• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಮದುವೆ ದಿನವೇ ಅಪಘಾತ; ICUನಲ್ಲೇ ವಧುವಿಗೆ ತಾಳಿ ಕಟ್ಟಿದ ವರ! ಇದು ಅಪರೂಪದ ಮದುವೆ

ಮದುವೆ ದಿನವೇ ಅಪಘಾತ; ICUನಲ್ಲೇ ವಧುವಿಗೆ ತಾಳಿ ಕಟ್ಟಿದ ವರ! ಇದು ಅಪರೂಪದ ಮದುವೆ

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮದುವೆಯ ದಿನವೇ ಅಪಘಾತಕ್ಕೀಡಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೂಜಾ ಯಾದವ್ ಅವರನ್ನ ವರ ಸನ್ನಿ ಯಾದವ್ ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾರೆ. ಎಲ್‌ಎಲ್‌ಬಿ ಪರೀಕ್ಷೆ ಮುಗಿಸಿ ಸಹೋದರನೊಂದಿಗೆ ಮನೆಗೆ ಮರಳುತ್ತಿದ್ದ ವೇಳೆ ಪೂಜಾ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮದುವೆ ಮುಂದೂಡುವ ಬದಲು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಆಸ್ಪತ್ರೆಯಲ್ಲೇ ವಿವಾಹ ವಿಧಿಗಳನ್ನ ನೆರವೇರಿಸಲಾಗಿದ್ದು, ಈ ಘಟನೆ ಗಮನ ಸೆಳೆದಿದೆ.

Written ByPuttaraj K Alur
Published: Oct 07, 2026, 04:27 PM IST|Updated: Oct 07, 2026, 04:55 PM IST
joinshare
ಮದುವೆ ದಿನವೇ ಅಪಘಾತ; ICUನಲ್ಲೇ ವಧುವಿಗೆ ತಾಳಿ ಕಟ್ಟಿದ ವರ! ಇದು ಅಪರೂಪದ ಮದುವೆ
Image Credit: Gorakhpur News

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಕಲಿ ಔಷಧಿ ಜಾಲದ ಜೊತೆ ಸಂಪರ್ಕದಲ್ಲಿದ್ದ ಮೂರು ಕಂಪನಿಗಳ ಮೇಲೆ ದಾಳಿ

ನಕಲಿ ಔಷಧಿ ಜಾಲದ ಜೊತೆ ಸಂಪರ್ಕದಲ್ಲಿದ್ದ ಮೂರು ಕಂಪನಿಗಳ ಮೇಲೆ ದಾಳಿ

2

ಈ ರಾಜ್ಯದ ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್;‌ ಶೇ 3ರಷ್ಟು DA ಶೇ 2ರಷ್ಟು HRA ಹೆಚ್ಚಳ! ಎಷ್ಟಾಗಲಿದೆ ಒಟ್ಟು ಸಂಬಳ?

3

ಐಐಎಸ್‌ಸಿ ಪ್ರೊ. ಮಹೇಶ್ ಕಾಕ್ಡೆಗೆ ರಾಮಾನುಜನ್ ಪ್ರಶಸ್ತಿ! ಗಣಿತ ಕ್ಷೇತ್ರದ ಸಾಧನೆಗೆ ಜಾಗತಿಕ ಮನ್ನಣೆ

4

ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಸ್ಟಿಂಗ್ ಆಪರೇಶನ್! ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

5

ಕರ್ನಾಟಕದಲ್ಲಿ ಬಸ್ ಟಿಕೆಟ್ ದರದ ಏರಿಕೆಯಾಗೋದು ಪಕ್ಕಾ!!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Gorakhpur ICU Wedding: ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮದುವೆಯ ದಿನವೇ ಆಘಾತ ಎದುರಾದರೂ, ಅದೇ ದಿನ ಮದುವೆಯನ್ನ ಮುಂದೂಡದೆ ಆಸ್ಪತ್ರೆಯಲ್ಲೇ ವಿವಾಹ ನೆರವೇರಿಸಿದ ಅಪರೂಪದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧು ಪೂಜಾ ಯಾದವ್ ಅವರನ್ನ ವರ ಸನ್ನಿ ಯಾದವ್ ಆಸ್ಪತ್ರೆಯಲ್ಲೇ ಮದುವೆಯಾಗಿದ್ದಾರೆ.

ಗೋರಖ್‌ಪುರದ ಬನ್ಸ್‌ಗಾಂವ್ ಪ್ರದೇಶದ ಹತ್ವಾರ್ ಗ್ರಾಮದ ನಿವಾಸಿ ಪೂಜಾ ಯಾದವ್ ಹಾಗೂ ಮಹುವಾ ನಿವಾಸಿ ಸನ್ನಿ ಯಾದವ್ ಅವರ ಮದುವೆ ಮೇ 13, 2026ರಂದು ನಿಗದಿಯಾಗಿತ್ತು. ಮದುವೆಯ ಸಿದ್ಧತೆಗಳು ಪೂರ್ಣಗೊಂಡಿದ್ದವು. ಕುಟುಂಬಸ್ಥರು ಹಾಗೂ ಸಂಬಂಧಿಕರು ವಿವಾಹದ ಸಂಭ್ರಮದಲ್ಲಿದ್ದರು. ಆದರೆ ಮದುವೆಯ ದಿನವೇ ನಡೆದ ಅಪಘಾತದಿಂದ ಇಡೀ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ದುರಂತ!

ಪೂಜಾ ಯಾದವ್ ಎಲ್‌ಎಲ್‌ಬಿ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿನಿಯಾಗಿದ್ದು, ಮದುವೆಯ ದಿನವೂ ಪರೀಕ್ಷೆಗೆ ಹಾಜರಾಗಿದ್ದರು. ವರದಿಗಳ ಪ್ರಕಾರ, ಅವರು ತಮ್ಮ ಸಹೋದರನೊಂದಿಗೆ ಸಂತ ಕಬೀರ್ ನಗರ ಜಿಲ್ಲೆಯ ಕಾಲೇಜಿಗೆ ಪರೀಕ್ಷೆ ಬರೆಯಲು ತೆರಳಿದ್ದರು. ಪರೀಕ್ಷೆ ಮುಗಿಸಿ ಬೈಕ್‌ನಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ಮಾರ್ಗ ಮಧ್ಯೆ ಪೂಜಾಗೆ ಏಕಾಏಕಿ ತಲೆಸುತ್ತು ಕಾಣಿಸಿಕೊಂಡಿದೆ.

ಇದರಿಂದ ಬೈಕ್‌ನಿಂದ ಕೆಳಗೆ ಬಿದ್ದ ಪೂಜಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಅವರನ್ನ ತಕ್ಷಣವೇ ಗೋರಖ್‌ಪುರದ ದೌದ್‌ಪುರದಲ್ಲಿರುವ ಆರ್ಯನ್ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ಗಂಭೀರ ಗಾಯವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಅವರನ್ನ ಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸಿದರು.

ಮದುವೆ ಮುಂದೂಡದಿರಲು ಕುಟುಂಬಗಳ ನಿರ್ಧಾರ

ಪೂಜಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುದ್ದಿ ವರ ಹಾಗೂ ಅವರ ಕುಟುಂಬಕ್ಕೆ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳ ಸದಸ್ಯರು ಆಸ್ಪತ್ರೆಗೆ ಧಾವಿಸಿದರು. ವೈದ್ಯರು ಪೂಜಾ ಅಪಾಯದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರೂ, ತಕ್ಷಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮದುವೆಯನ್ನ ಮುಂದೂಡುವ ಬದಲು ನಿಗದಿಯಾಗಿದ್ದ ದಿನವೇ ವಿವಾಹದ ವಿಧಿಗಳನ್ನ ನೆರವೇರಿಸಲು ಎರಡೂ ಕುಟುಂಬಗಳು ನಿರ್ಧರಿಸಿದವು. ವಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಉಳಿದ ಮದುವೆ ಕಾರ್ಯಕ್ರಮಗಳನ್ನ ನಿಗದಿಯಂತೆ ನಡೆಸಲು ತೀರ್ಮಾನಿಸಲಾಯಿತು.

ರಾತ್ರಿ ಆಸ್ಪತ್ರೆ ತಲುಪಿದ ವರ

ಮೇ 13ರ ರಾತ್ರಿ ಸನ್ನಿ ಯಾದವ್ ಮದುವೆಯ ಉಡುಪಿನಲ್ಲಿ ಕುಟುಂಬಸ್ಥರು ಹಾಗೂ ಮದುವೆಯ ಬಳಗದೊಂದಿಗೆ ಆಸ್ಪತ್ರೆಗೆ ತೆರಳಿದರು. ಅಲ್ಲಿ ಪುರೋಹಿತರ ಸಮ್ಮುಖದಲ್ಲಿ ವಿವಾಹದ ವಿಧಿಗಳನ್ನ ನೆರವೇರಿಸಲಾಯಿತು. ಆಸ್ಪತ್ರೆಯ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೂಜಾ ಅವರ ಹಣೆಗೆ ಸನ್ನಿ ಸಿಂಧೂರವಿಟ್ಟರು. ಪುರೋಹಿತರು ಮಂತ್ರಗಳನ್ನ ಪಠಿಸಿದ ಹಿನ್ನೆಲೆಯಲ್ಲಿ ವಿವಾಹದ ಪ್ರಮುಖ ವಿಧಿಗಳು ನೆರವೇರಿದವು. ವರದಿಗಳ ಪ್ರಕಾರ, ಈ ಸಮಾರಂಭ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ನಡೆದಿತ್ತು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಕುಟುಂಬಸ್ಥರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ವಧು ಆಸ್ಪತ್ರೆಯ ಉಡುಪಿನಲ್ಲೇ ಬೆಡ್ ಮೇಲೆ ಮಲಗಿದ್ದರೆ, ವರ ಮದುವೆಯ ಉಡುಪಿನಲ್ಲಿ ವಿವಾಹ ವಿಧಿಯಲ್ಲಿ ಭಾಗವಹಿಸಿದ್ದರು. ಸಾಮಾನ್ಯ ಮದುವೆಯ ಸಂಭ್ರಮಕ್ಕಿಂತ ಸಂಪೂರ್ಣ ಭಿನ್ನವಾಗಿದ್ದರೂ, ಎರಡೂ ಕುಟುಂಬಗಳ ಪಾಲಿಗೆ ಅದು ಭಾವುಕ ಕ್ಷಣವಾಗಿತ್ತು.

ಉಳಿದ ವಿಧಿಗಳು ಗ್ರಾಮದಲ್ಲಿ 

ಆಸ್ಪತ್ರೆಯಲ್ಲಿ ಪ್ರಮುಖ ವಿವಾಹ ವಿಧಿ ಮುಗಿಸಿದ ಬಳಿಕ ಸನ್ನಿ ಯಾದವ್ ಗ್ರಾಮಕ್ಕೆ ಮರಳಿದರು. ಅಲ್ಲಿ ಮದುವೆಗೆ ಸಂಬಂಧಿಸಿದ ಉಳಿದ ಸಾಂಪ್ರದಾಯಿಕ ವಿಧಿಗಳನ್ನ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು ಎಂದು ವರದಿಯಾಗಿದೆ. ಪೂಜಾ ಆರೋಗ್ಯ ಚೇತರಿಸಿಕೊಂಡ ಬಳಿಕ ಅವರನ್ನ ಮನೆಗೆ ಕರೆದುಕೊಂಡು ಹೋಗುವ ಯೋಜನೆ ಕುಟುಂಬದಲ್ಲಿತ್ತು ಎನ್ನಲಾಗಿದೆ. ಈ ಘಟನೆಯ ಕುರಿತು ವರದಿಯಾದ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಗಮನ ಸೆಳೆದಿವೆ. ಮದುವೆಯ ದಿನವೇ ಎದುರಾದ ಅಪಘಾತದಿಂದ ವಧು ಆಸ್ಪತ್ರೆ ಸೇರುವಂತಾದರೂ, ಮದುವೆಯನ್ನ ರದ್ದುಗೊಳಿಸುವ ಅಥವಾ ಮುಂದೂಡುವ ಬದಲು ಎರಡೂ ಕುಟುಂಬಗಳು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಂಡಿರುವುದು ಈ ಘಟನೆಯ ಪ್ರಮುಖ ಅಂಶವಾಗಿದೆ.

ಸದ್ಯ ಪೂಜಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮದುವೆಯ ಸಂಭ್ರಮದ ನಡುವೆ ಎದುರಾದ ಅಪಘಾತ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದರೂ, ಬಳಿಕ ಆಸ್ಪತ್ರೆಯಲ್ಲೇ ನಡೆದ ವಿವಾಹ ಈ ಘಟನೆಯನ್ನ ಅಪರೂಪದ ಸುದ್ದಿಯನ್ನಾಗಿ ಮಾಡಿದೆ.

Add Zee News as a Preferred Source
TAGS:
Viral
Kannada News