• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಅಸಲಿ ಠಾಣೆ ಪಕ್ಕದಲ್ಲೇ ನಕಲಿ ಪೊಲೀಸ್‌ ಸ್ಟೇಷನ್‌: 8 ತಿಂಗಳು ಪೊಲೀಸರನ್ನೇ ಯಾಮಾರಿಸಿದ ಖತರ್ನಾಕ್ ಗ್ಯಾಂಗ್‌!

ಅಸಲಿ ಠಾಣೆ ಪಕ್ಕದಲ್ಲೇ ನಕಲಿ ಪೊಲೀಸ್‌ ಸ್ಟೇಷನ್‌: 8 ತಿಂಗಳು ಪೊಲೀಸರನ್ನೇ ಯಾಮಾರಿಸಿದ ಖತರ್ನಾಕ್ ಗ್ಯಾಂಗ್‌!

ಬಿಹಾರದ ಬಂಕಾ (Banka) ಜಿಲ್ಲೆಯ ಹೋಟೆಲ್ ಒಂದರಲ್ಲಿ ಈ ವಂಚಕರ ತಂಡ ನಕಲಿ ಪೊಲೀಸ್ ಠಾಣೆಯನ್ನ ಸ್ಥಾಪಿಸಿತ್ತು. ಕಳೆದ ಎಂಟು ತಿಂಗಳಿನಿಂದ ಇದೇ ಸ್ಥಳದಲ್ಲಿ ಯಾವುದೇ ಆತಂಕವಿಲ್ಲದೆ ತಮ್ಮ ಚಟುವಟಿಕೆಗಳನ್ನ ನಡೆಸಿಕೊಂಡು ಬಂದಿತ್ತು. ಸಾಮಾನ್ಯ ಪೊಲೀಸ್ ಠಾಣೆಯಂತೆ ಕಾಣುವ ರೀತಿಯಲ್ಲಿ ಕಚೇರಿಯನ್ನ ಸಿದ್ಧಪಡಿಸಿಕೊಂಡಿದ್ದ ತಂಡ, ಹೊರಗಿನವರಿಗೆ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.

Written ByPuttaraj K Alur
Published: Nov 18, 2026, 12:56 IST|Updated: Nov 18, 2026, 13:30 IST
joinshare
ಅಸಲಿ ಠಾಣೆ ಪಕ್ಕದಲ್ಲೇ ನಕಲಿ ಪೊಲೀಸ್‌ ಸ್ಟೇಷನ್‌: 8 ತಿಂಗಳು ಪೊಲೀಸರನ್ನೇ ಯಾಮಾರಿಸಿದ ಖತರ್ನಾಕ್ ಗ್ಯಾಂಗ್‌!
Image Credit: Fake Police Station

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Fake Police Station: ಸಾಮಾನ್ಯವಾಗಿ ಮನೆ, ಅಂಗಡಿ ಅಥವಾ ಹಣಕಾಸು ಸಂಸ್ಥೆಗಳನ್ನ ಗುರಿಯಾಗಿಸಿಕೊಂಡು ಕಳ್ಳತನ ಮತ್ತು ದರೋಡೆ ನಡೆಸುವ ಘಟನೆಗಳನ್ನ ನೋಡಿರುತ್ತೇವೆ. ಆದರೆ ಬಿಹಾರದಲ್ಲಿ ಕಳ್ಳರ ತಂಡವೊಂದು ಜನರನ್ನ ವಂಚಿಸಲು ನಕಲಿ ಪೊಲೀಸ್ ಠಾಣೆಯನ್ನೇ ತೆರೆದಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಬರೋಬ್ಬರಿ ಎಂಟು ತಿಂಗಳ ಕಾಲ ಯಾರಿಗೂ ಅನುಮಾನ ಬಾರದಂತೆ ಪೊಲೀಸ್ ಠಾಣೆಯನ್ನ ನಿರ್ವಹಿಸಿದ ಈ ಗ್ಯಾಂಗ್, ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದರ ಜೊತೆಗೆ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದೆ ಎಂದು ವರದಿಯಾಗಿದೆ.

ಹೋಟೆಲ್‌ನಲ್ಲೇ ಕಾರ್ಯಾರಂಭ ಮಾಡಿದ ನಕಲಿ ಠಾಣೆ!

ಬಿಹಾರದ ಬಂಕಾ (Banka) ಜಿಲ್ಲೆಯ ಹೋಟೆಲ್ ಒಂದರಲ್ಲಿ ಈ ವಂಚಕರ ತಂಡ ನಕಲಿ ಪೊಲೀಸ್ ಠಾಣೆಯನ್ನ ಸ್ಥಾಪಿಸಿತ್ತು. ಕಳೆದ ಎಂಟು ತಿಂಗಳಿನಿಂದ ಇದೇ ಸ್ಥಳದಲ್ಲಿ ಯಾವುದೇ ಆತಂಕವಿಲ್ಲದೆ ತಮ್ಮ ಚಟುವಟಿಕೆಗಳನ್ನ ನಡೆಸಿಕೊಂಡು ಬಂದಿತ್ತು. ಸಾಮಾನ್ಯ ಪೊಲೀಸ್ ಠಾಣೆಯಂತೆ ಕಾಣುವ ರೀತಿಯಲ್ಲಿ ಕಚೇರಿಯನ್ನ ಸಿದ್ಧಪಡಿಸಿಕೊಂಡಿದ್ದ ತಂಡ, ಹೊರಗಿನವರಿಗೆ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.

ಈ ಪ್ರಕರಣದಲ್ಲಿ ಗಮನ ಸೆಳೆಯುವ ಸಂಗತಿಯೆಂದರೆ, ಕೇವಲ ಪೊಲೀಸ್ ವೇಷ ಧರಿಸಿದ ಒಂದೆರಡು ವ್ಯಕ್ತಿಗಳಷ್ಟೇ ಈ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ಬದಲಿಗೆ ಪೊಲೀಸ್ ಇಲಾಖೆಯಲ್ಲಿರುವ ಹುದ್ದೆಗಳನ್ನೇ ಅನುಕರಿಸುವ ಮೂಲಕ ಸಂಪೂರ್ಣ ತಂಡವನ್ನೇ ರೂಪಿಸಿಕೊಂಡಿದ್ದರು. ಡಿಎಸ್‌ಪಿ (DSP), ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌ಗಳ ಪಾತ್ರದಲ್ಲಿ ಪ್ರತ್ಯೇಕ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಅಲ್ಲಿಗೆ ಬರುವವರಿಗೆ ಅದು ನಿಜವಾದ ಪೊಲೀಸ್ ಠಾಣೆಯೇ ಎಂಬ ಭಾವನೆ ಮೂಡುವಂತೆ ಮಾಡಿದ್ದರು.

ಖಾಕಿ ಸಮವಸ್ತ್ರದಿಂದ ಕಚೇರಿವರೆಗೆ ಎಲ್ಲವೂ ನಕಲಿ!

ಅಸಲಿ ಪೊಲೀಸ್ ಠಾಣೆಯಲ್ಲಿ ಕಂಡುಬರುವ ಹಲವು ವ್ಯವಸ್ಥೆಗಳನ್ನ ಈ ಗ್ಯಾಂಗ್ ತನ್ನ ನಕಲಿ ಕಚೇರಿಯಲ್ಲೂ ರೂಪಿಸಿಕೊಂಡಿತ್ತು. ಖಾಕಿ ಸಮವಸ್ತ್ರ, ಪೊಲೀಸ್ ಅಧಿಕಾರಿಗಳಿಗೆ ಪ್ರತ್ಯೇಕ ಕುರ್ಚಿಗಳು, ಕಚೇರಿ ವ್ಯವಸ್ಥೆ ಹಾಗೂ ಸಾರ್ವಜನಿಕರಿಂದ ದೂರುಗಳನ್ನ ಸ್ವೀಕರಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ನೋಡಲು ಪೊಲೀಸ್ ಇಲಾಖೆಯ ಅಧಿಕೃತ ಕಚೇರಿಯಂತೆಯೇ ಭಾಸವಾಗುವಂತೆ ಎಲ್ಲವನ್ನೂ ಸಿದ್ಧಪಡಿಸಿದ್ದರು. ಠಾಣೆಗೆ ಬರುವ ಜನರೊಂದಿಗೆ ಪೊಲೀಸ್ ಸಿಬ್ಬಂದಿಯ ರೀತಿಯಲ್ಲೇ ವರ್ತಿಸುತ್ತಿದ್ದರು. 

ಹೀಗಾಗಿ ಈ ಕಚೇರಿಯ ಅಸಲಿಯತ್ತಿನ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಮೂಡದಂತೆ ನೋಡಿಕೊಂಡಿದ್ದರು. ಆದರೆ ಇಷ್ಟೆಲ್ಲಾ ವ್ಯವಸ್ಥೆ ರೂಪಿಸಿಕೊಂಡಿದ್ದರ ಹಿಂದೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶ ಇರಲಿಲ್ಲ. ಬದಲಾಗಿ ಪೊಲೀಸ್ ಠಾಣೆಯ ಹೆಸರಿನಲ್ಲಿ ಅಮಾಯಕ ಜನರನ್ನ ಗುರಿಯಾಗಿಸಿಕೊಂಡು ಹಣ ಸಂಪಾದಿಸುವುದೇ ಈ ತಂಡದ ಪ್ರಮುಖ ಉದ್ದೇಶವಾಗಿತ್ತು.

ಎಫ್‌ಐಆರ್ ದಾಖಲಿಸುವ ಹೆಸರಿನಲ್ಲಿ ಹಣ ವಸೂಲಿ

ತಮ್ಮ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಹಾಗೂ ದೂರುಗಳನ್ನ ದಾಖಲಿಸಲು ಬರುವ ಸಾರ್ವಜನಿಕರನ್ನ ಈ ವಂಚಕರು ಸುಲಿಗೆ ಮಾಡುತ್ತಿದ್ದರು. ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸುವವರಿಂದ ಎಫ್‌ಐಆರ್ (FIR) ದಾಖಲಿಸುವುದಾಗಿ ಹೇಳಿ ಹಣ ಪಡೆಯುತ್ತಿದ್ದರು. ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿ ಜನರಿಂದ ಹಣ ವಸೂಲಿ ಮಾಡುವುದು ಇವರ ವಂಚನೆಯ ಪ್ರಮುಖ ವಿಧಾನವಾಗಿತ್ತು.

ಇದಷ್ಟೇ ಅಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ಆಮಿಷವೊಡ್ಡಿದ್ದರು. ಪೊಲೀಸ್ ಅಧಿಕಾರಿಗಳಂತೆ ಗುರುತಿಸಿಕೊಂಡು ವಿಶ್ವಾಸ ಗಳಿಸಿದ ಬಳಿಕ ಉದ್ಯೋಗದ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದರು. ಉದ್ಯೋಗದ ನಿರೀಕ್ಷೆಯಲ್ಲಿದ್ದ ಹಲವರು ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರು.

ಅಸಲಿ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರ!

ಈ ಪ್ರಕರಣದಲ್ಲಿನ ಮತ್ತೊಂದು ಅಚ್ಚರಿಯ ಅಂಶವೆಂದರೆ, ನಕಲಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳವು ನಿಜವಾದ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ನಿವಾಸದಿಂದ ಕೇವಲ 500 ಮೀಟರ್ ಅಂತರದಲ್ಲಿತ್ತು. ಅಂದರೆ ಪೊಲೀಸ್ ಇಲಾಖೆಯ ಪ್ರಮುಖ ಕಚೇರಿಗಳ ಸಮೀಪದಲ್ಲೇ ಈ ವಂಚಕರ ತಂಡ ಎಂಟು ತಿಂಗಳ ಕಾಲ ತನ್ನ ಚಟುವಟಿಕೆಗಳನ್ನ ನಡೆಸಿಕೊಂಡು ಬಂದಿತ್ತು.

ಕೊನೆಗೆ ಅಸಲಿ ಪೊಲೀಸರಿಗೆ ಈ ನಕಲಿ ಠಾಣೆಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ. ಬಳಿಕ ಈ ಕುರಿತು ತನಿಖೆ ನಡೆಸಿದಾಗ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯ ಅಸಲಿ ಸ್ವರೂಪ ಬಯಲಾಗಿದೆ. ಪೊಲೀಸ್ ಅಧಿಕಾರಿಗಳ ವೇಷ ಧರಿಸಿ ಜನರನ್ನ ವಂಚಿಸುತ್ತಿದ್ದ ತಂಡದ ಕೃತ್ಯಗಳು ತನಿಖೆಯಿಂದ ಬೆಳಕಿಗೆ ಬಂದಿವೆ.

ಒಟ್ನಲ್ಲಿ ಪೊಲೀಸ್ ಇಲಾಖೆಯ ಹೆಸರನ್ನೇ ಬಳಸಿಕೊಂಡು ಎಂಟು ತಿಂಗಳ ಕಾಲ ಸಾರ್ವಜನಿಕರನ್ನ ವಂಚಿಸಿದ ಈ ಘಟನೆ ಬಿಹಾರದಲ್ಲಿ ಅಚ್ಚರಿ ಮೂಡಿಸಿದೆ. ಅಸಲಿ ಪೊಲೀಸ್ ಠಾಣೆ ಮತ್ತು ಎಸ್‌ಪಿ ನಿವಾಸದ ಸಮೀಪದಲ್ಲೇ ನಕಲಿ ಠಾಣೆ ಕಾರ್ಯನಿರ್ವಹಿಸುತ್ತಿದ್ದ ವಿಚಾರ ಈ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಈ ಬಗ್ಗೆ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ.   

Add Zee News as a Preferred Source
TAGS:
Viral
Kannada News