Cleanest City : ದೇಶದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಪ್ರಕಟವಾಗಿದೆ. ಸತತ 8 ವರ್ಷಗಳಿಂದ ಸ್ವಚ್ಛತೆಯಲ್ಲಿ ನಂಬರ್ ಒನ್ ಆಗಿದ್ದ ಇಂದೋರ್‌ಗೆ ಈ ಬಾರಿ ಮೊದಲ ಸ್ಥಾನ ಕೈತಪ್ಪಿದೆ. ಮಹಾರಾಷ್ಟ್ರದ ನವಿ ಮುಂಬೈ ಸ್ವಚ್ಛತೆಯ ಕಿರೀಟ ಮುಡಿಗೇರಿಸಿಕೊಂಡಿದೆ. ಗುಜರಾತ್‌ನ ಸೂರತ್ ಎರಡನೇ ಸ್ಥಾನ ಪಡೆದರೆ, ಆಂಧ್ರಪ್ರದೇಶದ ವಿಜಯವಾಡ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗಾದ್ರೆ, ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ನಗರಗಳ ಸ್ಥಾನವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ನವಿ ಮುಂಬೈಗೆ ಸ್ವಚ್ಛತೆಯ ಕಿರೀಟ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಈ ಬಾರಿ ಮಹಾರಾಷ್ಟ್ರದ ನವಿ ಮುಂಬೈ ಟಾಪ್ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ಸ್ವಚ್ಛ ಸರ್ವೇಕ್ಷಣ 2025-26ರ ಫಲಿತಾಂಶದಲ್ಲಿ ನವಿ ಮುಂಬೈ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಗುಜರಾತ್‌ನ ಸೂರತ್ ಎರಡನೇ ಸ್ಥಾನದಲ್ಲಿದ್ರೆ, ಆಂಧ್ರಪ್ರದೇಶದ ವಿಜಯವಾಡ ಮೂರನೇ ಸ್ಥಾನದಲ್ಲಿದೆ.ಕಳೆದ ಎಂಟು ವರ್ಷಗಳಿಂದ ಸ್ವಚ್ಛತೆಯಲ್ಲಿ ಸತತ ಪ್ರಾಬಲ್ಯ ಸಾಧಿಸಿದ್ದ ಇಂದೋರ್‌ಗೆ ಈ ಬಾರಿ ಮೊದಲ ಸ್ಥಾನ ಸಿಕ್ಕಿಲ್ಲ. ಆದ್ರೆ ಇಂದೋರ್ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ ಅಂತ ಹೇಳುವಂತಿಲ್ಲ. ಹೊಸದಾಗಿ ಪರಿಚಯಿಸಲಾದ 'ಸ್ವಚ್ಛ ಶಹರ್ ಜೋಡಿ' ಯೋಜನೆಯ ಮಾರ್ಗದರ್ಶಕ ನಗರ ವಿಭಾಗದಲ್ಲಿ ಇಂದೋರ್ ಮತ್ತು ದೇವಪಾಲ್ಪುರ ಜೋಡಿ ಎರಡನೇ ಸ್ಥಾನ ಪಡೆದಿದೆ.
ಸೂಪರ್: ದೊಡ್ಡ ನಗರಗಳ ವಿಭಾಗದಲ್ಲಿ ವಿಶಾಖಪಟ್ಟಣ ನಂ.1
ಇನ್ನು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣ ಮೊದಲ ಸ್ಥಾನ ಪಡೆದಿದೆ. ಜಬಲ್‌ಪುರ ಎರಡನೇ ಹಾಗೂ ಲಖನೌ ಮೂರನೇ ಸ್ಥಾನದಲ್ಲಿವೆ. 3 ಲಕ್ಷದಿಂದ 10 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಉಜ್ಜಯಿನಿ ಮೊದಲ ಸ್ಥಾನ ಪಡೆದುಕೊಂಡಿದೆ.ನದಿ ತೀರದ ಸ್ವಚ್ಛ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ರೇವಾ ಮೊದಲ ಸ್ಥಾನ ಪಡೆದಿದೆ. ಬಿಲಾಸ್‌ಪುರ ಎರಡನೇ ಹಾಗೂ ವಾರಾಣಸಿ ಮೂರನೇ ಸ್ಥಾನದಲ್ಲಿವೆ. ಕರಾವಳಿ ಪಟ್ಟಣಗಳ ವಿಭಾಗದಲ್ಲಿ ಒಡಿಶಾದ ಪುರಿ ನಂಬರ್ ಒನ್ ಆಗಿದೆ. ಆಲಪ್ಪುಳ ಎರಡನೇ ಹಾಗೂ ರತ್ನಗಿರಿ ಮೂರನೇ ಸ್ಥಾನ ಪಡೆದಿವೆ.ಈ ಬಾರಿಯ ಸಮೀಕ್ಷೆಯಲ್ಲಿ ದೇಶದ 4,751 ನಗರ ಸ್ಥಳೀಯ ಸಂಸ್ಥೆಗಳನ್ನು ಪರಿಶೀಲಿಸಲಾಗಿದೆ. ಬರೋಬ್ಬರಿ 2.70 ಕೋಟಿ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಸ ಸಂಗ್ರಹಣೆ, ಕಸ ವಿಂಗಡಣೆ, ಸಾರ್ವಜನಿಕ ಶೌಚಾಲಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ 43 ಮಾನದಂಡಗಳ ಆಧಾರದ ಮೇಲೆ ನಗರಗಳ ಸ್ವಚ್ಛತೆಯನ್ನು ಅಳೆಯಲಾಗಿದೆ.
ಗುಜರಾತ್‌ನ ಸೂರತ್ ಎರಡನೇ ಸ್ಥಾನದಲ್ಲಿದ್ರೆ, ಆಂಧ್ರಪ್ರದೇಶದ ವಿಜಯವಾಡ ಮೂರನೇ ಸ್ಥಾನದಲ್ಲಿದೆ.ಕಳೆದ ಎಂಟು ವರ್ಷಗಳಿಂದ ಸ್ವಚ್ಛತೆಯಲ್ಲಿ ಸತತ ಪ್ರಾಬಲ್ಯ ಸಾಧಿಸಿದ್ದ ಇಂದೋರ್‌ಗೆ ಈ ಬಾರಿ ಮೊದಲ ಸ್ಥಾನ ಸಿಕ್ಕಿಲ್ಲ. ಆದ್ರೆ ಇಂದೋರ್ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ ಅಂತ ಹೇಳುವಂತಿಲ್ಲ. ಹೊಸದಾಗಿ ಪರಿಚಯಿಸಲಾದ 'ಸ್ವಚ್ಛ ಶಹರ್ ಜೋಡಿ' ಯೋಜನೆಯ ಮಾರ್ಗದರ್ಶಕ ನಗರ ವಿಭಾಗದಲ್ಲಿ ಇಂದೋರ್ ಮತ್ತು ದೇವಪಾಲ್ಪುರ ಜೋಡಿ ಎರಡನೇ ಸ್ಥಾನ ಪಡೆದಿದೆ.
ನದಿ ತೀರದ ಸ್ವಚ್ಛ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ರೇವಾ ಮೊದಲ ಸ್ಥಾನ ಪಡೆದಿದೆ. ಬಿಲಾಸ್‌ಪುರ ಎರಡನೇ ಹಾಗೂ ವಾರಾಣಸಿ ಮೂರನೇ ಸ್ಥಾನದಲ್ಲಿವೆ. ಕರಾವಳಿ ಪಟ್ಟಣಗಳ ವಿಭಾಗದಲ್ಲಿ ಒಡಿಶಾದ ಪುರಿ ನಂಬರ್ ಒನ್ ಆಗಿದೆ. ಆಲಪ್ಪುಳ ಎರಡನೇ ಹಾಗೂ ರತ್ನಗಿರಿ ಮೂರನೇ ಸ್ಥಾನ ಪಡೆದಿವೆ.ಈ ಬಾರಿಯ ಸಮೀಕ್ಷೆಯಲ್ಲಿ ದೇಶದ 4,751 ನಗರ ಸ್ಥಳೀಯ ಸಂಸ್ಥೆಗಳನ್ನು ಪರಿಶೀಲಿಸಲಾಗಿದೆ. ಬರೋಬ್ಬರಿ 2.70 ಕೋಟಿ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಸ ಸಂಗ್ರಹಣೆ, ಕಸ ವಿಂಗಡಣೆ, ಸಾರ್ವಜನಿಕ ಶೌಚಾಲಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ 43 ಮಾನದಂಡಗಳ ಆಧಾರದ ಮೇಲೆ ನಗರಗಳ ಸ್ವಚ್ಛತೆಯನ್ನು ಅಳೆಯಲಾಗಿದೆ.
ಒಟ್ಟಿನಲ್ಲಿ ಸ್ವಚ್ಛತೆಯ ವಿಚಾರದಲ್ಲಿ ಇಂದೋರ್‌ನ ಎಂಟು ವರ್ಷಗಳ ಅಗ್ರಸ್ಥಾನದ ಓಟಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ನವಿ ಮುಂಬೈ ಹೊಸ ಸ್ವಚ್ಛತೆಯ ಸಾಮ್ರಾಟನಾಗಿ ಹೊರಹೊಮ್ಮಿದೆ.ನಗರಗಳ ಸ್ವಚ್ಛತೆಗೆ ನಾಗರಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ. ಹಾಗಾದ್ರೆ ನಿಮ್ಮ ಊರು ಸ್ವಚ್ಛತೆಯಲ್ಲಿ ಯಾವ ಸ್ಥಾನದಲ್ಲಿದೆ? ಎಂಬ ಕುತೂಹಲಕ್ಕೆ ಮುಂದಿನ ಸಮೀಕ್ಷೆಯಲ್ಲಿ ಉತ್ತರ ಸಿಗಲಿದೆ.