SOCIAL MEDIA

Newsletter

PARTNER SITES
Select Language Select State

ಸಂಬಂಧಿಕರನ್ನ ಕಳುಹಿಸಲು ವಂದೇ ಭಾರತ್‌ ಹತ್ತಿದ 12 ಮಂದಿಗೆ ಶಾಕ್‌! 150KM ಪ್ರಯಾಣ, ₹36 ಸಾವಿರ ದಂಡ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಬಂಧಿಕರಿಗೆ ವಿದಾಯ ಹೇಳಲು ವಂದೇ ಭಾರತ್‌ ರೈಲು ಹತ್ತಿದ್ದ 12 ಮಂದಿ, ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡಿದ್ದರಿಂದ ರೈಲಿನಲ್ಲೇ ಸಿಲುಕಿಕೊಂಡಿದ್ದಾರೆ. ಸುಮಾರು 150 ಕಿ.ಮೀ ಪ್ರಯಾಣದ ಬಳಿಕ ಇಟಾವಾದಲ್ಲಿ ಇಳಿಯಲು ಅವಕಾಶ ಸಿಕ್ಕಿದೆ. ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ಪ್ರತಿಯೊಬ್ಬರಿಗೂ ₹3,000ರಂತೆ ಒಟ್ಟು ₹36,000 ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

Written By Puttaraj K Alur
Published: Nov 17, 2026, 20:06 IST | Updated: Nov 17, 2026, 20:20 IST
Image Credit: Vande Bharat
Join

Vande Bharat Express: ಕೇವಲ ತಮ್ಮ ಸಂಬಂಧಿಕರನ್ನ ಬೀಳ್ಕೊಡಲು ರೈಲು ಹತ್ತಿದ್ದ 12 ಮಂದಿ, ಕೊನೆಗೆ ಸುಮಾರು 150 ಕಿಲೋಮೀಟರ್‌ ದೂರ ಅನಿರೀಕ್ಷಿತ ಪ್ರಯಾಣ ಮಾಡಬೇಕಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹತ್ತಿದ್ದ ಈ ಪ್ರಯಾಣಿಕರು, ರೈಲಿನಿಂದ ಕೆಳಗಿಳಿಯುವ ಮೊದಲೇ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿದ್ದರಿಂದ ಒಳಗೇ ಸಿಲುಕಿಕೊಂಡಿದ್ದಾರೆ. ಪರಿಣಾಮ ಅವರು ಅನಿರ್ವಾಯ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಸಾಮಾನ್ಯವಾಗಿ ರೈಲು ನಿಲ್ದಾಣಕ್ಕೆ ಬಂದಾಗ ಸಂಬಂಧಿಕರು ಅಥವಾ ಸ್ನೇಹಿತರನ್ನ ಬೀಳ್ಕೊಡಲು ಕೆಲವರು ರೈಲಿನೊಳಗೆ ಸ್ವಲ್ಪ ದೂರ ಪ್ರವೇಶಿಸುವುದುಂಟು. ಆದರೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಇಂತಹ ನಿರ್ಲಕ್ಷ್ಯ ದುಬಾರಿ ಅನುಭವಕ್ಕೆ ಕಾರಣವಾಗಿದೆ. ಕಾನ್ಪುರ ನಿಲ್ದಾಣದಲ್ಲಿ ತಮ್ಮ ಸಂಬಂಧಿಕರನ್ನ ಬೀಳ್ಕೊಡಲು ರೈಲು ಹತ್ತಿದ್ದ 12 ಜನರು, ರೈಲು ಹೊರಡುವ ಮೊದಲು ಕೆಳಗಿಳಿಯಲು ಸಾಧ್ಯವಾಗಿಲ್ಲ. ಅವರು ಇಳಿಯುವಷ್ಟರಲ್ಲಿ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿವೆ.

ವಂದೇ ಭಾರತ್‌ ರೈಲಿನ ಬಾಗಿಲುಗಳು ಸಾಮಾನ್ಯ ರೈಲುಗಳಂತೆ ಪ್ರಯಾಣಿಕರು ತಮಗೆ ಬೇಕಾದಾಗ ತೆರೆಯಲು ಸಾಧ್ಯವಾಗುವ ವ್ಯವಸ್ಥೆಯನ್ನ ಹೊಂದಿಲ್ಲ. ಈ ರೈಲಿನಲ್ಲಿ ಬಾಗಿಲುಗಳನ್ನ ಕೇಂದ್ರ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ. ನಿಗದಿತ ನಿಲ್ದಾಣಗಳಲ್ಲಿ ಮಾತ್ರ ಅವು ತೆರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಕಾನ್ಪುರದಲ್ಲಿ ರೈಲು ಹತ್ತಿದ್ದ 12 ಮಂದಿಗೆ ತಕ್ಷಣವೇ ಕೆಳಗಿಳಿಯಲು ಸಾಧ್ಯವಾಗಿಲ್ಲ.

ರೈಲು ತನ್ನ ನಿಗದಿತ ಸಂಚಾರವನ್ನ ಮುಂದುವರಿಸಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಅದರೊಳಗೇ ಉಳಿಯಬೇಕಾಯಿತು. ಕಾನ್ಪುರದಿಂದ ಹೊರಟ ರೈಲು ಸುಮಾರು 150 ಕಿಲೋಮೀಟರ್‌ ದೂರ ಕ್ರಮಿಸಿದ ಬಳಿಕ ಇಟಾವಾ ನಿಲ್ದಾಣದಲ್ಲಿ ನಿಂತಿದೆ. ಅಲ್ಲಿ ಈ 12 ಮಂದಿಗೆ ರೈಲಿನಿಂದ ಕೆಳಗಿಳಿಯಲು ಅವಕಾಶ ನೀಡಲಾಗಿದೆ. ಸಂಬಂಧಿಕರನ್ನ ಬೀಳ್ಕೊಡಲು ಕೆಲವೇ ಕ್ಷಣಗಳಿಗಾಗಿ ರೈಲು ಹತ್ತಿದ್ದವರಿಗೆ, ಕೊನೆಗೆ ದೀರ್ಘ ಪ್ರಯಾಣವೇ ಎದುರಾಗಿದೆ.

ಆದರೆ ಈ ಅನಿರೀಕ್ಷಿತ ಪ್ರಯಾಣದ ಜೊತೆಗೆ ಅವರಿಗೆ ಮತ್ತೊಂದು ಆಘಾತವೂ ಎದುರಾಗಿದೆ. ರೈಲಿನಲ್ಲಿ ಸೂಕ್ತ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ ಹಿನ್ನೆಲೆಯಲ್ಲಿ 12 ಮಂದಿಗೂ ತಲಾ 3,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಹೀಗೆ ಒಟ್ಟು 36,000 ರೂಪಾಯಿ ದಂಡ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ 3,000 ರೂಪಾಯಿಯಂತೆ ಒಟ್ಟು 12 ಮಂದಿಗೆ 36,000 ರೂಪಾಯಿ ದಂಡ ವಿಧಿಸಿರುವುದು ಈ ಘಟನೆಯ ಪ್ರಮುಖ ಸಂಗತಿಯಾಗಿದೆ. ಸಂಬಂಧಿಕರನ್ನ ಬೀಳ್ಕೊಡಲು ರೈಲು ಹತ್ತಿದವರು, ಕೊನೆಗೆ ಹಣದ ದಂಡದೊಂದಿಗೆ ರೈಲಿನಿಂದ ಇಳಿಯಬೇಕಾಯಿತು.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಬಾಗಿಲುಗಳು ಕೇಂದ್ರ ನಿಯಂತ್ರಣ ವ್ಯವಸ್ಥೆಯಲ್ಲಿದ್ದು, ನಿಗದಿತ ನಿಲ್ದಾಣಗಳಲ್ಲಿ ಮಾತ್ರ ತೆರೆಯುತ್ತವೆ. ಆದ್ದರಿಂದ ರೈಲಿನೊಳಗೆ ಪ್ರವೇಶಿಸುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಉದ್ದೇಶ ಮತ್ತು ಟಿಕೆಟ್‌ ವ್ಯವಸ್ಥೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕಾನ್ಪುರದಲ್ಲಿ ನಡೆದ ಈ ಘಟನೆ, ರೈಲಿನಲ್ಲಿ ಸಂಬಂಧಿಕರನ್ನ ಬೀಳ್ಕೊಡಲು ಹೋದ 12 ಮಂದಿಗೆ ಮರೆಯಲಾಗದ ಅನುಭವವಾಗಿ ಪರಿಣಮಿಸಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES