SOCIAL MEDIA

Newsletter

PARTNER SITES
Select Language Select State

Viral News: ಪಟಾಕಿ ಅಂಗಡಿ ಇಡಲು ದುಡ್ಡಿಲ್ಲವೆಂದ ಪ್ರಿಯಕರ: ಸ್ವಂತ ಮನೆಯಲ್ಲೇ ₹32 ಲಕ್ಷ ದೋಚಿ ಕೊಟ್ಟ ಪ್ರೇಯಸಿ!

ದೀಪಾವಳಿ ಹಬ್ಬಕ್ಕೆ ಪ್ರಿಯಕರ ಪಟಾಕಿ ಅಂಗಡಿ ಆರಂಭಿಸಲು ಹಣವಿಲ್ಲದ ಕಾರಣ ಯುವತಿಯೊಬ್ಬಳು ತನ್ನ ಸ್ವಂತ ಮನೆಯಲ್ಲೇ ₹32 ಲಕ್ಷ ಕದ್ದು ಆತನಿಗೆ ನೀಡಿದ್ದಾಳೆ ಎನ್ನಲಾಗಿದೆ. ಈ ಅಚ್ಚರಿಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ತಮಾಷೆಯ ಹಾಗೂ ವ್ಯಂಗ್ಯಭರಿತ ಕಾಮೆಂಟ್‌ಗಳನ್ನ ಮಾಡುತ್ತಿದ್ದಾರೆ.

Written By Puttaraj K Alur
Published: Nov 14, 2026, 17:01 IST | Updated: Nov 14, 2026, 17:20 IST
Image Credit: Diwali Business
Join

Viral News: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಿಯಕರನಿಗೆ ಪಟಾಕಿ ಅಂಗಡಿ ಆರಂಭಿಸಲು ಹಣದ ಅಗತ್ಯವಿತ್ತು. ಆದರೆ ವ್ಯವಹಾರ ಶುರು ಮಾಡಲು ಆತನ ಬಳಿ ಸಾಕಷ್ಟು ಹಣವಿರಲಿಲ್ಲ. ಇದನ್ನ ತಿಳಿದ ಯುವತಿಯೊಬ್ಬಳು ಪ್ರಿಯಕರನ ಆಸೆಗೆ ನೆರವಾಗಲು ತನ್ನದೇ ಮನೆಯಲ್ಲಿದ್ದ ಬರೋಬ್ಬರಿ ₹32 ಲಕ್ಷ ನಗದನ್ನ ಕದ್ದು ಆತನಿಗೆ ನೀಡಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.

ಪ್ರಿಯಕರನ ವ್ಯಾಪಾರದ ಕನಸಿಗೆ ಬೆಂಬಲವಾಗಿ ನಿಲ್ಲಲು ಮುಂದಾದ ಯುವತಿ, ಹಣ ಹೊಂದಿಸಲು ಆಯ್ಕೆ ಮಾಡಿಕೊಂಡ ಮಾರ್ಗ ಮಾತ್ರ ಕಾನೂನುಬಾಹಿರವಾಗಿತ್ತು. ಮನೆಯವರ ಗಮನಕ್ಕೆ ಬಾರದಂತೆ ಹಣವನ್ನ ಕದಿಯುವ ಮೂಲಕ ಆಕೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸ್ವಂತ ಮನೆಯಲ್ಲೇ ಲಕ್ಷಾಂತರ ರೂಪಾಯಿ ಹಣವನ್ನ ಕದ್ದು ಪ್ರಿಯಕರನ ಕೈಗೆ ನೀಡಿರುವ ಘಟನೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಅಂಗಡಿ ಆರಂಭಿಸುವ ಆಲೋಚನೆ ಪ್ರಿಯಕರನಿಗಿತ್ತು. ಆದರೆ ಅಂಗಡಿ ತೆರೆಯಲು ಬೇಕಾದ ಹಣದ ಕೊರತೆ ಆತನನ್ನ ಕಾಡುತ್ತಿತ್ತು. ಪ್ರಿಯಕರನ ಈ ಆರ್ಥಿಕ ಸಮಸ್ಯೆಯನ್ನ ಪರಿಹರಿಸಲು ಮುಂದಾದ ಯುವತಿ, ತನ್ನ ಮನೆಯಲ್ಲಿದ್ದ ಹಣವನ್ನೇ ಬಳಸಿಕೊಂಡಿದ್ದಾಳೆ. ಮನೆಯವರ ಕಣ್ಣು ತಪ್ಪಿಸಿ ₹32 ಲಕ್ಷ ನಗದನ್ನ ತೆಗೆದುಕೊಂಡು ಪ್ರಿಯಕರನಿಗೆ ಹಸ್ತಾಂತರಿಸಿದ್ದಾಳೆ.

ಪ್ರಿಯಕರನ ವ್ಯವಹಾರಕ್ಕೆ ನೆರವಾಗಬೇಕೆಂಬ ಉದ್ದೇಶದಿಂದ ಯುವತಿ ಇಂತಹ ನಿರ್ಧಾರ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ವ್ಯಾಪಾರ ಆರಂಭಿಸಲು ಹಣ ಹೊಂದಿಸುವುದು ದೊಡ್ಡ ಸವಾಲಾಗಿರುತ್ತದೆ. ಆದರೆ ಇಲ್ಲಿ ಪ್ರಿಯಕರನಿಗೆ ಹಣದ ಕೊರತೆಯಾಗಬಾರದು ಎಂಬ ಕಾರಣಕ್ಕೆ ಯುವತಿ ತನ್ನ ಮನೆಯಲ್ಲಿದ್ದ ದೊಡ್ಡ ಮೊತ್ತದ ಹಣವನ್ನೇ ಕದ್ದಿರುವುದು ಘಟನೆಯ ಪ್ರಮುಖ ಅಂಶವಾಗಿದೆ.

ಈ ಘಟನೆ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ವಿಶೇಷವಾಗಿ ಪ್ರಿಯಕರನಿಗಾಗಿ ಸ್ವಂತ ಮನೆಯಲ್ಲೇ ₹32 ಲಕ್ಷ ಕದ್ದಿರುವ ವಿಚಾರ ನೆಟ್ಟಿಗರ ಗಮನ ಸೆಳೆದಿದೆ. ಘಟನೆಯ ಕುರಿತು ಹಲವರು ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ವಿವಿಧ ರೀತಿಯ ಕಾಮೆಂಟ್‌ಗಳನ್ನ ಹಂಚಿಕೊಳ್ಳುತ್ತಿದ್ದಾರೆ.

'ಪ್ರಿಯಕರನಿಗಾಗಿ ಸ್ವಂತ ಮನೆಯಲ್ಲೇ ₹32 ಲಕ್ಷ ಕದಿಯುವ ಇಂತಹ ಪ್ರೇಯಸಿ ಎಲ್ಲಿ ಸಿಗುತ್ತಾಳೆ ಬ್ರೋ?' ಎಂಬಂತಹ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇನ್ನು ಕೆಲವರು ಯುವತಿಯ ನಿರ್ಧಾರವನ್ನ ಪ್ರೀತಿಯ ಅಮಲಿನಲ್ಲಿ ಮಾಡಿದ ಸಾಹಸವೆಂದು ಟೀಕಿಸುವ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಪ್ರಿಯಕರನ ವ್ಯಾಪಾರದ ಆಸೆಗೆ ನೆರವಾಗಲು ಯುವತಿ ಕೈಗೊಂಡ ಕ್ರಮ ಇದೀಗ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವೆಂಬ ಮಾತಿಗೆ ಈ ಘಟನೆ ಉದಾಹರಣೆಯಾಗಿದೆ ಎಂದು ಕೆಲವರು ತಮಾಷೆ ಮಾಡುತ್ತಿದ್ದರೆ, ಇನ್ನೂ ಕೆಲವರು ಕಳ್ಳತನದ ಮಾರ್ಗ ಹಿಡಿದಿರುವುದನ್ನ ಪ್ರಶ್ನಿಸುತ್ತಿದ್ದಾರೆ.

ಒಟ್ನಲ್ಲಿ ದೀಪಾವಳಿಗೆ ಪಟಾಕಿ ಅಂಗಡಿ ತೆರೆಯಲು ಪ್ರಿಯಕರನ ಬಳಿ ಹಣವಿಲ್ಲವೆಂಬ ಕಾರಣಕ್ಕೆ ಯುವತಿಯೊಬ್ಬಳು ತನ್ನ ಸ್ವಂತ ಮನೆಯಲ್ಲೇ ₹32 ಲಕ್ಷ ಕದ್ದು ನೀಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪ್ರಿಯಕರನಿಗೆ ನೆರವಾಗಲು ಯುವತಿ ಮಾಡಿದ ಈ ಕೃತ್ಯ ಇದೀಗ ಸಖತ್ ವೈರಲ್ ಆಗುತ್ತಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES