• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ.. 9 ಜನರಿಗೆ ಗಾಯ, ಆತಂಕ!

ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ.. 9 ಜನರಿಗೆ ಗಾಯ, ಆತಂಕ!

Mumbai apatment fire 9 members injured: ದಸರಾ ಸಂಭ್ರಮದಲ್ಲಿದ್ದ, ಮಂದಿಗೆ ಬೆಳಂಬೆಳಗ್ಗೆ ಶಾಕಿಂಗ್‌ ಸುದ್ದಿಯೊಂದು ಬಂದಿದೆ. ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.. 13 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ

Written ByRamya. R. Gowda
Published: Oct 20, 2026, 03:25 PM IST|Updated: Oct 20, 2026, 03:34 PM IST
joinshare
ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ.. 9 ಜನರಿಗೆ ಗಾಯ, ಆತಂಕ!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಾಂಕ ಫಿಕ್ಸ್! ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ದಿನಾಂಕ ಫಿಕ್ಸ್! ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

2

ದಸರಾ ಸಂಭ್ರಮಕ್ಕೆ ಹೊಸ ಕಾರು ಖರೀದಿ.. ಡೆಲಿವರಿ ವೇಳೆ ಭೀಕರ ಅಪಘಾತ!

3

ಬೆಂಗಳೂರಿನಲ್ಲಿ 3 ದಿನ ಎಣ್ಣೆ ಸಿಗಲ್ಲ! 11 ಪೊಲೀಸ್ ವಿಭಾಗಗಳಲ್ಲಿ ಮದ್ಯ ಮಾರಾಟ ಬಂದ್‌!

4

ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದನೆ: ಅ. 26ಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ!

5

ಕಾರು ಮಕ್ಕಳ ಆಟಿಕೆಯಲ್ಲ, ರಸ್ತೆ ಆಟದ ಮೈದಾನವಲ್ಲ! ಕರ್ನಾಟಕ ಹೈಕೋರ್ಟ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mumbai apatment fire 9 members injured: ದಸರಾ ಸಂಭ್ರಮದಲ್ಲಿದ್ದ, ಮಂದಿಗೆ ಬೆಳಂಬೆಳಗ್ಗೆ ಶಾಕಿಂಗ್‌ ಸುದ್ದಿಯೊಂದು ಬಂದಿದೆ. ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.. 13 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.. 13 ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ.. ಕಟ್ಟಡದ ತುಂಬೆಲ್ಲ ದಟ್ಟ ಹೊಗೆ ಆವರಿಸಿದ್ದರಿಂದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.. ಅದೃಷ್ಟವಶಾತ್, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.. ಅಷ್ಟಕ್ಕೂ ಈ ಅವಘಡಕ್ಕೆ ಕಾರಣ ಏನು? ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದ್ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಮುಂಬೈನಲ್ಲಿ ಬೆಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ.. ಕುರ್ಲಾ ಪಶ್ಚಿಮದಲ್ಲಿರುವ ಕೊಹಿನೂರ್ ಎಚ್‌ಡಿಐಎಲ್ ಕಟ್ಟಡ ಸಂಖ್ಯೆ 5ರಲ್ಲಿ ಬೆಂಕಿ ಕಾಣಿಸಿಕೊಂಡಿದೆ.. 13 ಅಂತಸ್ತಿನ ಈ ಅಪಾರ್ಟ್‌ಮೆಂಟ್‌ನಲ್ಲಿ ಬೆಳಗ್ಗೆ 6.53ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ವಿದ್ಯುತ್ ವೈರಿಂಗ್ ಮೂಲಕ ಹರಡಿದೆ.. ಇದರಿಂದ ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿಕೊಂಡಿದೆ.. ಪರಿಣಾಮ ನಿವಾಸಿಗಳು ಉಸಿರಾಡಲು ಪರದಾಡುವಂತಾಗಿದೆ..

ಈ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ.. ಗಾಯಾಳುಗಳಲ್ಲಿ ಐದು ವರ್ಷದ ಬಾಲಕ, ಇಬ್ಬರು ಹದಿಹರೆಯದ ಬಾಲಕಿಯರು ಹಾಗೂ ಓರ್ವ ಹಿರಿಯ ನಾಗರಿಕರೂ ಸೇರಿದ್ದಾರೆ.. ಎಂಟು ಮಂದಿ ಹೊಗೆಯಿಂದ ಉಸಿರುಗಟ್ಟುವಿಕೆಗೆ ಒಳಗಾಗಿದ್ದರೆ, ಮತ್ತೊಬ್ಬ ವ್ಯಕ್ತಿಯ ಬಲಗಾಲಿಗೆ ಗಂಭೀರ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಗಾಯಾಳುಗಳನ್ನು ತಕ್ಷಣವೇ ಘಾಟ್‌ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ..


ಬೆಂಕಿ ಅವಘಡದ ಮಾಹಿತಿ ಸಿಗುತ್ತಿದ್ದಂತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸರು, 108 ಆಂಬ್ಯುಲೆನ್ಸ್ ಹಾಗೂ ಸ್ಥಳೀಯ ವಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆ 7.21ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ.. ಸುಮಾರು ಅರ್ಧ ಗಂಟೆಯೊಳಗೆ ಬೆಂಕಿ ನಂದಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ..

ಇನ್ನು ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.. ಆದರೆ ಅವಘಡಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.. ಕಟ್ಟಡದ ಸುರಕ್ಷತಾ ವ್ಯವಸ್ಥೆ, ವಿದ್ಯುತ್ ವೈರಿಂಗ್ ಹಾಗೂ ಆಸ್ತಿ ಹಾನಿಯ ಪ್ರಮಾಣದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಮಹಡಿ ಕಟ್ಟಡಗಳ ಅಗ್ನಿ ಅವಘಡಗಳು ಆತಂಕ ಮೂಡಿಸುತ್ತಿವೆ.. ಈ ತಿಂಗಳ ಆರಂಭದಲ್ಲಿ ವಸಾಯಿ-ನಲ್ಲಸೋಪರಾ ಲಿಂಕ್ ರಸ್ತೆಯ ಇಂಪೀರಿಯಲ್ ಹೈಟ್ಸ್ ಕಟ್ಟಡದಲ್ಲೂ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.. ಆ ಘಟನೆಯಲ್ಲಿ ಇಬ್ಬರು ಮಹಿಳೆಯರು ಉಸಿರುಗಟ್ಟಿ ಸಾವನ್ನಪ್ಪಿದ್ದರು.. 14ನೇ ಮಹಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ಕ್ರೇನ್ ಮೂಲಕ ರಕ್ಷಿಸಲಾಗಿತ್ತು..

ಬಹುಮಹಡಿ ಕಟ್ಟಡಗಳಲ್ಲಿ ಹಳೆಯ ವಿದ್ಯುತ್ ವೈರಿಂಗ್, ಎಲೆಕ್ಟ್ರಿಕ್ ಡಕ್ಟ್‌ಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆಗಳಲ್ಲಿನ ಲೋಪಗಳು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.. ಬೆಂಕಿ ಕಾಣಿಸಿಕೊಂಡಾಗ ಹೊಗೆ ಮೇಲಿನ ಮಹಡಿಗಳಿಗೆ ವೇಗವಾಗಿ ಹರಡುವ ಸಾಧ್ಯತೆಯೂ ಇದೆ.. ಹೀಗಾಗಿ ಅಗ್ನಿಶಾಮಕ ಉಪಕರಣಗಳ ನಿರ್ವಹಣೆ, ತುರ್ತು ನಿರ್ಗಮನ ದಾರಿಗಳ ಲಭ್ಯತೆ ಮತ್ತು ವಿದ್ಯುತ್ ವ್ಯವಸ್ಥೆಯ ನಿಯಮಿತ ತಪಾಸಣೆ ಅತ್ಯಗತ್ಯವಾಗಿದೆ..

 ಈ ತಿಂಗಳ ಆರಂಭದಲ್ಲಿ ವಸಾಯಿ-ನಲ್ಲಸೋಪರಾ ಲಿಂಕ್ ರಸ್ತೆಯ ಇಂಪೀರಿಯಲ್ ಹೈಟ್ಸ್ ಕಟ್ಟಡದಲ್ಲೂ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.. ಆ ಘಟನೆಯಲ್ಲಿ ಇಬ್ಬರು ಮಹಿಳೆಯರು ಉಸಿರುಗಟ್ಟಿ ಸಾವನ್ನಪ್ಪಿದ್ದರು.. 14ನೇ ಮಹಡಿಯಲ್ಲಿ ಸಿಲುಕಿದ್ದ ನಾಲ್ವರನ್ನು ಕ್ರೇನ್ ಮೂಲಕ ರಕ್ಷಿಸಲಾಗಿತ್ತು..

ಒಟ್ಟಿನಲ್ಲಿ, ಮುಂಬೈನ ಕುರ್ಲಾದಲ್ಲಿ ಸಂಭವಿಸಿದ ಈ ಅಗ್ನಿ ಅವಘಡ ಬಹುಮಹಡಿ ಕಟ್ಟಡಗಳ ಅಗ್ನಿ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ.. ಅದೃಷ್ಟವಶಾತ್, ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ.. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟಡಗಳ ಸುರಕ್ಷತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಅತ್ಯಗತ್ಯ..

 

 

 

Add Zee News as a Preferred Source
TAGS:
India