ಮೂರನೇ ವರ್ಷದ ಕಾಫಿ ದಸರಾ: ಮಡಿಕೇರಿಯಲ್ಲಿ ಘಮಘಮಿಸಿದ ಕಾಫಿ ಸ್ವಾದ
ಮಡಿಕೇರಿಯಲ್ಲಿ ಮೂರನೇ ವರ್ಷದ ಕಾಫಿ ದಸರಾ ಸರಳವಾಗಿ ನಡೆದಿದ್ದು ಜನರು ಕಾಫಿಯ ಜೊತೆ ಬಗೆ ಬಗೆಯ ಕಾಫಿ ಖಾದ್ಯ ಸವಿದು ಹರ್ಷ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಮಡಿಕೇರಿ ದಸರಾ ಆರಂಭವಾಗಿದ್ದು, ದಿನ ದಿಂದ ದಿನಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳು ಕೊಡಗಿನ ಜನತೆಯ ಗಮನ ಸೆಳೆಯುತ್ತಿದೆ. ಈ ಭಾರಿ ಮೂರನೇ ವರ್ಷದ ಕಾಫಿ ದಸರಾ ಆಯೋಜನೆಗೊಂಡಿದ್ದು ಮಡಿಕೇರಿಯಲ್ಲಿ ಕಾಫಿ ಸ್ವಾದ ಪಸರಿಸಿತು. ಬಗೆ ಬಗೆಯ ಕಾಫಿ ತಿನಿಸುಗಳು ಕೊಡಗಿನ ಜನತೆಯನ್ನ ಆಕರ್ಷಿಸಿತು. ಹೇಗಿತ್ತು ಮಡಿಕೇರಿ ಕಾಫಿ ದಸರಾ ಎಂಬ ವಿಶೇಷ ವರದಿ ಇಲ್ಲಿದೆ.
ಮಡಿಕೇರ ದಸರಾ:
ಐತಿಹಾಸಿಕ ಹಿನ್ನೆಲೆಯುಳ್ಳ ಮಡಿಕೇರ ದಸರಾ ಈಗಾಗಲೇ ಆರಂಭವಾಗಿದ್ದು ವೈವಿಧ್ಯಮಯ ಕಾರ್ಯಕ್ರಮಗಳು ಕೊಡಗಿನ ಜನತೆಯನ್ನ ಗಮನ ಸೆಳೆಯುತ್ತಿವೆ. ಜಿಲ್ಲಾಡಳಿತ ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಮೂರನೇ ವರ್ಷದ ʼಕಾಫಿ ದಸರಾʼ ಆಯೋಜನೆಗೊಂಡಿದ್ದು ಕಾಫಿ ಕಪ್ ಗೆ ಕಾಫಿ ಸುರಿಯುವ ಮೂಲಕ ವಿನೂತನವಾಗಿ ಕಾಫಿ ದಸರಾದ ಉದ್ಘಾಟನೆ ನಡೆಸಿದರು.
ಕಾಫಿ ದಸರಾ:
ಗಾಂಧಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾಫಿ ದಸರಾದಲ್ಲಿ ನಲವತ್ತಕ್ಕು ಹೆಚ್ಚು ಮಳಿಗೆಗಳಿದ್ದು ಬಗೆ ಬಗೆಯ ಕಾಫಿ ಹಾಗೂ ಕಾಫಿಯ ವೈವಿಧ್ಯತೆಯನ್ನು ಸಾರಿದರು. ಕೊಡಗು ಕಾಫಿಗೆ ಹೆಸರುವಾಸಿಯಾದ ಹಿನ್ನಲೆ ಹಾಗೂ ಕೊಡಗಿನ ಕಾಫಿಯ ಮಹತ್ವವನ್ನ ಜನತೆಗೆ ಮತ್ತಷ್ಟು ಪಸರಿಸುವ ನಿಟ್ಟಿನಲ್ಲಿ ಜೊತೆಗೆ ಕೊಡಗಿನ ಕಾಫಿ ಕೃಷಿಕರನ್ನ ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಈ ವಿನೂತನ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.
ಬಗೆ ಬಗೆಯ ಕಾಫಿ ತಿನಿಸುಗಳು:
ಬ್ಲಾಕ್ ಕಾಫಿ, ಫೀಲ್ಟರ್ ಕಾಫಿಯ ಸವಿಯನ್ನ ವಿದಿದ್ದ ನಾಡಿನ ಜನತೆ ಇದೀಗ ಮಡಿಕೇರಿಯಲ್ಲಿ ಆಯೋಜನೆಗೊಂಡಿದ್ದ ಕಾಫಿ ದಸರಾದಲ್ಲಿ ಕೇವಲ ಬ್ಲಾಕ್ ಕಾಫಿ, ಫಿಲ್ಟರ್ ಕಾಫಿಯ ಜೊತೆಗೆ ಕಾಫಿ ಪ್ಲೇವನಲ್ಲಿ ತಯಾರಿಸಿದ ಕಾಫಿ ಐಸ್ ಕ್ರೀಮ್, ಕಾಫಿ ಜ್ಯೂಸ್, ಕಾಫಿ ಕೇಕ್, ಕಾಫಿ ಬಿಸ್ಕೆಟ್, ಕಾಫಿ ಚಾಕಲೇಟ್, ಕಪ್ ಕೇಕ್ ಕಾಫಿ ವೈನ್, ಕಾಫಿ ಭರ್ಫಿ ಸೇರಿದಂದತೆ ಬಗೆ ಬಗೆಯ ಕಾಫಿಯ ಪ್ಲೇವರ್ ನಿಂದ ಮಾಡಿದ ಖಾದ್ಯಗಳನ್ನ ಸವಿಯುವ ಮೂಲಕ ಕಾಫಿ ದಸರಾದ ಸೊಬಗನ್ನ ಸವಿದರು.
ಅಷ್ಟು ಮಾತ್ರವಲ್ಲ ಕಾಫಿಯ ಬೀಜಗಳಿಂದ, ಕಾಫಿ ಪೌಡರ್ ನಿಂದ ನಾನಾ ರೀತಿಯ ಕಾಲಕೃತಿಗಳನ್ನ ಮಾಡುವ ಮೂಲಕವು ಜನತೆಯ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಮಡಿಕೇರಿಯ ಜನತೆ ಕಾಫಿಯ ಸವಿಯನ್ನ ಸವಿಯುವುದರ ಜೊತೆಗೆ ಕಾಫಿಯ ತಿಸಿಸುಗಳನ್ನ ಸವಿಯುವ ಮೂಲಕ ಸಖತ್ ಖುಷಿ ಪಟ್ಟರು. ಕಾಫಿ ದಸರಾಗೆ ಆಗಮಿಸಿದ ಜನತೆಗೆ ಉಚಿತವಾಗಿ ಕಾಫಿಯನ್ನ ಕೂಡ ಇದೇ ಸಂದರ್ಭದಲ್ಲಿ ನೀಡಲಾಯಿತು. ಜೊತೆಗೆ ಕಾಫಿ ಮಹತ್ವದ ಕುರಿತು ಜನತೆಗೆ ಉಪನ್ಯಾಸ ಕೂಡ ನಡೆಯಿತು.
ಒಟ್ಟಿನಲ್ಲಿ ಕೊಡಗಿನಲ್ಲಿ ನಡೆದ ಮೂರನೇ ವರ್ಷದ ಕಾಫಿ ಸೊಗಡಿನ ದಸಾರಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಕಾಫಿಯ ಸ್ವಾದ ಸವಿಯುವುದರ ಜೊತೆಗೆ ಕಾಫಿ ಲಾಭ ನಷ್ಟಗಳನ್ನ ಕೂಡ ಕೃಷಿಕರು ಹಾಗೂ ಮಡಿಕೇರಿ ಜನತೆ ಪಡೆದುಕೊಂಡಿರೊದಂತು ಸತ್ಯ.