೃಹತ್‌ ಶೋಧ ಕಾರ್ಯಾಚರಣೆಯನ್ನು ನಡೆಸಿದರು.

Reported By Bhimappa Written By Bhimappa
Published: Sep 12, 2026, 05:53 PM IST | Updated: Sep 17, 2026, 04:05 PM IST
Image Credit: File Photo
Join

ಭಾರತದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಸುಂದರವಾದ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಭೀಕರವಾದ ಭಯೋತ್ಪಾಕರ ದಾಳಿಯೂ ಇಡೀ ದೇಶವನ್ನೇ ಆತಂಕದಲ್ಲಿತ್ತು. ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಸಿಕೊಳ್ಳುವ ಕಾಶ್ಮೀರದಲ್ಲಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿತ್ತು. ಇಂತಹ ಸಮಯದಲ್ಲಿ ಶಾಂತಿ ಕದಡುವ ಕೆಟ್ಟ ಉದ್ದೇಶದಿಂದ ಭಯೋತ್ಪಾದಕರು ದೊಡ್ಡ ಕುತಂತ್ರ ಮಾಡಿ ಹೀನ ಕೃತ್ಯ ಮಾಡಿದರು. ಪ್ರಕೃತಿ ಸೌಂದರ್ಯವನ್ನು ಸವಿಯಲು ಬಂದಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿದರು. ಧರ್ಮವನ್ನು ಕೇಳಿ ಕೇಳಿ ಪ್ರವಾಸಿಗರ ಜೀವ ತೆಗೆದರು.

AK 47 ಹಿಡಿದು ಬಂದಿದ್ದ ಉಗ್ರಗಾಮಿಗಳು ನೀಚ ಕೃತ್ಯ ಎಸಗಿದರು. ಮಧ್ಯಾಹ್ನದ ಸಮಯದಲ್ಲಿ ಬೈಸರನ್‌ ಹುಲ್ಲುಗಾವಲಿನ ಪ್ರದೇಶ ಶಸ್ತ್ರಾಸ್ತ್ರಗಳನ್ನು ಹಿಡಿದು ಬಂದ ಭಯೋತ್ಪಾದಕರು ಏಕಾಏಕಿ ಪ್ರವಾಸಿಗರ ಮೇಲೆ ದಾಳಿ ಮಾಡಿದರು. AK 47 ಹಿಡಿದು ಪ್ರವಾಸಿಗ ಮೇಲೆ ಗುಂಡಿನ ಸುರಿಮಳೆ ಗೈದರು. ಅಲ್ಲಿ ಏನಾಗುತ್ತಿದೆ ಎಂದು ಊಹಿಸುವಷ್ಟರಲ್ಲಿ ಎಲ್ಲವೂ ನಡೆದು ಹೋಗಿತ್ತು. ಕೆಲವರು ಏನಾಗಿತ್ತಿದೆ ಎಂದು ನೋಡುವಾಗಲೇ ಶೂಟ್‌ ಮಾಡಿದ್ದರು. ಕರುಳು ಹಿಂಡುವ ಸಂಗತಿಗಳು ಇಡೀ ದೇಶವನ್ನೇ ಚಿಂತೇಗಿಡು ಮಾಡಿತು.  

ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 26 ಭಾರತೀಯರು ಜೀವ ಕಳೆದುಕೊಂಡರು. ಇದರಲ್ಲಿ ಕನ್ನಡಿಗರು ಇದ್ದರು ಎನ್ನುವುದು ಇಡೀ ಕರ್ನಾಟಕ ರಾಜ್ಯಕ್ಕೆ ಆತಂಕ ತರಿಸಿತು. ಮೃತರ ಪೈಕಿ ಬಹುತೇಕ ಜನರು ಪ್ರವಾಸಿಗರೇ ಆಗಿದ್ದರು. ಉಳಿದಂತೆ ಮಹಿಳೆಯರು ಮತ್ತು ಸ್ಥಳೀಯರು ಕೂಡ ಮೃತಪಟ್ಟಿದ್ದಾರೆ. ಅಂದಿನ ಭಯೋತ್ಪಾದಕರ ದಾಳಿಯೂ ಪ್ರಕೃತಿಯ ಮಡಿಲಲ್ಲಿ ಸಂತಸದ ಸಮಯ ಕಳೆಯುತ್ತಿದ್ದ ಕುಟುಂಬಗಳ ಮೇಲೆ ಪ್ರಾಣ ಕಸಿದುಕೊಂಡಿತು. ಇಡೀ ಪ್ರದೇಶ ರಕ್ತಪಾತದಿಂದ ಕೂಡಿತ್ತು. ಸಾವಿನ ಆಹಾಕಾರ, ಚೀರಾಟ ಅಲ್ಲಿದ್ದವರಿಗೆ ಜೀವವನ್ನೇ ಕಸಿದಿತ್ತು.  

