ನವವಿವಾಹಿತೆಯ ಮೃ*ತದೇಹ ಕೊನೆಗೂ ಕೆರೆಯಲ್ಲಿ ಪತ್ತೆ.. ಗಂಡನ ಎದುರೇ ಹೆಂಡತಿ ಮಾಡಿದ್ದು ಏನು?
ಸತತವಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಕಳೆದ ಹನ್ನೊಂದು ದಿನಗಳಿಂದ ಪ್ರೀಯಾಂಕ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು.
Newlywed Priyanka incident: ಹಾಸನದಲ್ಲಿ ನವವಿವಾಹಿತೆ ಪ್ರಿಯಾಂಕಾ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗಂಡನ ಕಡೆಯವರ ನಿರಂತರ ಹುಡುಕಾಟದಿಂದಾಗಿ ಮೃತದೇಹ ಪತ್ತೆಯಾಗಿದೆ. ಮೃತ ಪ್ರಿಯಾಂಕಾ ಅವರು ಸೆಪ್ಟೆಂಬರ್ 19, ಶನಿವಾರ ದಿನ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ಪತಿ ರಾಜೇಶ್ ಎದುರೇ ನಾಲೆಗೆ ಜಿಗಿದಿದ್ದಳು. ಇದರ ಬೆನ್ನಲ್ಲೇ ಪತಿ ರಾಜೇಶ್ ಕೊಲೆ ಆಡಿದ್ದಾನೆ ಎಂದು ಪ್ರಿಯಾಂಕಾ ಕುಟುಂಬಸ್ಥರು ಆರೋಪ ಮಾಡಿದ್ದರು.
ನವವಿವಾಹಿತೆ ಪ್ರಿಯಾಂಕಾ, ಪತಿ ರಾಜೇಶ್ ಎದುರೇ ನಾಲೆಗೆ ಸೆಪ್ಟೆಂಬರ್ 19 ರಂದು ಜಿಗಿದಿದ್ದಳು. ಅಂದಿನಿಂದ ಸತತವಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಕಳೆದ ಹನ್ನೊಂದು ದಿನಗಳಿಂದ ಪ್ರೀಯಾಂಕ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪ್ರೀಯಾಂಕಾ ಅವರ ಮೃತದೇಹ ಪತ್ತೆ ಆಗದ ಹಿನ್ನೆಲೆಯಲ್ಲಿ ಗಂಡ ರಾಜೇಶ್‌ನೇ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಇದಕ್ಕೆ ರಾಜೇಶ್ ಕುಟುಂಬದ ಕಡೆಯವರು ಕೂಡ ವಿರೋಧ ವ್ಯಕ್ತಪಡಿಸಿದ್ದರು.
ಪತಿ ರಾಜೇಶ್ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ಆರೋಪ ಮಾಡಿದ್ದರು. ಆದರೆ ರಾಜೇಶ್ ಅವರು ಪ್ರಿಯಾಂಕಾಗೆ ಈಜು ಬರುತ್ತದೆ. ಈಗಾಗಲೇ ಪ್ರಿಯಾಂಕಾಗೆ ಮೊದಲೇ ಮದುವೆಯಾಗಿತ್ತು. ಆದರೂ ಕುಟುಂಬದವರು ಮದುವೆ ಮಾಡಿಕೊಟ್ಟಿದ್ದರು ಎಂದು ರಾಜೇಶ್ ಪೋಷಕರು ಆರೋಪಿಸಿದ್ದರು. ಎರಡು ಕುಟುಂಬದ ನಡುವೆ ವಾಗ್ವಾದ ನಡೆದಿತ್ತು. ಮಗಳನ್ನು ಕಳೆದುಕೊಂಡ ನೋವಿನಲ್ಲಿ ತಂದೆ, ತಾಯಿ ಇದ್ದರೇ, ಇತ್ತ ನನ್ನ ಮಗ ಕೊಲೆ ಮಾಡಿಲ್ಲ ಎಂದು ರಾಜೇಶ್ ಕಡೆಯ ಪೋಷಕರು ಹೇಳುತ್ತಿದ್ದರು.
ಕಳೆದ 11 ದಿನಗಳಿಂದ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಕಾಲುವೆ ನೀರು ನಿಲ್ಲಿಸಿ, ಸುರಂಗ, ಕೆರೆ, ಎಲ್ಲೆಡೆ ಶೋಧ ನಡೆಸಿದ್ದರು. ಕಡೆಗೂ ಕೋಲಾಳ ಕೆರೆಯಲ್ಲಿ ಪ್ರಿಯಾಂಕಾ ಅವರ ಮೃತದೇಹ ಪತ್ತೆಯಾಗಿದೆ. ಕೋಲಾಳ ಗ್ರಾಮದ ಕೆರೆಗೆ ಹೇಮಾವತಿ ನಾಲೆಯ ನೀರು ಹರಿಯುತ್ತದೆ. ನಾಲೆಯಿಂದ ನೀರು ಹರಿದು ತುಂಬುವ ಎಲ್ಲಾ ಕೆರೆಗಳಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ತುರುವೇಕೆರೆ, ತಿಪಟೂರು ಭಾಗದಲ್ಲಿ ಡ್ರೋನ್ ಮೂಲಕ ಮೃತದೇಹವನ್ನು ಪೊಲೀಸರು ಹಾಗೂ ಸಂಬಂಧಿರು ಹುಡುಕುತ್ತಿದ್ದರು.
ಇಂದು ಎಲ್ಲಾ ಕೆರೆಗಳಲ್ಲಿ ಹುಡುಕಾಟ ಮುಗಿಯಲಿದ್ದು ಸಂಜೆ ವೇಳೆಗೆ ಶೋಧಕಾರ್ಯ ಸ್ಥಗಿತಗೊಳಿಸಲು ಪೊಲೀಸರು ಹಾಗೂ ರಾಜೇಶ್ ಕಡೆಯವರು ನಿರ್ಧರಿಸಿದ್ದರು. ಕಡೆಗೂ ಕೋಲಾಳ ಕೆರೆಯಲ್ಲಿ ಪ್ರಿಯಾಂಕಾ ಅವರ ಮೃತದೇಹ ಪತ್ತೆಯಾಗಿದೆ. ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಪತಿ ರಾಜೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪ್ರಿಯಾಂಕಾ ಕುಟುಂಬ ಸದಸ್ಯರು ಸ್ಥಳಕ್ಕೆ ತೆರಳುತ್ತಿದ್ದಾರೆ.
ಗಂಡ, ಹೆಂಡತಿ ಎಂದರೆ ಸಾಮಾನ್ಯವಾದ ಜಗಳಗಳು ಇದ್ದೇ ಇರುತ್ತವೆ. ಅವುಗಳನ್ನು ಕುಟುಂಬದಲ್ಲಿ ನಿರ್ವಹಿಸಿಕೊಂಡು ಹೋಗುತ್ತಿರಬೇಕು. ಪತಿ, ಪತ್ನಿ ಜಗಳವನ್ನು ತೀವ್ರ ಮಟ್ಟಕ್ಕೆ ತೆಗೆದುಕೊಂಡು ಹೋಗದೇ ಮನೆಯಲ್ಲಿ ಪರಿಹರಿಸಿ ಉತ್ತಮ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿಮಾತು ಹೇಳಬೇಕು. ಇಬ್ಬರು ಜೋತೆಯಾಗಿ ಇರಲು ಸಾಧ್ಯವಾಗದೇ ಹೋದರೇ ಕೊನೆಗೆ ಕಾನೂನು ಎನ್ನುವುದು ಇದೆ. ಅದರಂತೆ ಗಂಡ, ಹೆಂಡತಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಏಕೆಂದರೆ ಮದುವೆ ಎಂದು ಆದ ಮೇಲೆ ಮಕ್ಕಳು, ಅತ್ತೆ, ಮಾವ ಅಂತ ಕುಟುಂಬ ಆಗಿರುತ್ತದೆ. ದುಡುಕಿನ ನಿರ್ಧಾರ ಮಾಡದೇ ಕುಟುಂಬದ ಹಿರಿಯರ ಸಲಹೆ ಸೂಚನೆಗಳನ್ನು ಕೇಳಿ ಜೊತೆಯಾಗಿ ಬಾಳಿದರೆ ಸಂಸಾರದಲ್ಲಿ ನೆಮ್ಮದಿ ಇರುತ್ತದೆ.