• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /'ಅರ್ನಬ್', 'ಮುರಸು', 'ಅಕ್ವಾನ್' ಆಯ್ತು ಈಗ 'ಕಾನಿ' ಚಂಡಮಾರುತದ ಸರದಿ.! ಅಲರ್ಟ್‌ ಘೋಷಣೆ

'ಅರ್ನಬ್', 'ಮುರಸು', 'ಅಕ್ವಾನ್' ಆಯ್ತು ಈಗ 'ಕಾನಿ' ಚಂಡಮಾರುತದ ಸರದಿ.! ಅಲರ್ಟ್‌ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಸತತ ನಾಲ್ಕನೇ ಬಾರಿಗೆ ಚಂಡಮಾರುತದ ಎಚ್ಚರಿಕೆ ಎದುರಾಗಿದೆ. ಮಾಲ್ಡೀವ್ಸ್ ಹೆಸರಿಸಿರುವ 'ಕಾನಿ' ಚಂಡಮಾರುತವು ನವೆಂಬರ್ 30ರ ವೇಳೆಗೆ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ, ಡಿಸೆಂಬರ್ ಮೊದಲ ವಾರದಲ್ಲಿ ತಮಿಳುನಾಡು-ಶ್ರೀಲಂಕಾ ಕರಾವಳಿಯತ್ತ ಸಾಗಲಿದೆ. ಡಿಸೆಂಬರ್ 7ರ ವೇಳೆಗೆ ಕರಾವಳಿ ದಾಟುವ ವೇಳೆಗೆ ಇದು ಸಮುದ್ರದಲ್ಲೇ ದುರ್ಬಲಗೊಳ್ಳುವ ಲಕ್ಷಣಗಳಿದ್ದರೂ, ಸುಮಾರು 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 29, 2026, 21:42 IST|Updated: Nov 29, 2026, 21:45 IST
joinshare
'ಅರ್ನಬ್', 'ಮುರಸು', 'ಅಕ್ವಾನ್' ಆಯ್ತು ಈಗ 'ಕಾನಿ' ಚಂಡಮಾರುತದ ಸರದಿ.! ಅಲರ್ಟ್‌ ಘೋಷಣೆ
Image Credit: Kani cyclone

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
'ಅರ್ನಬ್', 'ಮುರಸು', 'ಅಕ್ವಾನ್' ಆಯ್ತು ಈಗ 'ಕಾನಿ' ಚಂಡಮಾರುತದ ಸರದಿ.! ಅಲರ್ಟ್‌ ಘೋಷಣೆ

'ಅರ್ನಬ್', 'ಮುರಸು', 'ಅಕ್ವಾನ್' ಆಯ್ತು ಈಗ 'ಕಾನಿ' ಚಂಡಮಾರುತದ ಸರದಿ.! ಅಲರ್ಟ್‌ ಘೋಷಣೆ

2

ಬೋರ್‌ವೆಲ್ ಹಾಕುವ ಮುನ್ನ ಮೊಬೈಲ್‌ನಲ್ಲೇ ನೀರು ಎಷ್ಟಿದೆ ನೋಡಿ..! ಹೇಗೆ ಗೊತ್ತೆ..? ಇಲ್ಲಿದೆ ಸರಳ ವಿಧಾನ

3

ಮನವೊಲಿಕೆ ವಿಶ್ವಾದಲ್ಲಿದ್ದ ಕಾಂಗ್ರೆಸ್‌ಗೆ ಮಿತ್ರಪಕ್ಷದಿಂದಲೇ ಭಾರೀ ಮುಖಭಂಗ

4

ಕ್ಷೇತ್ರ ವಿಂಗಡಣೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಡಿಲಿಮಿಟೇಶನ್ ಅರ್ಥವೇನು?

5

ಬೆಳಿಗ್ಗೆ ಚಹಾ ಕುಡಿಯಬೇಕೋ ಅಥವಾ ಕಾಫಿನೋ? ಆಹಾರ ತಜ್ಞರ ಸಲಹೆ ಕೇಳಿದ್ರೆ ಶಾಕ್‌ ಆಗ್ತೀರಾ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಬಂಗಾಳಕೊಲ್ಲಿಯ ಕಡಲ ಗರ್ಭದಲ್ಲಿ ಸತತ ನಾಲ್ಕನೇ ಬಾರಿಗೆ ಚಂಡಮಾರುತದ ಭೀತಿ ಎದುರಾಗಿದೆ.. 'ಅರ್ನಬ್', 'ಮುರಸು' ಮತ್ತು 'ಅಕ್ವಾನ್' ಸೈಕ್ಲೋನ್‌ಗಳ ಅಬ್ಬರದ ಬೆನ್ನಲ್ಲೇ, ಈಗ 'ಕಾನಿ' ಎಂಬ ಹೊಸ ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ!.. ಮಾಲ್ಡೀವ್ಸ್ ದೇಶ ನಾಮಕರಣ ಮಾಡಿರುವ ಈ 'ಕಾನಿ' ಚಂಡಮಾರುತವು ನವೆಂಬರ್ 30ರ ವೇಳೆಗೆ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಟ್ಟು, ಡಿಸೆಂಬರ್ ಮೊದಲ ವಾರದಲ್ಲಿ ತಮಿಳುನಾಡು-ಶ್ರೀಲಂಕಾ ಕರಾವಳಿಯತ್ತ ಧಾವಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಇನ್ನೊಂದೆಡೆ, ಕರ್ನಾಟಕದಿಂದ ಗುಜರಾತ್‌ವರೆಗೆ ವ್ಯಾಪಿಸಿರುವ ಮೇಲ್ಮೈ ಸುಳಿಗಾಳಿಯ ದ್ರೋಣಿಯಿಂದಾಗಿ ದಕ್ಷಿಣ ಭಾರತದಲ್ಲಿ ಮಳೆ ಆರ್ಭಟ ಮುಂದುವರಿದಿದೆ.. ತಮಿಳುನಾಡಿನ ಬರೋಬ್ಬರಿ 23 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದ್ದು, ಕರ್ನಾಟಕದಲ್ಲೂ ಗುಡುಗು ಸಹಿತ ಮಳೆಯಾಗುತ್ತಿದೆ.. ಆದರೆ ಉತ್ತರ ಭಾರತದಲ್ಲಿ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದ್ದು, ಕಾಶ್ಮೀರ, ಹಿಮಾಚಲದಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಕ್ಕೆ ಕುಸಿದು ನೀರೆಲ್ಲಾ ಮಂಜುಗಡ್ಡೆಯಾಗುತ್ತಿದೆ..

ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್‌ಗಳ ಸರಣಿ ದಾಳಿ ಮುಂದುವರಿದಿದೆ. ಈಗಾಗಲೇ ಮೂರು ಚಂಡಮಾರುತಗಳನ್ನು ಎದುರಿಸಿರುವ ಕರಾವಳಿ ತೀರಕ್ಕೆ ಈಗ 'ಕಾನಿ' ಚಂಡಮಾರುತದ ಬೆದರಿಕೆ ಎದುರಾಗಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಉಂಟಾಗಲಿರುವ ಮೇಲ್ಮೈ ಸುಳಿಗಾಳಿಯು ನವೆಂಬರ್ 30ರ ವೇಳೆಗೆ ವಾಯುಭಾರ ಕುಸಿತವಾಗಿ ತೀವ್ರಗೊಳ್ಳಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಇದು ಪೂರ್ಣ ಪ್ರಮಾಣದ ಚಂಡಮಾರುತವಾಗಿ ಬದಲಾಗಲಿದೆ ಎಂದು ಆಂಧ್ರಪ್ರದೇಶ ವಿಪತ್ತು ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ.

ಕಾನಿ ಚಂಡಮಾರುತದ ಪಥವನ್ನು ಹವಾಮಾನ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಸೈಕ್ಲೋನ್ ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿಯತ್ತ ಸಾಗಲಿದ್ದು, ಡಿಸೆಂಬರ್ 7ರ ವೇಳೆಗೆ ಕರಾವಳಿ ದಾಟುವ ಸಾಧ್ಯತೆಯಿದೆ. ಆದರೆ ಸಮಾಧಾನಕರ ಸಂಗತಿ ಎಂದರೆ, ಕರಾವಳಿ ಸಮೀಪಿಸುವ ಹೊತ್ತಿಗೆ ಈ ಚಂಡಮಾರುತ ಸಮುದ್ರದಲ್ಲೇ ದುರ್ಬಲಗೊಳ್ಳುವ ಲಕ್ಷಣಗಳಿವೆ. ಆದಾಗ್ಯೂ, ಕಡಲ ತೀರದಲ್ಲಿ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ದಕ್ಷಿಣ ಭಾರತದಲ್ಲಿ ವರುಣನ ಅಬ್ಬರ ಜೋರಾಗಿದೆ. ತಮಿಳುನಾಡಿನ 23 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಯಮತ್ತೂರು, ನೀಲಗಿರಿ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಂಟೆಗೆ 40 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ನದಿ-ಕಾಲುವೆಗಳು ತುಂಬಿ ಹರಿಯುತ್ತಿವೆ. ದಕ್ಷಿಣ ತಮಿಳುನಾಡು ಹಾಗೂ ಕಾರೈಕಲ್ ಭಾಗದಲ್ಲೂ ಮುಂದಿನ ಎರಡು ದಿನ ಬಿರುಗಾಳಿ ಸಹಿತ ಮಳೆ ಮುಂದುವರಿಯಲಿದೆ.

ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ಹವಾಮಾನ ಸಂಪೂರ್ಣ ಬದಲಾಗಿದೆ. ಉತ್ತರ ಒಳನಾಡು ಕರ್ನಾಟಕದಿಂದ ಮಹಾರಾಷ್ಟ್ರದ ಮೂಲಕ ಗುಜರಾತ್‌ವರೆಗೆ 1.5 ಕಿ.ಮೀ ಎತ್ತರದ ಮೇಲ್ಮೈ ಸುಂಟರಗಾಳಿ ನಿರ್ಮಾಣವಾಗಿದೆ. ಇದರ ಪ್ರಭಾವದಿಂದಾಗಿ ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶದ ಹಲವೆಡೆ ಗುಡುಗು-ಮಿಂಚಿನ ಸಮೇತ ಮಳೆಯಾಗುತ್ತಿದೆ. ಹೈದರಾಬಾದ್‌ನಲ್ಲಿ ದಾಖಲೆಯ ಮಳೆಯಾಗಿದ್ದು, ಚಳಿಯ ನಡುವೆಯೇ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನ ಮತ್ತಷ್ಟು ಕುಸಿದಿದೆ.

ದಕ್ಷಿಣದಲ್ಲಿ ಮಳೆ ಸುರಿಯುತ್ತಿದ್ದರೆ, ಉತ್ತರ ಭಾರತದಲ್ಲಿ ಚಳಿಗಾಲದ ರೌದ್ರಾವತಾರ ಶುರುವಾಗಿದೆ. ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಮೈನಸ್ ಡಿಗ್ರಿ ತಾಪಮಾನ ದಾಖಲಾಗಿದ್ದು, ಸರೋವರಗಳು ಮತ್ತು ನೀರಿನ ತೊರೆಗಳು ಹೆಪ್ಪುಗಟ್ಟಿವೆ. ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳ್ಳಂಬೆಳಿಗ್ಗೆ ದಟ್ಟ ಮಂಜು ಆವರಿಸುತ್ತಿದ್ದು, ಹೆದ್ದಾರಿಗಳಲ್ಲಿ ರಸ್ತೆ ಕಾಣದೆ ವಾಹನ ಹಾಗೂ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲೂ ತಾಪಮಾನ ಸಾಮಾನ್ಯಕ್ಕಿಂತ ಕುಸಿದು ಶೀತಗಾಳಿ ಬೀಸುತ್ತಿದೆ.

ಒಟ್ಟಿನಲ್ಲಿ, ದೇಶದ ಹವಾಮಾನ ಈಗ ಎರಡು ತದ್ವಿರುದ್ಧ ವೈಪರೀತ್ಯಗಳಿಗೆ ಸಾಕ್ಷಿಯಾಗಿದೆ.. ಉತ್ತರ ಭಾರತದಲ್ಲಿ ಕಡು ಚಳಿ ಮತ್ತು ದಟ್ಟ ಮಂಜು ಜನರನ್ನು ನಡುಗಿಸುತ್ತಿದ್ದರೆ.. ಇತ್ತ ದಕ್ಷಿಣ ಭಾರತದಲ್ಲಿ ನವೆಂಬರ್‌ನ ನಾಲ್ಕನೇ ಚಂಡಮಾರುತ 'ಕಾನಿ' ಕಡಲ ತೀರದತ್ತ ಧಾವಿಸಿ ಬರುತ್ತಿದೆ.. ಡಿಸೆಂಬರ್ ಮೊದಲ ವಾರದಲ್ಲಿ ಈ ಸೈಕ್ಲೋನ್ ತಮಿಳುನಾಡು-ಶ್ರೀಲಂಕಾ ನಡುವೆ ಪ್ರವೇಶಿಸುವಾಗ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.. ರೈತರು ಕಟಾವು ಮಾಡಿದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಇಂದಿನಿಂದಲೇ ಜಾಗರೂಕರಾಗಿರಬೇಕಾಗಿದೆ.

Add Zee News as a Preferred Source
TAGS:
Weather Update