SOCIAL MEDIA

Newsletter

PARTNER SITES
Select Language Select State

157 ವರ್ಷಗಳ ಹಳೆಯ ತುಂಗಾ ಸೇತುವೆ ಮೇಲಿನ ವಿದ್ಯುತ್ ಲೈನ್, ಕೇಬಲ್ ವೈರ್‌ಗಳು ತೆರವು, ಕಾರಣವೇನು?

ಶಿವಮೊಗ್ಗ ನಗರದ ಐತಿಹಾಸಿಕ ಗುರುತಾಗಿದ್ದ 157 ವರ್ಷಗಳಷ್ಟು ಹಳೆಯ ತುಂಗಾ ಸೇತುವೆ ಇನ್ನು ಕೆಲವೇ ದಿನಗಳಲ್ಲಿ ಇತಿಹಾಸದ ಪುಟ ಸೇರಲಿದೆ

Written By Ramya. R. Gowda
Published: Nov 22, 2026, 12:52 IST | Updated: Nov 22, 2026, 12:59 IST
Join

Power lines and cables removed from the 157year old Tunga Bridge: ಶಿವಮೊಗ್ಗ: ಶಿವಮೊಗ್ಗ ನಗರದ ಐತಿಹಾಸಿಕ ಗುರುತಾಗಿದ್ದ 157 ವರ್ಷಗಳಷ್ಟು ಹಳೆಯ ತುಂಗಾ ಸೇತುವೆ ಇನ್ನು ಕೆಲವೇ ದಿನಗಳಲ್ಲಿ ಇತಿಹಾಸದ ಪುಟ ಸೇರಲಿದೆ. ಹಳೆಯ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಸಿದ್ಧತೆಗಳು ಚುರುಕುಗೊಂಡಿವೆ. ಇದರ ಮೊದಲ ಹಂತವಾಗಿ ಸೇತುವೆ ಮೇಲಿದ್ದ ವಿದ್ಯುತ್, ಟಿವಿ ಹಾಗೂ ಇಂಟರ್‌ನೆಟ್ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ. ಬರೋಬ್ಬರಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ. 

ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿರುವ 157 ವರ್ಷಗಳಷ್ಟು ಹಳೆಯ ತುಂಗಾ ಸೇತುವೆ.. ದಶಕಗಳ ಇತಿಹಾಸ, ಸಾವಿರಾರು ನೆನಪುಗಳಿಗೆ ಸಾಕ್ಷಿಯಾಗಿದ್ದ ಈ ಸೇತುವೆ ಈಗ ತೆರವಿನ ಹಂತಕ್ಕೆ ಬಂದು ನಿಂತಿದೆ. ಹಳೆಯ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿವೆ. ಸೇತುವೆ ತೆರವು ಕಾರ್ಯಕ್ಕೆ ಅಡ್ಡಿಯಾಗದಂತೆ ಮೊದಲು ವಿದ್ಯುತ್ ಕೇಬಲ್‌ಗಳನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ.

 ಲೋಕೋಪಯೋಗಿ ಇಲಾಖೆಯ ಮನವಿ ಮೇರೆಗೆ ಮೆಸ್ಕಾಂ ಸಿಬ್ಬಂದಿ ಸೇತುವೆ ಮೇಲಿದ್ದ 11 ಕೆ.ವಿ. ಸಾಮರ್ಥ್ಯದ ನಾಲ್ಕು ವಿದ್ಯುತ್ ಕೇಬಲ್‌ಗಳನ್ನು ತೆರವುಗೊಳಿಸಿ ಸ್ಥಳಾಂತರಿಸಿದ್ದಾರೆ. ಇದರ ಜೊತೆಗೆ ಟಿವಿ ಕೇಬಲ್ ಹಾಗೂ ಇಂಟರ್‌ನೆಟ್ ಕೇಬಲ್‌ಗಳನ್ನೂ ತೆರವು ಮಾಡಲಾಗಿದೆ. ಇನ್ನು ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ ಮಾರ್ಗಗಳನ್ನೂ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಲೋಕೋಪಯೋಗಿ ಇಲಾಖೆ ಪತ್ರ ಬರೆದಿದೆ. ಹೀಗಾಗಿ ಹಂತ ಹಂತವಾಗಿ ಸೇತುವೆ ತೆರವಿಗೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ. 

₹40 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ!

ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿರುವ 157 ವರ್ಷಗಳಷ್ಟು ಹಳೆಯ ತುಂಗಾ ಸೇತುವೆ.. ದಶಕಗಳ ಇತಿಹಾಸ, ಸಾವಿರಾರು ನೆನಪುಗಳಿಗೆ ಸಾಕ್ಷಿಯಾಗಿದ್ದ ಈ ಸೇತುವೆ ಈಗ ತೆರವಿನ ಹಂತಕ್ಕೆ ಬಂದು ನಿಂತಿದೆ. ಹಳೆಯ ಸೇತುವೆಯನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಪೂರ್ವಭಾವಿ ಸಿದ್ಧತೆಗಳು ಆರಂಭವಾಗಿವೆ. ಸೇತುವೆ ತೆರವು ಕಾರ್ಯಕ್ಕೆ ಅಡ್ಡಿಯಾಗದಂತೆ ಮೊದಲು ವಿದ್ಯುತ್ ಕೇಬಲ್‌ಗಳನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ.

157 ವರ್ಷಗಳ ಹಳೆಯ ಸೇತುವೆಗೆ ಬದಲಿಯಾಗಿ ಅತ್ಯಾಧುನಿಕ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 40 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದ್ಯ ತಾಂತ್ರಿಕ ಅನುಮೋದನೆ ಪ್ರಕ್ರಿಯೆ ಬಾಕಿ ಇದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆ ಯೋಜಿಸಿದೆ. ಒಟ್ಟಿನಲ್ಲಿ ಶಿವಮೊಗ್ಗದ ಐತಿಹಾಸಿಕ ತುಂಗಾ ಸೇತುವೆ ತೆರವಿಗೆ ಕ್ಷಣಗಣನೆ ಆರಂಭವಾಗಿದ್ದು, ಹಳೆಯ ಸೇತುವೆಯ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣವಾಗುವ ದಿನಗಳು ಹತ್ತಿರವಾಗಿವೆ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES