SOCIAL MEDIA

Newsletter

PARTNER SITES
Select Language Select State

ಶಕ್ತಿ ಯೋಜನೆ ಎಫೆಕ್ಟ್‌ನಿಂದ KSRTC ಬಸ್‌ ನಿರ್ವಹಣೆಗೆ ಪೆಟ್ಟು! ಹೆಡ್‌ಲೈಟ್‌ ಇಲ್ಲದೆ 60 ಕಿ.ಮೀ ಬಸ್‌ ಚಾಲನೆ

ಕತ್ತಲಲ್ಲಿ ಹೆಡ್‌ಲೈಟ್‌ ಇಲ್ಲದೆ ಶೃಂಗೇರಿಯಿಂದ ಚಿಕ್ಕಮಗಳೂರು ಮಾರ್ಗದಲ್ಲಿ ಅಪಾಯಕಾರಿ ತಿರುವುಗಳ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲನೆ.. ಸಾಹಸಮಯವಾದರೂ ಸುರಕ್ಷಿತವಾಗಿ ಗಮ್ಯಸ್ಥಾನ ಸೇರಿಸಿದ ಚಾಲಕನಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written By Yashaswini V
Published: Oct 02, 2026, 03:03 PM IST | Updated: Oct 02, 2026, 03:19 PM IST
Join

ಹೆಡ್‌ಲೈಟ್ ಇಲ್ಲದೆ ಕತ್ತಲಲ್ಲಿ ವಾಹನ ಚಲಾಯಿಸುವುದು ಸಹ ಯಾವುದೇ ಸಾಹಸಕ್ಕಿಂತ ಕಡಿಮೆ ಇಲ್ಲ. ಆದರಿಲ್ಲಿ ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ಸುಮಾರು 60 ಕಿ.ಮೀ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಹೆಡ್‌ಲೈಟ್‌ ಇಲ್ಲದೆಯೇ ರಾತ್ರಿ ವೇಳೆ ಬಸ್‌ ಡ್ರೈವ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಾಹಸಮಯ ದೃಶ್ಯವನ್ನು ಬೈಕ್‌ ಸವಾರರು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಸಾಹಸಮಯ ಡ್ರೈವಿಂಗ್‌ಗೆ ಪ್ರಯಾಣಿಕರು ಫಿದಾ!
ಹೌದು, ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ರಸ್ತೆ ಹಲವು ತಿರುವುಗಳಿಂದ ಕೂಡಿದ್ದು ಇಂತಹ ದುರ್ಗಮ ರಸ್ತೆಯಲ್ಲೂ ಕೂಡ ಧೃತಿಗೆಡದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಹೆಡ್‌ಲೈಟ್ ಇಲ್ಲದಿದ್ದರೂ ರಾತ್ರಿ ವೇಳೆ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಲ್ದಾಣ ತಲುಪಿಸಿದ್ದಾರೆ. ಸರ್ಕಾರಿ ಬಸ್‌ ಚಾಲಕನ ಈ ಸಾಹಸಕ್ಕೆ ಪ್ರಯಾಣಿಕರು ಶಹಬಾಸ್‌ ಎಂದಿದ್ದಾರೆ.

ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ಗುಂಡಿ-ಗೊಟರಿನ ರಸ್ತೆಯಲ್ಲಿ ಹೆಡ್ ಲೈಟ್ ಇಲ್ಲದಿದ್ದರೂ ಸರ್ಕಾರಿ ಬಸ್ಸನ್ನ 60 ಕಿ.ಮೀ. ಸುರಕ್ಷಿತವಾಗಿ ಚಾಲನೆ ಮಾಡಿರುವ ಕೆ.ಎಸ್.ಆರ್.ಟಿ.ಸಿ. ಚಾಲಕನ ಚಾಲನೆಗೆ ಹ್ಯಾಟ್ಸಾಫ್ ಹೇಳಲೇಬೇಕು ಎಂದು ಬಸ್‌ ಪ್ರಯಾಣಿಕರು ಚಾಲಕನ ಸಾಹಸವನ್ನು ಹಾಡಿ ಹೊಗಳಿದ್ದಾರೆ.

ರಾತ್ರಿ ಶೃಂಗೇರಿಯಿಂದ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್:
ಶೃಂಗೇರಿಯಿಂದ ರಾತ್ರಿ 10.30ಕ್ಕೆ ಹೊರಟು ಚಿಕ್ಕಮಗಳೂರಿಗೆ ಬಂದಿರೋ ಕೋಲಾರ ಡಿಪೋದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಾತ್ರಿ ವೇಳೆ ದಾರಿಯನ್ನು ನೋಡಲು ಅಗತ್ಯವಾಗಿ ಬೇಕಿರುವ ಹೆಡ್‌ಲೈಟ್‌ ಇರಲೇ ಇಲ್ಲ. ಈ ಸಾಹಸಮಯ ದೃಶ್ಯವನ್ನು ಬೈಕ್ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಡ್ರೈವಿಂಗ್‌ ವೇಳೆ ಚಾಲಕನ ಪರದಾಟದ ದೃಶ್ಯ ಸದ್ಯ ಸಖತ್‌ ವೈರಲ್‌ ಆಗಿದೆ.

ಸರ್ಕಾರಿ ಬಸ್‌ ಹೆಡ್‌ಲೈಟ್ ಅರ್ಧದಲ್ಲಿ ಕೈ ಕೊಡ್ತೋ ಅಥವಾ ದುರಸ್ಥಿ ಮಾಡಿಲ್ಲವೋ ಎಂಬ ಅನುಮಾನ ಸ್ಥಳೀಯರದ್ದಾಗಿದೆ. ಮತ್ತೊಂದೆಡೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಬಸ್ ನಿರ್ವಹಣೆಗೂ ಸರ್ಕಾರದ ಬಳಿ ಹಣ ಉಳಿದಿಲ್ಲ. ಹಾಗಾಗಿ ಸರ್ಕಾರಿ ಬಸ್‌ಗಳ ನಿರ್ವಹಣೆ ಸರಿಯಾಗಿ ನಡೆದಿಲ್ಲ ಅಂತ ಸ್ಥಳೀಯರು ಆರೋಪ ಮಾಡಿದ್ದಾರೆ.

ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದಲ್ಲಿ ಹಗಲಲ್ಲೇ ಓಡಾಡೋದೆ ಸಾಹಸ, ಭಾರೀ ಪ್ರಮಾಣದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಹಗಲಲ್ಲೇ ಸಂಚಾರ ದುಸ್ಥರ. ಅರಣ್ಯ-ಕಾಫಿತೋಟದ ಮಧ್ಯದಲ್ಲೇ ಸಾಗಬೇಕಾದ 60 ಕಿ.ಮೀ. ಮಾರ್ಗದಲ್ಲಿ ಅಂತಹ ದುರ್ಗಮ ಹಾದಿಯಲ್ಲಿ ಹೆಡ್‌ಲೈಟ್ ಇಲ್ಲದೇ ಬಸ್ ಚಲಾಯಿಸಿದ ಸರ್ಕಾರಿ ಬಸ್ ಚಾಲಕನಿಗೆ ಮಲೆನಾಡಿಗರು ಅಭಿನಂದನೆ ಸಲ್ಲಿಸಿದ್ದಾರೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES