SOCIAL MEDIA

Newsletter

PARTNER SITES
Select Language Select State

ಕಸದ ತೊಟ್ಟಿಯಲ್ಲಿ ಕಂದಾಯ ಇಲಾಖೆ ಕಡತಗಳು: ಮತ್ತೊಬ್ಬ ಅಧಿಕಾರಿಯ ತಲೆದಂಡ

ಕಂದಾಯ ಇಲಾಖೆ ಕಡತಗಳು ಕಸದ ತೊಟ್ಟಿಯಲ್ಲಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಉಪ ತಹಶೀಲ್ದಾರ್ ಎಂ. ಮಂಜುನಾಥ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.

Written By Yashaswini V
Published: Nov 16, 2026, 11:53 IST | Updated: Nov 16, 2026, 11:59 IST
Join

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಕಚೇರಿಯ ಕಸದ ತೊಟ್ಟಿಯಲ್ಲಿ ಕಂದಾಯ ಇಲಾಖೆ ಕಡತಗಳು ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಅಧಿಕಾರಿಯ ತಲೆದಂಡ ಆಗಿದೆ. ಪ್ರಕರಣ ಸಂಬಂಧ ಉಪ ತಹಶೀಲ್ದಾರ್ ಎಂ. ಮಂಜುನಾಥ್ ನನ್ನು ಅಮಾನತ್ತು ಮಾಡಲಾಗಿದೆ.

ಈ ಹಿಂದೆ ದ್ವಿತೀಯ ದರ್ಜೆ ಸಹಾಯಕ ಅಶೋಕ್ ಕುಮಾರ್ ಅಮಾನತ್ತು ಮಾಡಿದ್ದ ಡಿಸಿ, ಪ್ರಕರಣದಡಿ ಇದೀಗ ಮತ್ತೊಬ್ಬ ಅಧಿಕಾರಿಯ ತಲೆದಂಡಕ್ಕೆ ಆದೇಶಿಸಿದ್ದಾರೆ. ಕರ್ತವ್ಯ ಲೋಪದಡಿ ಉಪ ತಹಶೀಲ್ದಾರ್ ಮಂಜುನಾಥ್ ಅಮಾನತ್ತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಅಮಾನತ್ತು ಆದೇಶ ಹೊರಡಿಸಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರರ ವರದಿ ಆಧರಿಸಿ ಅಮಾನತ್ತಿಗೆ ಸೂಚನೆ ನೀಡಲಾಗಿದ್ದು, ನಾಗಮಂಗಲ ಅಭಿಲೇಖಾಯದ ಗ್ರೇಡ್ -2 ತಹಶೀಲ್ದಾರ್ ಆಗಿದ್ದ ಎಂ.ಮಂಜುನಾಥ್ ಅವರನ್ನು ಕಂದಾಯ ಇಲಾಖೆ ಅಧಿನಿಯಮದ ಅಡಿಯಲ್ಲಿ ಅಮಾನತ್ತು ಮಾಡಲು ಆದೇಶಿಸಲಾಗಿದೆ.

ಏನಿದು ಪ್ರಕರಣ?
ಕಳೆದ ಸೆ.15 ರಂದು ಸರ್ಕಾರಿ ಕಚೇರಿಯ ಕಡತಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿದ್ದವು. ನಾಗಮಂಗಲದ ತಾಲೂಕು ಕಚೇರಿ ಪಕ್ಕದ ತೊಟ್ಟಿಯಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದ ಘಟನೆ ಮಂಡ್ಯದ ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ನಡೆದಿತ್ತು.

ರೈತರ ಜಮೀನಿಗೆ ಸಂಬಂಧಿಸಿದ RTC, MR, INDEX ಸೇರಿದಂತೆ ಹಲವು ದಾಖಲೆಗಳ ಕಡತಗಳು ಕಸದ ಬುಟ್ಟಿಯಲ್ಲಿ ಪತ್ತೆ ಆಗಿದ್ದವು. ತಾಲೂಕು ಕಚೇರಿಯ ಅಭಿಲೇಖಾಯದಲ್ಲಿ ಇಡಬೇಕಾದ ದಾಖಲೆಗಳು ಕಸದ ತೊಟ್ಟಿಗೆ ಎಸೆದಿರೋದು‌ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು.

ಕಸದ ತೊಟ್ಟಿಗೆ ರೈತರ ಮೂಲ ಜಮೀನಿನ ದಾಖಲೆಗಳನ್ನು ಎಸೆದಿರೋದನ್ನ ನೋಡಿ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದರು. ಕಂದಾಯ ಇಲಾಖೆ ಭ್ರಷ್ಟಾಚಾರ ಬಯಲಿಗೆ ಬರುತ್ತದೆ ಎಂದು ಹೆದರಿ ದಾಖಲೆಗಳನ್ನು ಕಸದ ತೊಟ್ಟಿಗೆ ಎಸದಿರುವ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಸಮಗ್ರ ತನಿಖೆ‌ ನಡೆಸಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದರು.

ಸಂರಕ್ಷಸಿ ಇಡಬೇಕಾದ ಹಳೆಯ ದಾಖಲೆಗಳನ್ನು ಕಸದ ತೊಟ್ಟಿಗೆ ಎಸೆದಿದ್ದ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದ ಡಿಸಿ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೀತಿಯ ದರ್ಜೆ ಸಹಾಯಕ ಎಂ.ಅಶೋಕ್ ಕುಮಾರ್ ಅವರನ್ನು ಅಮಾನತ್ತು ಮಾಡಿದ್ದರು.

ಇದೀಗ ಅಮೂಲ್ಯವಾದ ಕಡತಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಡಿ ಅಸಡ್ಯತನ ಮೆರೆದಿದ್ದ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿರೋ ಕಂದಾಯ ಇಲಾಖೆ. ಸರ್ಕಾರಿ ಕಡತಗಳ ಸಮರ್ಪಕವಾಗಿ ನಿರ್ವಹಣೆ ಮಾಡದೇ ಆರೋಪದಡಿ ಗ್ರೇಡ್ 2 ತಹಶಿಲ್ದಾರ್ ಎಂ ಮಂಜುನಾಥ್ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕವಾಗಿ ಸಾಕಷ್ಟು ಆರೋಪ ಹೊಂದಿರುವ ಮಂಜುನಾಥ್ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES