SOCIAL MEDIA

Newsletter

PARTNER SITES
Select Language Select State

ನನಗೆ ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಅಂತ ಗೊತ್ತು : ಸಿಎಂ ಸಂಚಲನ ಹೇಳಿಕೆ

ತಮ್ಮ ಹಾಗೂ ಸರ್ಕಾರದ ಸಚಿವರ ವಿರುದ್ಧ ತಂತ್ರ ರೂಪಿಸಿ ರಹಸ್ಯ ಕಾರ್ಯಾಚರಣೆ ನಡೆಸಲು ಪ್ರಯತ್ನಿಸುತ್ತಿರುವ ಖಾಸಗಿ ಏಜೆನ್ಸಿಗಳು ಹಾಗೂ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲು ಯತ್ನಿಸುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಅಲ್ಲದೆ ಸ್ಟಿಂಗ್‌ ಆಪರೇಷನ್‌ ರೂವಾರಿ ಯಾರು ಅಂತ ತಮಗೆ ಗೊತ್ತಿರುವುದಾಗಿ ತಿಳಿಸಿದ್ದಾರೆ..

Reported By Krishna NK Written By Krishna NK
Published: Oct 08, 2026, 02:36 PM IST | Updated: Oct 08, 2026, 02:39 PM IST
Image Credit: DK Shivakumar News
Join

ನವದೆಹಲಿ: ತಮ್ಮ ಹಾಗೂ ಸರ್ಕಾರದ ಸಚಿವರ ವಿರುದ್ಧ ತಂತ್ರ ರೂಪಿಸಿ ಕಾರ್ಯಾಚರಣೆ ನಡೆಸಲು ಪ್ರಯತ್ನಿಸುತ್ತಿರುವ ಖಾಸಗಿ ಏಜೆನ್ಸಿಗಳು ಹಾಗೂ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ.. ಮುಖ್ಯಮಂತ್ರಿಯಾದ ಬಳಿಕ ತಮ್ಮನ್ನು ಹಾಗೂ ಸರ್ಕಾರದ ಇತರ ಸಚಿವರನ್ನು ಸಿಕ್ಕಿಹಾಕಿಸಲು ರಹಸ್ಯ ಕಾರ್ಯಾಚರಣೆಗೆ (Sting Operation) ಯತ್ನಿಸಲಾಗುತ್ತಿದೆ. ಈ ಪಿತೂರಿಯ ಹಿಂದೆ ಖಾಸಗಿ ಏಜೆಂಟ್‌ಗಳನ್ನು ನೇಮಿಸಿರುವ ಬಗ್ಗೆ ಹಾಗೂ ಇದರ ಹಿಂದೆ ಇರುವ “ಪಿತಾಮಹ” ಯಾರು ಎಂಬ ಬಗ್ಗೆ ಪಕ್ಕಾ ಮಾಹಿತಿ ಮತ್ತು ಸಾಕ್ಷ್ಯಾಧಾರಗಳಿವೆ ಎಂದರು.

ಮತಗಳ್ಳತನ ಹಾಗೂ ಚುನಾವಣಾ ಆಯೋಗದ ಸ್ಪಷ್ಟನೆ
ಬಿಜೆಪಿಯು ತನ್ನ ಕಾರ್ಯಕರ್ತರ ಮೂಲಕ ಪೂರ್ವಮುದ್ರಿತ 'ಫಾರಂ 7' ಬಳಸಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಲಕ್ಷಾಂತರ ಅರ್ಹ ಮತಗಳನ್ನು ಅಳಿಸಿಹಾಕಲು ಕ್ರಿಮಿನಲ್ ಸಂಚು ರೂಪಿಸಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನಡೆಸಿದ ನಿರಂತರ ಹೋರಾಟದ ಫಲವಾಗಿ, ಸೂಕ್ತ ಪರಿಶೀಲನೆ ಇಲ್ಲದೆ ಯಾವುದೇ ಅರ್ಹ ಮತವನ್ನು ಡಿಲೀಟ್ ಮಾಡಬಾರದು ಹಾಗೂ ವಸತಿ ರಹಿತರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಒಂದು ತಿಂಗಳ ಅಭಿಯಾನ ನಡೆಸಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟ ಸೂಚನೆ ನೀಡಿದೆ.

ಬಾಂಗ್ಲಾ ವಲಸಿಗರ ವಿಷಯ ಹಾಗೂ ಕೇಂದ್ರ ಸರ್ಕಾರದ ಕರ್ತವ್ಯ
ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿದ್ದರೆ ಅವರನ್ನು ಗಡಿಯಲ್ಲೇ ತಡೆಯುವುದು ಹಾಗೂ ಗಡೀಪಾರು ಮಾಡುವುದು ಕೇಂದ್ರ ಸರ್ಕಾರದ ಹೊಣೆಯಾಗಿದೆ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯಿಂದ ಅರ್ಹ ಭಾರತೀಯರ ಹೆಸರುಗಳನ್ನು ಕೈಬಿಡುವುದು ಸರಿಯಲ್ಲ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಪ್ರತಿಭಟನೆ ಹಾಗೂ ‘ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ’
ದೇಶದ ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಗಾಗಿ ನವದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ‘ಇಂಡಿಯಾ’ ಬ್ಲಾಕ್ (INDIA Bloc) ನಾಯಕರು ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಅಭಿನಂದಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಎಸ್.ಐ.ಆರ್ (SIR) ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಯನ್ನು ಖಂಡಿಸಿದ ಕಾಂಗ್ರೆಸ್, ಈ ದಿನವನ್ನು ‘ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ’ ಎಂದು ಕರೆದಿದೆ.

ಜಿಎಸ್‌ಟಿ ಮಂಡಳಿ ಸಭೆ ಹಾಗೂ ರಾಜ್ಯದ ಹಿತರಕ್ಷಣೆ
ನವದೆಹಲಿಯಲ್ಲಿ ನಡೆಯುತ್ತಿರುವ ಜಿಎಸ್‌ಟಿ (GST) ಮಂಡಳಿ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಭಾಗವಹಿಸುತ್ತಿದ್ದು, ರಾಜ್ಯದ ಹಿತದೃಷ್ಟಿಯಿಂದ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಎಸ್.ಐ.ಆರ್ ಕುರಿತ ಸಂಪೂರ್ಣ ದಾಖಲೆಗಳನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿ, ಮುಂದಿನ ಕಾನೂನಾತ್ಮಕ ಹಾಗೂ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES