• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ನವವಿವಾಹಿತೆಯ ಮೃ*ತದೇಹ ಕೊನೆಗೂ ಕೆರೆಯಲ್ಲಿ ಪತ್ತೆ.. ಗಂಡನ ಎದುರೇ ಹೆಂಡತಿ ಮಾಡಿದ್ದು ಏನು?

ನವವಿವಾಹಿತೆಯ ಮೃ*ತದೇಹ ಕೊನೆಗೂ ಕೆರೆಯಲ್ಲಿ ಪತ್ತೆ.. ಗಂಡನ ಎದುರೇ ಹೆಂಡತಿ ಮಾಡಿದ್ದು ಏನು?

ಸತತವಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಕಳೆದ ಹನ್ನೊಂದು ದಿನಗಳಿಂದ ಪ್ರೀಯಾಂಕ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು.

Written ByBhimappa
Published: Sep 30, 2026, 12:47 PM IST|Updated: Sep 30, 2026, 12:52 PM IST
joinshare
ನವವಿವಾಹಿತೆಯ ಮೃ*ತದೇಹ ಕೊನೆಗೂ ಕೆರೆಯಲ್ಲಿ ಪತ್ತೆ.. ಗಂಡನ ಎದುರೇ ಹೆಂಡತಿ ಮಾಡಿದ್ದು ಏನು?
Image Credit: Priyanka_incident

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Newlywed Priyanka incident: ಹಾಸನದಲ್ಲಿ ನವವಿವಾಹಿತೆ ಪ್ರಿಯಾಂಕಾ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೊಂದು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗಂಡನ ಕಡೆಯವರ ನಿರಂತರ ಹುಡುಕಾಟದಿಂದಾಗಿ ಮೃತದೇಹ ಪತ್ತೆಯಾಗಿದೆ. ಮೃತ ಪ್ರಿಯಾಂಕಾ ಅವರು ಸೆಪ್ಟೆಂಬರ್ 19, ಶನಿವಾರ ದಿನ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ಪತಿ ರಾಜೇಶ್ ಎದುರೇ ನಾಲೆಗೆ ಜಿಗಿದಿದ್ದಳು. ಇದರ ಬೆನ್ನಲ್ಲೇ ಪತಿ ರಾಜೇಶ್ ಕೊಲೆ ಆಡಿದ್ದಾನೆ ಎಂದು ಪ್ರಿಯಾಂಕಾ ಕುಟುಂಬಸ್ಥರು ಆರೋಪ ಮಾಡಿದ್ದರು.    

ನವವಿವಾಹಿತೆ ಪ್ರಿಯಾಂಕಾ, ಪತಿ ರಾಜೇಶ್ ಎದುರೇ ನಾಲೆಗೆ ಸೆಪ್ಟೆಂಬರ್ 19 ರಂದು ಜಿಗಿದಿದ್ದಳು. ಅಂದಿನಿಂದ ಸತತವಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಕಳೆದ ಹನ್ನೊಂದು ದಿನಗಳಿಂದ ಪ್ರೀಯಾಂಕ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪ್ರೀಯಾಂಕಾ ಅವರ ಮೃತದೇಹ ಪತ್ತೆ ಆಗದ ಹಿನ್ನೆಲೆಯಲ್ಲಿ ಗಂಡ ರಾಜೇಶ್‌ನೇ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಇದಕ್ಕೆ ರಾಜೇಶ್‌ ಕುಟುಂಬದ ಕಡೆಯವರು ಕೂಡ ವಿರೋಧ ವ್ಯಕ್ತಪಡಿಸಿದ್ದರು.

ಪತಿ ರಾಜೇಶ್‌ ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ಆರೋಪ ಮಾಡಿದ್ದರು. ಆದರೆ ರಾಜೇಶ್‌ ಅವರು ಪ್ರಿಯಾಂಕಾಗೆ ಈಜು ಬರುತ್ತದೆ. ಈಗಾಗಲೇ ಪ್ರಿಯಾಂಕಾಗೆ ಮೊದಲೇ ಮದುವೆಯಾಗಿತ್ತು. ಆದರೂ ಕುಟುಂಬದವರು ಮದುವೆ ಮಾಡಿಕೊಟ್ಟಿದ್ದರು ಎಂದು ರಾಜೇಶ್ ಪೋಷಕರು ಆರೋಪಿಸಿದ್ದರು. ಎರಡು ಕುಟುಂಬದ ನಡುವೆ ವಾಗ್ವಾದ ನಡೆದಿತ್ತು. ಮಗಳನ್ನು ಕಳೆದುಕೊಂಡ ನೋವಿನಲ್ಲಿ ತಂದೆ, ತಾಯಿ ಇದ್ದರೇ, ಇತ್ತ ನನ್ನ ಮಗ ಕೊಲೆ ಮಾಡಿಲ್ಲ ಎಂದು ರಾಜೇಶ್‌ ಕಡೆಯ ಪೋಷಕರು ಹೇಳುತ್ತಿದ್ದರು.  

ಕಳೆದ 11 ದಿನಗಳಿಂದ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಕಾಲುವೆ ನೀರು ನಿಲ್ಲಿಸಿ, ಸುರಂಗ, ಕೆರೆ, ಎಲ್ಲೆಡೆ ಶೋಧ ನಡೆಸಿದ್ದರು. ಕಡೆಗೂ ಕೋಲಾಳ ಕೆರೆಯಲ್ಲಿ ಪ್ರಿಯಾಂಕಾ ಅವರ ಮೃತದೇಹ ಪತ್ತೆಯಾಗಿದೆ. ಕೋಲಾಳ ಗ್ರಾಮದ ಕೆರೆಗೆ ಹೇಮಾವತಿ ನಾಲೆಯ‌ ನೀರು ಹರಿಯುತ್ತದೆ. ನಾಲೆಯಿಂದ ನೀರು ಹರಿದು ತುಂಬುವ ಎಲ್ಲಾ ಕೆರೆಗಳಲ್ಲಿ ಶೋಧಕಾರ್ಯ ನಡೆಸಲಾಗಿತ್ತು. ಇಂದು ತುರುವೇಕೆರೆ, ತಿಪಟೂರು ಭಾಗದಲ್ಲಿ ಡ್ರೋನ್ ಮೂಲಕ ಮೃತದೇಹವನ್ನು ಪೊಲೀಸರು ಹಾಗೂ ಸಂಬಂಧಿರು ಹುಡುಕುತ್ತಿದ್ದರು. 

ಇಂದು ಎಲ್ಲಾ ಕೆರೆಗಳಲ್ಲಿ ಹುಡುಕಾಟ ಮುಗಿಯಲಿದ್ದು ಸಂಜೆ ವೇಳೆಗೆ ಶೋಧಕಾರ್ಯ ಸ್ಥಗಿತಗೊಳಿಸಲು ಪೊಲೀಸರು ಹಾಗೂ ರಾಜೇಶ್ ಕಡೆಯವರು ನಿರ್ಧರಿಸಿದ್ದರು. ಕಡೆಗೂ ಕೋಲಾಳ‌ ಕೆರೆಯಲ್ಲಿ ಪ್ರಿಯಾಂಕಾ ಅವರ ಮೃತದೇಹ ಪತ್ತೆಯಾಗಿದೆ. ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಪತಿ ರಾಜೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪ್ರಿಯಾಂಕಾ ಕುಟುಂಬ ಸದಸ್ಯರು ಸ್ಥಳಕ್ಕೆ ತೆರಳುತ್ತಿದ್ದಾರೆ.

ಗಂಡ, ಹೆಂಡತಿ ಎಂದರೆ ಸಾಮಾನ್ಯವಾದ ಜಗಳಗಳು ಇದ್ದೇ ಇರುತ್ತವೆ. ಅವುಗಳನ್ನು ಕುಟುಂಬದಲ್ಲಿ ನಿರ್ವಹಿಸಿಕೊಂಡು ಹೋಗುತ್ತಿರಬೇಕು. ಪತಿ, ಪತ್ನಿ ಜಗಳವನ್ನು ತೀವ್ರ ಮಟ್ಟಕ್ಕೆ ತೆಗೆದುಕೊಂಡು ಹೋಗದೇ ಮನೆಯಲ್ಲಿ ಪರಿಹರಿಸಿ ಉತ್ತಮ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿಮಾತು ಹೇಳಬೇಕು. ಇಬ್ಬರು ಜೋತೆಯಾಗಿ ಇರಲು ಸಾಧ್ಯವಾಗದೇ ಹೋದರೇ ಕೊನೆಗೆ ಕಾನೂನು ಎನ್ನುವುದು ಇದೆ. ಅದರಂತೆ ಗಂಡ, ಹೆಂಡತಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಏಕೆಂದರೆ ಮದುವೆ ಎಂದು ಆದ ಮೇಲೆ ಮಕ್ಕಳು, ಅತ್ತೆ, ಮಾವ ಅಂತ ಕುಟುಂಬ ಆಗಿರುತ್ತದೆ. ದುಡುಕಿನ ನಿರ್ಧಾರ ಮಾಡದೇ ಕುಟುಂಬದ ಹಿರಿಯರ ಸಲಹೆ ಸೂಚನೆಗಳನ್ನು ಕೇಳಿ ಜೊತೆಯಾಗಿ ಬಾಳಿದರೆ ಸಂಸಾರದಲ್ಲಿ ನೆಮ್ಮದಿ ಇರುತ್ತದೆ.

Add Zee News as a Preferred Source
TAGS:
Crime