ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಕರ್ನಾಟಕದಲ್ಲಿ ಮತಗಳ್ಳತನದ ವಿರುದ್ಧದ ತನಿಖೆ ಮತ್ತು ಹೋರಾಟವನ್ನು ಮುಂದುವರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನವದೆಹಲಿ : ಕರ್ನಾಟಕದಲ್ಲಿ ಬಿಜೆಪಿಯವರು ತಪ್ಪೆಸಗಿಲ್ಲ ಎಂದಾದರೆ ತನಿಖೆ ಬೇಡ, ಪ್ರಕರಣ ದಾಖಲಿಸಬೇಡಿ ಎಂದು ಯಾಕೆ ರಾಜ್ಯಪಾಲರ ಬಳಿ ಹೋಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದರು. ಅಮಾಯಕ ಕಾರ್ಯಕರ್ತರಿಂದ ಅರ್ಜಿ ನಮೂನೆ-7ಕ್ಕೆ ಸಹಿ ಹಾಕಿಸಿ ಅರಾಜಕತೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ಮತದಾನದ ಹಕ್ಕನ್ನು ಕಿತ್ತುಹಾಕಲು ಹೊರಟವರು ಬಿಜೆಪಿಯವರು ಎಂದು ಕಿಡಿಕಾರಿದರು.
ಸುಪ್ರೀಂಕೋರ್ಟ್‌ನಲ್ಲಿ ನ್ಯಾಯದ ವಿಶ್ವಾಸ
ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಇಂಡಿಯಾ ಒಕ್ಕೂಟದ ನಾಯಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನಮಗೆ ನ್ಯಾಯ ದೊರಕುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಪರಿಶಿಷ್ಟರ ಮತಗಳನ್ನು ತೆಗೆದುಹಾಕಿರುವ ಬಗ್ಗೆ ವಿಶೇಷ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗ ಈಗಾಗಲೇ ತಿಳಿಸಿತ್ತು ಎಂದು ಹೇಳಿದರು.
ದೆಹಲಿ ಪ್ರತಿಭಟನೆಯಲ್ಲಿ ಭಾರೀ ಜನಸಾಗರ
ಮತಗಳ್ಳತನ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಲಕ್ಷಾಂತರ ಜನ ಸೇರಿದ್ದರು. ನವರಾತ್ರಿ ಸಮಯದಲ್ಲಿ ಕರ್ನಾಟಕದಿಂದ ಸಚಿವರು, ನೂರಕ್ಕೂ ಹೆಚ್ಚು ಶಾಸಕರು ಹಾಗೂ ಮುೂರಕ್ಕೂ ಹೆಚ್ಚು ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.
ಅಡ್ಡ ಮತದಾನದ ಬಗ್ಗೆ ವಿಪಕ್ಷಗಳಿಗೆ ತಿರುಗೇಟು
ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೊದಲು ತಮ್ಮ ಪಕ್ಷದಲ್ಲಿದ್ದು ಅಡ್ಡ ಮತದಾನ ಮಾಡಿದ 12 ಜನ ಶಾಸಕರು ಯಾರೆಂದು ವಿಪಕ್ಷ ನಾಯಕರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಎನ್‌ಡಿಎ ಸರಿಯಿಲ್ಲ ಎಂದು ಅವರು ನಮಗೆ ಮತ ಹಾಕಿದ್ದಾರೆ ಎಂದು ಲೇವಡಿ ಮಾಡಿದರು.