ಘಟನೆ ನಡೆದ ಕೂಡಲೇ ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದರು. ಘಟನಾ ಸ್ಥಳವನ್ನು ಸಂಪೂರ್ಣವಾಗಿ ಸೀಲ್‌ ಮಾಡಿ ಭದ್ರತೆ ಒದಗಿಸಿದರು. ಅರಣ್ಯದಲ್ಲಿ ಅಡಗಿ ಕುಳಿತ ಭಯೋತ್ಪಾದಕರಿಗಾಗಿ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಬೃಹತ್‌ ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಭೀಕರವಾದ ಭಯೋತ್ಪಾಕರ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಭಯೋತ್ಪಾದಕರ ಮೇಲೆ ಭಾರತೀಯರ ಕೋಪ ಅಷ್ಟಿಷ್ಟು ಇರಲಿಲ್ಲ.  

ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್‌ ಪಡೆಗಳು ಕಾಡಿನಲ್ಲಿ ಅಡಗಿ ಕುಳಿತ್ತಿದ್ದ ಭಯೋತ್ಪಕರನ್ನು ಪತ್ತೆ ಹಚ್ಚಲು ಧರ್ಮಲ್‌ ಇಮೇಜಿಂಗ್‌ ಕ್ಯಾಮೆರಾಗಳು, ಸೇನಾ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ಉಪಯೋಗ ಮಾಡಲಾಯಿತು. ಈ ಭೀಕರವಾದ ದಾಳಿಯ ಹಿಂದೆ ಲಷ್ಕರ್-ಎ-ತೈಬಾ ಅಂಗಸಂಸ್ಥೆಯಾದ ದೀ ರೆಸಿಸ್ಟೆನ್ಸ್‌ ಫ್ರಂಟ್‌ ಕೃತ್ಯ ಇದೆ ಎಂದು ಪ್ರಾಧಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪಹಲ್ಗಾಮ್‌ ದಾಳಿಯನ್ನು ಪ್ರಧಾನ ಮಂತ್ರಿಗಳು, ಗೃಹಸಚಿವರು ಸೇರಿದಂತೆ ಇಡೀ ದೇಶವೇ ತೀವ್ರವಾಗಿ ಖಂಡಿಸಿತು. ಪಹಲ್ಗಾಮ್‌ ದಾಳಿ ಮಾಡಿದ ಉಗ್ರರನ್ನು ಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.    

ಪಹಲ್ಗಾಮ್‌ ದಾಳಿಯ ಪ್ರತಿಯಾಗಿ ಭಾರತ ಸರ್ಕಾರವೂ ಭಯೋತ್ಪಾದಕರನ್ನು ಮಟ್ಟ ಹಾಕಲು ಆಪರೇಷನ್‌ ಸಿಂಧೂರ್‌ ಅನ್ನು ಮಾಡಿತು. ಶತ್ರುರಾಷ್ಟ್ರದ ಮೇಲೆ ಭೀಕರವಾದ ದಾಳಿ ಮಾಡಲಾಯಿತು. ಉಗ್ರರ ನೆಲೆಗಳನ್ನು ಸರ್ವನಾಶ ಮಾಡಲಾಯಿತು. ಭಾರತದ ಗಡಿಯಿಂದ ಹೊರಗೆ ಇರುವಂತಹ ಭಯೋತ್ಪಾಕದರ ಪ್ರದೇಶಗಳನ್ನು ಟಾರ್ಗೆಟ್‌ ಮಾಡಿ ನಾಶ ಮಾಡಿ ಬಿಗ್‌ ಶಾಕ್‌ ಕೊಡಲಾಯಿತು. ಭಾರತ ಕೈಕೊಂಡ ಕಠಿಣ ಮಿಲಿಟರಿ ಮತ್ತು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರವನ್ನು ನೀಡಲಾಯಿತು.

ಸಿಂಧೂ ನದಿಯ ನೀರು ಹಂಚಿಕೆ ಒಪ್ಪಂದದ ಮರುಪರಿಶೀಲನೆ, ರಾಜತಾಂತ್ರಿಕ ಸಂಬಂಧಗಳ ಕಡಿತ ಹಾಗೂ ಗಡಿಯಲ್ಲಿ ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಯಿತು. ಆಪರೇಷನ್‌ ಸಿಂಧೂರ್‌ಗೆ ದೇಶದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ವಿಶ್ವಮಟ್ಟದಲ್ಲೂ ಅಮೆರಿಕ, ಫ್ರಾನ್ಸ್‌, ಬ್ರಿಟನ್‌, ಸೌತ್‌ ಆಫ್ರಿಕಾ ಸೇರಿದಂತೆ ಇನ್ನು ಹಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿದವು. ಪಹಲ್ಗಾಮ್‌ ದಾಳಿಯೂ ಕಾಶ್ಮೀರದ ರಕ್ತ ಹೀರಿತು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಭಾರತ ಸರ್ಕಾರ ಸಂಕಲ್ಪ ತೊಟ್ಟಿದೆ. ಹೀಗಾಗಿ ಗಡಿ ಭಾಗದಲ್ಲಿ ಭಾರತದ ಸೇನೆ, ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ಮತ್ತು ಪ್ರವಾಸಿಗರ ಭದ್ರತೆಗಾಗಿ ಭಾರತೀಯ ಸೇನೆ, ಭದ್ರತಾ ಪಡೆಗಳು ಸದಾ ಕಾಯುತ್ತಿವೆ. ಸದ್ಯ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಹಲ್ಗಾಮ್‌ ದಾಳಿ ಬಗ್ಗೆ ವಿಶೇಷವಾಗಿ ಉಲ್ಲೇಖ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಪಹಲ್ಗಾಮ್‌ ದಾಳಿಯನ್ನು ಮರೆತ್ತಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ.  

2025ರ ಎಪ್ರಿಲ್ 22‌ ರಂದು ಪಹಲ್ಗಾಮ್‌ ಬಳಿಯ ಬೈಸರನ್‌ ದಾಳಿಯೂ ಇಡೀ ದೇಶವನ್ನು ಆತಂಕಕ್ಕೆ ತಳಿತು. ಜನರ ಮೇಲೆ ಭಯೋತ್ಪಾದಕರು ನಿರತಂರವಾಗಿ ಗಂಡು ಹಾರಿಸಿ ಜೀವ ತೆಗೆದರು. ಇದರಲ್ಲಿ ನೇಪಾಳದ ಪ್ರವಾಸಿಗರು ಕೂಡ ಸೇರಿದ್ದರು. ಲಷ್ಕರ್‌ ಎ ತೈಬಾದ ರೆಸಿಸ್ಟೆನ್ಸ್‌ ಫ್ರಂಟ್‌ ಈ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ. ಇದನ್ನು ಭಾರತ ಈವರೆಗೂ ಮರೆತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಬ್ರಿಕ್ಸ್‌ ಸಭೆಯಲ್ಲಿ ಹೇಳಿದ್ದಾರೆ. ಇಂದಿಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಭಯೋತ್ಪಾದಕರ ಮೇಲೆ ಭಾರತೀಯರ ಕೋಪ ಕಡಿಮೆ ಆಗಿಲ್ಲ. ಗಡಿಯಲ್ಲಿ ಸೇನೆಯೂ ಪ್ರತಿಯೊಂದು ಹೆಜ್ಜೆಯ ಮೇಲೂ ಕಣ್ಣಿಟ್ಟಿದೆ. 

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಆತಂಕ, ಭಯ ಕರ್ನಾಟಕಕ್ಕೂ ತಟ್ಟಿತ್ತು ಎನ್ನಬಹುದು. ಏಕೆಂದರೆ ಜಮ್ಮು ಕಾಶ್ಮೀರದ ಸೌಂದರ್ಯ ವೀಕ್ಷಣೆಗೆಂದು ಪ್ರವಾಸಕ್ಕೆ ಹೋಗಿದ್ದ ಮೂವರು ಪ್ರವಾಸಿಗರಿಗೂ ಉಗ್ರಗಾಮಿಗಳು ಗುಂಡಿಟ್ಟು ಜೀವ ತೆಗೆದಿದ್ದರು. ಶಿವಮೊಗ್ಗದ ವಿಜಯನಗರ ನಿವಾಸಿ ಮತ್ತು ರಿಯಲ್‌ ಎಸ್ಟೇಟ ಉದ್ಯಮಿ ಮಂಜುನಾಥ್‌ ರಾವ್‌ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದರು. ಮಂಜುನಾಥ್‌ ರಾವ್‌ ಅವರಿಗೆ 46 ವರ್ಷಗಳು ಆಗಿದ್ದವು. ಹೆಂಡತಿ ಮತ್ತು ಮಗನ ಎದುರಲ್ಲೇ ಭಯೋತ್ಪಾದಕರು ದಾಳಿ ಮಾಡಿದ್ದರು.    

ಕರ್ನಾಟಕದ ಇನ್ನೊಬ್ಬರು ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿಯ ಭರತ್‌ ಭೂಷಣ್‌ ಎನ್ನುವರು ಕೂಡ ಭಯೋತ್ಪಾದಕರ ದಾಳಿಯಿಂದ ಪಹಲ್ಗಾಮ್‌ನಲ್ಲಿ ಮೃತಪಟ್ಟಿದ್ದರು. ಭಯೋತ್ಪಾದಕರು ದಾಳಿಯಲ್ಲಿ ಭರತ್‌ ಭೂಷಣ್‌ ಅವರ ಹೆಂಡತಿ ಮತ್ತು ಮಗುವಿಗೆ ಏನು ಆಗಿಲ್ಲ. ಆದರೆ ಭಯೋತ್ಪಾದಕರು ಭರತ್‌ ಭೂಷಣ್‌ ಮೇಲೆ ದಾಳಿ ಮಾಡಿದ್ದರು. ಭರತ್‌ ಭೂಷಣ್‌ ಅವರ ಹೆಂಡತಿ ಸುಜಾತ ಮತ್ತು ಮಗುವಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಕರ್ನಾಟಕದ ಮೂರನೇ ವ್ಯಕ್ತಿ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿದ್ದ ಆಂಧ್ರ ಪ್ರದೇಶ ಮೂಲದ ಮಧುಸೂದನ್‌ ರಾವ್‌ ಕೂಡ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದರು. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES