SOCIAL MEDIA

Newsletter

PARTNER SITES
Select Language Select State

ನಿಮ್ಮ ಮನೆಗೂ ಬರಬಹುದು ಈ IAS ಅಧಿಕಾರಿಗಳು.. ಈ ಆಫೀಸರ್ಸ್‌ ಬಂದರೆ ತಕ್ಷಣ ನೀವು ಹೀಗೆ ಮಾಡಿ!

ಮದುವೆ ಹಾಗೂ ವರದಕ್ಷಿಣೆ ಹೆಸರಿನಲ್ಲಿ ಭಾರಿ ವಂಚನೆ ನಡೆದಿದೆ. ಇಟಾವಾ ನಿವಾಸಿ ಪ್ರೀತಮ್ ಕುಮಾರ್ ನಿಶಾದ್ ಎಂಬಾತ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ಯುವತಿಯನ್ನು ಪರಿಚಯಿಸಿಕೊಂಡು, ತಾನೊಬ್ಬ ಐಎಎಸ್ ಅಧಿಕಾರಿ ಎಂದು ನಂಬಿಸಿ ಮೋಸ ಮಾಡುತ್ತಿದ್ದನು.

Reported By Bhimappa Written By Bhimappa
Published: Sep 12, 2026, 06:32 PM IST | Updated: Sep 17, 2026, 04:05 PM IST
Image Credit: File Photo
Join

ರಾಜ್ಯ ಮತ್ತು ಕೇಂದ್ರಮಟ್ಟದ ಉನ್ನತ ಆಡಳಿತಾತ್ಮಕ ಹುದ್ದೆಗಳಾದ ಐಎಎಸ್ ಅಧಿಕಾರಿಗಳ ಹೆಸರಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುವ, ಹಣ ವಸೂಲಿ ಮಾಡುವ, ಮಾರುಕಟ್ಟೆಗಳಲ್ಲಿ ವಂಚನೆ ಎಸಗುವ ಸರಣಿ ಪ್ರಕರಣಗಳು ಇತ್ತೀಚೆಗೆ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳಕಿಗೆ ಬಂದಿವೆ. ನಕಲಿ ಸರ್ಕಾರಿ ಗುರುತಿನ ಚೀಟಿಗಳು, ನಕಲಿ ಲೆಟರ್‌ಹೆಡ್‌ಗಳು, ನಕಲಿ ಸೇರ್ಪಡೆ ಆದೇಶಗಳು ಮತ್ತು ಪ್ರಭಾವಿ ರಾಜಕಾರಣಿಗಳೊಂದಿಗೆ ಇರುವಂತಹ ಎಡಿಟ್‌ ಮಾಡಿರುವ ಫೋಟೋಗಳನ್ನು ತೋರಿಸಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ಕಿಲಾಡಿಗಳ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಮೋಸದಾಟದ ಹೇಗೆಲ್ಲ ನಡೆಯಿತು, ಎಲ್ಲೆಲ್ಲಿ ನಡೆದಿದೆ ಎನ್ನುವ ಇತರೆ ಮಾಹಿತಿ ಇಲ್ಲಿ ಇದೆ.

ತ್ರಿಪ್ತಿ ಸಿಂಗ್ ರಜಪೂತ್ ಎನ್ನುವ ಮಹಿಳೆ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕಿ ಹುದ್ದೆಯಲ್ಲಿ ಇರುವುದಾಗಿ ಜನರನ್ನು ನಂಬಿಸಿದ್ದಾಳೆ. ನಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸುತ್ತಿದ್ದಾಳೆ. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಭೋಪಾಲ್ ಪೊಲೀಸರು ತ್ರಿಪ್ತಿ ಸಿಂಗ್ ರಜಪೂತ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆದ ರೀಲ್ಸ್‌ನಿಂದ ಈಕೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಪೊಲೀಸರು ಈ ಮೋಸದ ಜಾಲವನ್ನು ಪತ್ತೆ ಮಾಡಿದ್ದಾರೆ. ಈ ವಂಚನೆ ಜಾಲ ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಹೊರಬಂದಿದೆ. ಐಎಎಸ್ ಅಧಿಕಾರಿಗಳೆಂದು ಹೇಳಿಕೊಳ್ಳುವ ಮೂವರು ಮಹಿಳೆಯರು ಒಳಗೊಂಡಿದ್ದ ಇನ್‌ಸ್ಟಾಗ್ರಾಮ್ ರೀಲ್ ಒಂದನ್ನು ಭೋಪಾಲ್ ಪೊಲೀಸರು ನೋಡಿದ್ದಾರೆ. ಆ ವಿಡಿಯೋದಲ್ಲಿ ಮಹಿಳೆಯರು, ನಾವು ಮಧ್ಯಪ್ರದೇಶ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದೇವೆ. ಒಳಗೆ ಫೋಟೋ ತೆಗೆಯಲು ಬಿಡದ ಕಾರಣ ಹೊರಗಡೆ ಫೋಟೋ ತೆಗೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಮತ್ತೊಬ್ಬ ಮಹಿಳೆ ನಾವು ಐಎಎಸ್ ಅಧಿಕಾರಿಗಳು ಎಂದಿದ್ದರು.

ಆದರೆ, ತನಿಖೆ ನಡೆಸಿದ ಪೊಲೀಸರಿಗೆ ಈ ವೀಡಿಯೋವನ್ನು ಕಲಾಪದ ಹೊರಗೆ ತೆಗೆದಿರುವುದು ಅಲ್ಲ, ಬದಲಿಗೆ ಭೋಪಾಲ್‌ನ ಮಾನವಶಾಸ್ತ್ರೀಯ ವಸ್ತು ಸಂಗ್ರಹಾಲಯ ಸಂಕೀರ್ಣದ ಗ್ಯಾಲರಿಯೊಳಗೆ ಮಾಡಿರುವ ವಿಡಿಯೋ ಎಂದು ಖಚಿತ ಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ತ್ರಿಪ್ತಿ ಸಿಂಗ್, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ, ಪ್ರವಾಸೋದ್ಯಮ ಇಲಾಖೆಯ ಆಸ್ತಿಗಳನ್ನು ಗುತ್ತಿಗೆಗೆ ಕೊಡಿಸುವುದಾಗಿ ಮತ್ತು ಹಿರಿಯ ಅಧಿಕಾರಿಗಳ ಸಂಪರ್ಕ ಕಲ್ಪಿಸುವುದಾಗಿ ಹೇಳಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಳು.

ತಾನು ನಿಜವಾದ ಐಎಎಸ್‌ ಅಧಿಕಾರಿ ಎಂದು ನಂಬಿಸಲು ಈಕೆ ಭಾರತ ಸರ್ಕಾರ ಎಂದು ಬರೆದ ವಾಹನಗಳು, ನಕಲಿ ಲೆಟರ್‌ಹೆಡ್‌ಗಳು, ನಕಲಿ ಪತ್ರಗಳು ಹಾಗೂ ವಿವಿಧ ಪ್ರಶಸ್ತಿ- ಟ್ರೋಫಿಗಳನ್ನು ಜನರಿಗೆ ಅರಿವಿಲ್ಲದಂತೆ ಪರಿಚಯ ಮಾಡಿಸುತ್ತಿದ್ದಳು. ಅವುಗಳನ್ನು ನೋಡಿದ ಜನರು ಆಕೆ ಐಎಎಸ್‌ ಆಫೀಸರೆಂದು ನಂಬುತ್ತಿದ್ದರು. ಪೊಲೀಸರು ತ್ರಿಪ್ತಿ ಸಿಂಗ್ ಹಾಗೂ ಆಕೆಯ ಸಹೋದರನನ್ನು ಬಂಧಿಸಿದ್ದು ಲ್ಯಾಪ್‌ಟಾಪ್‌ನಿಂದ ಅಳಿಸಿ ಹಾಕಲಾದ ಡೇಟಾ, ಹಣಕಾಸಿನ ವಹಿವಾಟು ಮತ್ತು ನಕಲಿ ದಾಖಲೆ ಪೂರೈಸುತ್ತಿದ್ದ ಜಾಲದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಭೋಪಾಲ್ ಪ್ರಕರಣಕ್ಕೆ ಕೇವಲ ಎರಡು ದಿನಗಳ ಮೊದಲು, ಮಧ್ಯಪ್ರದೇಶದ ಇಂದೋರ್‌ನಲ್ಲಿ 28 ವರ್ಷದ ಹಿಮಾಂಶು ಪಾಂಚಾಲ್ ಎಂಬ ನಕಲಿ ಐಎಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದರು. ಗುಜರಾತ್‌ನ ಅಹಮದಾಬಾದ್ ನಿವಾಸಿಯಾದ ಹಿಮಾಂಶು, ಇಂದೋರ್‌ನ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ 16 ಜನರಿಗೆ ಅದ್ದೂರಿ ಪಾರ್ಟಿ ಆಯೋಜಿಸಿದ್ದನು. ಪಾರ್ಟಿಯಲ್ಲಿ ಚೆನ್ನಾಗಿ ತಿಂದು, ಕುಡಿದು ತೇಗಿದ್ದರು. ಆ ಮೇಲೆ ಹೋಟೆಲ್‌ಗೆ ಬಿಲ್‌ ಪಾವತಿ ಮಾಡಲಾಗದೇ ಐಎಎಸ್‌ ಅಧಿಕಾರಿ ಎಂದು ಸುಳ್ಳು ಹೇಳಿದ್ದನು.  

ಆದರೆ, ಪಾರ್ಟಿ ಮುಗಿದ ನಂತರ ಬಿಲ್ ಪಾವತಿಸದೆ ನನ್ನ ಪಿಎ ಬಂದು ಬಿಲ್ ಪಾವತಿಸುತ್ತಾನೆ ಎಂದು ಹೇಳಿ ಹೋಟೆಲ್‌ನಿಂದ ಕಾಲ್ಕಿತ್ತಿದ್ದನು. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂತು. ಆತನ ಬಾಡಿಗೆ ಮನೆಗೆ ದಾರಿ ಹುಡುಕಿ ಹೋದ ಪೊಲೀಸರಿಗೆ ಐಎಎಸ್ ರಾಜ್ ಸೋನಿ, ಜಿಲ್ಲಾ ಕಲೆಕ್ಟರ್ ಎಂದು ಬರೆದ ನಕಲಿ ನಾಮಫಲಕ ಪತ್ತೆಯಾಗಿವೆ. ಈತನ ಬಳಿ ಯಾವುದೇ ನಿಜವಾದ ದಾಖಲೆಗಳಿಲ್ಲ. ಈತನ ವಿರುದ್ಧ ಗುಜರಾತ್‌ನಲ್ಲೂ ಹಲವು ವಂಚನೆ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ತಿಳಿದು ಬಂದಿವೆ.

ಉತ್ತರ ಪ್ರದೇಶದಲ್ಲಿ ಮದುವೆ ಹಾಗೂ ವರದಕ್ಷಿಣೆ ಹೆಸರಿನಲ್ಲಿ ಭಾರಿ ವಂಚನೆ ನಡೆದಿದೆ. ಇಟಾವಾ ನಿವಾಸಿ ಪ್ರೀತಮ್ ಕುಮಾರ್ ನಿಶಾದ್ ಎಂಬಾತ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಮೂಲಕ ಯುವತಿಯನ್ನು ಪರಿಚಯಿಸಿಕೊಂಡು, ತಾನೊಬ್ಬ ಐಎಎಸ್ ಅಧಿಕಾರಿ ಎಂದು ನಂಬಿಸಿ ಮೋಸ ಮಾಡುತ್ತಿದ್ದನು. ತನ್ನ ಮಾತಿಗೆ ಆಧಾರವಾಗಿ ನಕಲಿ ಸಂದರ್ಶನ ವೀಡಿಯೊಗಳು, ನಕಲಿ ಕಚೇರಿಯ ಫೋಟೋಸ್‌ ಮತ್ತು ಪ್ರಭಾವಿ ರಾಜಕಾರಣಿಗಳೊಂದಿಗೆ ಇರುವ ಫೋಟೋಗಳನ್ನು ಶೇರ್‌ ಮಾಡಿ ಅವರನ್ನು ನಂಬಿಸುತ್ತಿದ್ದನು. ಆರಂಭದಲ್ಲಿ ತನಗೆ ವರದಕ್ಷಿಣೆ ಬೇಡ ಎಂದು ನಾಟಕವಾಡಿ ನಿಶ್ಚಿತಾರ್ಥದ ಸಮಯದಲ್ಲಿ 10 ಲಕ್ಷ ರೂಪಾಯಿಗಳು ಮತ್ತು ಮದುವೆಯ ದಿನವೇ 5 ಲಕ್ಷ ರೂಪಾಯಿ ಕ್ಯಾಶ್‌ ವಧು ಕುಟುಂಬಸ್ಥರಿಂದ ಪಡೆಯುತ್ತಿದ್ದನು.

ಮದುವೆಯಾದ ಕೆಲವು ದಿನಗಳ ನಂತರ ನಿಶಾದ್ ಐಎಎಸ್ ಅಧಿಕಾರಿಯಲ್ಲ ಎಂಬ ಕಹಿ ಸತ್ಯ ವಧುವಿನ ಕಡೆಯವರಿಗೆ ತಿಳಿಯುತ್ತದೆ. ವಿಷಯ ತಿಳಿಯುತ್ತಿದ್ದಂತೆಯೇ ನಿಶಾದ್ ಮತ್ತು ಆತನ ಸಹೋದರಿ ತಲೆಮರೆಸಿಕೊಂಡಿದ್ದರು. ಪೊಲೀಸರು ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ವರದಕ್ಷಿಣೆ ಕಿರುಕುಳದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಆರಂಭದಲ್ಲಿ ಪೊಲೀಸರು ಮನೀಶ್ ಗುಪ್ತಾ ಎಂಬಾತನನ್ನು ಬಂಧಿಸಿದ್ದಾರೆ. ಈತ ತಾನೊಬ್ಬ ಐಎಎಸ್ ಅಧಿಕಾರಿ ಎಂದು ಮಾತ್ರವಲ್ಲದೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇರ ಉಸ್ತುವಾರಿಯಲ್ಲಿ ರಹಸ್ಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಾರ್ವಜನಿಕರನ್ನು ಬೆದರಿಸುತ್ತಿದ್ದನು. ಈತ ಪೊಲೀಸರ ವಿಚಾರಣೆ ವೇಳೆ ಕೇಂದ್ರ ವಿಜಿಲೆನ್ಸ್ ಆಯೋಗದ ನಕಲಿ ಕಾರ್ಡ್ ಹಾಗೂ ನಕಲಿ ಐಎಎಸ್ ಗುರುತಿನ ಚೀಟಿಯನ್ನು ತೋರಿಸಿದ್ದನು. ಇದಕ್ಕೆ ಪೊಲೀಸರೇ ಶಾಕ್‌ ಆಗದ್ದರು. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES