SOCIAL MEDIA

Newsletter

PARTNER SITES
Select Language Select State

ಮೈಸೂರು ದಸರಾ ನೋಡಲು ಹ್ಯಾಂಡಲ್ ಇಲ್ಲದ ಬೈಕ್ ಸವಾರಿ..!

ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಮಠದಿಂದ ಶ್ರೀಗಳ ಆಶೀರ್ವಾದ ಪಡೆದು ಸೋಮವಾರ ಬೆಳಿಗ್ಗೆ 7:30ಕ್ಕೆ ತಮ್ಮ ಸಾಹಸಯಾತ್ರೆಯನ್ನು ವೀರಣ್ಣ ಆರಂಭಿಸಿದರು.

Reported By Manjunath Naragund Written By Manjunath Naragund
Published: Oct 21, 2026, 04:51 PM IST | Updated: Oct 21, 2026, 05:00 PM IST
Image Credit: Dasara
Join

ಮೈಸೂರು/ಕೊಪ್ಪಳ: ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಇಳಕಲ್ ನಗರದ ಸಾಹಸಿ ವೀರಣ್ಣ ಕುಂದರಗಿಮಠ ಅವರು ವಿನೂತನ ಹಾಗೂ ರೋಮಾಂಚಕ ಸಾಹಸ ಮೆರೆದಿದ್ದಾರೆ. ಕೊಪ್ಪಳದಿಂದ ಮೈಸೂರುವರೆಗೆ ಯಾವುದೇ ಹ್ಯಾಂಡಲ್ ಇಲ್ಲದ ಬೈಕ್ ಚಲಾಯಿಸುವ ಮೂಲಕ ಬರೋಬ್ಬರಿ 460 ಕಿಲೋಮೀಟರ್ ದೂರವನ್ನು ಯಶಸ್ವಿಯಾಗಿ ಕ್ರಮಿಸಿ ಹೊಸ ದಾಖಲೆ ಬರೆದಿದ್ದಾರೆ.

ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಮಠದಿಂದ ಶ್ರೀಗಳ ಆಶೀರ್ವಾದ ಪಡೆದು ಸೋಮವಾರ ಬೆಳಿಗ್ಗೆ 7:30ಕ್ಕೆ ತಮ್ಮ ಸಾಹಸಯಾತ್ರೆಯನ್ನು ವೀರಣ್ಣ ಆರಂಭಿಸಿದರು. ಕೊಪ್ಪಳ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮತ್ತು ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರು ಅರಮನೆಯನ್ನು ದಾಟಿ, ಮಂಗಳವಾರ ಬೆಳಿಗ್ಗೆ 7:30ಕ್ಕೆ ನಿಖರವಾಗಿ 24 ಗಂಟೆಗಳಲ್ಲಿ ಚಾಮುಂಡಿ ಬೆಟ್ಟ ತಲುಪಿ ತಮ್ಮ ಗುರಿಯನ್ನು ತಲುಪಿದರು.

ಈ ಸಾಹಸದ ವಿಶೇಷತೆಯೆಂದರೆ, ಬೈಕ್ ಸವಾರಿಯ ವೇಳೆ ತಮ್ಮ ಕೈಯಲ್ಲಿ ಕನ್ನಡ ಧ್ವಜವನ್ನು ಹಿಡಿದುಕೊಂಡಿದ್ದಲ್ಲದೆ, ಬೈಕ್ ಮೇಲೆ 'ಮೈಸೂರು ದಸರಾ 2026' ಹಾಗೂ 'ನಮ್ಮ ನಾಡಹಬ್ಬ ನಮ್ಮ ಸಂಸ್ಕೃತಿ' ಎಂಬ ಬ್ಯಾನರ್ ಅಳವಡಿಸಿದ್ದರು. ಕೇವಲ ದಸರಾ ಆಚರಣೆಯಷ್ಟೇ ಅಲ್ಲದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವುದು, ವ್ಯಸನಮುಕ್ತ ಸಮಾಜದ ನಿರ್ಮಾಣ ಹಾಗೂ ಬರಗಾಲ ತಡೆಗಟ್ಟಲು ಸಸಿ ನೆಡುವ ಅಗತ್ಯತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸತ್ಸಂಕಲ್ಪದೊಂದಿಗೆ ಈ ಸವಾರಿ ನಡೆಸಿದರು.

ಚಾಮುಂಡಿ ಬೆಟ್ಟ ತಲುಪಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ, ಸುತ್ತೂರು ಶ್ರೀಗಳ ಆಶೀರ್ವಾದವನ್ನು ಪಡೆದು ವೀರಣ್ಣ ಕುಂದರಗಿಮಠ ತಮ್ಮ ಯಶಸ್ವಿ ಯಾತ್ರೆಯನ್ನು ಪೂರ್ಣಗೊಳಿಸಿದರು.ಈಗಾಗಲೇ ಹ್ಯಾಂಡಲ್ ಇಲ್ಲದೆ ಬೈಕ್ ಚಲಾಯಿಸುವ ಮೂಲಕ ಹಲವು ದಾಖಲೆಗಳನ್ನು ಮಾಡಿರುವ ವೀರಣ್ಣ, ಈ ಸಾಹಸದ ಮೂಲಕ ಮತ್ತೊಮ್ಮೆ ನಾಡಿನ ಗಮನ ಸೆಳೆದಿದ್ದಾರೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES