SOCIAL MEDIA

Newsletter

PARTNER SITES
Select Language Select State

ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ಒಮ್ಮೆ ಭೇಟಿ ಕೊಡಿ.. ಮಂಜು, ಬೆಟ್ಟ, ಜಲಪಾತಗಳ ಸೌಂದರ್ಯ ಕಣ್ತುಂಬಿಕೊಳ್ಳಿ!

tourist spots in Chikmagalur: ಮಲೆನಾಡಿನ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಹಚ್ಚಹಸಿರಿನ ಬೆಟ್ಟಗಳು, ಮೈನವಿರೇಳಿಸುವ ಮಂಜು, ಧುಮ್ಮಿಕ್ಕುವ ಜಲಪಾತಗಳು, ಕಾಫಿ ತೋಟಗಳ ಪರಿಮಳ... ಹೀಗೆ ಪ್ರಕೃತಿಯ ಹಲವು ವೈಶಿಷ್ಟ್ಯಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳಬಹುದು. ಚಿಕ್ಕಮಗಳೂರಿಗೆ ಪ್ರವಾಸ ಪ್ಲಾನ್ ಮಾಡ್ತಿದ್ದರೆ ಈ ತಾಣಗಳಿಗೆ ಒಮ್ಮೆ ಭೇಟಿ ಕೊಡಿ...

Written By Ramya. R. Gowda
Published: Sep 16, 2026, 10:53 AM IST | Updated: Sep 17, 2026, 02:31 PM IST
Join

Chikmagalur tourist spots: ಮಲೆನಾಡಿನ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಹಚ್ಚಹಸಿರಿನ ಬೆಟ್ಟಗಳು, ಮೈನವಿರೇಳಿಸುವ ಮಂಜು, ಧುಮ್ಮಿಕ್ಕುವ ಜಲಪಾತಗಳು, ಕಾಫಿ ತೋಟಗಳ ಪರಿಮಳ... ಹೀಗೆ ಪ್ರಕೃತಿಯ ಹಲವು ವೈಶಿಷ್ಟ್ಯಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳಬಹುದು. ಚಿಕ್ಕಮಗಳೂರಿಗೆ ಪ್ರವಾಸ ಪ್ಲಾನ್ ಮಾಡ್ತಿದ್ದರೆ ಈ ತಾಣಗಳಿಗೆ ಒಮ್ಮೆ ಭೇಟಿ ಕೊಡಿ...

ಚಿಕ್ಕಮಗಳೂರು ಅಂದ್ರೆ ಮೊದಲು ನೆನಪಾಗೋದೇ ಬೆಟ್ಟಗಳ ಸಾಲು. ಅದರಲ್ಲೂ ಮುಳ್ಳಯ್ಯನಗಿರಿ ಪ್ರವಾಸಿಗರ ಪ್ರಮುಖ ಆಕರ್ಷಣೆ. ಕರ್ನಾಟಕದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿಯಲ್ಲಿ ಮೋಡ, ಮಂಜು ಮತ್ತು ತಂಪಾದ ಗಾಳಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇನ್ನು ಬಾಬಾಬುಡನಗಿರಿ ಕೂಡ ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಬೆಟ್ಟಗಳ ನಡುವೆ ಆವರಿಸುವ ಮಂಜು, ಹಸಿರು ವಾತಾವರಣ ಮತ್ತು ತಂಪಾದ ಹವಾಮಾನ ಇಲ್ಲಿನ ವಿಶೇಷತೆ. ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಬೇಕೆಂದರೆ ಈ ತಾಣ ಮಿಸ್ ಮಾಡ್ಬೇಡಿ.

ಜಲಪಾತಗಳ ಸೌಂದರ್ಯ ನೋಡ್ಬೇಕು ಅನ್ನೋರಿಗೆ ಹೆಬ್ಬೆ ಜಲಪಾತ ಉತ್ತಮ ಆಯ್ಕೆ. ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡುಗರ ಕಣ್ಮನ ಸೆಳೆಯುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಲು ಬಯಸುವವರಿಗೆ ಈ ತಾಣ ವಿಶೇಷ ಅನುಭವ ನೀಡುತ್ತದೆ.

ಇದರ ಜೊತೆಗೆ ಜಾರಿ ಜಲಪಾತ ಕೂಡ ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಮಳೆಗಾಲದಲ್ಲಿ ಜಲಪಾತದ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಸುತ್ತಲಿನ ಹಸಿರು ಪರಿಸರದ ನಡುವೆ ಧುಮ್ಮಿಕ್ಕುವ ನೀರು ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುತ್ತದೆ. ಪ್ರಕೃತಿ, ಕಾಫಿ ಮತ್ತು ಮಂಜಿನ ಸೊಬಗನ್ನು ಒಂದೇ ಕಡೆ ಅನುಭವಿಸಬೇಕೆಂದರೆ ಕಾಫಿ ತೋಟಗಳ ಪ್ರವಾಸ ಕೂಡ ಮಾಡಬಹುದು. 

ಹಚ್ಚಹಸಿರಿನ ಕಾಫಿ ಗಿಡಗಳ ನಡುವೆ ನಡೆಯುತ್ತಾ ಮಲೆನಾಡಿನ ವಾತಾವರಣವನ್ನು ಸವಿಯಬಹುದು. ಇಷ್ಟೇ ಅಲ್ಲದೆ ಕೆಮ್ಮಣ್ಣುಗುಂಡಿ, ಕುದುರೆಮುಖ ಸೇರಿದಂತೆ ಹಲವು ಪ್ರದೇಶಗಳು ಚಿಕ್ಕಮಗಳೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಬೆಟ್ಟ, ಕಣಿವೆ, ಮಂಜು, ಜಲಪಾತಗಳ ಸೌಂದರ್ಯವನ್ನು ಸವಿಯಲು ಪ್ರತಿವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಒಟ್ಟಿನಲ್ಲಿ, ನಗರದ ಗದ್ದಲದಿಂದ ದೂರವಾಗಿ ಪ್ರಕೃತಿಯ ಮಡಿಲಿನಲ್ಲಿ ಒಂದಷ್ಟು ಸಮಯ ಕಳೆಯಬೇಕು ಅನ್ನೋ ಆಸೆ ಇದ್ರೆ ಚಿಕ್ಕಮಗಳೂರು ನಿಮ್ಮ ಮುಂದಿನ ಟ್ರಿಪ್‌ಗೆ ಸೂಕ್ತ ತಾಣ. ಮಂಜಿನ ನಡುವೆ ಬೆಟ್ಟಗಳ ಸೌಂದರ್ಯ, ಜಲಪಾತಗಳ ಜುಳುಜುಳು ನಾದ... ಇವೆಲ್ಲವನ್ನೂ ಕಣ್ತುಂಬಿಕೊಳ್ಳಲು ಚಿಕ್ಕಮಗಳೂರಿಗೆ ಒಮ್ಮೆ ಭೇಟಿ ಕೊಡಿ!


ಕಾಫಿನಾಡಿನ ಪ್ರವಾಸಿತಾಣಗಳ ಪಟ್ಟಿ
* ಮುಳ್ಳಯ್ಯನಗಿರಿ – ಮಂಜಿನ ನಡುವೆ ಬೆಟ್ಟದ ಸೌಂದರ್ಯ
*ಬಾಬಾಬುಡನಗಿರಿ – ಪ್ರಕೃತಿ ಪ್ರಿಯರ ನೆಚ್ಚಿನ ತಾಣ
* ಹೆಬ್ಬೆ ಜಲಪಾತ – ಕಾಡಿನ ನಡುವೆ ಧುಮ್ಮಿಕ್ಕುವ ಜಲಧಾರೆ
*ಜಾರಿ ಜಲಪಾತ – ಮಳೆಗಾಲದ ವಿಶೇಷ ಆಕರ್ಷಣೆ
*ಕಾಫಿ ತೋಟಗಳು – ಮಲೆನಾಡಿನ ಪರಿಮಳದ ಅನುಭವ
*ಕೆಮ್ಮಣ್ಣುಗುಂಡಿ & ಕುದುರೆಮುಖ – ಪ್ರಕೃತಿಯ ಅದ್ಭುತ ಲೋಕ

ಹಳೇ ಪಟ್ಟಿಯಲ್ಲಿ ಕಳಸ ಪ್ರತ್ಯೆಲ ತಾಲ್ಲೂಕು ಇರಲಿಲ್ಲ ಮೂಡಿಗೆರೆ ತಾಲ್ಲೂಕಿನ ಪಟ್ಟಿಯಲ್ಲಿ ಕುದುರೆಮುಖ , ಕಳಸದ ಕಳಸೇಶ್ವರ ದೇಗುಲ, ಹೊರನಾಡು ಅನ್ನಪೂರ್ಣೇಶ್ವರಿ ದೇಗುವ ಸೇರಿದ್ದವು ಹೊಸ ತಾಲ್ಲೂಕಿನ ಪಟ್ಟಿಯಲ್ಲಿ ಈ ಮೂರು ತಾಣಗಳ ಜತೆಗೆ ಕ್ಯಾತನಮಕ್ಕಿ ವೀಕ್ಷಣಾ ಸ್ಥಳ, ಸೂರಮನೆ ಜಲಪಾತ, ಬಾಳೆಹೊಳೆ ಭದ್ರ ವೈಟ್‌ ರಿವರ್‌ ಕ್ಯಾಪ್ಟಿಂಗ್‌ ತಾಣಗಳು ಸ್ಥಾನ ಪಡೆದುಕೊಂಡಿದೆ. 
 

ಮೂಡಿಗೆರೆ ತಾಲ್ಲೂಕಿನ ಪಟ್ಟಿಯಲ್ಲಿ ಈ ಹಿಂದೆ ಅಂಗಡಿ ಮತ್ತು ಬಲ್ಲಾಳರಾಯನ ದುರ್ಗ ಮಾತ್ರ ಇದ್ದವು. ಕೂಡಿಗೆ ಜಲಪಾತ ಎತ್ತಿನಭುಜ, ದೇವರಮನೆ, ಕೊಟ್ಟಿಗೆಹಾರದಲ್ಲಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಗಳನ್ನು ಈಗ ಸೇರ್ಪಡೆ ಮಾಡಲಾಗಿದೆ.

ಕೊಪ್ಪ ತಾಲ್ಲೂಕಿನಲ್ಲಿ ಈ ಹಿಂದಿನ ಪಟ್ಟಿಯಲ್ಲಿ ಹಿರೇಕೊಡಿಗೆ ಮಾತ್ರ ಇತ್ತು ಹರಿಹರಪುರ ದೇಗುಲ, ಪಂಚಮಿಕಲ್ಲು, ಕಮಂಡಲ ಗಣಪತಿ ದೇವಸ್ಥಾನ, ಹಾಲ್ಮತ್ತೂರು, ಸಂತಾನಗೋಪಾಲಸ್ವಾಮಿ, ದೇಗುಲ ಸೇರಿಕೊಂಡಿದೆ.  ಶೃಂಗೇರಿ ತಾಲ್ಲೂಕಿನಲ್ಲಿ ಯಾವುದೇ ಹೊಸ ಪ್ರವಾಸಿ ತಾಣ ಸೇರ್ಪಡೆಯಾಗಿಲ್ಲ. ಶೃಂಗೇರಿ ಶಾರದಾ ಪೀಠ, ಕಿಗ್ಗ ಋಷ್ಯಶೃಂಗ ದೇವಸ್ಥಾನ, ಸಿರಿಮನೆ ಜಲಪಾತಗಳಷ್ಟೇ ಇವೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ ಸಿಂಹನಗದ್ದೆ ಜತೆಗೆ

 

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸೊಬಗು

ಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆ ಪ್ರಕೃತಿ ಸೌಂದರ್ಯದ ತಾಣ. ದಟ್ಟ ಕಾಡು, ಹಸಿರು ಬೆಟ್ಟಗಳು, ಜಲಪಾತಗಳು, ನದಿಗಳು, ವನ್ಯಜೀವಿಗಳು ಹಾಗೂ ಐತಿಹಾಸಿಕ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಹಾಗಾದ್ರೆ ಶಿವಮೊಗ್ಗದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು..?

ಮಲೆನಾಡಿನ ಸೊಬಗನ್ನು ಕಣ್ತುಂಬಿಕೊಳ್ಳಬೇಕು ಅಂದ್ರೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲೇಬೇಕು. ಪ್ರಕೃತಿ ಪ್ರಿಯರಿಂದ ಹಿಡಿದು ಚಾರಣಿಗರು, ಇತಿಹಾಸಾಸಕ್ತರು ಹಾಗೂ ವನ್ಯಜೀವಿ ಪ್ರಿಯರಿಗೂ ಇಲ್ಲಿ ಸಾಕಷ್ಟು ತಾಣಗಳಿವೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಕರ್ಷಣೆಗಳಲ್ಲಿ ಜೋಗ ಜಲಪಾತವೂ ಒಂದು. ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದಲ್ಲಿ ಶರಾವತಿ ನದಿ ಭೋರ್ಗರೆಯುತ್ತಾ ಕಣಿವೆಗೆ ಧುಮುಕುವ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಮಳೆಗಾಲದಲ್ಲಿ ಜಲಪಾತದ ವೈಭವ ಮತ್ತಷ್ಟು ಹೆಚ್ಚುತ್ತದೆ.

ಸಕ್ರೆಬಯಲು ಆನೆ ಶಿಬಿರ:

ಶಿವಮೊಗ್ಗ ನಗರದ ಸಮೀಪದಲ್ಲಿರುವ ಸಕ್ರೆಬಯಲು ಆನೆ ಶಿಬಿರವೂ ಪ್ರವಾಸಿಗರ ನೆಚ್ಚಿನ ತಾಣ. ತುಂಗಾ ನದಿ ತೀರದಲ್ಲಿರುವ ಈ ಶಿಬಿರದಲ್ಲಿ ಆನೆಗಳ ಜೀವನಶೈಲಿಯನ್ನು ಹತ್ತಿರದಿಂದ ವೀಕ್ಷಿಸಬಹುದು. ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಪ್ರವಾಸ ಕೈಗೊಳ್ಳುವವರಿಗೆ ಇದು ವಿಶೇಷ ಅನುಭವ ನೀಡುತ್ತದೆ.

ಕೊಡಚಾದ್ರಿ:
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಕೊಡಚಾದ್ರಿ ಚಾರಣಿಗರ ಸ್ವರ್ಗ. ಹಸಿರು ಬೆಟ್ಟ, ದಟ್ಟ ಅರಣ್ಯ ಹಾಗೂ ಮೋಡಗಳ ನಡುವೆ ಸಾಗುವ ಚಾರಣದ ಅನುಭವವೇ ವಿಭಿನ್ನ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಕೊಡಚಾದ್ರಿ ಸೂಕ್ತ ತಾಣ.

ಆಗುಂಬೆ:
ಮಲೆನಾಡಿನ ಮಳೆಯ ಸೊಬಗನ್ನು ಆಸ್ವಾದಿಸಬೇಕು ಅಂದ್ರೆ ಆಗುಂಬೆಗೆ ಭೇಟಿ ನೀಡಲೇಬೇಕು. ದಟ್ಟ ಮಳೆಕಾಡು, ಹಸಿರು ಪರಿಸರ ಹಾಗೂ ಅದ್ಭುತ ಸೂರ್ಯಾಸ್ತಕ್ಕೆ ಆಗುಂಬೆ ಪ್ರಸಿದ್ಧ. ಪ್ರಕೃತಿ ಪ್ರಿಯರ ಪಾಲಿಗೆ ಇದು ವಿಶೇಷ ಅನುಭವ ನೀಡುವ ತಾಣ.

ಕುಪ್ಪಳಿ ಕವಿಮನೆ:
ಕನ್ನಡದ ರಾಷ್ಟ್ರಕವಿ ಕುವೆಂಪು ಅವರ ನೆನಪುಗಳನ್ನು ಹೊತ್ತಿರುವ ಕುಪ್ಪಳಿ ಕವಿಮನೆ ಕೂಡ ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿರುವ ಕವಿಮನೆ ಸಾಹಿತ್ಯಾಸಕ್ತರಿಗೆ ಹಾಗೂ ಇತಿಹಾಸ ಪ್ರಿಯರಿಗೆ ವಿಶೇಷ ಆಕರ್ಷಣೆ.

ತಾವರೆಕೊಪ್ಪ
ವನ್ಯಜೀವಿ ಪ್ರಿಯರಿಗೆ ತಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ ಪ್ರಮುಖ ಆಕರ್ಷಣೆ. ಶಿವಮೊಗ್ಗ-ಸಾಗರ ರಸ್ತೆಯಲ್ಲಿರುವ ಈ ವನ್ಯಜೀವಿ ತಾಣದಲ್ಲಿ ವಿವಿಧ ಪ್ರಾಣಿಗಳನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ.

ಕೆಳದಿ ಮತ್ತು ಇಕ್ಕೇರಿ:
ಶಿವಮೊಗ್ಗ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ತನ್ನ ಐತಿಹಾಸಿಕ ಶ್ರೀಮಂತಿಕೆಗೂ ಹೆಸರುವಾಸಿ. ಕೆಳದಿ ಮತ್ತು ಇಕ್ಕೇರಿಯಲ್ಲಿರುವ ಪ್ರಾಚೀನ ದೇವಾಲಯಗಳು ಕೆಳದಿ ನಾಯಕರ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯ ವೈಭವವನ್ನು ಪರಿಚಯಿಸುತ್ತವೆ.

ಪಕ್ಷಿಧಾಮಗಳು:
ಪಕ್ಷಿ ವೀಕ್ಷಣೆಯಲ್ಲಿ ಆಸಕ್ತಿ ಇರುವವರಿಗೆ ಗುಡವಿ ಮತ್ತು ಮಂಡಗದ್ದೆ ಪಕ್ಷಿಧಾಮಗಳು ಉತ್ತಮ ತಾಣಗಳು. ವಿವಿಧ ಜಾತಿಯ ಸ್ಥಳೀಯ ಹಾಗೂ ವಲಸೆ ಪಕ್ಷಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಒಂದೇ ಜಿಲ್ಲೆಯಲ್ಲಿ ಜಲಪಾತ, ಬೆಟ್ಟ, ಕಾಡು, ವನ್ಯಜೀವಿ, ಪಕ್ಷಿಧಾಮ ಹಾಗೂ ಇತಿಹಾಸದ ಸೊಬಗು... ಹೀಗಾಗಿ ಶಿವಮೊಗ್ಗ ಪ್ರವಾಸ ಪ್ರಕೃತಿ ಮತ್ತು ಸಾಹಸವನ್ನು ಇಷ್ಟಪಡುವವರಿಗೆ ವಿಭಿನ್ನ ಅನುಭವ ನೀಡಬಲ್ಲದು.


ಮಲೆನಾಡಿನ ಹಸಿರಿನ ನಡುವೆ ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳಬೇಕು ಅಂದ್ರೆ ಶಿವಮೊಗ್ಗ ಜಿಲ್ಲೆ ಒಂದು ಉತ್ತಮ ಪ್ರವಾಸಿ ತಾಣ. ಜಲಪಾತದ ಸೌಂದರ್ಯದಿಂದ ಹಿಡಿದು ಐತಿಹಾಸಿಕ ತಾಣಗಳವರೆಗೆ ಇಲ್ಲಿ ಪ್ರವಾಸಿಗರಿಗೆ ಹಲವು ಆಯ್ಕೆಗಳಿವೆ. ಹಾಗಾಗಿ ನಿಮ್ಮ ಮುಂದಿನ ಟ್ರಿಪ್‌ಗೆ ಶಿವಮೊಗ್ಗವನ್ನೂ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಬಹುದು.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES